ಬೆಕೆಸಿ , ಜಾರ್ಜ್ ವಾನ್ (1899-1972) 1961
Bekesy , George Von
ಹಂಗರಿ-ಅಸಂಸಂ-ಭೌತಶಾಸ್ತ್ರಜ್ಞ-ಕಿವಿಯ ಕ್ರಿಯಾಶೀಲತೆಯನ್ನು ವಿವರಿಸಿದಾತ.
ಬೆಕೆಸಿ, 3 ಜೂನ್ 1899ರಲ್ಲಿ ಹಂಗರಿಯ ಬುಡಾವೆಸ್ಟ್ನಲ್ಲಿ ಜನಿಸಿದನು. ಹಂಗರಿ ವಿಶ್ವವಿದ್ಯಾಲಯದಿಂದ 1923ರಲ್ಲಿ ಡಾಕ್ಟರೇಟ್ ಗಳಿಸಿದನು. ಹಂಗರಿ ಸರ್ಕಾರದ ದೂರವಾಣಿ ಸಂಸ್ಥೆಯ ಸಂಶೋಧನಾ ವಿಭಾಗದ ಮುಖ್ಯಸ್ಥನಾಗಿ ವೃತ್ತಿ ಜೀವನ ಪ್ರಾರಂಭಿಸಿದನು. 1946ರ ವರೆಗೆ ಇದೇ ಹುದ್ದೆಯಲ್ಲಿದ್ದನು. ದೂರವಾಣಿ ಸಂಶೋಧನೆಯಲ್ಲಿದ್ದ ಬೆಕೆಸಿ, ಪ್ರಾಣಿಗಳ ಕಿವಿಗಳ ಶ್ರವಣ ಸಾಮಥ್ರ್ಯದ ಸೂಕ್ಷತೆ ವಿಸ್ತಾರಗಳ ಬಗೆಗೆ ಆತ್ಯಾಸಕ್ತನಾದನು. ಹೀಗಾಗಿ ಕಿವಿಯ ಅಧ್ಯಯನವನ್ನು ಗಂಭೀರವಾಗಿ ತೆಗೆದುಕೊಂಡನು. 1946ರಿಂದ 1947ರವರೆಗೆ ಸ್ವೀಡನ್ನ ಸ್ಟಾಕ್ ಹೋಂನಲ್ಲಿರುವ ಕುಂಗ್ಲಿಗ್ ಕ್ಯಾರೋಲಿನ್ ಸಂಸ್ಥೆಯಲ್ಲಿ ಸಂಶೋಧನೆ ಮುಂದುವರಿಸಿದನು. 1947ರಲ್ಲಿ ಅಸಂಸಂ ತೆರಳಿದ ಬೆಕೆಸಿ, ಹಾರ್ವರ್ಡ್ ವೈದ್ಯಕೀಯ ಸಂಸ್ಥೆಯಲ್ಲಿ ಕಿವಿಯನ್ನು ಕುರಿತಾದ ತನ್ನ ಸಂಶೋಧನೆಗಳನ್ನು ಮುಂದುವರೆಸಿದನು. ಇದಕ್ಕಾಗಿ ಕಿವಿಯನ್ನು ಹೋಲುವ ಕೃತಕ ಸಾಧನವೊಂದನ್ನು ನಿರ್ಮಿಸಿ ಕಿವಿಯ ಕ್ರಿಯಾ ವಿನ್ಯಾಸ ವಿವರಿಸಿದನು. ಶಬ್ದದ ತರಂಗಗಳು ಕಿವಿಯ ತಮ್ಮಟೆಗೆ ಘಟ್ಟಿಸುತ್ತವೆ. ಆಗ ಉಗಮವಾಗುವ ತರಂಗಗಳು ಒಳಗಿವಿಗೆ ಸಾಗಿ ಬೇಸಿಲರ್ ಪೆÇರೆಯಲ್ಲಿ ಅನುರೂಪವಾದ ಕಂಪನವೇರ್ಪಡುತ್ತದೆ. ಇದನ್ನು ಈ ಮೊದಲೇ ಹೆಲ್ಮ್ಹೋಲ್ಟ್ಸ್ ಹಾಗೂ ಇತರರು ಸೂಚಿಸಿದ್ದರು. ಆದರೆ ಕಿವಿಯ ಸಂಪೂರ್ಣ ಕ್ರಿಯಶೀಲತೆ ಅರ್ಥವಾಗಿರಲಿಲ್ಲ. ಬೆಕೆಸಿಯ ಕಿವಿಯ ಕೃತಕ ಮೂಲಗಳಿಂದ ಇದು ಸುಸ್ಪಷವಾಯಿತು. ಕಿವಿ ತಮ್ಮಟೆಯಿಂದ, ಕಂಪನ ಬೇಸಿಲರ್ ಪೆÇರೆಯ ಮೇಲಿನಿಂದ ಕೆಳಗಿನವರೆಗೂ ಒಂದೇ ಬಗೆಯ ಅಲೆಯಾಗಿ ಹಬ್ಬುತ್ತದೆ. ಈ ಅಲೆಯ ಪಾರ (Amplitude) ಬೇಸಿಲರ್ ಪೆÇರೆಯ ನಿರ್ದಿಷ್ಟ ಜಾಗದಲ್ಲಿ ಅತ್ಯಧಿಕವಾಗಿರುತ್ತದೆ. ಈ ನಿರ್ದಿಷ್ಟ ಜಾಗ ಶಬ್ದದ ಲಕ್ಷಣಗಳಿಗನುಗುಣವಾಗಿ ಬೇಸಿಲರ್ ಪೆÇರೆಯ ವಿವಿಧ ಸ್ಥಾನಗಳಿಗೆ ಬದ್ದವಾಗಿರುತ್ತದೆಯೆಂದು ಬೆಕೆಸಿ ತೋರಿಸಿದನು. ಇದು ಶ್ರವಣದ ಸಾಗಿಕೆಯ ಸಿದ್ಧಾಂತವೆಂದು ಹೆಸರಾಯಿತು. ಇದಕ್ಕಾಗಿ ಬೆಕೆಸಿ 1961ರ ನೊಬೆಲ್ ಪ್ರಶಸ್ತಿ ಗಳಿಸಿದನು.
ಕ್ರಿಕ್ ಫ್ರಾನ್ಸಿಸ್ (ಹ್ಯಾರಿ ಕಾಂಪ್ಟನ್) (1910--) 1962
Crick , Francis [Harry Compton
ಬ್ರಿಟನ್-ಅಣ್ವಯಿಕ ಜೀವ ಶಾಸ್ತ್ರ (Molecular Biology))- ವ್ಯಾಟ್ಸನ್ ಜೊತೆಗೂಡಿ ಡಿಎನ್ಎ ದ್ವಿ -ಸರ್ಪಿಲ (Double Helix) ರಚನೆ ವಿವರಿಸಿದಾತ.
ಅಣ್ವಯಿಕ ಜೀವಶಾಸ್ತ್ರ ಹೆಸರಿನ ಶಾಖೆಯ ಬೆಳವಣಿಗೆಯೊಂದಿಗೆ ಇಪ್ಪತ್ತನೇ ಶತಮಾನದಲ್ಲಿ ಆರಂಭ ಕಂಡ ಜೀವ ವಿಜ್ಞಾನ ದಾಪುಗಾಲಿಕ್ಕಿ ಮುಂದಕ್ಕೆ ಸಾಗುತ್ತಿದೆ. ಈ ಶಾಖೆಯಲ್ಲಿನ ಮೂಲ, ಕೇಂದ್ರಿಯ ಪರಿಕಲ್ಪನೆಗಳ ಅನ್ವೇಷಣೆ, ಅನಾವರಣಗಳ ದ್ರಷ್ಟಾರರು ಕ್ರಿಕ್ ಹಾಗೂ ವ್ಯಾಟ್ಸನ್. ಜೀವ ಸೃಷ್ಟಿಯಲ್ಲಿ ಸ್ವಯಂ-ನಕಲಾಗುವ ವಂಶವಾಹಕದ (Genetic) ಸಾಮಾಗ್ರಿಯಾದ ಡಿಎನ್ಎ ಎರಡು ಸರ್ಪಿಲಗಳ (Helix) ರೀತಿಯಲ್ಲಿದ್ದು, ಅಡ್ಡಲಾಗಿ ಎಳೆಗಳಿಂದ ಬಂಧಿಸಲ್ಪಟ್ಟಿವೆಯೆಂದು ಕಂಡು ಹಿಡಿದು , ಕ್ರಾಂತಿಕಾರಕ ಬದಲಾವಣೆ ತಂದ ಕ್ರಿಕ್ ಲಂಡನ್ನಲ್ಲಿ ಭೌತಶಾಸ್ತ್ರದ ಪದವಿ ಗಳಿಸಿದನು. ಕ್ರಿಕ್ ಆರಂಭಿಕ ಸಂಶೋಧನೆಗಳಿಗೆ ಜಾಗತಿಕ ಯುದ್ದ ಅಡಚಣೆಯಾಯಿತು. ಯುದ್ದ ಕಾಲದಲ್ಲಿ ನೌಕಾಪಡೆಯಲ್ಲಿ ಕ್ರಿಕ್ ಸೇವೆ ಸಲ್ಲಿಸಿದನು. ಯುದ್ದದ ನಂತರ ಜೀವಶಾಸ್ತ್ರದತ್ತ ಆಸಕ್ತಿ ತಳೆದ ಕ್ರಿಕ್ 1949ರಲ್ಲಿ ಕೇಂಬ್ರಿಜ್ನ ವೈದ್ಯಕೀಯ ಸಂಶೋಧನಾ ಘಟಕ ಸೇರಿದನು. ಬ್ರಾಗ್ ನಿಂದ ಆರಂಭಿಸಲ್ಪಟ್ಟ ಕ್ಷ-ಕಿರಣ ವಿವರ್ತನ (X-ray Diffraction) ವಿಧಾನಗಳಲ್ಲಿ ನೈಪುಣ್ಯಗಳಿಸಿದ ಕ್ರಿಕ್ , ಅದನ್ನು ಬೈಜಿಕ-ಬಹ್ವಂಗಿಗಳ (Bio-polymer) ರಾಚನಿಕ ಸ್ವರೂಪ ಅರಿಯಲು ಬಳಸಿದನು. ಈ ಕಾಲದಲ್ಲಿ ಬ್ರಾಗ್, ಕ್ಯಾವೆಂಡಿಷ್ ಪ್ರಯೋಗಾಲಯದ ಮುಖ್ಯಸ್ಥನಾಗಿದ್ದನು. 1950ರಲ್ಲಿ ಬ್ರಾಗ್ನಿಂದ ಉತ್ತೇಜಿತರಾದ, ಷೆರುಟ್ಜ್ .ಜೆ.ಸಿ. ಕೆಂಡ್ರ್ಯೂ, ವ್ಯಾಟ್ಸನ್, ಎಚ್.ಇ.ಹಕ್ಸ್ಲೆ ಕ್ರಿಕ್ ಹಾಗೂ ಮುಂದೆ ಬ್ರೆನ್ನೆರ್ ಅಣ್ವಯಿಕ ಜೀವಶಾಸ್ತ್ರದಲ್ಲಿ, ಜೀವ ದ್ರವ್ಯಗಳ ರಾಚನಿಕ ವಿಧಾನ ಕಂಡು ಹಿಡಿಯುವಲ್ಲಿ ಜಗತ್ತಿಗೇ ಅಗ್ರಗಾಮಿಗಳಾದರು. ಇದೇ ಪ್ರಯೋಗಾಲಯದಲ್ಲಿ ಬ್ರಾಗ್ ಸ್ಥಾನವನ್ನು ಅಲಂಕರಿಸಿದ್ದ ರುದರ್’ಫೋರ್ಡ್ ಇಪ್ಪತ್ತು ವರ್ಷಗಳ ಹಿಂದೆ ಕಣ ಭೌತಶಾಸ್ತ್ರಕ್ಕೆ ಇದೇ ಚಾಲನೆ ಹಾಗೂ ಮುನ್ನಡೆಯನ್ನು ಒದಗಿಸಿದ್ದುದು ಚಾರಿತ್ರಿಕವಾಗಿ ಗಮನಾರ್ಹ.
1951ರಲ್ಲಿ ಇಪ್ಪತ್ಮೂರರ ಹರಯದ, ಬ್ಯಾಕ್ಟಿರಿಯಾ, ವೈರಸ್ಗಳ ಬಗ್ಗೆ ಜ್ಞಾನವಿದ್ದು ಹಾಗೂ ತಳಿಶಾಸ್ತ್ರದಲ್ಲಿ ಬಗೆಗೆ ಕುತೂಹಲ ತಳೆದಿದ್ದ ವ್ಯಾಟ್ಸನ್, ಬ್ರಾಗ್ ನೇತೃತ್ವದ ತಂಡವನ್ನು ಸೇರಿದನು. ಅಲ್ಪಕಾಲದಲ್ಲೇ ಕ್ರಿಕ್ ಹಾಗೂ ವ್ಯಾಟ್ಸನ್ ಅತ್ಯುತ್ತಮ ಗೆಳೆಯರಾದರು. ವಂಶವಾಹಕಗಳ ಸ್ವರೂಪ ಹಾಗೂ ನಡವಳಿಕೆಗಳನ್ನು ಅಣ್ವಯಿಕ ಮಟ್ಟದಲ್ಲಿ ಅರಿಯಲು ಸಾಧ್ಯವೆಂಬ ಖಚಿತವಾದ ನಂಬಿಕೆಯಿಂದ, ಈ ಸ್ನೇಹಿತರು ನಾನಾ ಪ್ರಯೋಗಗಳನ್ನು ಕೈಗೊಂಡರು. ಕ್ರಿಕ್ ಹಾಗೂ ವ್ಯಾಟ್ಸನ್ ನಂಬುಗೆಗಳು ಹುಸಿಯಾಗಲಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಈ ದಿಶೆಯಲ್ಲಿ ಅವರಿಗೆ ಹಲವಾರು ನಂಬಲರ್ಹ ಸಾಕ್ಷ್ಯಗಳು ಲಭ್ಯವಾದವು. ಈ ಮೊದಲು ಅವೆರಿ ನಡೆಸಿದ ಸಂಶೋಧನೆಗಳಿಂದ , ಡಿಎನ್ಎ ವಂಶವಾಹಕಗಳ ಸರಕುಗಳೆಂದು ಖಚಿತವಾಗಿದ್ದಿತು. ಎ.ಆರ್.ಟಾಡ್, ಡಿಎನ್ಎ ಸಕ್ಕರೆಗಳ ಸರಪಣಿಯಾಗಿದ್ದು ಫಾಸ್ಪೇಟ್ ಕೊಂಡಿಗಳಿಂದ ಅವು ಪರಸ್ಪರ ಸಂಬಂಧ ಹೊಂದಿರುವುದಾಗಿಯೂ, ಹಾಗೂ ಈ ಸಕ್ಕರೆ ಉಂಗುರಗಳಿಗೆ ನಾಲ್ಕು ಬಗೆಯ ಮೂಲ ತಳಹದಿಯ ಅಣುಗಳು ಲಗತ್ತಾಗಿರುವುದಾಗಿಯೂ ತೋರಿಸಿದ್ದನು. ಚಾರ್ಗಾ¥sóï ಈ ತಳಹದಿಯ ಸರಕುಗಳು ವಿಶಿಷ್ಟ ದರದಲ್ಲಿರುವುದನ್ನು ಸ್ಪಷ್ಟಪಡಿಸಿದ್ದನು. ಕ್ರಿಕ್ ಕ್ಷ-ಕಿರಣ ವಿವರ್ತನೆ ವಿಧಾನದಿಂದ ಡಿಎನ್ಎ ಸರ್ಪಿಲ ರೂಪ ಹೊಂದಿದೆಯೇ ಎಂದು ಪರಿಶೀಲಿಸುವ ಸಾಮಾನ್ಯ ಸಿದ್ಧಾಂತ ರೂಪಿಸಿದನು. ಈ ಸಿದ್ಧಾಂತದಂತೆ ಸರ್ಪಿಲ ರಚನೆ ಹೊಂದಿದ ಡಿಎನ್ಎಯ ಕ್ಷ-ಕಿರಣ ವಿವರ್ತನೆಯ ನಕ್ಷೆ ಹಾಗೂ ಆಲೇಖಗಳು ನಿರ್ದಿಷ್ಟ ಬಗೆಯಲ್ಲಿರುತ್ತವೆ. ಲಂಡನ್ನ ಕಿಂಗ್ಸ್ ಕಾಲ್ಲೇಜ್ನಲ್ಲಿದ್ದ ರೊಸಾಲಿಂಡ್ ಫ್ರಾಂಕ್ಲಿನ್ ಡಿಎನ್ಎಯ ಕ್ಷ-ಕಿರಣ ವಿವರ್ತನೆ ನಕ್ಷೆ ಹಾಗೂ ಆಲೇಖಗಳನ್ನು ಪಡೆದಿದ್ದಳು. ಇದು ಕ್ರಿಕ್ ಹಾಗೂ ವ್ಯಾಟ್ಸನ್ರಿಗೆ ತಿಳಿಯಿತು. ರೊಸಾಲಿಂಡ್ಳ ಸಹೋದ್ಯೋಗಿಯಾಗಿದ್ದ ಎಂ.ಎಚ್.ಎಫ್.ವಿಲ್ಕಿನ್ಸ್ ಕ್ರಿಕ್ನ ಸ್ನೇಹಿತನಾಗಿದ್ದನು. ಈತನ ಮೂಲಕ ಇವರಿಗೆ ರೊಸಾಲಿಂಡ್ ಡಿಎನ್ಎ ಮೇಲೆ ನಡೆಸಿದ ಪ್ರಯೋಗಗಳ ಫಲಿತಾಂಶಗಳು ಲಭ್ಯವಾದವು. ತಮ್ಮ ಸಿದ್ಧಾಂತ, ರೊಸಾಲಿಂಡ್ಳ ಫಲಿತಾಂಶ ಆವರೆಗೆ ಡಿಎನ್ಎ ಬಗ್ಗೆ ಲಭ್ಯವಿದ್ದ ಎಲ್ಲಾ ಮಾಹಿತಿಗಳಿಗೂ ಸೂಕ್ತವಾಗುವಂತಹ ವಿವರಣೆ ನೀಡಿದ ಕ್ರಿಕ್ಸ್ ಮತ್ತು ವ್ಯಾಟ್ಸನ್ , ಡಿಎನ್ಎ ದ್ವಿ-ಸರ್ಪಿಲ ಮಾದರಿ ನೀಡಿದರು. ಈ ಮಾದರಿ ಈಗ ಸರಿಯೆಂದು ಅಂಗೀಕೃತವಾಗಿದೆ. ಇದರಲ್ಲಿ ಎರಡು ಡಿಎನ್ಎ ಸರಪಣಿಗಳು ಸರ್ಪಿಲವಾಗಿ ಒಂದಕ್ಕೊಂದು ಅಭಿಮುಖವಾಗಿ ಅಪ್ರದಕ್ಷಿಣವಾಗಿ ವಲಿತಗೊಂಡಿರುತ್ತವೆ. ಈ ಸರಪಣಿಗಳ ಹೊರಭಾಗಕ್ಕೆ ಲಗತ್ತಾಗಿ ಸಕ್ಕರೆಮತ್ತು ¥sóÁಸ್ಫೇಟ್ ಸರಪಣಿಗಳಿದ್ದರೆ, ಒಳಮುಖದಲ್ಲಿ ಡಿಎನ್ಎ ಸರಪಣಿಗಳನ್ನು ಬಂಧಿಸಿದಂತೆ ಜೋಡಿಗಳಲ್ಲಿ ಎ,ಟಿ,ಜಿ,ಸಿ ಅಮೈನೋ ಆವ್ಮ್ಲಗಳ ತಳಹದಿಗಳಿರುತ್ತವೆ. ಅನುವಂಶಿಕತೆಗೆ ಬೇಕಾದ ಮಹಿತಿ ಈ ಜೋಡಣೆಯಲ್ಲಿ ಅಡಕಗೊಂಡಿರುತ್ತದೆ. ಕ್ರಿಕ್ ಡಿಎನ್ಎ ಪ್ರತಿರೂಪೀಕೃತವಾಗಿ (ಖಿಡಿಚಿಟಿsಛಿಡಿiಠಿಣ) ಆರ್ಎನ್ಎ ಹಾಗೂ ಅರ್ಎನ್ಎಯ ರೂಪಾಂತರವಾಗಿ ಪೆÇ್ರೀಟಿನ್ ದಕ್ಕುವುದೆಂದು ತಿಳಿಸಿದನು. ಕ್ರಿಕ್ ಹಾಗೂ ವ್ಯಾಟ್ಸನ್ರವ ಡಿಎನ್ಎ ಮಾದರಿ ಮುಂದುವರೆದ ಜೀವರಸಾಯನಶಾಸ್ತ್ರಕ್ಕೆ ಕಾರಣವಾಯಿತು. ಭೂಮಿಯ ಮೇಲಿನ ಜೀವ ಉಗಮದ ಅರಿವಿಗೆ ದೃಢ ಹೆಜ್ಜೆ ಇಡುವಲ್ಲಿ ನೆರವಾಯಿತು. 1962ರಲ್ಲಿ, ಕ್ರಿಕ್, ವ್ಯಾಟ್ಸನ್ ಮತ್ತು ವಿಲ್ಕಿನ್ಸ್ ನೊಬೆಲ್ ಪ್ರಶಸ್ತಿ ಪಡೆದರು.
ಆಂಡ್ರ್ಯೂ , ಫೀಲ್ಡಿಂಗ್ ಹಕ್ಸ್’ಲೀ–(1917--) 1963
Andrew , Fielding Huxley
ಬ್ರಿಟನ್-ವೈದ್ಯಕೀಯ- ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳಿಗಾಗಿ ಸೂಕ್ಷ್ಮ ಪದರಗಳನ್ನು ಪಡೆಯುವ ವಿಧಾನ ಅಭಿವೃದ್ಧಿಗೊಳಿಸಿದಾತ.
ಹಕ್ಸಲೀಯ ತಂದೆ ಥಾಮಸ್ ಹಕ್ಸಲೀ ಹತ್ತೊಂಬತ್ತನೇ ಶತಮಾನದ ಖ್ಯಾತ ವಿಜ್ಞಾನಿಯಾಗಿದ್ದನು. ಈತನ ಮೊದಲ ಪತ್ನಿಯ ಮಕ್ಕಳಾದ ಜ್ಯೂಲಿಯಸ್ ಹಕ್ಸಲೀ ಖ್ಯಾತ ಜೀವಶಾಸ್ತ್ರಜ್ಞನಾಗಿದ್ದರೆ, ಆಲ್ಡಸ್ ಹಕ್ಸ್ಲಿ ಪ್ರಸಿದ್ದ ಬರಹಗಾರನಾಗಿದ್ದನು. ಆ್ಯಂಡ್ರ್ಯೂ ವಿದ್ಯಾರ್ಥಿವೇತನ ಗಳಿಸಿ, 1935ರಲ್ಲಿ ಕೇಂಬ್ರಿಜ್ನ ಟ್ರಿನಿಟಿ ಕಾಲೇಜನ್ನು ಸೇರಿದನು. ಭೌತಶಾಸ್ತ್ರದಲ್ಲಿ ಆ್ಯಂಡ್ರ್ಯೂಗೆ ಭಾರಿ ಆಸಕ್ತಿಯಿದ್ದಿತು. ಆದ್ದರಿಂದ ಶೈಕ್ಷಣಿಕ ಪಠ್ಯದ ಅಂಗವಾಗಿ ಭೌತ, ರಸಾಯನಶಾಸ್ತ್ರ ಹಾಗೂ ಗಣಿತಗಳನ್ನು ಆಯ್ದುಕೊಂಡನು. ವಿಶ್ವವಿದ್ಯಾಲಯದ ನಿಯಮಗಳಿಗನುಗುಣವಾಗಿ ಆತ ಇನ್ನೊಂದು ವಿಷಯವನ್ನು ಅಭ್ಯಸಿಸುವ ಅನಿವಾರ್ಯತೆ ಒದಗಿತು. ಅದಕ್ಕಾಗಿ ಅಂಗಕ್ರಿಯಾಶಾಸ್ತ್ರವನ್ನು ಆಯ್ದುಕೊಂಡನು. ಟ್ರಿನಿಟಿ ಕಾಲೇಜಿನಲ್ಲಿ ಫೆಲೋಗಳಾಗಿದ್ದ ತನ್ನ ಹಿರಿಯ ಸ್ನೇಹಿತರ ಪ್ರಭಾವದಿಂದ ಆ್ಯಂಡ್ರೂಗೆ ಅಂಗಕ್ರಿಯಾಶಾಸ್ತ್ರದಲ್ಲಿ ಆಸಕ್ತಿ ಮೂಡತೊಡಗಿತು. 1937ರಲ್ಲಿ ಅಂಗರಚನಾಶಾಸ್ತ್ರವನ್ನು ಅಭ್ಯಸಿಸಿ, ವೈದ್ಯಕೀಯ ಪದವಿಗೆ ಆರ್ಹತೆ ಹೊಂದಿದನು. 1939ರಲ್ಲಿ ಫ್ಲೈಮೌತ್ನಲ್ಲಿರುವ ಸಾಗರ ಜೀವಶಾಸ್ತ್ರ ಪ್ರಯೋಗಾಲಯ ಸೇರಿದನು. ಎರಡನೇ ಜಾಗತಿಕ ಯುದ್ದ ಪ್ರಾರಂಭವಾU ಲಂಡನ್ ನಗರ ಸತತವಾಗಿ ವೈರಿಗಳ ಕ್ಷಿಪಣಿ ದಾಳಿಗೆ ತುತ್ತಾಯಿತು. ಈ ಅವಧಿಯಲ್ಲಿ ಲಂಡನ್ನಲ್ಲಿ ವೈದ್ಯಕೀಯ ತರಬೇತಿಗಳು ನಿಲ್ಲಿಸಲ್ಪಟ್ಟವು. ಆ್ಯಂಡ್ರ್ಯೂವನ್ನು ಫಿûರಂಗಿಗಳ ವ್ಯೂಹ ರಚನಾ ಯೋಜನೆ ಹಾಗೂ ಯುದ್ದ ವಿರೋಧಿ ವೈಮಾನಿಕ ಸಂಶೋಧನಾ ವಿಭಾಗಕ್ಕೆ ಹಾಕಲಾಯಿತು. 1941 ರಿಂದ 1951ರ ಅವಧಿಯಲ್ಲಿ ಆ್ಯಂಡ್ರ್ಯೂ , ಹಾಡ್ಗ್ಕಿನ್ನೊಂದಿಗೆ ನರ ಸ್ಥಿತಿಗಳ , ನರ ತಂತುಗಳ ಬಗ್ಗೆ ಅಧ್ಯಯನ ಆರಂಭಿಸಿದನು. 1952ರಲ್ಲಿ ಸ್ನಾಯು ಸಂಕೋಚನದತ್ತ ಗಮನ ಹರಿಸಿ, ಪ್ರತ್ಯೇಕಿಸಿದ ನರ ತಂತುಗಳ ಪ್ರಯೋಗಗಳಿಗೆ ವ್ಯತಿಕರಣ ಸೂಕ್ಷ್ಮದರ್ಶಕ (Interference Microscope) ನಿರ್ಮಿಸಿದನು. ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳಿಗಾಗಿ ಸೂಕ್ಷ್ಮ ಪದರಗಳನ್ನು ಸಹ ಆ್ಯಂಡ್ರ್ಯೂ ಅಭಿವೃದ್ಧಿಗೊಳಿಸಿದನು. ಈ ಸಾಧನೆಗಳಿಗಾಗಿ ಆ್ಯಂಡ್ರ್ಯೂ 1963ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದನು
ಅ್ಯಂಡ್ರೆ ಮೈಖೆಲ್ ಲೌಫ್ –(1902-1994) 1965
Andre , Michael Lwoff
ಫ್ರಾನ್ಸ್ -ವೈದ್ಯಕೀಯ -ಸೂಕ್ಷ್ಮಜೀವಿ ಅಧ್ಯಯನದ ಮುಂದಾಳು
ಆ್ಯಂಡ್ರೆ 8 ಮೇ 1902 ರಂದು ಅಲಿಯರ್ನಲ್ಲಿ ಜನಿಸಿದನು. 19 ಮೇ ವಯಸ್ಸಿನಲ್ಲಿ ಪಾಸ್ತರ್ ಸಂಸ್ಥೆ ಸೇರಿ ವಿಜ್ಞಾನದಲ್ಲಿ ಪದವಿ ಗಳಿಸಿ, ನಂತರ ಒಂದು ವರ್ಷ ವೈದ್ಯಕೀಯ ವ್ಯಾಸಂಗ ಮಾಡಿದನು. ವಿದ್ಯಾರ್ಥಿ ದೆಸೆಯಲ್ಲಿರುವಾಗಲೇ ಪ್ರಯೋಗಾಲಯವೊಂದರಲ್ಲಿ ಆಂಡ್ರೆ ಕೆಲಸ ಮಾಡುತ್ತಿದ್ದನು. 1921ರಲ್ಲಿ ವಿಶ್ವ ವಿಖ್ಯಾತವಾಗಿದ್ದ ಸೂಕ್ಷ್ಮ ಜೀವಿಶಾಸ್ತ್ರಜ್ಞ ಎಡುಯಾರ್ಡ್ ಚಟ್ಟನ್ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮಾಡುವ ಸದಾವಕಾಶ ಲೌಪ್ಗ್ಗೆ ದಕ್ಕಿತು. ಮುಂದೆ ಹದಿನೇಳು ವರ್ಷಗಳ ಕಾಲ ಈತನ ಮಾರ್ಗದರ್ಶನ ಹಾಗೂ ಸಹಭಾಗಿತ್ವದಲ್ಲಿ ಸಂಶೋಧನೆ ನಡೆಸಿದನು. ಈತನ ಶಿಫಾರಸ್ಸಿನ ಮೇರೆಗೆ ಆ್ಯಂಡ್ರೆ , ಪಾಸ್ತರ್ ಸಂಸ್ಥೆಯಲ್ಲಿದ್ದ ಫೆಲಿಕ್ಸ್ ಮೆಸ್ನಿಯ ಸಂಶೋಧನಾ ತಂಡ ಸೇರಿದನು. ಪರೋಪ ಸೂಕ್ಷ್ಮ ಜೀವಿಗಳ ವೃದ್ಧಿ ಚಕ್ರ, ರೂಪಾಂತರ ಪ್ರಕ್ರಿಯೆ ಕುರಿತಾಗಿ ಆ್ಯಂಡ್ರೆಯ ಆರಂಭಿಕ ಸಂಶೋಧನೆಗಳು ಜರುಗಿದವು. ಮುಂದೆ ಅದಿಮ ಜೀವಿಗಳ ಪೌಷ್ಟಿಕತೆ ಕುರಿತಾಗಿ ಅಧ್ಯಯನ ನಡೆಸಿದನು. ಇದರ ಅಂಗವಾಗಿ 1932ರಲ್ಲಿ ಡಾಕ್ಟರೇಟ್ ಗಳಿಸಿದನು. ರಾಕ್ಫೆಲರ್ ಸಂಸ್ಥೆಯ ಅನುದಾನ ಪಡೆದು 1932-1933ರಲ್ಲಿ ಆ್ಯಂಡ್ರೆ ಹೈಡೆಲ್ಬರ್ಗ್ನಲ್ಲಿ ಒಟ್ಟೋ ಮೇಯರ್’ಹಾಫ್ನೊಂದಿಗೆ ಸಂಶೋಧನೆ ನಡೆಸಿದನು. ಫ್ಲಾಜಲೆಟ್ಗಳ ಬೆಳವಣಿಗೆಯ ಅಂಶವಾದ ಹೆಮ್ಯಾಟಿನ್, ಉಸಿರಾಟ ಹಾಗೂ ಬೆಳವಣಿಗೆಯಲ್ಲಿ ಅದರ ಪಾತ್ರ ಕುರಿತಾಗಿ ಆ್ಯಂಡ್ರೆ ನಡೆಸಿದ ಸಂಶೋಧನೆಗಳು ಗಮನಾರ್ಹವಾದುವು. 1936ರಲ್ಲಿ ಎರಡನೇ ಬಾರಿಗೆ ರಾಕ್ಫೆಲರ್ ಅನುದಾನ ಪಡೆದ ಆ್ಯಂಡ್ರೆ ಹಾಗೂ ಆತನ ಪತ್ನಿ ಕೇಂಬ್ರಿಜ್ನಲ್ಲಿ ಡೇವಿಡ್ ಕಿಲಿನ್ನೊಂದಿಗೆ ಸಂಶೋಧಿಸುವ ಅವಕಾಶ ಪಡೆದರು. ಇಲ್ಲಿರುವಾಗ ಹೆಮೊಫಿûಲಿಸ್ ಇನ್ಫ್ಲೂಯೆಂಜಾಕ್ಕೆ ಅಗತ್ಯವಾಗಿರುವ ಫ್ಯಾಕ್ಟರ್-5ನ್ನು ಅದರ ಕೋಝೈವೇಸ್ನೊಂದಿಗೆ ಪತ್ತೆ ಹಬ್ಬಿ, ಬ್ಯಾಕ್ಟಿರಿಯಾ ಅಂಗಕ್ರಿಯೆಯಲ್ಲಿ ಅದರ ಮಹತ್ತರತೆಯನ್ನು ವಿವರಿಸಿದನು. 1938ರಲ್ಲಿ ಪಾಸ್ತರ್ ಸಂಸ್ಥೆಯ ಮುಖ್ಯಸ್ಥವಾದ ಆ್ಯಂಡ್ರೆ , 1959ರಲ್ಲಿ ಪ್ಯಾರಿಸ್ನ ಸೂಕ್ಷ್ಮ ಜೀವಿಶಾಸ್ತ್ರ ನಿಕಾಯದಲ್ಲಿ ಪ್ರಾಧ್ಯಾಪಕನಾದನು. ಆ್ಯಂಡ್ರೆಯ ಸಂಶೋಧನೆಗಳಿಂದ ಲೈಸೋಜೆನಿಕ್ ಬ್ಯಾಕ್ಟೀರಿಯಾಗಳು ಬ್ಯಾಕ್ಟೀರಿಯಾ ¥sóÉೀಜ್ಗಳನ್ನು ಸ್ರವಿಸುವುದಿಲ್ಲವೆಂದೂ, ಹಾಗಾದಾಗ ಬ್ಯಾಕ್ಟೀರಿಯಾಗಳು ಸಾವನ್ನಪ್ಪುವುವೆಂದು ತಿಳಿಸಿದನು. ಬಾಹ್ಯ ಪ್ರೇರಣೆಯಿಂದ ಮಾತ್ರ ಬ್ಯಾಕ್ಟಿರಿಯಾಗಳು ಬ್ಯಾಕ್ಟಿರಿಯಾ ಫೇಜ್’ಗಳನ್ನು ಸ್ರವಿಸಬಲ್ಲವೆಂದು ಖಚಿತಪಡಿಸಿದನು. ಲೂಯಿ ಸಿಮಿನೊವಿಚ್ ಮತ್ತು ನೀಲ್ಸ್ ಜೆಲ್ಡ್ಗಾರ್ಡ್ನೊಂದಿಗೆ ನಡೆಸಿದ ಮುಂದುವರೆದ ಅಧ್ಯಯನಗಳಿಂದ ಈ ಬಾಹ್ಯ ಪ್ರೇರಣೆ, ಅತಿ ನೇರಳೆ ವಿಕಿರಣವಾಗಿರುವುದು ಸ್ಪುಟವಾಯಿತು. 1954ರಲ್ಲಿ ಲೌಫ್ ಪೊಲಿಯೋ ವೈರಸ್ಗಳ ಅಧ್ಯಯನ ಪ್ರಾರಂಭಿಸಿದನು. ಈತನ ವಿಸ್ತೃತ ಅಧ್ಯಯನಗಳಿಂದ ಪೊಲಿಯೋ ಸೋಂಕು ತಾಗುವ ಕಾರಣಗಳು ಅಸ್ಪಷ್ಟವೆಂದು ತಿಳಿದು ಬಂದಿತು. ಲೌಫ್’ನನ್ನು ನೂರಾರು ಸನ್ಮಾನ ಗೌರವ ಪದವಿಗಳು ಅರಸಿ ಬಂದವು. ಚಿಕಾಗೋ, ಆಕ್ಸ್ಫರ್ಡ್, ಗ್ಲಾಸ್ಗೋಗಳ ಗೌರವ ಪ್ರಾಧ್ಯಾಪಕನಾಗಿದ್ದ ಲೌಫ್ , ಅಂತಾರಾಷ್ಟ್ರೀಯ ಸೂಕ್ಷ್ಮ ಜೀವಿ ಶಾಸ್ತ್ರ ಸಂಘದ ಅಧ್ಯಕ್ಷನಾಗಿದ್ದನು. ಸೂಕ್ಷ್ಮ ಜೀವಿ ಶಾಸ್ತ್ರದಲ್ಲಿನ ಗಮನಾರ್ಹ ಸಾಧನೆಗಳಿಗಾಗಿ ಲೌಫ್ 1965ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಚಾರ್ಲ್ಸ್, ಬ್ರೆಂಟನ್ ಹಗ್ಗಿನ್ಸ್ (1901--) 1966
Charles , Brenton Huggins
ಅಸಂಸಂ-ಕೆನಡಾ-ಕ್ಯಾನ್ಸರ್ ಚಿಕೆತ್ಸೆಯಲ್ಲಿ ಚೋದನಿಕೆಗಳ ಪಾತ್ರ ಕುರಿತಾಗಿ ಅಧ್ಯಯನ ನಡೆಸಿದಾತ.
ಚಾರ್ಲ್ಸ್ ನೋವಾಸ್ಕೋಷಿಯಾದ ಹ್ಯಾಲಿಫಾಕ್ಸ್;ನಲ್ಲಿ 22 ಸೆಪ್ಟೆಂಬರ್ 1901ರಂದು ಜನಿಸಿದನು. ಈತನ ತಂದೆ ಔಷಧಿ ವ್ಯಾಪಾರಿಯಾಗಿದ್ದನು. ಹ್ಯಾಲಿಫಾಕ್ಸ್’ನ ಸಾರ್ವಜನಿಕ ಶಾಲೆಯಲ್ಲಿ ಪದವಿ ಪೂರ್ವದವರೆಗಿನ ಶಿಕ್ಷಣ ಮುಗಿಸಿ 1920ರಲ್ಲಿ ಅಕಾಡಿಯಾ ವಿಶ್ವವಿದ್ಯಾಲಯದಿಂದ ಪದವಿ, 1924ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದನು. ನಂತರ ಮಿಷಿಗನ್ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಕನಾಗಿ ವೃತ್ತಿ ಜೀವನ ಪ್ರಾರಂಭಿಸಿದನು. ಪ್ರೊಸ್ಟ್ಯಾಟಿಕ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಚೋದನಿಕೆಗಳ (Hormone) ಪಾತ್ರ ಕುರಿತಾದ ಸಂಶೋಧನೆಗಳಿಗಾಗಿ 1966ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಬರ್ನಾರ್ಡ್ ,ಕಟ್ಜ್ –(1911--) 1970
Bernard , Katz Sir
ಜರ್ಮನಿ -ವೈದ್ಯಕೀಯ-ನರತಂತುಗಳ ತುದಿಗಳಲ್ಲಿನ ಕ್ರಿಯಾವಿನ್ಯಾಸ ಕುರಿತಾಗಿ ಸಂಶೋಧಿಸಿದಾತ.
ಬರ್ನಾಡ್ 26 ಮಾರ್ಚ್ 1911ರಂದು ಲೀಪ್ಜಿಗ್ನಲ್ಲಿ ಜನಿಸಿದನು. ಈತನ ಪೂರ್ವಿಕರು ರಷ್ಯಾ ಮೂಲದ ಯಹೂದಿಗಳಾಗಿದ್ದರು. ಪದವಿ ಪೂರ್ವ ಶಿಕ್ಷಣದವರೆಗಿನ ವಿಧ್ಯಾಭ್ಯಾಸವನ್ನು ಲೀಪ್ಜಿಗ್ನ ಆಲ್ಬರ್ಟ್ ಜಿಮ್ನಾಷಿಯಂನಲ್ಲಿ ಮುಗಿಸಿದ ಬರ್ನಾರ್ಡ್ 1934ರಲ್ಲಿ ಲೀಪ್ಜಿಗ್ ವಿಶ್ವ ವಿದ್ಯಾಲಯದಿಂದ ವೈದ್ಯಕೀಯ ಪದವಿ ಗಳಿಸಿದನು. 1935ರಲ್ಲಿ ಲಂಡನ್ಗೆ ವಿಶ್ವ ವಿದ್ಯಾಲಯದ ವೈದ್ಯಕೀಯ ಕಾಲೇಜಿನಲ್ಲಿ ಎ.ವಿ.ಹಿಲ್ನ ಮಾರ್ಗದರ್ಶನದಲ್ಲಿ ಸಂಶೋಧಕ ವಿದ್ಯಾರ್ಥಿಯಾದನು. 1939ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯ ಜೆ.ಸಿ.ಎಕ್ಲೆಸ್ ಪ್ರಯೋಗಾಲಯದಲ್ಲಿ ಜೆ.ಸಿ.ಎಕ್ಲೆಸ್ ಹಾಗೂ ಎಸ್ ಡಬ್ಲ್ಯೂ ಕುಫ್ಲರ್ ನೇತೃತ್ವದಲ್ಲಿ ನರ ಸ್ನಾಯು ಸಂಶೋಧನೆಯಲ್ಲಿ ನಿರತನಾದನು. 1942ರಲ್ಲಿ ಆಸ್ಟ್ರೇಲಿಯಾದ ನಾಗರಿಕನಾಗಿ, ಆಸ್ಟ್ರೇಲಿಯನ್ ವಾಯುದಳದಲ್ಲಿ ರಡಾರ್ ಅಧಿಕಾರಿಯಾಗಿ ಕೆಲಸಕ್ಕೆ ಸೇರಿ ದಕ್ಷಿಣ ಶಾಂತ ಸಾಗರದಲ್ಲಿ ಜಾಗತಿಕ ಯುದ್ದದಲ್ಲಿ ಭಾಗಿಯಾದನು. ಬರ್ನಾಡ್ ಸಂಶೋಧನೆಗಳು ನರವ್ಯೂಹ, ನರ ಸ್ನಾಯುಗಳ ಭೌತ ರಾಸಾಯನಿಕ ಕ್ರಿಯಾವಿನ್ಯಾಸ ಹಾಗೂ ವರ್ಗಾಂತರಗಳಲ್ಲಿ ಕೇಂದ್ರಿಕೃತಗೊಂಡಿದ್ದವು. ನರತಂತುಗಳ ತುದಿಗಳಲ್ಲಿನ (Humoral Transmitter)ಸಂಕೇತಗಳನ್ನು ಸಂಗ್ರಹಿಸುವ, ಬಿಡುಗಡೆಗೊಳಿಸುವ ಹಾಗೂ ನಿಷ್ಕ್ರಿಯಗೊಳಿಸುವ ಕ್ರಿಯಾ ವಿನ್ಯಾಸಗಳನ್ನು ಕುರಿತಾದ ಮಹತ್ತರ ಕಾರ್ಯಗಳಿಗಾಗಿ 1970ರಲ್ಲಿ ಬರ್ನಾರ್ಡ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.