ಬೆಂಗ್ಟ್ , ಐ .ಸ್ಯಾಮುಯೆಲ್ಸನ್ (1934--) 1982
Bengt , I .Summelson
ಸ್ವೀಡನ್-ವೈದ್ಯಕೀಯ-ಪ್ರೊಸ್ಟೋಗ್ಲಾಂಡಿನ್ಗಳ ರಾಚನಿಕ ಸ್ವರೂಪ ಕುರಿತಾಗಿ ಅಧ್ಯಯನ ನಡೆಸಿದಾತ.
ಬೆಂಗ್ಟ್, 21 ಮೇ 1934 ರಂದು ಹಾಮ್ಸ್ಟೆಡ್ ಪಟ್ಟಣದಲ್ಲಿ ಜನಿಸಿದನು. ಲುಂಡ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಗಳಿಸಿದನು. ಇದರ ನಂತರ ಸ್ಟಾಕ್ಹೋಂನ ಕೆರೋಲಿನ್ಸ್ಕಾ ಸಂಸ್ಥೆಯಲ್ಲಿ ಜೀವ ರಸಾಯನಶಾಸ್ತ್ರದಲ್ಲಿ ಹೆಚ್ಚಿನ ಪದವಿ ಗಳಿಸಿದನು. ಅಸಂಸಂದ ಹಾರ್ವರ್ಡ್ನಲ್ಲಿ ಒಂದು ವರ್ಷ ಸಂಶೋಧನಾ ವಿದ್ಯಾರ್ಥಿಯಾಗಿದ್ದು, ತಾಯ್ನಾಡಿಗೆ ಮರಳಿದನು. 1967ರಲ್ಲಿ ಸ್ಟಾಕ್ಹೋಂನ ರಾಯಲ್ ವೆಟೆರಿನರಿ ಕಾಲೇಜಿನ ವೈದ್ಯಕೀಯ ರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. ಬೆಂಗ್ಟ್ ಕೊಲೆಸ್ಟೆರಾಲ್ನ ಚಯಾಪಚಯ ಕುರಿತಾಗಿ ಆಳ ಅಧ್ಯಯನ ನಡೆಸಿದ್ದಾನೆ. ಪೆÇ್ರೀಸ್ಟೋಗ್ಲಾಂಡಿನ್ಗಳ ರಾಚನಿಕ ಸ್ವರೂಪ ಕುರಿತಾಗಿ ಸುನೆ ಬರ್ಜ್ಸ್ಟ್ರೊಮ್ನೊಂದಿಗೆ ನಡೆಸಿದ ಸಂಶೋಧನೆಗಳು ಗಮನಾರ್ಹವೆನಿಸಿವೆ. ಆರ್ಕಿಯಾಡೂನಿಕ್ ಅಮ್ಲಗಳ ರೂಪಾಂತರಿತ ಉತ್ಪನ್ನಗಳಾದ ಎಂಡೋಪೆರಾಕ್ಸೈಡ್, ಥ್ರೋಂಬಾಕ್ಸಿನ್ ಲ್ಯೂಕೋಟೀನ್ಸ್ಗಳನ್ನು ಕುರಿತಾದ ಅಧ್ಯಯನಗಳಿಗಾಗಿ 1982ರಲ್ಲಿ ಬೆಂಗ್ಟ್ ವೈದ್ಯಕೀಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಊತ (Thrombosis)) ಹಾಗೂ ಒಗ್ಗದಿಕೆಯ (Allergy) ಚಿಕಿತ್ಸೆಯಲ್ಲಿ ಬೆಂಗ್ಟ್ ಸಂಶೋಧನೆಗಳು ಬಳಕೆಯಾಗುತ್ತಿವೆ.
ಬರ್ಗ್ಸ್ಟ್ರೋಮ್, ಸುನೆ ಕಾರ್ಲ್ (1916--) 1982
Bergstrom , Sune Karl
ಸ್ವೀಡನ್ – ಜೀವ ರಸಾಯನ ಶಾಸ್ತ-ಪೆÇ್ರಸ್ಟೋಗ್ಲಾಂಡಿನ್ಗಳನ್ನು ಬೇರ್ಪಡಿಸಿದಾತ.
ಬರ್ಗ್ಸ್ಟ್ರೋಮ್ ಸ್ಟಾಕ್ಹೋಂನ ರಾಯಲ್ ಕೆರೋನ್ ಇನ್ಸ್ಟಿಟ್ಯೂಟ್ನಲ್ಲಿ ಪದವಿ ಪಡೆದನು. 1958ರಲ್ಲಿ ಅದೇ ಸಂಸ್ಥೆಗೆ ಜೀವ ರಸಾಯನಶಾಸ್ತ್ರದ ಪ್ರಾಧ್ಯಾಪಕನಾಗಿ ಕೆಲಸಕ್ಕೆ ಸೇರಿದನು. ಬರ್ಗ್ಸ್ಟ್ರೋಮ್ನ ಗಮನ ಪ್ರೊಸ್ಟಾಗ್ಲಾಂಡಿಸ್ ರಾಸಾಯನಿಕಗಳ ಕಡೆ ಹರಿದಿದ್ದಿತು. 1930ರ ವೇಳೆಗೆ ಈ ರಾಸಾಯನಿಕಗಳು ಜೈಜೈವಿಕವಾಗಿವ ಪ್ರಭಾವ ಬೀರುತ್ತವೆಯೆಂದು ತಿಳಿದಿದ್ದಿತು. ಈ ರಾಸಾಯನಿಕಗಳ ಪ್ರಭಾವ ಭಾರಿ ಸಂಕೀರ್ಣವಾದುದು. ಇವು ಮಿದುವಾದ ಸ್ನಾಯುಗಳು ಸಂಕೋಚಗೊಳ್ಳದಂತೆ ಮಾಡುತ್ತವೆ. ಇವು ಮಾನವನ ವೀರ್ಯದಲ್ಲೂ, ಕೆರೆಬಿಯನ್ ಸಮುದ್ರದ ವಿಪ್ ಕೋರಲ್ ಪ್ರಾಣಿಯ ಕೋಶದಲ್ಲೂ ವಿಪುಲವಾಗಿ ಅಸ್ತಿತ್ವದಲ್ಲಿವೆ. 1950ರಲ್ಲಿ ಬರ್ಗ್ಸ್ಟ್ರೋಮ್ ಮೊದಲಿಗೆ ಎರಡು ಪ್ರೊಸ್ಟಾಗ್ಲಾಂಡಿನ್ಗಳನ್ನು ಶುದ್ದ ರೂಪದಲ್ಲಿ ಬೇರ್ಪಡಿಸಿದನು. 1962ರಲ್ಲಿ ಇವೆರಡು ಪ್ರೊಸ್ಟಾಗ್ಲಾಂಡಿನ್ಗಳಿಗೆ ಸಾಮಾನ್ಯ ರಾಚನಿಕ ಸ್ವರೂಪವಿದ್ದು, ಐದು ಇಂಗಾಲದ ಬಳೆ ಹಾಗೂ ಬದಿಯ ಇಂಗಾಲದ ಸರಣಿಗಳಿಂದಾಗಿದೆಯೆಂದು ತೋರಿಸಿದನು. ಮುಂದೆ ಇದು ಬಹು ದೊಡ್ಡ ವೈದ್ಯಕೀಯ ರಸಾಯನ ಶಾಸ್ತ್ರವಾಗಿ ಬೆಳೆಯಿತು.
ಕೊಹೆನ್, ಸೇಮೂರ್ ಸ್ಟ್ಯಾನ್ಲೆ (1917--) 1986
Cohen , Semour Stanley
ಅಸಂಸಂ-ಜೀವ ರಸಾಯನಶಾಸ್ತ್ರ-ವೈರಸ್ ದಾಳಿ ಸ್ವರೂಪ ವಿವರಿಸಿದಾತ.
ಕೊಹೆನ್ 1917 ಏಪ್ರಿಲ್ 30 ರಲ್ಲಿ ನ್ಯೂಯಾರ್ಕ್ನಲ್ಲಿ ಜನಿಸಿದನು. ಆಲ್ಲಿಯೇ ಸ್ಟ್ರೇಟ್ ಕಾಲೇಜಿನಿಂದ , 1936ರಲ್ಲಿ ವಿಜ್ಞಾನದಲ್ಲಿ ಪದವಿ ಗಳಿಸಿದನು. ನಂತರ ಕೊಲಂಬಿಯಾ ವಿಶ್ವವಿದ್ಯಾಲಯ ಸೇರಿ ಚಾರ್ಗಾ¥sóïನ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದನು. ಕೊಹೆನ್, ಬ್ಯಾಕ್ಟೀರಿಯಾಗಳಿಗೆ ರೋಗ ತರುವ ಬ್ಯಾಕ್ಟೀರಿಯಾ¥sóÉೀಜ್ ವೈರಸ್ಗಳ ಅಧ್ಯಯನವನ್ನು ಆರಿಸಿಕೊಂಡನು. ಈ ನಿಟ್ಟಿನಲ್ಲಿ ಕೊಹೆನ್ ಮೊದಲಿಗನಾಗಿದ್ದನು. ವೈರಸ್ಗಳು, ಬ್ಯಾಕ್ಟೀರಿಯಾದ ಮೇಲೆ ದಾಳಿಯೆಸಗಿದಾಗ, ಬ್ಯಾಕ್ಟೀರಿಯಾಗಳ ಕೋಶದಲ್ಲಿನ ಸಹಜವಾದ ಚಯಾಪಚಯ ಕ್ರಿಯೆಗಳಲ್ಲಿ (Metabolism)ಏರುಪೇರುಗಳಾಗುತ್ತವೆ. ಇದರ ಪರಿಣಾಮವಾಗಿ ಬ್ಯಾಕ್ಟೀರಿಯಾಗಳಲ್ಲಿ ಬಹು ವಿಶಿಷ್ಟವಾಗಿರುವ ಬಹ್ವಂಗಿಗಳು (Polymers) ಸಂಶ್ಲೇಷಣೆಗೊಳ್ಳುವುದಿಲ್ಲ. ಇದಕ್ಕೆ ಬದಲಾಗಿ, ವೈರಸ್ ಅಗತ್ಯವಾದ ನ್ಯೂಕ್ಲಿಯಿಕ್ ಆಮ್ಲ ಮತ್ತು ಪೆÇ್ರೀಟೀನ್ಗಳು ಸಂಶ್ಲೇಷಣೆಗೊಳ್ಲುವುದೆಂದು, ಕೊಹೆನ್ ವಿಕಿರಣಪಟುತ್ವ ಹೊಂದಿದ ಸಮಸ್ಥಾನಿ (Isotope) ಧಾತುಗಳನ್ನು ಬಳಸಿ ತೋರಿಸಿದನು. ಕೊಹೆನ್ ಹಾಗೂ ಫಯಟ್ ಜಂಟಿಯಾಗಿ ನಡೆಸಿದ ಸಂಶೋಧನೆಯಿಂದ ವೈರಸ್ಗಳಲ್ಲಿ 5-ಹೈಡ್ರಾಕ್ಸಿ ಮೀಥೈಲ್ ಸೈಟೋಸ್ಟಾನ್ ಎಂಬ ಬಹು ವಿಶಿಷ್ಟವಾದ ರಾಸಾಯನಿಕವಿರುವುದನ್ನು ತಿಳಿಯಿತು. ಬ್ಯಾಕ್ಟೀರಿಯಾಗಳಲ್ಲಿ ಈ ರಾಸಾಯನಿಕವಿರುವುದಿಲ್ಲ. ಆದರೆ ಬ್ಯಾಕ್ಟೀರಿಯಾ ವೈರಸ್ ದಾಳಿಗೆ ತುತ್ತಾದಾಗ, ಅದರ ಕೋಶದಲ್ಲೂ ಸಹ ಈ ವಿಶಿಷ್ಟ ರಾಸಾಯನಿಕವನ್ನು ಉತ್ಪಾದಿಸುವ ಕಿಣ್ವಗಳು ಹೊಸದಾಗಿ ನಿರ್ಮಾಣವಾಗುತ್ತವೆಯೆಂದು 1957ರಲ್ಲಿ ಕೊಹೆನ್ ಸ್ಪಷ್ಟ ಪಡಿಸಿದನು. ಇದರಿಂದ ವೈರಸ್, ಬ್ಯಾಕ್ಟೀರಿಯಾದ ಕೋಶದಲ್ಲಿ ತನಗೆ ಬೇಕಾದ ರಾಸಾಯನಿಕ ಉತ್ಪಾದನೆಗೆ ಪ್ರೇರಣೆ ನೀಡುವುದೆಂದು ಖಚಿತವಾಯಿತು. ಕೊಹೆನ್ ಈ ಸಂಶೋಧನೆ ಆಧುನಿಕ ಜೀವರಸಾಯನಶಾಸ್ತ್ರದಲ್ಲಿ ಕ್ರಾಂತಿ ತಂದಿತು. ಕೊಹೆನ್ ವೈರಸ್, ಪ್ರತಿ ಜೈವಿಕಗಳು, ಚಯಾಪಚಯಗಳ ಬಗೆಗೆ ಗಾಢವಾದ ಸಂಶೋಧನೆ ಮಾಡಿದ್ದಾನೆ. ಕೊಹೆನ್ 1963ರಲ್ಲಿ ಪೆಸ್ಸಿಲ್ವೇನಿಯಾದಲ್ಲಿ ಪ್ರಾಧ್ಯಾಪಕನಾದನು. ಮುಂದೆ ಚೈಕಿತ್ಸಕ ಸಂಶೋಧನಾ ವಿಭಾಗದ ಮುಖ್ಯಸ್ಥನಾದನು, ಕೊಹೆನ್ ತನ್ನ ಸಾಧನೆಗಳಿಗಾಗಿ ಅಮೆರಿಕನ್ ಅಸೋಸಿಯೇಷನ್ ಫಾರ್ ಅಡ್ವಾನ್ಸ್ಮೆಂಟ್ ಅ¥sóï ಸೈನ್ಸ್ನ ಪದಕ ಗಳಿಸಿದನು 1967ರಲ್ಲಿ ನ್ಯಾಷನಲ್ ಅಕಾಡೆಮಿ ಆ¥sóï ಸೈನ್ಸ್ ಸದಸ್ಯನಾಗಿಯೂ ಕೊಹೆನ್ ಸೇವೆ ಸಲ್ಲಿಸಿದನು.
ಬ್ಲ್ಯಾಕ್, ಸರ್ ಜೇಮ್ಸ್ (ವೈಟ್) (1924--) 1988
Black, Sir James (Whyte)
ಬ್ರಿಟನ್-ಔಷಧ ಶಾಸ್ತ್ರ- ಹಲವಾರು ನವೀನ ರೂಪಿಸಿದಾತ.
ಸೇಂಟ್ ಆ್ಯಂಡ್ರೂಸ್ನಿಂದ ವೈದ್ಯಕೀಯ ಪದವಿ ಗಳಿಸಿದ ಜೇಮ್ಸ್ , ಉಪನ್ಯಾಸಕನಾಗಿ ವೃತ್ತಿ ಜೀವನ ಪ್ರಾರಂಭಿಸಿದನು. ಮುಂದೆ ಮಲಯ ಹಾಗೂ ಗ್ಲಾಸ್ಗೋಗಳಲ್ಲಿ ಅಯ್.ಸಿ.ಅಯ್ ಜೊತೆ ಔಷದಿಗಳ ಸಂಶೋಧನಾü ಕಾರ್ಯ ಪ್ರವೃತ್ತನಾದನು. ನಂತರ ಸ್ಮಿತ್ಕ್ಲೈನ್, ಫ್ರೆಂಚ್ ಹಾಗೂ ವೆಲ್ಕಂ ಕಂಪನಿಗಳ ಜೊತೆ ಸೇರಿ ಔಷಧಿಶಾಸ್ತ್ರದ ನಾನಾ ವಿಭಾಗಗಳಲ್ಲಿ ಸೇವೆ ಸಲ್ಲಿಸಿದನು. 1988ರಲ್ಲಿ ನೊಬೆಲ್ ಪ್ರಶಸ್ತಿ ಪಡೆದುಕೊಂಡು , ಲಂಡನ್ನ ಕಿಂಗ್ಸ್ ಕಾಲೇಜ್ ಹಾಸ್ಪಿಟಲ್ ಮೆಡಿಕಲ್ ಸ್ಕೂಲ್ನ ವೈಶ್ಲೇಷಿಕ ಔಷಧಿಶಾಸ್ತ್ರ ವಿಭಾಗದ ಮುಖ್ಯಸ್ಥನಾಗಿದ್ದನು. ಜೇಮ್ಸ್ ವೈದ್ಯಕೀಯ ರಂಗಕ್ಕೆ ಎರಡು ಮಹತ್ತರವಾದ ಕಾಣಿಕೆಗಳನ್ನು ನೀಡಿದ್ದಾನೆ. ಹೃದಯದ ಸ್ನಾಯುಗಳಿಗೆ ನಿರ್ದಿಷ್ಟವಾದ ಬೀಟ-ಗ್ರಾಹಿ ಗಳಿವೆಯೆಂದೂ (Beta Receptors)), ಇವು ಚೋದನಿಕೆಗಳ (Hormones) ನಿಯಂತ್ರಣಕ್ಕೆ ಪ್ರತಿಕ್ರಿಯೆ ತೋರಿಸುತ್ತವೆಯೆಂದು, ಸಿದ್ಧಾಂತವೊಂದಿದೆ . ಈ ಸಿದ್ಧಾಂತದ ಆಧಾರದ ಮೇಲೆ ಜೇಮ್ಸ್ ಈ ಭಾಗಗಳನ್ನು ತಡೆಹಿಡಿದರೆ ಚೋದನಿಕೆಗಳು ಹೃದಯದ ಮೇಲೆ ಬೀರಬಹುದಾದ ಪ್ರಭಾವಗಳನ್ನು ನಿವಾರಿಸಿ, ಆ ಮೂಲಕ ಹೃದಯದ ಕಾರ್ಯ ಹೊರೆಯನ್ನು ಇಳಿಸಬಹುದೆಂದು ತರ್ಕಿಸಿದನು. ಇದನ್ನು ಬಹು ಸಮರ್ಪಕವಾದ ಪ್ರೊಪೊನಲಾಲ್ ಎನ್ನುವ ಅನಾರಗೊಮಿಸ್ಟ್’ನ್ನು 1964ರಲ್ಲಿ ಜೇಮ್ಸ್ ಹುಡುಕಿದನು. ಇದಾದ ನಂತರ ಬೀಟ ತಡೆಗಳನ್ನು ಹೃದ್ರೋಗ ಹಾಗೂ ಏರು ರಕ್ತದೊತ್ತಡ ನಿಯಂತ್ರಿಸಲು ವಿಸ್ತೃತವಾಗಿ ಬಳಸಿಕೊಳ್ಳಲಾಗುತ್ತದೆ. ಜೇಮ್ಸ್ ಹೊಟ್ಟೆ ಹುಣ್ಣುಗಳನ್ನು ನಿಯಂತ್ರಿಸಲು ಸರಳ ಹಾಗೂ ಖಚಿತವಾದ ವಿಧಾನ ರೂಪಿಸಲು ಪ್ರಯತ್ನಿಸಿದನು. 1972ರಲ್ಲಿ ಒಂದು ನಿರ್ದಿಷ್ಟ ಬಗೆಯ ಅಂಗಾಂಶ ಗ್ರಾಹಿ ಗಟ್ ಗೋಡೆಯ ಮೇಲಿರುವುದೆಂದೂ ಹಾಗೂ ಇದು ಜಠರದಲ್ಲಿನ ಆಮ್ಲಗಳ ಸ್ರವಿಕೆಯನ್ನು ಪ್ರಚೋದಿಸುವುದೆಂದೂ ಗುರುತಿಸಿದನು. ಈ ಗ್ರಾಹಿಗಳನ್ನು ಸಿಮಿಟಿಡೈನ್ ರಾಸಾಯನಿಕದಿಂದ ಅಡ್ಡಗಟ್ಟಿ ಜಠರದ ಆಮ್ಲ ಸ್ರವಿಕೆಯನ್ನು ನಿಯಂತ್ರಿಸಿ, ಜಠರದ ಹುಣ್ಣುಗಳನ್ನು ವಾಸಿಮಾಡಬಹುದೆಂದು ಸ್ಪಷ್ಟಪಡಿಸಿದನು. ವೈದ್ಯಕೀಯದಲ್ಲಿ ರಾಸಾಯನಿಕಗಳ ಬಳಕೆ ವೈಜ್ಞಾನಿಕತೆಯತ್ತ ಸರಿಯುವಂತೆ ಮಾಡಿದ ಖ್ಯಾತಿ ಜೇಮ್ಸ್ಗೆ ಸಲ್ಲುತ್ತದೆ.