ಒಟ್ಟೋ , ಸ್ಟರ್ನ್, (1885-1948) 1943
Otto , Stern
ಅಸಂಸಂ-ಭೌತಶಾಸ್ತ್ರ- ಪರಮಾಣುಗಳ ಕಾಂತಕ್ಷೇತ್ರಗಳು ಕ್ವಾಂಟಂ ರೂಪದಲ್ಲಿರುವುವೆಂದು ತೋರಿಸಿದಾತ.
ಒಟ್ಟೋ ಸ್ಟರ್ನ್, ಜರ್ಮನಿಯ ಅಪ್ಪರ್ ಸಿಲೇಸಿಯಾದ ಸೊರಾ ಪಟ್ಟಣದಲ್ಲಿ 17 ಫೆಬ್ರವರಿ1888ರಂದು ಜನಿಸಿದನು. ಒಟ್ಟೋ ನಾಲ್ಕು ವರ್ಷದವನಿದ್ದಾಗ ದವಸ, ಧಾನ್ಯಗಳ ವ್ಯಾಪಾರಿಯಗಿದ್ದ ಆತನ ತಂದೆ ಬ್ರೆಸ್ಲೌ ಪಟ್ಟಣಕ್ಕೆ ಹೋಗಿ ನೆಲೆಸಿದನು. ಇಲ್ಲಿಯೇ ಒಟ್ಟೋನ ಪ್ರಾಥಮಿಕ ಹಾಗೂ ಪ್ರೌಢ ವಿಧ್ಯಾಭ್ಯಾಸಗಳು ಜರುಗಿದವು. ಒಟ್ಟೊ ಝೋಮರ್ಫೆಲ್ಟ್, ಲುಮ್ಮಾರ್ ಹಾಗೂ ಪ್ರಿಂಗ್ಷೀಮ್ರ ಉಪನ್ಯಾಸಗಳಿಗೆ ಹಾಜರಾದನು. 1906ರಲ್ಲಿ ಭೌತ ರಸಾಯನಶಾಸ್ತ್ರದ ಶಿಕ್ಷಣ ಪಡೆಯಲು ಪ್ರಾರಂಭಿಸಿದ ಒಟ್ಟೋ, 1912ರಲ್ಲಿ ಬ್ರೆಸ್ಲೌ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದನು. ಇದೇ ವರ್ಷ, ಐನ್ಸ್ಟೀನ್ನೊಂದಿಗೆ ಪ್ರಾಗ್ ವಿಶ್ವವಿದ್ಯಾಲಯ ಸೇರಿದನು. ನಂತರ ಇವರಿಬ್ಬರೂ ಝೂರಿಕ್ ವಿಶ್ವವಿದ್ಯಾಲಯಕ್ಕೆ ಹೋದರು. 1913ರಲ್ಲಿ ಭೌತರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. 1914ರಲ್ಲಿ ಇದೇ ಹುದ್ದೆಗಾಗಿ ಫ್ರಾಂಕ್’ಫರ್ಟ್’ಗೆ ಹೋಗಿ, 1921ರವರೆಗೆ ಅಲ್ಲಿಯೇ ಇದ್ದನು. 1921ರಲ್ಲಿ ರೋಸ್ಟೋಕ್ ವಿಶ್ವವಿದ್ಯಾಲಯ ಸೇರಿ ಸೈದ್ಧಾಂತಿಕ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. 1919ರ ನಂತರ ಒಟ್ಟೋನ ಕಾರ್ಯರಂಗ ಪ್ರಾಯೋಗಿಕ ಭೌತಶಾಸ್ತ್ರದತ್ತ ಹೊರಳಿತು. ಮೊದಲ ಜಾಗತಿಕ ಯುದ್ದದ ಸಮಯದಲ್ಲಿ ಮಿಲಿಟರಿಯಲ್ಲಿದ್ದು ನಂತರ ಫ್ರಾಂಕ್’ಫರ್ಟ್’ನಲ್ಲಿ ಬಾರ್ನ್ ಜೊತೆ ಕೆಲಸ ಮಾಡಿದನು. ಮುಂದಿನ ವರ್ಷವೇ ಹ್ಯಾಂಬರ್ಗ್ ವಿಶ್ವವಿದ್ಯಾಲಯದ ಭೌತ ಪ್ರಯೋಗಾಲಯದ ನಿರ್ದೇಶಕನಾದನು. 1933ರವರೆಗೆ ಇಲ್ಲಿ ಸೇವೆ ಸಲ್ಲಿಸಿ, ಅದೇ ವರ್ಷ ಅಸಂಸಂಗಳಿಗೆ ತೆರಳಿ ಕಾರ್ನೆಗಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕನಾದನು. 1945ರವರೆಗೆ ಇಲ್ಲಿಯೇ ಉಳಿದನು. ಒಟ್ಟೋನ ಆರಂಭಿಕ ಆಸಕ್ತಿಗಳು ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ವಿಶೇಷತ:ವಾಗಿ ಕ್ವಾಂಟಂ ಸಿದ್ಧಾಂತ, ಔಷ್ಣೀಯ ಗತಿಶಾಸ್ತ್ರದಲ್ಲಿ (Thermodynamics) ನೆಲೆಗೊಂಡಿದ್ದವು. 1920ರಲ್ಲಿ ಸ್ಟರ್ನ್ ಹಾಗೂ ಡಬ್ಲ್ಯು.ಗೆರ್ಲಾಕ್ ಪ್ರಯೋಗವೊಂದನ್ನು ನಡೆಸಿದರು. ಈ ಪ್ರಯೋಗದಲ್ಲಿ , ಬೆಳ್ಳಿಯನ್ನು ನಿರ್ವಾತದಲ್ಲಿ ಬಿಸಿಗೊಳಿಸಿ ಪರಮಾಣು ದೂಲ (Beam) ಪಡೆದು, ಬೆಳ್ಳಿಯ ಪರಮಾಣು, ಅಸಮ ಕಾಂತಕ್ಷೇತ್ರದಲ್ಲಿ ಮೇಲ್ಮುಖ ಹಾಗೂ ಕೆಳಮುಖ ಗಿರಕಿ ಹೊಂದಿದ್ದು ಈ ಗಿರಕಿಗೆ ಅನುಗುಣವಾಗಿ ಎರಡು ಕವಲಾಗಿ ಸೀಳುವುದನ್ನು ಖಚಿತಪಡಿಸಿದರು. ಈ ಪ್ರಯೋಗದಿಂದ ಝೋಮರ್ಫೆಲ್ಟ್ ಮುನ್ಸೂಚಿಸಿದ್ದ ದೇಶ ಶಕಲತೆಯ (Space Quanta) ಅಸ್ತಿತ್ವ ಖಚಿತವಾಯಿತು. ಪ್ರೋಟಾನ್ ಸೇರಿದಂತೆ ಉಪ ಪರಮಾಣ್ವಕ (Subatomic) ಕಣಗಳ ಭ್ರಾಮ್ಯತೆಗಳನ್ನು ಒಟ್ಟೋ ನಿರ್ಧರಿಸಿದನು. ಜಲಜನಕ ಹಾಗೂ ಹೀಲಿಯಂ ಕಿರಣಗಳನ್ನು ವ್ಯತಿಕರಣಗೊಳಿಸಿ (Interference) ಪರಮಾಣುಗಳ ಅಲೆ ಸ್ವರೂಪವನ್ನು ತೋರಿಸಿ ಖ್ಯಾತನಾದನು. 1930ರಲ್ಲಿ ಬಕ್ರ್ಲೆಯ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯದಿಂದ ಸನ್ಮಾನಿತನಾದ ಒಟ್ಟೋ, ಅಸಂಸಂಗಳ ಅಕಾಡೆಮಿ ಆಫ್ ಸೈನ್ಸ್ನ ಸದಸ್ಯನಾದನು. ರಾಯಲ್ ಡ್ಯಾನಿಷ್ ಅಕಾಡೆಮಿ ಆಫ್ ಸೈನ್ಸ್ನ ವಿದೇಶಿ ಸದಸ್ಯತ್ವವೂ ಒಟ್ಟೋಗೆ ದಕ್ಕಿತು. ಸ್ಟರ್ನ್, ಹ್ಯಾಂಬರ್ಗ್ನಲ್ಲಿ ಪ್ರಾಧ್ಯಾಪಕನಾಗಿ ಅಣ್ವಕ-ಕಿರಣ ಪ್ರಯೋಗಾಲಯ ಸಜ್ಜುಗೊಳಿಸಿ, ಪೌಲಿ, ಬೊಹ್ರ್ ಹಾಗೂ ಪಿ.ಎಹ್ರೆನ್ಫೆಸ್ಟರ್ ಸಾಂಗತ್ಯದಲ್ಲಿ ಪೆÇ್ರೀಟಾನ್ನ ಕಾಂತೀಯ ಭ್ರಾಮ್ಯತೆ (Magnetic Moment) ನಿರ್ಧರಿಸಿದನು. ಇದು ಡಿರಾಕ್ನ ಮೌಲ್ಯದ 2ರಿಂದ ಮೂರರಷ್ಟಿದ್ದಿತು. ಅಣ್ವಯಿಕ ಕಿರಣ ವಿಧಾನ (Molecular Beam Method) ರೂಪಿಸಿದ್ದಕ್ಕಾಗಿ 1943ರಲ್ಲಿ ಸ್ಟರ್ನ್ ನೊಬೆಲ್ ಪ್ರಶಸ್ತಿ ಗೌರವಿತನಾದನು. 1933ರ ನಂತರ ಸ್ಟರ್ನ್, ಪಿಟ್ಸ್ಬರ್ಗ್ನ ಕಾರ್ನೆಗಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಹೋದನು. ಐಷಾರಾಮ ಜೀವನ, ಉತ್ತಮ ಆಹಾರ, ಚಲನ ಚಿತ್ರಗಳ ಆಸ್ವಾದನೆಗಳಿಂದ ಹೆಸರಾಗಿದ್ದ ಸ್ಟರ್ನ್ 81ನೇ ವಯಸ್ಸಿನಲ್ಲಿ, ಚಿತ್ರ ಮಂದಿರದಲ್ಲಿ ಹೃದಯಾಘಾತದಿಂದ ಮರಣ ಹೊಂದಿದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ರಬಿ, ಇಸಿಡೊರ್ ಐಸಾಕ್ (1898-1988) 1944-
Rabi , Isidor Isaac
ಆಸ್ಟ್ರಿಯ-ಅಸಂಸಂ-ಭೌತಶಾಸ್ತ್ರ- ಅಣ್ವಕ ಕಿರಣ (Molecular Beam ) ಪ್ರಯೋಗ ಅಭಿವೃದ್ದಿಪಡಿಸಿದಾತ.
ರಬಿ ನ್ಯೂಯಾರ್ಕ್ನ ವಲಸೆ ಸಮುದಾಯದಲ್ಲಿ ಬೆಳೆದು, ಕಾರ್ನೆಲ್ ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲಿ ಪದವಿ ಗಳಿಸಿದನು. 1937ರಲ್ಲಿ ಕೊಲಂಬಿಯಾದಲ್ಲಿ ಪ್ರಾಧ್ಯಾಪಕನಾದನು. 1927ರಿಂದ 1929ರವರೆಗೆ ಸ್ಟರ್ನ್ ಜೊತೆಗೆ ಸಂಶೋಧನೆ ಪ್ರಾರಂಭಿಸಿ ಅವನ ಪ್ರಭಾವಕ್ಕೊಳಗಾದನು. ಸ್ಟರ್ನ್-ಗೆರ್ಲಾಖ್ ಅಣ್ವಕ- ಕಿರಣಗಳ ಸಾಧನವೊಂದನ್ನು ನಿರ್ಮಿಸಿದ್ದನು. ಇದರಿಂದ ಉತ್ತೇಜಿತಗೊಂಡ ರಬಿ ಸಂಶೋಧನಾ ಕಾರ್ಯಕ್ರಮವೊಂದನ್ನು ಪ್ರಾರಂಭಿಸಿ, ಪರಮಾಣು ಕಾಂತೀಯ ಅನುರಣನ ವಿಧಾನಗಳಿಂದ ರೋಹಿತಗಳನ್ನು ಪಡೆದನು. ಈ ವಿಧಾನದಲ್ಲಿ ಸ್ಥಿರವಾದ ಕಾಂತೀಯ ಕ್ಷೇತ್ರ, ಅಣುಗಳನ್ನು ಒಂದು ನಿರ್ದಿಷ್ಟ ಸ್ಥಿತಿಗೆ ಉದ್ರೇಕಿಸುತ್ತದೆ. ಈ ಸ್ಥಿತಿಯಲ್ಲಿ , ಸರಿಯಾದ ಆವರ್ತನೆಯಲ್ಲಿರುವ (Frequency) ರೇಡಿಯೋ ತರಂಗಗಳನ್ನು ಹಾಯಿಸಲಾಗುತ್ತದೆ. ಈ ರೇಡಿಯೋ ತರಂಗಗಳು ಅಣುಗಳನ್ನು ಒಂದು ಕಾಂತೀಯ ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ಪಲ್ಲಟಗೊಳಿಸುತ್ತವೆ. ಪಲ್ಲಟಗೊಂಡ ಪ್ರಮಾಣಕ್ಕನುಸಾರವಾಗಿ ಅಣು ಅಥವಾ ಪರಮಾಣುಗಳ ಎಲೆಕ್ಟ್ರಾನ್ ಭ್ರಾಮ್ಯತೆಗಳನ್ನು ಕ್ವಾಂಟಂ ವೈದ್ಯುತ್ ಗತಿಶೀಲ ಸಿದ್ಧಾಂತಗಳಿಗನುಗುಣವಾಗಿ ಅಳೆಯಲು ಸಾಧ್ಯ. ಇದು ಬೈಜಿಕ ಕಾಂತೀಯ ಅನುರಣನ ತಂತ್ರ ಪರಿಚಯಿಸುವಲ್ಲಿ ಪರ್ಸೆಲ್ ಹಾಗೂ ಬ್ಲಾಖ್ಗೆ ನೆರವಾಯಿತು. ಇದು ಪರಮಾಣು ಗಡಿಯಾರ, ಮೇಸರ್, ಲೇಸರ್ಗಳ ಸಾಧ್ಯತೆಗೂ ಕಾರಣವಾಯಿತು. ರಬಿ 1944ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದನು. ಎರಡನೇ ಜಾಗತಿಕ ಯುದ್ದದಲ್ಲಿ, ಸೂಕ್ಷ್ಮ ತರಂಗ ರಡಾರ್ ಕುರಿತು ಕೆಲಸ ಮಾಡಿದ ರಬಿ, ನಂತರ ವೈಜ್ಞಾನಿಕ ನೀತಿಗಳ ರೂಪಿಸಿಕೆಗೆ ನೆರವಾದನು. ಪರಮಾಣುಶಕ್ತಿ ಸಮಿತಿಯ,ಸಾಮಾನ್ಯ ಸಮಾಲೋಚನಾ ಸಭೆಗೆ ಕಾರ್ಯದರ್ಶಿಯಾಗಿದ್ದ ರಬಿ, ಯುನೆಸ್ಕೋ, ಜಿನೇವಾದಲ್ಲಿ ಸ್ಥಾಪಿಸಿರುವ ಅಧಿಕ ಚೈತನ್ಯ ಭೌತಶಾಸ್ತ್ರ ಪ್ರಯೋಗಾಲಯದ ನಿಯೋಜಿತ ಮಂಡಳಿಯ ಸದಸ್ಯನಾಗಿದ್ದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಪೌಲಿ, ವೂಲ್ಫ್ಗಾಂಗ್ (1900-1958) 1945
Pauli , Wolfgang
ಆಸ್ಟ್ರಿಯಾ-ಸ್ವಿಟ್ಸ್ರಲ್ರ್ಯಾಂಡ್-ಅಸಂಸಂ-ಭೌತಶಾಸ್ತ್ರ- ಕ್ವಾಂಟಂ ಬಲವಿಜ್ಞಾನದಲ್ಲಿ ಪೌಲಿ ಬಹಿಷ್ಕರಣ ತತ್ತ್ವ ನ್ಯೂಕ್ಲಿಯರ್ ಗಿರಕಿ ಹಾಗೂ ನ್ಯೂಟ್ರಿನೋ ವಾದ ನೀಡಿದಾತ.
ಪೌಲಿಯ ತಂದೆ ವಿಯೆನ್ನಾದಲ್ಲಿ ಭೌತರಸಾಯನಶಾಸ್ತ್ರದ ಪ್ರಾಧ್ಯಾಪಕನಾಗಿದ್ದನು. 1921ರಲ್ಲಿ ಮ್ಯೂನಿಕ್ ವಿಶ್ವ ವಿದ್ಯಾವಿದ್ಯಾಲಯದಿಂದ ಪೌಲಿ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು. ಝೋಮರ್ಫೆಲ್ಟ್ನಿಂದ ಪ್ರಭಾವಿತನಾಗಿದ್ದ ಪೌಲಿ, ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಲೇಖನವೊಂದನ್ನು ಪ್ರಕಟಿಸಿದ್ದನು. ಇದನ್ನು ಓದಿದ ಐನ್ಸ್ಟೀನ್ ಇದರಲ್ಲಿ ಭೌತಶಾಸ್ತ್ರದ ಆಳ ಚಿಂತನೆಗಳು ಹುದುಗಿವೆಯೆಂದು ಪ್ರಶಂಸಿಸಿದ್ದನು. ಪೌಲಿ, ಕೊಪೆನ್ಹೇಗ್ನಲ್ಲಿ ಬೊಹ್ರ್ ಹಾಗೂ ಗಟ್ಟಿಂಜೆನ್ನಲ್ಲಿ ಬಾರ್ನ್ ಜೊತೆಗೆ ಹೆಚ್ಚಿನ ಅಧ್ಯಯನ ಮುಂದುವರೆಸಿದನು. ಹ್ಯಾಂಬರ್ಗ್ನಲ್ಲಿ ಬೋಧನಾ ವೃತ್ತಿ ಪ್ರಾರಂಭಿಸಿದ ಪೌಲಿ, 1928ರಲ್ಲಿ ಝೂರಿಕ್ನ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕನಾದನು. ಮುಂದೆ ಭೌತಶಾಸ್ತ್ರದಲ್ಲಿ ವಿಶ್ವವಿಖ್ಯಾತರಾದ ಕ್ರೊನಿಗ್, ರುಡಾಲ್ಫ್, ಪೆಲ್ರ್ಸ್ ,ಕ್ಯಾಸಿಮಿರ್ ವೀಸ್ಕಾಫ್ಇಲ್ಲಿ ಪೌಲಿಯ ಸಹಾಯಕರಾಗಿದ್ದರು. ಪೌಲಿ ಪಾಠ ಮಾಡುವಾಗ ತನ್ನಷ್ಟಕ್ಕೆ ತಾನೇ ಗೊಣಗುತ್ತಿದ್ದನು. ಆದು ವಿದ್ಯಾರ್ಥಿಗಳಿಗೆ ಕೇಳಿಸುತ್ತಿರಲಿಲ್ಲ. ಕರಿ ಹಲಗೆಯ ಮೇಲೆ ಬರೆದುದು ಕಾಣಿಸುತ್ತಿರಲಿಲ್ಲ. ಆದರೆ ತರಗತಿಯ ಹೊರಗಿನ ಸಂಭಾಷಣೆಗಳಲ್ಲಿ ವಿದ್ಯಾರ್ಥಿಗಳ ಸುತ್ತ ಚೈತನ್ಯವನ್ನು ಬಡಿದೆಬ್ಬಿಸುತ್ತಿದ್ದನು. ಮಧ್ಯದಲ್ಲಿ ಪ್ರಿನ್ಸ್ಟನ್ನಲ್ಲಿ ಕಳೆದ ಐದು ವರ್ಷವನ್ನು ಹೊರತುಪಡಿಸಿ, ಪೌಲಿ ತನ್ನ ಇಡೀ ಜೀವನವನ್ನು ಇಲ್ಲಿಯೇ ಕಳೆದನು. ಪ್ರಿನ್ಸ್’ಟನ್ ನಲ್ಲಿರುವಾಗ ಅಸಂಸಂಗಳ ಪ್ರಜೆಯಾಗಿದ್ದನು. 1924ರಲ್ಲಿ ಪೌಲಿ ಮಂಡಿಸಿದ ಬಹಿಷ್ಕರಣ ತತ್ತ್ವ (Exclusion Principle) ಪರಮಾಣು ಸಂರಚನೆಯನ್ನು ವಿವರಿಸುವಲ್ಲಿ ಮಹಾ ಯಶಸ್ಸನ್ನು ಕಂಡಿತು. ಈ ತತ್ತ್ವದ ಪ್ರಕಾರ ಯಾವುದೇ ಒಂದು ಪರಮಾಣುವಿನಲ್ಲಿ, ಎರಡು ಎಲೆಕ್ಟ್ರಾನ್ಗಳು ಒಂದೇ ಕ್ವಾಂಟಂ ಸ್ಥಿತಿಯಲ್ಲಿ ಇರಲಾರವು. ಈ ಮೊದಲೇ ಬೊಹ್ರ್ ಝೋಮರ್ಫೆಲ್ಟ್ ಮಂಡಿಸಿದ ಮಾದರಿಯಲ್ಲಿ ಪ್ರತಿ ಎಲೆಕ್ಟ್ರಾನ್ ಮೂರು ಕ್ವಾಂಟಂ ಸಂಖ್ಯೆಗಳನ್ನು ಹೊಂದಿರುತ್ತದೆ. ಪೌಲಿ ಬಹಿಷ್ಕರಣ ತತ್ತ್ವದಿಂದ ಇದಕ್ಕೆ ಮತ್ತೊಂದು ಸಂಖ್ಯೆ ಸೇರ್ಪಡೆಯಾಯಿತು. ಪೌಲಿಯ ತತ್ತ್ವದಿಂದಾಗಿ, ಪರಮಾಣುವಿನ ಎಲೆಕ್ಟ್ರಾನ್ ಶಲ್ಕಗಳಿಗೆ (Shell) ಸರಿಯಾದ ವಿವರಣೆ ದಕ್ಕಿ, ಆವರ್ತ ಕೋಷ್ಟಕದಲ್ಲಿನ ಧಾತುಗಳ ಜೋಡಣೆ ಸ್ಪುಟಗೊಂಡಿತು. ಇದರಿಂದ ಪರಮಾಣು ರೋಹಿತದ ಮೇಲಿನ ಝೀಮನ್ ಪರಿಣಾಮವು ಗ್ರಾಹ್ಯಯೋಗ್ಯವಾಯಿತು. ಪೌಲಿ ತತ್ತ್ವದಂತೆ ಎಲೆಕ್ಟ್ರಾನ್ ಗಿರಕಿಗೆ (Spin)ಎರಡರಲ್ಲಿ ಒಂದು ಮೌಲ್ಯ ಪಡೆಯುವ ಅನಿವಾರ್ಯತೆಯಿದೆ. 1926ರಲ್ಲಿ ಗೌಡ್ಸ್ಮಿಟ್ ಹಾಗೂ ಉಹ್ಲೆನ್ಬೆಕ್ ಇದನ್ನು ಪ್ರಯೋಗಗಳಿಂದ ಖಚಿತಪಡಿಸಿದರು. ಬಹಿಷ್ಕರಣ ತತ್ತ್ವ ನೀಡಿದ ಪೌಲಿ 1945ರ ನೊಬೆಲ್ ಪ್ರಶಸ್ತಿಯಿಂದ ಗೌರವಿತನಾದನು. ಪೌಲಿ, ಕಣದ ಗಿರಕಿ ಅದರ ಚೈತನ್ಯದ ಸಂಖ್ಯಾ ಕಲನ ಸ್ವಭಾವ (Statistical Nature) , ಅನಿಲ ಹಾಗೂ ಲೋಹಗಳ ಅನುಕಾಂತೀಯತೆ (Paramagnetism) , ಮೆಸಾನ್ ಕಣದ ವಿವರಣೆ, ಬೈಜಿಕ ಬಂಧಕ ಬಲಗಳ ಅರಿವಿನ ಬಗೆಗೂ ಶ್ರಮಿಸಿದನು. ಬೀಟ ಶೈಥಿಲ್ಯದಲ್ಲಿ (Decay), ಪರಮಾಣುವಿನಿಂದ ಎಲೆಕ್ಟ್ರಾನ್ ಬಿಡುಗಡೆಗೊಳ್ಳುತ್ತದೆ. ಇದು ಚೈತನ್ಯ ಸಂರಕ್ಷಣೆಯ ನಿಯಮಕ್ಕೆ ಅಪವಾದದಂತೆ ತೋರುತ್ತದೆ. ಈ ಕ್ರಿಯೆಯಲ್ಲಿ ಅತ್ಯಲ್ಪ ಚೈತನ್ಯ ನಷ್ಟವಾದಂತೆ ಲೆಕ್ಕಾಚಾರಗಳು ತೋರಿಸುತ್ತವೆ. ಇದನ್ನು ಅಭ್ಯಸಿಸಿದ ಪೌಲಿ, ಅಜ್ಞಾತವಾಗಿರುವ ಬಹು ಹಗುರವಾದ ಕಣದೊಂದಿಗೆ ಈ ಚೈತನ್ಯ ಇರುವುದೆಂದು ಸೂಚಿಸಿ, ಅಂತಹ ಕಣವನ್ನು ನ್ಯೂಟ್ರಿನೋ ಎಂದು ಕರೆದನು. 1956ರಲ್ಲಿ ಎಫ್ರೀನ್ಸ್, ಹಾಗೂ ಕೊವೆನ್ ಪ್ರಯೋಗಗಳಲ್ಲಿ ನ್ಯೂಟ್ರಿನೋ ಗುರುತಿಸಿ, ಪೌಲಿಯ ಮುನ್ಸೂಚನೆಗಳು ಸರಿಯೆಂದು ತೋರಿಸಿದರು. ಪೌಲಿ, ಸಾಧಾರವಾದ, ಸತಾರ್ಕಿವಾದುವನ್ನು ಹೊರತು ಬರಿ ಹೇಳಿಕೆಗಳನ್ನು ಎಂದೂ ಒಪ್ಪುತ್ತಿರಲಿಲ್ಲ. ಈತನೊಂದಿಗೆ ಚರ್ಚಿಸಲು ವಿಜ್ಞಾನಿಗಳು ಅಂಜುತ್ತಿದ್ದರು. ಪೌಲಿ ,ಪ್ರತಿವಾದಿ ಭಯಂಕರನೆಂದು ಹೆಸರಾಗಿದ್ದನು. ಅಸತ್ಯ ,ಕಪಟತನಗಳು ಈತನನ್ನು ಕಂಡು ಬೆದರುತ್ತಿದ್ದವು. ಇಂತಹ ಶ್ರೇಷ್ಟ ಗುಣಶೋಭಿತನಾಗಿದ್ದ ಪೌಲಿ ಫೆೈನ್ಮನ್ ಮತ್ತು ಡೈಸನ್ ರೂಪಿಸಿದ ಚಿತ್ರ ಗಣಿತವನ್ನು ನಿರ್ಲಕ್ಷಿಸಿದ್ದೊಂದು ವಿಪರ್ಯಾಸ. ಸಾಧಾರಣ ಮಟ್ಟದ ಉಪನ್ಯಾಸಕಾರನೂ ಅಸಮರ್ಪಕ ಪ್ರಯೋಗಪಟುವೂ ಆಗಿದ್ದ ಪೌಲಿ, ಜಗತ್ತು ಕಂಡ ಅತ್ಯುತ್ತಮ ಸೈದ್ಧಾಂತಿಕ ಭೌತಶಾಸ್ತ್ರಜ್ಞರಲ್ಲೊಬ್ಬ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬ್ರಿಗ್ಮನ್, ಪೆರ್ಸಿ ವಿಲಿಯಮ್ಸ್ (1882-1961 ) - 1946
Bridgman , Percy Williams
ಅಸಂಸಂ -ಪ್ರಯೋಗಶೀಲ ವಿಜ್ಞಾನ -ಲೋಹಗಳ ಮೇಲೆ ಅತಿ ಒತ್ತಡದ ಪ್ರಭಾವಗಳನ್ನು ಕುರಿತು ಅಧ್ಯಯನ ನಡೆಸಿದಾತ.
ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಬ್ರಿಗ್ಮನ್, ಅಲ್ಲೇ ವೃತ್ತಿಗೆ ಸೇರಿ, ನಿವೃತ್ತನಾಗುವವರೆಗೆ ಸೇವೆ ಸಲ್ಲಿಸಿದನು. ಅತಿ ಒತ್ತಡದ ಸ್ಥಿತಿಗಳ ಬಗೆಗೆ ಆಸಕ್ತನಾಗಿದ್ದ ಈತ, ಆ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳಲು ಹಲವಾರು ಹೊಸ ಬಗೆಯ ಉಪಕರಣಗಳನ್ನು ನಿರ್ಮಿಸಿದನು. ಬ್ರಿಗ್ಮನ್ ಅತಿ ಒತ್ತಡದ ಸ್ಥಿತಿಯಲ್ಲಿ ಬಹುತೇಕ ದ್ರವಗಳು ಹೆಚ್ಚು ಸ್ನಿಗ್ದವಾಗುವವೆಂದೂ (Viscous), ಮಂಜುಗಡ್ಡೆಯಂತಹ ಘನ ಸಂಯೋಜಿತಗಳು ಹಾಗೂ ರಂಜಕದಂತಹ ಘನ ಧಾತುಗಳು ವಿಶಿಷ್ಟ ಸ್ಥಿತಿಗೆ ತೆರಳುವವೆಂದು ತೋರಿಸಿದನು. ಬ್ರಿಗ್ಮನ್ ಪ್ರತಿ ಚದರ ಮಿಟರ್ಗೆ ಹತ್ತು ಸಾವಿರ ಟನ್ಗೂ ಅಧಿಕದಷ್ಟು ಭಾರಿ ಒತ್ತಡಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದನು. ವಿದ್ಯುತ್ ಪ್ರವಾಹವನ್ನು ಅಸಮದೈಶಿಕ (anisotropic) ಸ್ಫಟಿಕದ ಮೂಲಕ ಹಾಯಿಸಿದಾಗ ಶಾಖ ಬಿಡುಗಡೆ ಅಥವಾ ಹೀರಿಕೆಯಾಗುವುದನ್ನು ಬ್ರಿಡ್ಮನ್ ಪರಿಣಾಮವೆಂದು ಭೌತಶಾಸ್ತ್ರದಲ್ಲಿ ಗುರುತಿಸಲ್ಪಟ್ಟಿದೆ. 1946ರಲ್ಲಿ ಬ್ರಿಗ್ಮನ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಆ್ಯಪಲ್ಟನ್, ಸರ್ ಎಡ್ವರ್ಡ್ (ವಿಕ್ಟರ್) (1892-1968)-1947
Appleton , Sir Edward (Victor) (PHY.) 1947
ಬ್ರಿಟನ್-ಭೌತಶಾಸ್ತ್ರ-ಭೂಮಿಯ ಐಯೋನೋಗೋಳದ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿ ಅದರ ಹಲವಾರು ಪದರುಗಳ ಪ್ರತಿಫಲನ ಗುಣಗಳನ್ನು ವಿವರಿಸಿದಾತ.
ಆ್ಯಪಲ್ಟನ್ ಕೇಂಬ್ರಿಜ್ನಲ್ಲಿ ಭೌತಶಾಸ್ತ್ರ ಅಭ್ಯಸಿಸಿದನು. ನಂತರ ಮೊದಲನೆ ಜಾಗತಿಕ ಯುದ್ದದಲ್ಲಿ ಸಿಗ್ನಲ್ ಅಫಿಸರ್ ಆಗಿ ಕಾರ್ಯನಿರ್ವಹಿಸುತ್ತಾ ರೇಡಿಯೋಗಳ ಬಗೆಗೆ ಆಸಕ್ತಿ ತಳೆದನು. 1924ರಲ್ಲಿ ಲಂಡನ್ನ ಕಿಂಗ್ಸ್ ಕಾಲೇಜಿನಲ್ಲಿ ಪ್ರಯೋಗಶೀಲ ಭೌತಶಾಸ್ತ್ರದ ಅಧ್ಯಾಪಕನಾಗಿ ನೇಮಕಗೊಂಡನು. 1939ರಲ್ಲಿ ಡಿಪಾರ್ಟ್ಮೆಂಟ್ ಆಫ್ ಸೈಂಟಿಫಿಕ್ ಹಾಗೂ ಇಂಡಸ್ಟ್ರಿಯಲ್ ರಿಸರ್ಚ್ನ ಕಾರ್ಯದರ್ಶಿಯಾಗಿ ನಂತರ ಎಡಿನ್ಬರೋ ವಿಶ್ವವಿದ್ಯಾಲಯದ ಕುಲಪತಿಯೂ ಆದನು. 1901ರಲ್ಲಿ ಮಾರ್ಕೊನಿ ರೇಡಿಯೋ ಸಂಜ್ಞೆಗಳನ್ನು ಅಟ್ಲಾಂಟಿಕ್ ಸಾಗರದಾಚೆಗೆ ಪ್ರಸಾರ ಮಾಡಿದನು. ಇದಕ್ಕೂ ಮುಂಚೆ ಹಲವು ವಿಜ್ಞಾನಿಗಳು ರೇಡಿಯೋ ಸಂಜ್ಞೆಗಳು ವೈದ್ಯುತ್ ಕಾಂತೀಯ ಅಲೆಗಳಾಗಿರುವುದರಿಂದ ನೇರ ರೇಖೆಯಲ್ಲಿ ಚಲಿಸುವುವೆಂದೂ, ಭೂಮಿಯ ಮೇಲ್ಮೈ ವಕ್ರವಾಗಿರುವುದರಿಂದ ಅವನ್ನು ಭೂಮಿಯ ಮೇಲಿನ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಕಳಿಸುವುದು ಸಾಧ್ಯವಿಲ್ಲವೆಂದೂ ನಂಬಿದ್ದರು. ಆದರೆ ಮಾರ್ಕೊನಿಯ ಸಾಧನೆ ಇದನ್ನು ಹುಸಿಗೊಳಿಸಿದ್ದಿತು. ಎ,ಇ,ಕೆನ್ನೆಲ್ಲಿ ಹಾಗೂ ಹೀವಿಸೈಡ್ ಇದಕ್ಕೆ ಒಂದು ವಿವರಣೆ ನೀಡಿದರು. ಅವರ ವಾದದಂತೆ ಭೂಮಿಯ ವಾತಾವರಣದಲ್ಲಿ ಆವಿಷ್ಟಿತ ಕಣಗಳ ಪದರಗಳಿದ್ದು, ಈ ಪದರದಿಂದ ಮಾರ್ಕೊನಿ ಕಳಿಸಿದ ಸಂಜ್ಞೆಗಳು ಪ್ರತಿಫಲನಗೊಂಡಿದ್ದವು. 1925ರಲ್ಲಿ ಆ್ಯಪಲ್ಟನ್ ವ್ಯಾಪಕ ಸಂಶೋಧನೆ ನಡೆಸಿ, ಅಂತಹ ಪದರಗಳು ಐಯೊನೋಗೋಳದಲ್ಲಿ ಇರುವುದನ್ನು ಸಂಶಯಾತೀತವಾಗಿ ನಿರೂಪಿಸಿದನು. ಚಾರ್ನೆಮೌತ್ ನಗರದಿಂದ 170 ಕಿ.ಮಿ. ದೂರದ ಕೇಂಬ್ರಿಜ್ಗೆ ರೇಡಿಯೋ ಸಂಜ್ಞೆಗಳನ್ನು ಕಳಿಸಿದನು. ಹಾಗೆ ಕಳಿಸಿದಾಗ ಸಂಜ್ಞೆಯ ಒಂದು ಘಟಕ ಸರಳ ರೇಖೆಯಲ್ಲಿ ಸಾಗಿದರೆ ಮತ್ತೊಂದು ಸಂಜ್ಞೆ ಅಯೋನೋಗೋಳದಿಂದ ಪ್ರತಿಫಲಿಸಿ ಬಂದುದೆಂದು ಸಕಾರಣವಾಗಿ ತೋರಿಸಿದನು. ನಂತರದ ಪ್ರಯೋಗಗಳಿಂದ ಹೀಗೆ ಪ್ರತಿಫಲನಗೊಳಿಸುವ ಪದರಗಳು 70 ಕಿ.ಮಿ. ಎತ್ತರದಲ್ಲಿರುವುದಾಗಿ ಸ್ಪಷ್ಟವಾಯಿತು. ಇದೇ ಹೀವ್ಸೈಡ್ ಅಥವಾ ಇ-ಪದರ . ರಾತ್ರಿಯ ವೇಳೆ ಸೂರ್ಯನಿಲ್ಲದಾಗ ಅತಿ ನೇರಳೆ ಕಿರಣಗಳು ಇರುವುದಿಲ್ಲವಾದುದಎಂದ . ಅಯೋನೋಗೋಳದ ಮೇಲೆ ಅವುಗಳ ಪರಿಣಾವುವಿರುವುದಿಲ್ಲ. ಹೀಗಾಗಿ ರಾತ್ರಿ ವೇಳೆ ದೂರದ ರೇಡಿಯೋ ಸಂಕೇತಗಳು ಹಗಲಿಗಿಂತಲೂ ಹೆಚ್ಚು ಸ್ಪಷ್ಟ ಹಾಗೂ ಪರಿಣಾಮಕಾರಿಯಾಗಿ ದಕ್ಕುತ್ತವೆ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬ್ಲಾಕೆಟ್ ಪ್ಯಾಟ್ರಿಕ್ (ಮೇನಾರ್ಡ್ ಸ್ಟುವಾರ್ಟ್) ಬ್ಯಾರೊನ್ ಬ್ಲಾಕೆಟ್ (1897-1974)-1948
Blackett, Patrick (Maynard Stuart) Baron
ಬ್ರಿಟನ್-ಭೌತಶಾಸ್ತ್ರ- ವಿಶ್ವಕಿರಣಗಳನ್ನು ಬಳಸಿ ಸಂಶೋಧನೆ ಕೈಗೊಳ್ಳಲು ನೆರವಾಗುವ ವಿಲ್ಸನ್ ಮೇಘ ಕೋರಿಯನ್ನು ನಿರ್ಮಿಸಿ ಪರಿಷ್ಕರಿಸಿ, ಉತ್ತಮಗೊಳಿಸಿದಾತ.
ಸ್ಟಾಕ್ ಬ್ರೋಕರನ ಮಗನಾಗಿದ್ದ. ಬ್ಲಾಕೆಟ್ ಓಸ್ಟೋನ್ ಹಾಗೂ ಡಾರ್ಮತ್ ನೇವಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿ ,1914ರಲ್ಲಿ ಹಾಗೂ1916ರಲ್ಲಿ ನಡೆದ ಫಾಕ್ಲ್ಯಾಂಡ್ ಹಾಗೂ ಬೂಟ್ಲ್ಲ್ಯಾಂಡ್ ಯುದ್ದಗಳಲ್ಲಿ ಭಾಗವಹಿಸಿದನು. ಮುಂದೆ, ಬ್ಲಾಕೆಟ್ ಕೇಂಬ್ರಿಜ್ನಲ್ಲಿ ಭೌತಶಾಸ್ತ್ರವನ್ನು ಓದಿ, ಸಂಶೋಧನೆಗೆ ಇಳಿದು, 1924ರಲ್ಲಿ ಮೊದಲ ಬಾರಿಗೆ ಮೇಘ ಕೋಠಿಯ ಛಾಯಾಚಿತ್ರಗಳನ್ನು ಪಡೆದು, ಸಾರಜನಕವನ್ನು ಆಲ್ಪಾ ಕಣಗಳಿಂದ (ಹೀಲಿಯಂ ಬೀಜ) ತಾಡಿಸಿದಾಗ ಆಮ್ಲಜನಕ (ಆಮ್ಲಜನಕ-17) ಪಾರವಿಕಲ್ಪಗೊಳ್ಳುವುದನ್ನು (Tranasmutation ) ನಿರೂಪಿಸಿದನು. 1933ರಲ್ಲಿ ಲಂಡನ್ ವಿಶ್ವವಿದ್ಯಾಲಯ, 1937ರಲ್ಲಿ ಮ್ಯಾಂಚ್ಸ್ಟರ್’ನಲ್ಲೂ 1953ರಲ್ಲಿ ಇಂಪೀರಿಯಲ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದನು. ಎರಡನೇ ಜಾಗತಿಕ ಯುದ್ದದಲ್ಲಿ ಮಿಲಿಟರಿ ಸಂಪನ್ಮೂಲಗಳ ಬಳಕೆಯಲ್ಲಿ ಹಾಗೂ ಚಟುವಟಿಕೆಗಳಲ್ಲಿ ಮಿತವ್ಯಯ ತರಲು ಅಭಿಕರ್ಮಕ ಸಂಶೋಧನಾ (operation Research) ವಿಧಾನವನ್ನು ಬಳಸಿದನು. ಜಲಾಂತರ್ಗಾಮಿಗಳ ಯುದ್ದ ಕೌಶಲವನ್ನು ನಿರ್ದೇಶಿಸಲು ಹಲವಾರು ಮಾರ್ಗೋಪಾಯಗಳನ್ನು ನಿರ್ಧರಿಸನಲ್ಲದೆ , ವಿಮಾನಗಳಲ್ಲಿ ಬಾಂಬ್ ನೋಟಕವನ್ನು ಅಳವಡಿಸಿದನು. ಜಾಗತಿಕ ಯುದ್ದದ ನಂತರ , ಸಾರ್ವಜನಿಕ ವಲಯದಲ್ಲಿ ಕ್ರಿಯಾಶೀಲನಾದ ಬ್ಲಾಕೆಟ್, ಅಣ್ವಸ್ತ್ರ ವಿರೋಧಿ ಜಾಗೃತಿಯನ್ನು ಜನರಲ್ಲಿ ತರಲು ಶ್ರಮಿಸಿದನು. 1948ರಲ್ಲಿ ಬ್ಲಾಕೆಟ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಬ್ಲಾಕೆಟ್, ಒಖಿಯಲಾನಿ ಜೊತೆ ಸೇರಿ ಮೇಘ ಕೋಠಿ ನಿರ್ಮಿಸಿ, ಅದರಲ್ಲಿ ಡಿರಾಕ್ ಮುನ್ರ್ಸಚಿಸಿದ್ದ ಪಾಸಿಟ್ರಾನ್ನ್ನು ಮೊದಲ ಬಾರಿಗೆ ಗುರುತಿಸಿದನು. ಆದರೆ ಇದರ ಖಚಿತತೆಗಾಗಿ ಇವರು ಇನ್ನು ಹೆಚ್ಚಿನ ಪ್ರಯೋಗಗಳನ್ನು ಹಮ್ಮಿಕೊಂಡರು. ಇವರು ಪ್ರಯೋಗಶೀಲವಾಗಿದ್ದಾಗಲೇ, ಸಿ.ಡಿ.ಆ್ಯಂಡರ್ಸನ್ ಪಾಸಿಟ್ರಾನ್ ಅಸ್ಥಿತ್ವವನ್ನು ಇವರಿಗಿಂತ ಮುಂಚೆ ಪ್ರಕಟಿಸಿ ಖ್ಯಾತನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಯುಕಾವಾ, ಹಿಡೆಕಿ (1907-1981) 1949
Yukawa . Hideki
ಜಪಾನ್-ಭೌತಶಾಸ್ತ್ರ- ಪ್ರಬಲ ಬೈಜಿಕ ಬಲಗಳನ್ನು ವಿವರಿಸಿ ಪೈ-ಮೆಸಾನ್ ಅಸ್ತಿತ್ವವನ್ನು ಮುನ್ಸೂಚಿಸಿದಾತ.
ಯುಕಾವಾ, ಕ್ಯೋಟೋ “ವಿಶ್ವವಿದ್ಯಾಲಯದಿಂದ 1929ರಲ್ಲಿ ಪದವಿ ಪದೆದನು. ಒಸಾಕಾ “ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದನು. ನಂತರ ಕ್ಯೋಟೋಗೆ ಮರಳಿ, 1939ರಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. 27ನೇ ವಯಸ್ಸಿನಲ್ಲಿ ಯುಕಾವಾ ಪ್ರಬಲ ಬೈಜಿಕ ಬಲಗಳ ಸಿದ್ಧಾಂತ ಸ್ಥಾಪಿಸಿದನು. 1932ರಲ್ಲಿ ಚಾಡ್ವಿಕ್ ನ್ಯೂಟ್ರಾನ್ನ್ನು ಅನಾವರಣಗೊಳಿಸಿದ್ದನು. ಯುಕಾವಾ, ಪರಮಾಣುವಿನ ಬೀಜದಲ್ಲಿ ನ್ಯೂಟ್ರಾನ್ ಹಾಗೂ ಪ್ರೋಟಾನ್ಗಳಿರುತ್ತವೆ. ಇವೆರಡರ ಮಧ್ಯೆ ಅತ್ಯಂತ ಅಲ್ಪ ದೂರದಲ್ಲಿ 10-15 ಮೀಟರ್ ದೂರದಲ್ಲಿ ಭಾರಿ ಪ್ರಬಲವಾದ ಬಲವಿದ್ದು, ಇವನ್ನು ಬಂಧಿಸಿರುತ್ತದೆ. ಇದು ಪೆÇ್ರೀಟಾನ್ಗಳು ಪರಸ್ಪರ ದೂರ ವಿಕರ್ಷಿಸುವುದನ್ನು ಮೀರಿಸುವಷ್ಟಿರುತ್ತದೆಯಾದರೂ, ಎಲೆಕ್ಟ್ರಾನ್ಗಳ ಮೇಲೆ ಯಾವುದೇ ಪರಿಣಾಮ ಬೀರಲಾರದೆಂದು ವಿವರಿಸಿದನು. ನ್ಯೂಟ್ರಾನ್ ಹಾಗೂ ಪ್ರೋಟಾನ್ಗಳು ಕಣವೊಂದರ ಮಧ್ಯಸ್ಥಿಕೆಯಲ್ಲಿ ಈ ಬಲವನ್ನು ವರ್ಗಾಂತರಿಸಿಕೊಳ್ಳುವುದೆಂದು ಅಂತಹ ಕಣ ಎಲೆಕ್ಟ್ರಾನ್ಗಿಂತ ಇನ್ನೂರು ಪಟ್ಟು ಭಾರವಿರುವುದೆಂದು ಯುಕಾವಾ ಸ್ಪಷ್ಟಗೊಳಿಸಿದನು. 1936ರಲ್ಲಿ ಸಿ.ಡಿ.ಆ್ಯಂಡರ್ಸನ್ ಯುಕಾವಾ ಸೂಚಿಸಿದಂತಹ ಕಣಗಳನ್ನು ಪತ್ತೆ ಹಚ್ಚಿ ಮ್ಯು-ಮೆಸಾನ್ಗಳೆಂದು ಕರೆದನು. ಈಗ ಇವನ್ನು ಮ್ಯೂಯಾನ್ಗಳೆನ್ನುತ್ತಾರೆ.. ಆದರೆ ಇದು ಯುಕಾವಾ ಸೂಚಿಸಿದಷ್ಟು ಪ್ರಬಲವಾಗಿರಲಿಲ್ಲ. 1947ರಲ್ಲಿ ಪೊವೆಲ್ ಹಾಗೂ ಸಂಗಡಿಗರು, ವಿಶ್ಬ ಕಿರಣಗಳಲ್ಲಿ ಇನ್ನೊಂದು ಮೆಸಾನ್-ಪೈ ಮೆಸಾನ್(ಪೈಯಾನ್)- ಕಣವನ್ನು ಪತ್ತೆ ಹಚ್ಚಿದನು. ಇದು ಯುಕಾವಾ ಸೂಚಿಸಿದ ಕಣವನ್ನು ಎಲ್ಲ ರೀತಿಯಲ್ಲಿ ಹೋಲುತ್ತಿದ್ದಿತು. ಇದರಿಂದ ಯುಕಾವನ ಪ್ರಬಲ ಬೈಜಿಕ ಬಲದ ಸಿದ್ಧಾಂತ ಸ್ಥಿರ ನೆಲೆ ಕಂಡಿತು. ಮುಂದಿನ ಒಂದೆರಡು ದಶಕಗಳಲ್ಲಿ ಹಲವಾರು ಬಗೆಯ ಪೈಯಾನ್, ಮ್ಯೂಯಾನ್ಗಳು ಗುರುತಿಸಲ್ಪಟ್ಟವು. ಇವು ಬಹು ಅಲ್ಪಾಯುಗಳು, ಈಗ ಪ್ರೋಟಾನ್, ನ್ಯೂಟ್ರಾನ್ಗಳು ಕ್ವಾರ್ಕ್ಗಳಿಂದಾಗಿವೆಯೆಂದು ಒಪ್ಪಲಾಗಿದೆ. ಕ್ವಾರ್ಕ್ ಹಾಗೂ ಗ್ಲುಯಾನ್ಗಳು ಅಂತರ್ಕ್ರಿಯೆಯಿಂದ ಪ್ರಬಲ ಬೈಜಿಕ ಬಲಗಳು ಕಾಣಿಸಿಕೊಳ್ಳುತ್ತವೆ. ಯುಕಾವಾ, 1936ರಲ್ಲಿ ಪರಮಾಣು ಬೀಜ ಅತ್ಯಂತ ಒಳಗಿನ ಶಲ್ಕದಲ್ಲಿನ ಎಲೆಕ್ಟ್ರಾನ್ನ್ನು ಹೀರಿಕೊಳ್ಳಬಲ್ಲದೆಂದು ಸೂಚಿಸಿದನು. ಈ ವಿದ್ಯಾಮಾನವನ್ನು ಸಹ ಈಗಗುರುತಿಸಲಾಗಿದೆ. 1949ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಜಪಾನಿಯನಾಗಿ ಯುಕೋವ್ ಖ್ಯಾತನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಪೊವೆಲ್, ಸಿಸಿಲ್ ಫ್ರಾಂಕ್ (1903-1969) 1950
Powell , Cecil Frank
ಬ್ರಿಟನ್-ಭೌತಶಾಸ್ತ್ರ- ಹೊಸ ಮೂಲ ಕಣಗಳ ಪತ್ತೆಗೆ ಪ್ರಬಲ ವಿಧಾನಗಳನ್ನು ರೂಪಿಸಿದಾತ.
ಪೊವೆಲ್ನ ತಂದೆ, ಕಮ್ಮಾರನಾಗಿದ್ದನು. ಪೊವೆಲ್ ಕೇಂಬ್ರಿಜ್ ಸೇರಿ 1927ರಲ್ಲಿ ಸಿ.ಟಿ.ಆರ್. ವಿಲ್ಸನ್ ಜೊತೆಗೆ ಮೇಘ ಕೋಠಿಗಳಲ್ಲಿನ ಸಾಂದ್ರೀಕರಣ ಅಭ್ಯಸಿಸಿ, ಡಾಕ್ಟರೇಟ್ ಗಳಿಸಿದನು. ಇದೇ ವರ್ಷ ಬ್ರಿಸ್ಟಲ್ಗೆ ಹೋಗಿ ವೃತ್ತಿ ಜೀವನ ಪ್ರಾರಂಭಿಸಿದನು. ವಿಯೆನ್ನಾದಲ್ಲಿದ್ದ ಬ್ಲಾವ್, ಹಾಗೂ ವೇನ್ಬ್ಯಾಕರ್ ಸಂಶೋಧಕಿಯರು. ಛಾಯಾಗ್ರಹಣದಲ್ಲಿನ ಲೇಪನಗಳು ಬೆಳಕಿನಿಂದ ಮಾತ್ರವಲ್ಲದೆ, ವೇಗ ಕಣಗಳಿಂದಲೂ ಪ್ರಭಾವಕ್ಕೊಳಗಾಗುವುದೆಂದು ತೋರಿಸಿದ್ದರು. ವೇಗಗಾಮಿ ಕಣಗಳ ಜಾಡನ್ನು ಛಾಯಗ್ರಹಣ ಕಾಗದದ ಮೇಲಿನ ಲೇಪನದಲ್ಲಿ ಪಡೆಯಬಹುದು. ಪೊವೆಲ್ ಈ ವಿಚಾರ ಗಮನಿಸಿ, 1930ರಲ್ಲಿ ವೇಗಗಾಮಿ ಕಣಗಳ ಜಾಡನ್ನು ಲೇಪನದ ಮೇಲೆ ಪಡೆದನು. ಇದು ದ್ಯುತ್ಯಾಲೇಖ. ಈ ಜಾಡನ್ನು ಸೂಕ್ಷ್ಮದರ್ಶಕದಿಂದ ಪರಿಶೀಲಿಸಿದನು. ಲೆಕ್ಕಾಚಾರಗಳಿಂದ ಈ ಜಾಡನ್ನು ನಿರ್ಮಿಸಿದ ಕಣಗಳ,ಗಾತ್ರ, ದ್ರವ್ಯ,ಹಾಗೂ ಆವೇಶವನ್ನು ನಿರ್ಧರಿಸಿದನು. ಈ ವಿಧಾನದಿಂದ 1947ರಲ್ಲಿ ಪೊವೆಲ್ ಪೈ-ಮೆಸಾನ್ ಹೆಸರಿನ ಹೊಸ ಮೂಲ ಕಣವನ್ನು ಪತ್ತೆ ಹಚ್ಚಿದನು. ಇದು ಎಲೆಕ್ಟ್ರಾನ್ಗಿಂತ 273ಪಟ್ಟು ಹೆಚ್ಚು ದ್ರವ್ಯ ಹೊಂದಿದೆ. 1935ರಲ್ಲಿ ಯುಕಾವ ಇಂತಹ ಮೂಲ ಕಣದ ಅಸ್ತಿತ್ವದ ಮುನ್ಸೂಚನೆ ನೀಡಿದ್ದನು. ಪೆÇವೆಲ್ನಿಂದಾಗಿ ಅಧಿಕ ಚೈತನ್ಯದ ಕಣ ಭೌತಶಾಸ್ತ್ರ ಉಗಮಗೊಂಡಿತು. ಪರ್ವತಗಳ ತುದಿಯಿಂದ, ವಾತಾವರಣ ದಾಟಿ ಹಾರಿಸಿದ ಬಲೂನ್ಗಳ ಮೂಲಕ, ಪೊವೆಲ್ ವಿಶ್ವ ಕಿರಣಗಳನ್ನು ಅಭ್ಯಸಿಸಿದನು. 1950ರಲ್ಲಿ ಪೊವೆಲ್ ನೊಬೆಲ್ ಪ್ರಶಸ್ತಿ ಸನ್ಮಾನಿತನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು