ಕಾರ್ಲ್, ಇ .ವೀಮನ್ (1951--) 2001
Carl E. Wieman
ಅಸಂಸಂ-ಭೌತಶಾಸ್ತ್ರ- ಪರಮಾಣುಗಳ ಸಂಶೋಧನೆಯಲ್ಲಿ ಪರಿಶ್ರಮಿಸಿದಾತ.
ವೀಮನ್ 26 ಮಾರ್ಚ್ 1951ರಂದು ಒರೆಗಾನ್ ರಾಜ್ಯದ ಕೊರಾವಿಲ್ಲಿಸ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದನು. ಈತನ ತಂದೆ ಸಾಮಿಲ್ನಲ್ಲಿ ಕೆಲಸಗಾರನಾಗಿದ್ದನು. ದಟ್ಟ ಅರಣ್ಯದ ಅಂಚಿನಲ್ಲಿ ಬೆಳೆದ ವೀಮನ್ ಸ್ವತಂತ್ರ ಮನೋಭಾವ ಬೆಳೆಸಿಕೊಂಡನು. ಕಾಡಿನಲ್ಲಿ ಅಲೆಯುತ್ತಾ, ಮರಗಳನ್ನೇರುತ್ತಾ, ಹಣ್ಣು ಹಂಪಲುಗಳನ್ನು ಸಂಗ್ರಹಿಸುತ್ತಾ ಬಾಲ್ಯವನ್ನು ಕಳೆದನು. ಪ್ರತಿ ಶನಿವಾರ ತಂದೆಯೊಂದಿಗೆ ಪಕ್ಕದ ಹಳ್ಳಿಯಲ್ಲಿ ನಡೆಯುತ್ತಿದ್ದ ಸಂತೆಗೆ ಹೋಗುವುದು ವೀಮನ್ಗೆ ಭಾರಿ ಇಷ್ಟವಾದ ಸಂಗತಿಯಾಗಿದ್ದಿತು. ವೀಮನ್ ತಂದೆ ಹೆಚ್ಚು ವಿದ್ಯಾವಂತನಲ್ಲದಿದ್ದರೂ, ತನ್ನೆಲ್ಲ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂದು ಬಯಸಿದ್ದನು. ಸಾರ್ವಜನಿಕ ಗ್ರಂಥಾಲಯದಿಂದ ತಂದೆ ತರುತ್ತಿದ್ದ ಪುಸ್ತಕಗಳನ್ನು ಓದಿ ವೀಮನ್ ಜ್ಞಾನ ದಿಗಂತವನ್ನು ವಿಸ್ತರಿಸಿಕೊಂಡನು. ವೀಮನ್ಗೆ ಬಾಲ್ಯದಿಂದಲೂ, ದೂರದರ್ಶನಕ್ಕಿಂತಲೂ ಪುಸ್ತಕದ ಸೆಳೆತವೇ ಅಧಿಕವಾಗಿದ್ದಿತು. ಪಕ್ಕದ ಹಳ್ಳಿಯಲ್ಲಿ ಮೂರು ಕೋಣೆಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಸಾಕಷ್ಟು ದೂರವಿದ್ದ ಫಿಲೋಮತ್ ಪಟ್ಟಣದ ಪ್ರೌಢಶಾಲೆಗೆ ವೀಮನ್ ಸೇರಿದನು. ಇಲ್ಲಿ ಸಾಮಾನ್ಯ ಕಾರ್ಮಿಕರ ಮಕ್ಕಳೇ ಅತ್ಯಧಿಕ ಸಂಖ್ಯೆಯಲ್ಲಿದ್ದು ವಿದ್ಯಾಭ್ಯಾಸಕ್ಕೆ ಅಂತಹ ಪ್ರಾಮುಖ್ಯತೆ ನೀಡುತ್ತಿರಲಿಲ್ಲ. ಇದರಿಂದ ಉಪಾಧ್ಯಾಯರುಗಳು ಆಗಾಗ್ಗೆ ಹತಾಶರಾಗುತ್ತಿದ್ದರು. ಇಲ್ಲಿದ್ದ ವಿಜ್ಞಾನದ ಶಿಕ್ಷಕ ತನ್ನೆಲ್ಲಾ ಇತಿಮಿತಿಗಳ ನಡುವೆಯೂ ವೀಮನ್ನಂತಹವರು ವಿಜ್ಞಾನದ ವಿಷಯಗಳಲ್ಲಿ ಆಸಕ್ತಿ ತಳೆಯುವಂತೆ ಮಾಡಿದನು. ದಿನ ನಿತ್ಯ ಶಾಲೆಗಾಗಿ ದೂರ ಬಸ್ ಪ್ರಯಾಣ ಮಾಡುವುದನ್ನು ತಪ್ಪಿಸಲು, ವೀಮನ್ ತಂದೆ, ಸ್ವಲ್ಪ ದೊಡ್ಡ ಪಟ್ಟಣವಾದ ಕೋರಾದಲ್ಲಿ ಮನೆ ಮಾಡಿ ತನ್ನ ಐದು ಮಕ್ಕಳಿಗೂ ಉತ್ತಮ ಶಿಕ್ಷಣ ದಕ್ಕುವಂತೆ ಮಾಡಲು ಯತ್ನಿಸಿದನು. ಮುಂದೆ ವೀಮನ್ ಕಾಲೇಜು ಶಿಕ್ಷಣಕ್ಕಾಗಿ ಎಂಐಟಿಗೆ ಸೇರಿದನು. ತೀರ ಗ್ರಾಮೀಣ ಪ್ರದೇಶದ ಹುಡುಗನೊಬ್ಬ ತಮ್ಮ ಕಾಲೇಜಿಗೆ ಪ್ರವೇಶ ಬಯಸಿ ಬರುತ್ತಿವುದು ಎಂಐಟಿ ಆಡಳಿತ ಮಂಡಳಿಗೆ ಸೋಜಿಗವೆನಿಸಿತು. ಕಾಲೇಜಿನಲ್ಲಿ ತನಗೆ ಇಷ್ಟವಾದ ವಿಷಯದಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿ, ಉಳಿದವುಗಳ ಕಡೆ ಕನಿಷ್ಟ ಗಮನವನ್ನು ಹರಿಸದಿರುವುದು ವೀಮನ್ನ ದೌರ್ಬಲ್ಯವೆನಿಸಿಕೊಂಡಿತು. ಎಂಐಟಿಯಲ್ಲಿ ಪ್ರಾದ್ಯಾಪಕ ಅಲ್ ಹೀಲ್ನಿಂದ ಉಪನ್ಯಾಸ ಕೇಳಿದ ನಂತರ ಭೌತಶಾಸ್ತ್ರ ವೀಮನ್ನ ಆಸಕ್ತಿಯ ಕೇಂದ್ರವಾಯಿತು. ಇಲ್ಲಿ ಡ್ಯಾನ್ ಕೆಪ್ಲರ್ನ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ಪ್ರಯೋಗ ತಂಡಕ್ಕೆ ಸೇರಿಕೊಂಡನು. ಇಲ್ಲಿಯೇ ವೀಮನ್ಗೆ ಭೌತಶಾಸ್ತ್ರದಲ್ಲಿ ಸುಪ್ತವಾಗಿದ್ದ ಪ್ರತಿಭೆ ಬೆಳಕಿಗೆ ಬರತೊಡಗಿತು. ಎಂಐಟಿಯಿಂದ ಸ್ಕ್ಯಾನ್ಫೋರ್ಡ್ ಕಾಲೇಜಿಗೆ ವರ್ಗಾಯಿಸಿಕೊಂಡು ಅಲ್ಲಿ ಹಾನ್ಫ್ಕ್ನ ಕೆಳಗೆ ಲೇಸರ್ ರೋಹಿತಶಾಸ್ತ್ರ ವಿಭಾಗ ಸೇರಿದನು. ಇಲ್ಲಿ ಜಲಜನಕ 15-25 ಸ್ಥಿತ್ಯಂತರದ ಅಧ್ಯಯನ ಹಾಗೂ ಪ್ರಯೋಗಗಳು ನಡೆಯುತ್ತಿದ್ದವು. ವೀಮನ್ ಇದರಲ್ಲಿ ಸಂಪೂರ್ಣವಾಗಿ ತಲ್ಲೀನನಾದನು. ಧೃವೀಕರಣ ರೋಹಿತಶಾಸ್ತ್ರದಲ್ಲಿ (Polarised Spectroscopy) ಸಂಪ್ರಬಂಧ ಮಂಡಿಸಿ, ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕ ವಿಜ್ಞಾನಿಯಾಗಿ ಸೇರಿಕೊಂಡನು. ಇಲ್ಲಿ ಜಲಜನಕ ಪರಮಾಣುವಿನಲ್ಲಿ ಸಾಮ್ಯತೆ (Parity) ಭಂಗವಾಗುವುದನ್ನು ಅರಿಯುವ ಪ್ರಯೋಗಗಳು ನಡೆಯುತ್ತಿದ್ದವು. ಹಲವು ತಿಂಗಳುಗಳ ಕಠಿಣ ಕೆಲಸದ ನಂತರ ವೀಮನ್ ಇದರಲ್ಲಿ ಭ್ರಮೆ ನಿರಸನಗೊಂಡನು. ಆಡಳಿತ ವರ್ಗದ ಅನುಮತಿ ಪಡೆದು, ವೀಮನ್ ಸೇಸಿಯಂನಲ್ಲಿನ ಸಾಮ್ಯತೆ ಭಂಗ ಕುರಿತಾದ ಸಂಶೋಧನೆ ಪ್ರಾರಂಭಿಸಿದನು. ಇದನ್ನು ಗುರುತಿಸಿದ ಬೌಲ್ಡರ್ನಲ್ಲಿರುವ ಕೊಲರಡೋ ವಿಶ್ವವಿದ್ಯಾಲಯ ಹೆಚ್ಚಿನ ಸಂಶೋಧನೆಗಾಗಿ ಮೀವರ್ನನ್ನು ಆಹ್ವಾನಿಸಿತು. ಈ ಪ್ರಯೋಗಗಳು ಯಶಸ್ವಿಯಾದ ನಂತರ ಇಲ್ಲಿಯೇ ಪೂರ್ಣಾವಧಿ ಪ್ರಾಧ್ಯಾಪಕನಾದನು. ಲೇಸರ್ ತಂಪಿಸಿಕೆಯಿಂದ ಸೆರೆ ಹಿಡಿಯಲ್ಪಟ್ಟ ಪರಮಾಣುಗಳನ್ನು ಕಾಂತಕ್ಷೇತ್ರದಲ್ಲಿ ಅಧ್ಯಯನ ನಡೆಸಿದನು. ಇದರಲ್ಲಿ ಎರಿಕ್ ಕಾರ್ನೆಲ್ ವೀಮನ್ಗೆ ಸಹಾಯ ಒದಗಿಸಿದನು. ಇದಕ್ಕಾಗಿ ವೀಮನ್ ಹಾಗೂ ಎರಿಕ್ ಕಾರ್ನೆಲ್ 2001ರ ನೊಬೆಲ್ ಪ್ರಶಸ್ತಿ ಗಳಿಸಿದನು.
ವೂಲ್ಫ್’ಗ್ಯಾಂಗ್ ,ಕೆಟ್ಟರ್ಲೆ (1957--) 2001
Wolfgang Ketterle
ಜರ್ಮನಿ-ಭೌತಶಾಸ್ತ್ರ-ದಹನ ಕ್ರಿಯೆಯನ್ನು ಅಣುಮಟ್ಟದಲ್ಲಿ ಅರಿಯಲು ಪರಿಶ್ರಮಿಸಿದಾತ.
ವೂಲ್ಫ್’ಗ್ಯಾಂಗ್ 21 ಅಕ್ಟೋಬರ್ 1957ರಲ್ಲಿ ಹೈಡೆಲ್ಬರ್ಗ್ನಲ್ಲಿ ಜನಿಸಿದನು. ವೂಲ್ಫ್’ಗ್ಯಾಂಗ್ ಮೂರು ವರ್ಷದವನಿರುವಾಗ ಹೈಡೆಲ್ಬರ್ಗ್ನಿಂದ 5 ಕಿ.ಮೀ. ದೂರದ ಎಫೆಲ್ಹೀಮ್ಗೆ ಇವರು ಕುಟುಂಬ ಸ್ಥಳಾಂತರಗೊಂಡಿತು. ವೂಲ್ಫ್’ಗ್ಯಾಂಗ್ನ ತಂದೆ ತಾಯಿ ಜಾಗತಿಕ ಯುದ್ದ, ಕಠಿಣ ಪರಿಸ್ಥಿತಿಗಳಿಂದ ತಮ್ಮ ಜೀವನದಲ್ಲಿ ಬೇಕೆನಿಸಿದುದನ್ನು, ತಮ್ಮ ಅಭಿರುಚಿಗೆ ಅನುಗುಣವಾದುದನ್ನು ಪಡೆದಿರಲಿಲ್ಲ. ಆದ್ದರಿಂದ ತಮ್ಮಂತೆ ತಮ್ಮ ಮಕ್ಕಳು ಸಹ ಅವಕಾಶ ವಂಚಿತರಾಗಬಾರದೆಂದು ಶ್ರಮಿಸಿದರು. ಎಫೆಲ್ಹೀಮ್, ಹೈಡೆಲ್ ಬರ್ಗ್ಗಳಲ್ಲಿ ಶಿಕ್ಷಣ ಪಡೆದ ವೂಲ್ಫ್ಗ್ಯಾಂಗ್ಗೆ ಗಣಿತ, ವಿಜ್ಞಾನ ನೆಚ್ಚಿನ ವಿಷಯಗಳಾಗಿದ್ದವು. ಭೌತಶಾಸ್ತ್ರ, ಗಣಿತ , ಗಣಕ ವಿಜ್ಞಾನಗಳಲ್ಲಿ ಯಾವುದಾದರೂ ಒಂದರಲ್ಲಿ ಪರಿಣಿತನಾಗಬೇಕೆಂದು ವೂಲ್ಫ್’ಗ್ಯಾಂಗ್ ಬಯಸಿದ್ದನು. ಭೌತಶಾಸ್ತ್ರ ನೈಜ ಜಗತ್ತಿನೊಂದಿಗೆ ಗಣಿತವನ್ನು ಬೆಸೆದು ನಿಜವಾದ ಸತ್ಯವನ್ನು ತೋರಿಸುವುದೆಂದು ನಿರ್ಧರಿಸಿ ಅದರ ಅಧ್ಯಯನಕ್ಕೆ 1976ರಲ್ಲಿ ಹೈಡೆಲ್ಬರ್ಗ್ “ವಿಶ್ವವಿದ್ಯಾಲಯಕ್ಕೆ ಸೇರಿದನು. ಈ ವಿಶ್ವವಿದ್ಯಾಲಯ 1386ರಲ್ಲಿ ಪ್ರಾರಂಭವಾಗಿದ್ದಿತು. ಮುಂದೆ ಮ್ಯೂನಿಕ್ “ವಿಶ್ವವಿದ್ಯಾಲಯ ಸೇರಿದನು. ಇಲ್ಲಿ ವೂಲ್ಫ್’ಗ್ಯಾಂಗ್ ಗೊಟ್ಜಿಯ ಮಾರ್ಗದರ್ಶನದಲ್ಲಿ ಕ್ರಮಹೀನ ಸಾಮಾಗ್ರಿಗಳಲ್ಲಿನ (Disordered Materials) ಗಿರಕಿ ವಿಶ್ರಾಂತ ಸ್ಥಿತಿಯ (Spin Relaxation State) ಅಧ್ಯಯನ ನಡೆಸಿದನು. ಹರ್ಬರ್ಟ್ ವಾಲ್ಟರ್ ಹಾಗೂ ಹರ್ಟ್ಮಟ್ ಫಿûಗ್ಗೆರ್ ಕೈಕೆಳಗೆ ಮಾಕ್ಸ್ಪ್ಲಾಂಕ್ ಸಂಸ್ಥೆಯಲ್ಲಿ ಕ್ವಾಂಟಂ ದೃಗ್ ಶಾಸ್ತ್ರದಲ್ಲಿ ಸಂಶೋಧನೆ ನಡೆಸಿದನು. ತ್ರಿ ಪರಮಾಣ್ವಕ (Triatomic) ಹೀಲಿಯಂನ ಪರಿಶುದ್ದ ಪ್ರದೀಪ್ತಿ ಪಡೆಯುವಲ್ಲಿ ಯಶಸ್ವಿಯಾದನು. ಇದನ್ನು ಹೀಲಿಯ್ಂ ಹೈಡ್ರೈಡ್ಗೆ ವಿಸ್ತರಿಸಿ, ಈ ಅಣುವಿನ ವಿವಿಕ್ತ ರೋಹಿತವನ್ನು (Discrete Spectrum) ಪಡೆಯುವಲ್ಲಿ ಯಶಸ್ಸನ್ನು ಕಂಡನು. ಇದನ್ನು ಬಳಸಿಕೊಂಡು, ಈ ಅಣುವಿನ ಮೂಲ ಗುಣ ಲಕ್ಷಣಗಳನ್ನು ನಿರ್ಧರಿಸಿದನು. ಡಾಕ್ಟರೇಟ್ ಪೂರ್ಣಗೊಳಿಸಿದ ನಂತರ ಈ ನಿಟ್ಟಿನಲ್ಲಿ ಕಾರ್ಯ ಮುಂದುವರೆಸಿ ಹೀಲಿಯಂ ಹೈಡ್ರೇಡ್ನ ಉತ್ಸರ್ಜಿತ ರೋಹಿತವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದನು. ಈ ಅಣುವಿನ ರೋಹಿತ ಅಧ್ಯಯನ ಬಹು ಕ್ಲಿಷ್ಟವಾದುದೆಂದು ಪರಿಗಣಿತವಾಗಿದೆ. ಹೈಡೆಲ್ಬರ್ಗ್ ವಿಶ್ವವಿದ್ಯಾಲಯದ ಜುರ್ಜೆನ್ ವೂಲ್ಫ್ ನೇತೃತ್ವದ ತಂಡ ಸೇರಿದ ವೂಲ್ಫ್’ಗ್ಯಾಂಗ್ ಲೇಸರ್ ಬಳಸಿ, ದಹನದ ವಿಶ್ಲೇಷಣೆ ನಡೆಸಿದನು. ಉರಿಯ ತಾಪ ಹಾಗೂ ಅಣು ಸಾಂದ್ರತೆಯ ನಿರ್ಧಾರದಲ್ಲಿ ವೂಲ್ಫ್’ಗ್ಯಾಂಗ್ ಸಿದ್ಧಹಸ್ತನೆನಿಸಿದನು. ವೋಲ್ಕ್ಸ್ವ್ಯಾಗನ್ ವಾಹನ ತಯಾರಿಕಾ ಕಂಪನಿಯವರಿಗೆ, ಅತ್ಯಂತ ಕಡಿಮೆ ಇಂಧನ ವ್ಯಯಿಸುವ ಇಂಜಿನ್ ತಯಾರಿಕೆಗೆ ನೆರವು ನೀಡುವ ಸಂಶೋಧನೆಯಲ್ಲಿ ಭಾಗಿಯಾದನು. ಅಲ್ಪ ಕಾಲದಲ್ಲೇ ಇಂಜಿನಿಯರಿಂಗ್ ಮೀರಿದ ಮೂಲ ಸಂಶೋಧನೆಯ ಕರೆ ವೂಲ್ಫ್ಗ್ಯಾಂಗ್ನನ್ನು ಕೂಗಿ ಕರೆಯಿತು. 1990ರಲ್ಲಿ ಅಸಂಸಂದ ಎಂಐಟಿಯಲ್ಲಿದ್ದ ಡೇವ್ ಪ್ರಿಟ್ಕಾರ್ಡ್ನ ಗುಂಪಿನಲ್ಲಿ ಲೇಸರ್ ತಂಪಿಸಿಕೆಯ ಯೋಜನೆ ಹಾಗೂ ಸಂಶೋಧನೆಗೆ ಸೇರಿಕೊಂಡನು. ಇಲ್ಲಿ ಡೇವ್ ಪ್ರಿಟ್ಕಾರ್ಡ್ ಹಾಗೂ ವೂಲ್ಫ್’ಗ್ಯಾಂಗ್ ಸಾಂಗತ್ಯ ಅತ್ಯುತ್ತಮ ವೈಜ್ಞಾನಿಕ ಸಂಶೋಧನೆಗಳಲ್ಲಿ ಫಲಪ್ರದವಾಯಿತು. ವೂಲ್ಫ್’ಗ್ಯಾಂಗ್ 2001ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮಸಾತೋಷಿ ಕೋಷಿಬಾ –(1961--) 2002
Masatoshi , Koshiba
ಜಪಾನ್-ಭೌತಶಾಸ್ತ್ರ- ಕಣಗಳ ಸಂಶೋಧನೆಯ ಮುಂದಾಳು.
ಮಸಾತೋಷಿ 19 ಸೆಪ್ಟೆಂಬರ್ 1926 ರಂದು ಟೊಯೊಹಸಿ ನಗರದಲ್ಲಿ ಜನಿಸಿದನು. 1951ರಲ್ಲಿ ಟೋಕಿಯೋ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪದವಿ ಗಳಿಸಿದನು. 1953ರಲ್ಲಿ ಅಸಂಸಂಗಳಿಗೆ ತೆರಳಿ ನ್ರ್ಯಯಾರ್ಕ್ನ ರೊಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ವಿಶ್ವ ಕಿರಣಗಳ ಅತ್ಯಧಿಕ ಚೈತನ್ಯದ ವಿದ್ಯಾಮನದ ಬಗೆಗೆ ಸಂಶೋಧನೆ ನಡೆಸಿ ಡಾಕ್ಟರೇಟ್ ಗಳಿಸಿದನು. 1955ರಿಂದ 1958ರವರೆಗೆ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಹಾಯಕ ಸಂಶೋಧಕನಾದನು. 1955ರಿಂದ 1963ರವರೆಗೆ ಟೋಕಿಯೋ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾದನು. ಚಿಕಾಗೋ ವಿಶ್ವವಿಶ್ವವಿದ್ಯಾಲಯದ ಅಧಿಕ ಚೈತನ್ಯ ಪ್ರಯೋಗಾಲಯದ ನಿರ್ದೇಶಕನಾದನು. 1984ರಲ್ಲಿ ಅಂತರಾಷ್ಟ್ರೀಯ ಕಣ ಭೌತಶಾಸ್ತ್ರ ಸಂಘಟನೆಯ ನಿರ್ದೇಶಕನಾಗಿ ಸೇವೆ ಸಲ್ಲಿಸಿದನು. ಹಲವಾರು ವಿಶ್ವವಿದ್ಯಾಲಯ ಭೌತಶಾಸ್ತ್ರದ ಸಂಸ್ಥೆಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ ಮಸಾತೋಷ ಕಣ ಭೌತಶಾಸ್ತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ 2002ರ ನೊಬೆಲ್ ಪ್ರಶಸ್ತಿ ನೀಡಲಾಯಿತು.
ರೇಮಂಡ್ ,ಡೇವಿಸ್ –(1914--) 2002
Raymond , Davis Jr .
ಅಸಂಸಂ-ಭೌತಶಾಸ್ತ್ರ-ನ್ಯೂಟ್ರಿನೋ ಸಂಶೋಧನೆಯಲ್ಲಿ ಪರಿಶ್ರಮಿಸಿದಾತ.
ಡೇವಿಸ್ 14 ಅಕ್ಟೋಬರ್ 1914 ರಂದು ವಾಷಿಂಗ್ಟನ್ ಡಿ.ಸಿ.ಯಲ್ಲಿ ಜನಿಸಿದನು. ಈತನ ತಂದೆ ನ್ಯಾಷನಲ್ ಬ್ಯೂರೋ ಅಫ್ಸ್ಟ್ಯಾಂಡಡ್ರ್ಸ್ನಲ್ಲಿ ಛಾಯಾಗ್ರಾಹಕನಾಗಿದ್ದನು. ವಾಷಿಂಗ್ಟನ್ ಗ್ರಂಥಾಲಯದಲ್ಲಿನ ವಿಜ್ಞಾನದ ಪುಸ್ತಕಗಳು ಡೇವಿಡ್ನ ಮನಸೂರೆಗೊಂಡಿದ್ದವು. ವಾಷಿಂಗ್ಟನ್ ಸಾರ್ವಜನಿಕ ಶಾಲೆಗಳಲ್ಲಿ ಶಿಕ್ಷಣ ಮುಗಿಸಿದ ಡೇವಿಸ್, 1936ರಲ್ಲಿ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಪದವಿಯನ್ನು ಗಳಿಸಿದನು. ಮಿಷಿಗನ್ ಮಿಡ್ಲ್ಯಾಂಡ್ನಲ್ಲಿದ್ದ ಡೆ ಕೆಮಿಕಲ್ ಕಂಪನಿ ಸೇರಿ ಅಲ್ಪ ಕಾಲದಲ್ಲೇ ಅದನ್ನು ತೊರೆದು, ಮೇರಿಲ್ಯಾಂಡ್ “ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದನು. 1942ರಲ್ಲಿ ಮೇಟ್ ವಿಶ್ವವಿದ್ಯಾಲಯದಿಂದ ಭೌತ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು. ಮಿಲಿಟರಿ ಸೇರಿದ ಡೇವಿಸ್, ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಉತ್ಸಾಹದಿಂದ ರಾಸಾಯನಿಕ ಅಸ್ತ್ರಗಳ ಅಭಿವೃದ್ಧಿಯಲ್ಲಿ ಭಾಗವಹಿಸಿದನು. 1945ರಲ್ಲಿ ಮಿಲಿಟರಿ ಸೇವೆ ಪೂರ್ಣಗೊಳಿಸಿ ಮೊನ್ಸ್ಯಾಂಟೋ ಕೆಮಿಕಲ್ ಕಂಪನಿಯ ಮೌಂಡ್ ಪ್ರಯೋಗಾಲಯ ಸೇರಿದನು. 1948ರಲ್ಲಿ ಅದೇ ತಾನೇ ಪ್ರಾರಂಭವಾಗಿದ್ದ ಬ್ರೂಕ್ಹ್ಯಾವೆನ್ ರಾಷ್ಟ್ರೀಯ ಪ್ರಯೋಗಾಲಯ ಸೇರಿ ಶಾಂತಿಗಾಗಿ ಪರಮಾಣು ಶಕ್ತಿಯನ್ನು ಪಡೆಯುವ ಸಂಶೋಧಕ ತಂಡದ ಸದಸ್ಯನಾದನು, ಬ್ರೂಕ್ಹ್ಯಾವೆನ್ ಪ್ರಯೋಗಾಲಯದಲ್ಲಿ , 1946ರಲ್ಲಿ ಬ್ರುನೋ ಪಾಂಟಿಕೊರ್ವೋ ಸೂಚಿಸಿದ್ದ ಕ್ಲೋರಿನ್-ಆರ್ಗಾನ್ ಪತ್ತೆ ವಿಧಾನದಲ್ಲಿ ನ್ಯೂಟ್ರಿನೋಗಳನ್ನು ಹುಡುಕಲು ಪ್ರಾರಂಭಿಸಿದನು. ಈ ವಿಧಾನದಲ್ಲಿ 37 ಕ್ಲೋರಿನ್ ಪರಮಾಣು ನ್ಯೂಟ್ರಿನೋದೊಂದಿಗೆ ಪ್ರತಿಕ್ರಿಯೆ ಹೊಂದಿ 37 ಆರ್ಗಾನ್ ಆಗುತ್ತದೆ. ಆರ್ಗಾನ್ ಆದರ್ಶ ಅನಿಲವಾಗಿದ್ದು 35 ದಿನಗಳ ಅರ್ಧಾಯುಷ್ಯ ಹೊಂದಿರುತ್ತದೆ. ಆದರೆ ಡೇವಿಸ್ ಪ್ರಯೋಗಗಳಿಂದ ನ್ಯೂಟ್ರಿನೋ ಪತ್ತೆಯಾಗಲಿಲ್ಲ. ಆ ಕಾಲದಲ್ಲಿ ನ್ಯೂಟ್ರಿನೋಗಳಂತೆಯೇ ಪ್ರತಿ ನ್ಯೂಟ್ರಿನೋಗಳಿರುವುದು ತಿಳಿದಿರಲಿಲ್ಲ. ಇವೆರಡು ಕಣಗಳು ಸರ್ವ ಸಾಮ್ಯದಲ್ಲೂ ಇಲ್ಲ. ಮುಂದೆ, ಡೇವಿಡ್ ಸವನ್ನ ರಿವರ್ ಪ್ರತಿಕ್ರಿಯಾಕಾರಕದಲ್ಲಿ (Reactor) ವಿಸ್ತೃತ ತಯಾರಿ ನಡೆಸಿ ನ್ಯೂಟ್ರಿನೋಗಳನ್ನು ಪಡೆದನು. ಈ ಹಿನ್ನೆಲೆಯಲ್ಲಿ ನ್ಯೂಟ್ರಿನೋಗಳ ಮೇಲೆ ಹೆಚ್ಚಿನ ಸಂಶೋಧನೆ ಮಾಡಿದ ಫೆ್ರಡ್ ರೀನ್ಸ್ ಮುಂದೆ ನೊಬೆಲ್ ಪ್ರಶಸ್ತಿಗೆ ಪಾತ್ರನಾದನು. ಡೇವಿಡ್, ಆಲಿವರ್ ಷಾಫೆರ್ನೊಂದಿಗೆ, ಶಿಲೆಗಳ ಮೇಲೈನಲ್ಲಿರುವ 36ಕ್ಲೋರಿನ್ನಿಂದ ಅವುಗಳ ಅವಧಿ ನಿರ್ಧರಿಸುವ ವಿಧಾನವನ್ನು ರೂಪಿಸಿದನು. ವೇಗೋತ್ಕರ್ಷಕ ದ್ರವ್ಯ ರೋಹಿತ ಮಾಪನೆ ಬಂದ ನಂತರ ಭೂರಸಾಯನಶಾಸ್ತ್ರದಲ್ಲಿ ಇವರ ವಿಧಾನ ಪ್ರಾಮುಖ್ಯತೆ ಗಳಿಸಿತು. ಇವರು ಉಲ್ಕೆಯೊಂದರ ತುಣುಕಿನಲ್ಲಿದ್ದ 36ಕ್ಲೋರಿನ್ನಿಂದ ವಿಕಿರಣಪಟುತ್ವ (Radioactivity) ಹಾಗೂ ಅದರ ಸಂಚಯಿತವಾದ ಶೈಥಿಲ್ಯದ ಉತ್ಪನ್ನ ಅಳೆದು ಅದರ ಅವಧಿಯನ್ನು ಸಹ ನಿರ್ಧರಿಸಿದರು. ವಿಕಿರಣಪಟುತ್ವ ಹೊಂದಿದ ಆರ್ಗಾನ್ ಸಮಸ್ಥಾನಿಗಳನ್ನು (Isotope) ಅಳೆದು ಸೌರವ್ಯವಸ್ಥೆಯ ಆಂತರ್ಯದಲ್ಲಿರುವ ವಿಶ್ವ ಕಿರಣಗಳ ತೀವ್ರತೆಯ ವ್ಯತ್ಯಾಸವನ್ನು ಅಳೆದರು. ಚಂದ್ರ ಯಾನದಲ್ಲಿ ತಂದ ಶಿಲೆಗಳಲ್ಲಿನ 37-ಅರ್ಗಾನ್, 39-ಆರ್ಗಾನ್ ಟ್ರೈಟಿಯಂ ಹಾಗೂ 222RN ಗಳ ಪ್ರಮಾಣದ ಮೂಲಕ ಚಂದ್ರ ವಾತಾವರಣವನ್ನು ವಿವರಿಸುವಲ್ಲಿ ಡೇವಿಸ್ ಭಾಗಿಯಾಗಿದ್ದನು.ಡೇವಿಸ್ ಸೂರ್ಯನಿಂದ ಹೊರ ಹೊಮ್ಮುವ ನ್ಯೂಟ್ರಿನೋಗಳ ಪತ್ತೆಗಾಗಿ ಓಹಿಯೋ ರಾಜ್ಯದ ಆಕ್ರಾನ್ ಬಳಿಯಿರುವ 750 ಮೀ ಆಳದ ಬಾರ್ಬೆರ್ಟಾನ್ ಸುಣ್ಣದ ಗಣಿಯೊಂದನ್ನು ಆಯ್ದುಕೊಂಡನು. 1950ರಲ್ಲಿ ಪ್ರೋಟಾನ್-ಪ್ರೋಟಾನ್ಗಳ ಸರಣಿ ಪ್ರತಿಕ್ರಿಯೆಯಿಂದ ನ್ಯೂಟ್ರಿನೋಗಳು ಉತ್ಪನ್ನವಾಗುವುವೆಂದು ನಂಬಲಾಗಿದ್ದಿತು. ಆದರೆ ಈ ಮೂಲದ ನ್ಯೂಟ್ರಿನೋಗಳ ಚೈತನ್ಯ ಭಾವಿಸುದದ್ದಕ್ಕಿಂತಲೂ ಕಡಿಮೆಯಿದ್ದಿತು. ಬ್ರೂಕ್ಹೇವನ್ ಪ್ರಯೋಗಾಲಯ ಅಸಂಸಂ ಪರಮಾಣು ಚೈತನ್ಯ ಸಮಿತಿಯ ನೆರವಿನಿಂದ ಡೇವಿಸ್ ದಕ್ಷಿಣ ಡಕೋಟಾದ ಲೀಡ್ನಲ್ಲಿರುವ ಚಿನ್ನದ ಗಣಿಯಲ್ಲಿ ಸುಮಾರು 1.6 ಕಿ,ಮೀ ಭೂಗರ್ಭದಲ್ಲಿ ಸೌರ ನ್ಯೂಟ್ರಿನೋ ಅಧ್ಯಯನ ಕೈಗೊಂಡನು. ಇದರಿಂದ, ಲೆಕ್ಕಾಚಾರ ಹಾಕಿದುದರ ಮೂರನೇ ಒಂದರಷ್ಟು ಮಾತ್ರ ಸೌರ ನ್ಯೂಟ್ರಿನೋಗಳು ಹೊರ ಹೊಮ್ಮುವುದೆಂದು ತಿಳಿದು ಬಂದು ಸೌರ ನ್ಯೂಟ್ರಿನೋ ಸಮಸ್ಯೆ ಎದುರಾಯಿತು. ಇದು ಭೌತಶಾಸ್ತ್ರಜ್ಞರ ಗಮನ ಸೆಳೆಯಿತು. ಇದಕ್ಕೆ ವಿವರ ನೀಡುವ ಪ್ರಯತ್ನಗಳು ಸಾಗಿದವು. ಆದರೆ ಅವು ಯಾವುವು ಸಮರ್ಪಕವಾಗಿರಲಿಲ್ಲ. ಕೆನಡಾ ದೇಶದ ಓಂಟೋರಿಯಾ ರಾಜ್ಯದ , ಸಂಡ್ಟರಿಯಲ್ಲಿರುವ ನಿಕೆಲ್ ಗಣಿಯ ಆಳದಲ್ಲಿ ನಡೆಸಿದ ಬೃಹತ್ ಹಾಗೂ ವಿಸ್ತೃತ ಪ್ರಮಾಣದ ಪ್ರಯೋಗಗಳಿಂದ ಸೌರ ನ್ಯೂಟ್ರಿನೋಗಳ ಪ್ರಮಾಣ ಸೈದ್ಧಾಂತಿಕ ಲೆಕ್ಕಚಾರಕ್ಕೆ ತಾಳೆಯಾಗುವುದೆಂದು ತಿಳಿದುಬಂದು ಸೌರ ನ್ಯೂಟ್ರಿನೋ ಸಮಸ್ಯೆಗೆ ಸಧ್ಯದಲ್ಲಿ ಪರಿಹಾರ ಒದಗಿಸಿವೆ. ಸೂರ್ಯನಿಂದ ಹೊರ ಹೊಮ್ಮಿದ ನ್ಯೂಟ್ರಿನೋಗಳು ಮಾರ್ಗ ಮಧ್ಯದಲ್ಲಿ ಎಂ ಹಾಗೂ ಮ್ಯೂನ್ಯೂಟ್ರಿನೋಗಳಾಗಿ ಬದಲಾಗುವುವೆಂದೂ ಇಂತಹ ವಿದ್ಯಾಮಾನ ನ್ಯೂಟ್ರಿನೋ ಆಂದೋಳನವೆಂದು (Oscillation) ತಿಳಿದು ಬಂದಿದೆ. ಕ್ಲೋರಿನ್ ಆರ್ಗಾನ್ ವಿಕಿರಣಪಟುತ್ವ ವಿಧಾನದಿಂದ , ಎಲೆಕ್ಟ್ರಾನ್ ನ್ಯೂಟ್ರಿನೋಗಳನ್ನು ಮಾತ್ರ ಪತ್ತೆ ಹಚ್ಚಬಹುದೆಂದು ಈಗ ಖಚಿತವಾಗಿದೆ. ನ್ಯೂಟ್ರಿನೋಗಳನ್ನು ಕುರಿತು ಡೇವಿಸ್ ನಡೆಸಿದ ಸಂಶೋಧನೆಗಳಿಗಾಗಿ 2002ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಯಿತು.
ರಿಕಾರ್ಡೋ , ಗಯಾಕ್ಕೊನಿ (1931--) 2002
Riccardo , Giacconi
ಇಟಲಿ-ಭೌತಶಾಸ್ತ್ರ- ರೇಡಿಯೋ ದೂರದರ್ಶಕದ್ ಅಧ್ಯಯನದ ಮುಂದಾಳು
ರಿಕಾರ್ಡೋ 6 ಅಕ್ಟೋಬರ್ 1931ರಂದು ಇಟಲಿಯ ಜೆನೋವಾದಲ್ಲಿ ಜನಿಸಿದನು. ಈತನ ತಾಯಿ ಪ್ರೌಢಶಾಲಾ ಉಪಾಧ್ಯಾಯಳಾಗಿದ್ದು ಹಲವಾರು ಪಠ್ಯಪುಸ್ತಕಗಳನ್ನು ಸಹ ಲೇಖಕಿಯಾಗಿ ರಚಿಸಿದ್ದಳು. ರಿಕಾರ್ಡೋ ತಂದೆ, ಚಿಕ್ಕ ವ್ಯಾಪಾರನಾಗಿದ್ದು ಫಾ್ಯಸಿಸ್ಟ್ ವಿರೋಧಿಯಾಗಿದ್ದನು. ರಿಕಾರ್ಡೋ ಎಂಟು ವರ್ಷದವನಿರುವಾಗ ಇವರು ವಿಚ್ಛೇದನ ಪಡೆದರು. ಎರಡನೇ ಜಾಗತಿಕ ಯುದ್ದ ಪ್ರಾರಂಭವಾದಾಗ ಹದಿಮೂರು ವರ್ಷದವನಾಗಿದ್ದ ರಿಕಾರ್ಡೋ ಚಿಕ್ಕಮ್ಮ ಹಾಗೂ ಅಜ್ಜಿಯರ ಆರೈಕೆಯಲ್ಲಿ ಬೆಳೆದನು. 1942ರಲ್ಲಿ ಮಿಲಾನೋ ಬಾಂಬ್ ದಾಳಿಗೆ ತುತ್ತಾಯಿತು. ಆದ್ದರಿಂದ ಮಿಲಾನೋ ತೊರೆದು ಹೋದ ರಿಕಾರ್ಡೋ, 1944ರಲ್ಲಿ ಮತ್ತೆ ಮರಳಿದನು. ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಜರ್ಮನಿಯ ಕಿಂಟರ್ಗಾರ್ಡನ್ನಲ್ಲಿ ನಂತರದ ಪ್ರಾಥಮಿಕ ಶಿಕ್ಷಣವನ್ನು ಮಿಲಿಟರಿ ಶಾಲೆಯಲ್ಲಿ ಪಡೆದನು. ಪ್ರೌಢಶಾಲೆ ಮುಗಿಸಿ ಮಿಲಾನೋ ವಿಶ್ವವಿದ್ಯಾಲಯ ಸೇರಿದ ರಿಕಾರ್ಡೋ ನಾಲ್ಕು ವರ್ಷಗಳಲ್ಲೇ ಭೌತಶಾಸ್ತ್ರದಲ್ಲಿನ ಡಾಕ್ಟರೇಟ್ನೊಂದಿಗೆ ಹೊರ ಬಂದನು. ಮಿಲಾನೋ ವಿಶ್ವವಿದ್ಯಾಲಯದಲ್ಲಿರುವ ಮ್ಯೂಯಾನ್, ಲ್ಯಾಂಬ್ಡಾ ಕಣ ಹಾಗೂ ಮೇಘ ಕೋಠಿಗಳ ಸಂಶೋಧನೆಯಲ್ಲಿದ್ದವರಿಗೆ ಅಲ್ಪ ನೆರವು ದೊರೆಯುತ್ತಿದ್ದಿತು. ರಿಕಾರ್ಡೋ ಪ್ರೋಟಾನ್ ಅಂತಕ್ರಿಯೆಗಳನ್ನು ಕುರಿತಾಗಿ ಸಂಪ್ರಬಂಧ ಮಂಡಿಸಿದ್ದನು. ಡಾಕ್ಟರೇಟ್ ಗಳಿಸಿದ ನಂತರ ಮಿಲಾನೋ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿರುವಾಗ, ಖ್ಯಾತ ಭೌತಶಾಸ್ತ್ರಜ್ಹ ಗಯ್ಸಪ್ಪೆ ಒಖಿಯಾಲಿನಿಯ ಪರಿಚಯವಾಯಿತು. ಈತನ ಸಲಹೆಯ ಮೇರೆಗೆ ರಿಕಾರ್ಡೋ ಪುಲ್ಬ್ರೈಟ್ ಸ್ಕಾಲರ್ಷಿಫ್ಗಳಿಸಿ, 1956ರಲ್ಲಿ ಅಸಂಸಂಗಳಿಗೆ ಹೋದನು. ಆರ್ ಡಬ್ಲ್ಯೂ ಥಾಮ್ಸನ್ ಹಾಗೂ ಸಂಗಡಿಗರು ಈ ಹಿಂದೆ ಮೇಘ ಕೋಠಿಗಳ (Cloud Chamber) ಮೇಲೆ ನಡೆಸಿದ್ದ ಪ್ರಯೋಗಫಲಿತಾಂಶದ ವಿಶ್ಲೇಷಣೆ ಮಾಡಿದನು. 1956ರಿಂದ 1958ರವರೆಗೆ ವಿಶ್ವಕಿರಣಗಳ ಅಧ್ಯಯನಕ್ಕಾಗಿ ಇಂಡಿಯಾನಾದ ಬ್ಲೂಮಿಂಗ್ಟನ್ನಲ್ಲಿ ಬೃಹತ್ ಮೇಘ ಕೋಠಿಯ ನಿರ್ಮಾಣ ನಡೆಯಿತು ರಿಕಾರ್ಡೋ ಇದರಲ್ಲಿ ಭಾಗಿಯಾಗಿದ್ದನು. ಆರ್.ಡಬ್ಲ್ಯೂ.ಥಾಮ್ಸನ್ ಯುವಕನಾಗಿದ್ದಾಗ ಸಂಶೋಧನೆಯಲ್ಲಿ ಪ್ರಮಾದವೆಸಗಿದ್ದನಲ್ಲದೆ, ದ್ರವ್ಯವನ್ನು ಆವಿಷ್ಕರಿಸಿದ್ದನಾದರೂ ಅವನಿಗೆ ಅದರ ಕೀರ್ತಿ ದಕ್ಕಿರಲಿಲ್ಲ. ಇವೆರಡು ಈತನನ್ನು ಬಹುವಾಗಿ ಕಾಡಿಸಿದವು. ಇಲ್ಲಿ ಥಾಮ್ಸನ್ ನೇತೃತ್ವದ ತಂಡ ಪ್ರತಿ ಲ್ಯಾಂಬ್ದಾ ಕಣಗಳ ಪತ್ತೆಯಲ್ಲಿ ವಿಫಲವಾಗಿದ್ದಿತು. ಇಲ್ಲಿಯ ಸಂಶೋಧನಾ ವಾತಾವರಣಕ್ಕೆ ಒಗ್ಗಿಕೊಳ್ಳದೆ ರಿಕಾರ್ಡೋ 1958ರಲ್ಲಿ ಪ್ರಿನ್ಸ್ಟನ್ನಲ್ಲಿದ್ದ ಜೆ.ರೆನಾಲ್ಡ್ಸ್ ಪ್ರಯೋಗಾಲಯ ಸೇರಿದನು. ಇಲ್ಲಿ ಎಮ್-ಮೆಸಾನ್ಗಳ ಸಂಶೋಧನೆ ನಡೆಸಿ, ರಷ್ಯಾದ ವಿಜ್ಞಾನಿಗಳು ಗುರುತಿಸಿದ್ದರೆಂದು ಹೇಳಲಾಗಿದ್ದ ಅಜ್ಞಾತ ಕಣದ ಶೋಧನೆಯಲ್ಲಿ ರಿಕಾರ್ಡೋ ವಿಫಲನಾದನು. 1959ರಲ್ಲಿ ಸಿಇಆರ್ಎನ್ಗೆ ಹೋಗಿ, ಅಲ್ಲಿ ಒಖಿಯಾಲಿನಿಯನ್ನು ಭೇಟಿ ಮಾಡಿದ ರಿಕಾರ್ಡೋಗೆ ನಿರಾಶೆ ಕಾದಿದ್ದಿತು. ಇದಕ್ಕೆ ಬದಲಾಗಿ ಎಂಐಟಿಯಲ್ಲಿನ ಹರ್ಬಲ್ ಬ್ರಿಡ್ಜ್ ತಂಡದೊಂದಿಗೆ ಅಮೆರಿಕನ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ರಿಕಾರ್ಡೋಗೆ ದಕ್ಕಿತು. ವಿಶ್ವ ಕಿರಣಗಳ ಬಗೆಗಿದ್ದ ಆಸಕ್ತಿಗಳು ಬಹುತೇಕ ಕಡೆ ಕುಗ್ಗತೊಡಗಿದವು. ಇದರಿಂದ ತಾನೇನೂ ಸಾಧಿಸಲಿಲ್ಲವೆಂದು ಕೊರಗು ರಿಕಾರ್ಡೋನನ್ನು ಕಾಡಿತು. ಇದೇ ಕಾಲದಲ್ಲಿ ವ್ಯಾಲ್ ಅಲೆನ್ ಆವಿಷ್ಕರಿಸಿದ ಪಟ್ಟಿಯಲ್ಲಿನ ಆಲ್ಫಾ ಕಣ ಹಾಗೂ ಪ್ರೋಟಾನ್ಗಳ ಅಧ್ಯಯನ ಸಾಧ್ಯತೆ ಗೋಚರಿಸಿತು. ಇಲ್ಲಿಂದ ಮುಂದೆ ಕ್ಷ-ಕಿರಣ ದೂರದರ್ಶಕ ನಿರ್ಮಾಣದ ಆರಂಭಿಕ ಸ್ಥಿತಿಗಳಲ್ಲಿ ರಿಕಾರ್ಡೋ ಭಾಗವಹಿಸಿದನು. ರಿಕಾರ್ಡೋ ಹಾರ್ವರ್ಡ್ ವಿಶ್ವವಿದ್ಯಾಲಯ ಸೇರಿ ಖಭೌತಶಾಸ್ತ್ರವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕನಾದನು. ಇಲ್ಲಿ ಚಂದ್ರ ಎಂದು ಕರೆಯಲಾಗುತ್ತಿರುವ ಕ್ಷ-ಕಿರಣ ದೂರದರ್ಶಕ ನಿರ್ಮಾಣದಲ್ಲಿ ಭಾಗಿಯಾದನು. ಕೆಲಕಾಲದಲ್ಲೇ ಕ್ಷ- ಕಿರಣ ದೂರದರ್ಶಕ ಖಭೌತಶಾಸ್ತ್ರ ಅಧ್ಯಯನದಲ್ಲಿ ಅನನ್ಯ ಉಪಕರಣವೆಂಬುದನ್ನು ವಿಜ್ಞಾನಿಗಳು ಮನಗಂಡರು. ಈ ದೂರದರ್ಶಕದಿಂದ ದಕ್ಕುವ ದತ್ತಾಂಶ ವಿಶ್ಲೇಷಣೆಗೆ ಗಣಕ ಕ್ರಮವಿಧಿಯನ್ನು ಅಭಿವೃದ್ಧಿಪಡಿಸುವಲ್ಲಿ ರಿಕಾರ್ಡೋ ಪಾಲ್ಗೊಂಡನು. 1960ರಲ್ಲಿ ರೇಡಿಯೋ ದೂರದರ್ಶಕ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಣೆಗೆ ಸಜ್ಜಾಗಿ, 1963ರಲ್ಲಿ ರೇಡಿಯೋ ದೂರದರ್ಶಕದಿಂದ ಖಭೌತಶಾಸ್ತ್ರದ ಅಧ್ಯಯನ ಗರಿಗೆದರಿತು . ಇವೆಲ್ಲವುದರಲ್ಲಿ ರಿಕಾರ್ಡೋ ಭಾಗಿಯಾಗಿದ್ದನು. 1970ರಲ್ಲಿ ನಾಸಾ ಸಂಸ್ಥೆಗಾಗಿ ಕ್ಷ-ಕಿರಣ ದೂರದರ್ಶಕ ವೀಕ್ಷಣಾಲಯವನ್ನು ಸ್ಥಾಪಿಸುವ ಗುತ್ತಿಗೆ ರಿಕಾರ್ಡೋ ಹಾಗೂ ಸಂಗಡಿಗರಿಗೆ ದಕ್ಕಿತು. ವೈಕಿಂಗ್ ಯೋಜನೆಯಲ್ಲಿ ಹೆಚ್ಚಿನ ಹಣ ವ್ಯಯವಾದುದರಿಂದ ಈ ಗುತ್ತಿಗೆ ಮುಂದೆ ರದ್ದಾಯಿತು. ಹಬಲ್ ಅಂತರಿಕ್ಷ ದೂರದರ್ಶಕ ನಿರ್ಮಾಣದಲ್ಲಿ ರಿಕಾರ್ಡೋ ಕೊಡುಗೆ ಗಮನಾರ್ಹವಾದುದು. 1991ರಲ್ಲಿ ಯುರೋಪಿಯನ್ ಸ್ಪೇಸ್ ಏಜೆಸ್ಸಿ ಹಿಂದೆಂದೂ ಕಂಡು, ಕೇಳರಿಯದಂತಹ ಬೃಹತ್ ದೂರದರ್ಶಕದ ನಿರ್ಮಾಣಕ್ಕೆ ಇಳಿಯಿತು. ರಿಕಾರ್ಡೋ ಇದರಲ್ಲೂ ಭಾಗಿಯಾಗಿದ್ದನು. ರೇಡಿಯೋ ದೂರದರ್ಶಕ ಹಾಗೂ ಖಗೋಳಶಾಸ್ತ್ರದ ಸಾಧನೆಗಾಗಿ ರಿಕಾರ್ಡೋ 2002ರ ನೊಬೆಲ್ ಪ್ರಶಸ್ತಿ ಪುರಸ್ಕೃತವಾದನು.
ಅಲೆಕ್ಸ್ ಎ.ಅಬ್ರಿಕೊಸೊವ್ (1928- ) 2003
Alexei , A. Abrikosov (PHY.) 2003
ರಷ್ಯಾ-ಭೌತಶಾಸ್ತ್ರ- ಅತಿವಾಹಕತೆ ಸಂಶೋಧನೆಯ ಮುಂಚೂಣಿಗ.
ಅಲೆಕ್ಸ್ 25 ಜೂನ್ 1928ರಂದು ಮಾಸ್ಕೋದಲ್ಲಿ ಜನಿಸಿದನು. 1943ರಲ್ಲಿ ಪ್ರೌಢಶಿಕ್ಷಣ ಪೂರೈಸಿದ ನಂತರ ಇನ್ಸ್ಟಿಟಿಟ್ಯೂಟ್ ಆ¥sóï ಪವರ್ ಇಂಜಿನಿಯರ್ಸ್ಗೆ ಸೇರಿದನಾದರೂ 1945ರಲ್ಲಿ ಮಾಸ್ಕೋ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗಕ್ಕೆ ವರ್ಗಾಯಿಸಲ್ಪಟ್ಟನು. 1948ರಲ್ಲಿ ಪದವಿಯೊಂದಿಗೆ ಹೊರಬಂದು, ಈಗ ಪಿ.ಎಲ್ ಕಪಿಟ್ಜಾ ಸಂಸ್ಥೆಯೆಂದು ಹೆಸರಾಗಿರುವ ಆಗಿನ ಭೌತ ಸಮಸ್ಯೆಗಳ ಪರಿಹಾರ ಸಂಸ್ಥೆ ಸೇರಿದನು. ಇಲ್ಲಿ ಲ್ಯಾಂಡೋ ಮಾರ್ಗದರ್ಶನದಲ್ಲಿ ಪೂರ್ಣ ಹಾಗೂ ಅಂಶಿಕವಾಗಿ ಅಯಾನೀಕರಣಗೊಂಡ ಪ್ಲಾಸ್ಮಾಗಳಲ್ಲಿನ ಔಷ್ಣೀಯ ವಿಸರಣೆ ಕುರಿತಾಗಿ ಸಂಪ್ರಬಂಧ ಮಂಡಿಸಿ, ಡಾಕ್ಟರೇಟ್ ಗಳಿಸಿದನು. ಇದಾದ ನಂತರ ಸಹಾಯಕ ಬೋಧಕ ಸಿಬ್ಬಂದಿಯಾದನು. ಈ ಸಂಸ್ಥೆಯಲ್ಲಿ 1951ರಲ್ಲಿ ನಡೆಯುತ್ತಿದ್ದ ಅತಿವಾಹಕತೆಯ ಪ್ರಯೋಗಗಳಲ್ಲಿ ಭಾಗಿಯಾದನು. ಇದರ ಫಲಿತಾಂಶವಾಗಿ ಅತಿವಾಹಕಗಳ ಎರಡನೇ ವರ್ಗದ ಆವಿಷ್ಕಾರವಾಯಿತು. ಮುಂದುವರೆದ ಸಂಶೋಧನೆಗಳಿಂದ ಅತಿವಾಹಕಗಳಲ್ಲಿ ಉಗಮಗೊಳ್ಳುವ ಕ್ವಾಂಟಂ ಸುಳಿಗಳ ಸ್ವರೂಪ ತಿಳಿದು ಬಂದಿತು. ಈಗ ಇವನ್ನು ಅಬ್ರಿಕೊಸೊವ್ ಸುಳಿಗಳೆಂದೇ ಕರೆಯಲಾಗುತ್ತಿದೆ. 1957ರಲ್ಲೇ ಇದರ ವಿವರಣೆಯನ್ನು ಅಬ್ರಿಕೊಸೊವ್ ನೀಡಿದ್ದನು. ಹತ್ತು ವರ್ಷಗಳ ನಂತರವಷ್ಟೇ ಇವನ್ನು ಪ್ರಯೋಗಗಳಿಂದ ಖಚಿತಪಡಿಸಲಾಯಿತು. ಇದೇ ಕಾಲದಲ್ಲಿ ಜಲಜನಕದಲ್ಲಿ ಅವಾಹಕ ಪರಮಾಣು ಪ್ರಾವಸ್ಥೆಯಿಂದ (Phಚಿse) ಪರಮಾಣ್ವಿಕ ಲೌಹಿಕ ಪ್ರವಾಸ್ಥೆಗೆ (Metalic Phase) ಬದಲಾಗುವ ಸ್ಥಿತ್ಯಂತರವನ್ನು (Transitions) ವಿವರಿಸಿದನು. ಅಬ್ರಿಕೊಸೊವ್ ಹಾಗೂ ಎಲ್. ಗೊರ್ಕೋವ್, ಅತಿವಾಹಕಗಳ ಸೂಕ್ಷ್ಮ ಮಟ್ಟದ ರಚನೆಯನ್ನು ವಿವರಿಸುವ ಸಿದ್ಧಾಂತ ರೂಪಿಸಿದರು. 1962ರಲ್ಲಿ ವಿದ್ಯಾರ್ಥಿಯಾಗಿದ್ದ ಎಲ್.ಫಿûಲ್ಕೋವ್ಸ್ಕಿಯೊಂದಿಗೆ ಈ ಬಗೆಯ ಅರೆಲೋಹಗಳಲ್ಲಿನ ವಾಹಕತೆಯ ಅಧ್ಯಯನ ನಡೆಸಿದನು. 1966ರಲ್ಲಿ ಈಗ ಲ್ಯಾಂಡೋ ಸಂಸ್ಥೆಯೆಂದು ಹೆಸರಾಗಿರುವ ಆಗಿನ ಸೈದ್ಧಾಂತಿಕ ಭೌತಶಾಸ್ತ್ರ ಸಂಸ್ಥೆಯ ಸಾಂದ್ರೀಕೃತ ದ್ರವ್ಯ ಪ್ರಯೋಗಾಲಯದ ಮುಖ್ಯಸ್ಥನಾಗಿ ಅಬ್ರಿಕೊಸೋವ್ ನೇಮಕಗೊಂಡನು. ಇದೇ ವರ್ಷ ಪ್ರಬಲ ಕಾಂತ ಕ್ಷೇತ್ರಗಳಲ್ಲಿನ ಅತಿವಾಹಕತೆ ಸಂಶೋಧನೆಗಾಗಿ ಲೆನಿನ್ ಪ್ರಶಸ್ತಿ ಪಡೆದನು. 1991ರಲ್ಲಿ ಅಸಂಸಂದ ಅರ್ಗೊನ್ನೆ ನ್ಯಾಷನಲ್ ಲ್ಯಾಬೋರೇಟಎಯ ಆಹ್ವಾನದ ಮೇರೆಗೆ ಗೌರವ ವಿಜ್ಞಾನಿ ಗೌರವ ದಕ್ಕಿತು. 1992ರಲ್ಲಿ ಅಸಂಸಂ ಭೌತಶಾಸ್ತ್ರ ಸಮಾಜದ ಫೆಲೊ ಆಗಿ ಆಯ್ಕೆಗೊಂಡನು. 1998ರಲ್ಲಿ ಕ್ವಾಂಟಂ ಸರೇಖೀಯ ಕಾಂತೀಯ ವಿರೋಧತ್ವ ಎನ್ನುವ ಹೊಸ ವಿದ್ಯಾಮಾನವನ್ನು ಪರಿಚಯಿಸಿದನು. 1999ರಲ್ಲಿ ಅಸಂಸಂ ಪ್ರಜೆಯಾದ ಅಬ್ರಿಕೊಸೊವ್, ಅತಿ ವಾಹಕತೆಗಾಗಿ ನಡೆಸಿದ ಸಂಶೋಧನೆಗಳಿಗಾಗಿ 2003ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಹಲವಾರು ದೇಶ, ಸಂಸ್ಥೆ, ಸಮಾಜಗಳಿಂದ ಅಬ್ರಿಕೊಸೊವ್ ಸನ್ಮಾನಿತನಾಗಿ, ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದಾನೆ.
ಅಂಥೋನಿ ಜೆ. ಲೆಗ್ಗೆಟ್ (1931--) -2003
Anthony , J. Leggett (PHY.) 2003
ಇಂಗ್ಲೆಂಡ್-ಭೌತಶಾಸ್ತ್ರ-ನಿಮ್ನ ತಾಪಮಾನದಲ್ಲಿ ಪರಿಶ್ರಮಿಸಿದಾತ ಹಾಗು ಕ್ವಾಂಟಂ ಸಿದ್ಧಾಂತದ ಮಿತಿಗಳನ್ನು ಸೂಚಿಸಿದಾತ.
ಅಂಥೊನಿ 26 ಮಾರ್ಚ್ 1938ರಂದು ದಕ್ಷಿಣ ಲಂಡನ್ನ ಕ್ಯಾಂಪ್ಬೆಲ್ನಲ್ಲಿ ಜನಿಸಿದನು. ಈತನ ಪೂರ್ವಜರು ಹ್ಯಾಂಪ್ಷೈರ್ನ ಸಣ್ಣ ಹಳ್ಳಿಯೊಂದರಲ್ಲಿ ಮೋಚಿಗಳಾಗಿದ್ದರು. ಅಂಥೊನಿಯ ತಂದೆ ತಾಯಿಗಳೇ ಅವರ ವಂಶದಲ್ಲಿ ಕಾಲೇಜು ಮೆಟ್ಟಿಲು ಹತ್ತಿದ ಮೊದಲಿಗರು. ಯುದ್ದದ ಸಮಯದಲ್ಲಿ ಲಂಡನ್ನ ಹೊರವಲಯಕ್ಕೆ ಸಾಗಿ ಅಂಥೊನಿ ಕುಟುಂಬ ಜೀವಿಸಿತು. ಕ್ಯಾಥೊಲಿಕ್ ಗ್ರೇಡ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮುಗಿಸಿ ವಿಂಬಲ್ಡನ್ನ ಸೇಕ್ರೇಡ್ ಹಾರ್ಟ್ ಕಾಲೇಜಿಗೆ ಅಂಥೊನಿ ಸೇರಿದನು. 1955ರಲ್ಲಿ ಆಕ್ಸ್ಫರ್ಡ್ ಕಾಲೆಜ್ ಸೇರಿದನು. 1957ರಲ್ಲಿ ಸೋವಿಯತ್ ರಷ್ಯಾ ಜಗತ್ತಿನ ಮೊದಲ ಕೃತಕ ಉಪಗ್ರಹ ಸ್ಪುತ್ನಿಕ್ ಹಾರಿಸಿತು. ಇದು ಬ್ರಿಟನ್ನ ತಾಂತ್ರಿಕ ಶ್ರೇಷ್ಟತೆಗೆ ಎಸೆದ ಸವಾಲೆಂದೇ ಪರಿಗಣಿಸಲಾಯಿತು. ವಿದ್ಯಾರ್ಥಿಗಳಿಗೆ ವಿಜ್ಞಾನ , ತಂತ್ರಜ್ಞಾನದ ಬದಲು, ಗ್ರೀಕ್-ಲ್ಯಾಟಿನ್ ಸಾಹಿತ್ಯ ಕಲಿಸಲು ನೀಡುತ್ತಿರುವ ಪ್ರಾಧಾನ್ಯತೆಯೇ , ತಾಂತ್ರಿಕವಾಗಿ ರಷ್ಯಾಕ್ಕಿಂತಲೂ ಹಿಂದುಳಿಯಲು ಕಾರಣವೆಂಬ ಕೂಗೆದ್ದಿತು. ಇದರ ಫಲವಾಗಿ ವಿಜ್ಞಾನದ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡತೊಡಗಿದ ಸರ್ಕಾರ, ವಿದ್ಯಾರ್ಥಿ ವೇತನಗಳನ್ನು ಕಲ್ಪಿಸತೊಡಗಿತು. ಅಂಥೊನಿ ಇದರ ಸದುಪಯೋಗ ಪಡಿಸಿಕೊಂಡು, 1959ರಲ್ಲಿ ಭೌತಶಾಸ್ತ್ರದ ಪದವಿಯೊಂದಿಗೆ ಹೊರಬಂದನು. 1964ರಲ್ಲಿ ಡಾಕ್ಟರೇಟ್ ಪೂರ್ಣಗೊಳಿಸಿ ಅರ್ಬಾನ್ ಕ್ಯಾಂಪೇನ್ನಲ್ಲಿದ್ದ ಇಲಿನಾಯ್ ವಿಶ್ವವಿದ್ಯಾಲಯದ ಡೇವಿಡ್ ಪೈನ್ ನೇತೃತ್ವದ ಸಂಶೋಧನಾ ತಂಡವನ್ನು ಅಂಥೊನಿ ಸೇರಿದನು. ಇಲ್ಲಿ ದ್ರವ ಜಲಜನಕ ಅತಿಪ್ರವಾಹಿ ಸ್ಥಿತಿಯನ್ನು ಕುರಿತಾಗಿ ಆರಂಭಿಕ ಅಧ್ಯಯನಗಳನ್ನು ನಡೆಸಿದನು. 1967ರಲ್ಲಿ ಟೋಕಿಯೋದ ಕ್ಯೋಟೋ ವಿಶ್ವವಿದ್ಯಾಲಯಕ್ಕೆ ಹೋಗಿ ಟೆಕೆಯೇ ಮಟ್ಸಬ್ಲರ್ನ ಮಾರ್ಗದರ್ಶನ ಪಡೆದನು. ಇಲ್ಲಿರುವಾಗ ಅಂಥೊನಿ, ಇಂಗ್ಲಿಷ ಮಾತನಾಡುವ ವಿದೇಶಿಯರಿಂದ ದೂರವುಳಿದು ಜಪಾನಿಯರೊಂದಿಗೆ ಬೆರೆತು, ಅವರ ಭಾಷೆಯಲ್ಲಿ ಪರಿಣಿತಿ ಗಳಿಸಿದನು. ಇದರಿಂದ ಸಹಪಾಠಿಗಳು ಅಂಥೊನಿ ಸಿಐಎ ಏಜೆಂಟನಾಗಿರಬೇಕೆಂದು ಭಾವಿಸಿ ದೂರ ಸರಿದರು. 1967ರಲ್ಲಿ ಸಸ್ಸೆಕ್ಸ್ “ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾಗಿ ಸೇರಿದನು. 1980 ರಿಂದ ಗಾಜಿನ ನಿಮ್ನ ತಾಪಮಾನಗಳ ಗುಣ ಲಕ್ಷಣ, ಕ್ವಾಂಟಂ ಸಿದ್ಧಾಂತದ ಇತಿ ಮಿತಿಗಳಲ್ಲಿ ಸಂಶೋಧನಾಶೀಲನಾಗಿದ್ದಾನೆ. ಅಂಥೊನಿ 2003ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ವಿಟಾಲಿ ಎಲ್.ಗಿಂಜ್ಬರ್ಗ್ (1916--) 2003
Vitaly ,L.Ginzburg
ರಷ್ಯಾ -ಭೌತಶಾಸ್ತ್ರ-ಬೈಜಿಕಶಾಸ್ತ್ರಜ್ಞ.
ವಿಟಾಲಿ 4 ಅಕ್ಟೋಬರ್ 1968ರಂದು ಮಾಸ್ಕೋದಲ್ಲಿ ಜನಿಸಿದನು. ಈತನ ತಂದೆ ಸಿವಿಲ್ ಇಂಜಿನಿಯರ್ ಆಗಿದ್ದು ನೀರಿನ ಶುದ್ದೀಕರಣ ತಂತ್ರಜ್ಞಾನದಲ್ಲಿ ಹಲವಾರು ಏಕಸ್ವಾಮ್ಯಗಳನ್ನು ಪಡೆದಿದ್ದನು. ಮಿಟಾಲಿ ನಾಲ್ಕು ವರ್ಷದವನಿರುವಾಗ ಆತನ ತಾಯಿ ಟೈಫಾಯಿಡ್ನಿಂದ ಮೃತಳಾದಳು. ಮೊದಲಿನ ಜಾಗತಿಕ ಯುದ್ದ , ರಷ್ಯಾ ಕ್ರಾಂತಿಯ ಕಾಲದಲ್ಲಿ ಮಿಟಾಲಿಯ ಬಾಲ್ಯಗಳು ಸಂಕಷ್ಟದಲ್ಲಿ ಕಳೆದವು. 11ನೇ ವಯಸ್ಸಿನಲ್ಲಿ ಶಾಲೆಗೆ ಹೋಗತೊಡಗಿದ ವಿಟಾಲಿಗೆ, ಮೊದಲ ಹತ್ತು ವರ್ಷ ಒಂಟಿತನ ಕಾಡಿತು. 1931ರಲ್ಲಿ ವಿದ್ಯಾರ್ಥಿಗಳು ಕುಶಲ ಕಾರ್ಮಿಕರಾಗುವಂತೆ ತರಬೇತು ನೀಡುವ ಶಾಲೆಗಳಿಗೆ ಕಡ್ಡಾಯವಾಗಿ ಸೇರಬೇಕಾಯಿತು. ಇದನ್ನು ಮುಗಿಸಿ, ಆಸಕ್ತರಾದವರನ್ನು ಮಾತ್ರವೇ ಉನ್ನತ ಶಿಕ್ಷಣ ಪಡೆಯುವಂತೆ ಕಾನೂನು ರಚಿಸಲಾಗಿದ್ದಿತು. ಮಿಟಾಲಿಯ ಚಿಕ್ಕಮ್ಮ ವಿದೇಶದಿಂದ ಸರ್ಕಾರ ಆಮದು ಮಾಡಿಕೊಳ್ಳುತ್ತಿದ್ದ ವೈಜ್ಞಾನಿಕ ಉಪಕರಣಗಳ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಈಕೆಯ ಮೂಲಕ ವಿಟಾಲಿಗೆ ಎಮ್ಜೆನಿ ಬಖ್ಮೆಟಿವ್ನ ಪರಿಚಯವಾಯಿತು. ಎಮ್ಜೆನಿ ಕ್ಷ ಕಿರಣ ರೋಹಿತಶಾಸ್ತ್ರದಲ್ಲಿ ಪರಿಣಿತನಾಗಿದ್ದರೂ, ಆತನಿಗೆ ಸಮರ್ಪಕವಾದಂತಹ ಕೆಲಸಗಳು ಕಮ್ಯೂನಿಸ್ಟ್ ರಷ್ಯಾದಲ್ಲಿ ದೊರೆತಿರಲಿಲ್ಲ. ಎಮ್ಜೆನಿಯ ನೆರವಿನಿಂದ ವಿಟಾಲಿ ಕ್ಷ ಕಿರಣ ಪ್ರಯೋಗಾಲಯದಲ್ಲಿ ಸಹಾಯಕನಾದನು. 1933ರಲ್ಲಿ ಮಾಸ್ಕೊ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣಕ್ಕೆ ಸೇರಲು ಸ್ಪರ್ಥಾಪರೀಕ್ಷೆಗಳು ಜಾರಿಗೆ ಬಂದವು. ಇದಕ್ಕಾಗಿ ಕನಿಷ್ಟ ಪ್ರೌಢಾಶಾಲಾ ಶಿಕ್ಷಣ ಪೂರೈಸಬೇಕಾಗಿದ್ದಿತು. ಆದರೆ ವಿಟಾಲಿ ಏಳನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿದ್ದನು. ಮೂರು ತಿಂಗಳ ಕಾಲ ಖಾಸಗಿ ಉಪಾಧ್ಯಾಯನಿಂದ ಪ್ರೌಢಶಾಲೆಯ ಪಾಠಗಳನ್ನು ಕಲಿತು ಅಪಾರ ಪರಿಶ್ರಮದಿಂದ ತನ್ನ ಕೊರತೆಯನ್ನು ನೀಗಿಸಿಕೊಳ್ಳಲು ಯತ್ನಿಸಿದನಾದರೂ, ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಲಿಲ್ಲ. ಆದ್ದರಿಂದ ಬಾಹ್ಯ ವಿದ್ಯಾರ್ಥಿಯಾಗಿ , ನಂತರ ಒಳ ವಿದ್ಯಾರ್ಥಿಯಾಗಿ ವಿಟಾಲಿ ಪ್ರವೇಶ ಗಳಿಸುವಲ್ಲಿ ಸಫಲನಾದನು. ಶಿಕ್ಷಣ ಮುಂದುವರೆಸಿ 1940ರಲ್ಲಿ ಸ್ನಾತಕೋತ್ತರ ಪದವಿ ಪಡೆದು ಲೆಬೆಡೆವ್ ಭೌತಶಾಸ್ತ್ರ ಸಂಸ್ಥೆಯಲ್ಲಿ ಕೆಲಸಕ್ಕೆ ನಿಯೋಜಿಸಲ್ಪಟ್ಟನು. ಕಾಲೇಜಿನಲ್ಲಿರುವಾಗ, ವಿಟಾಲಿಯ ತಂದೆ, ಚಿಕ್ಕಮ್ಮ, ಹೆಂಡತಿ, ಹಾಗೂ ಮಗಳು ಒಂದೇ ಕೋಣೆಯ ಮನೆಯಲ್ಲಿ ಜೀವಿಸಿದ್ದರು. 22 ಜೂನ್ 1941ರಂದು ರಷ್ಯಾ ಎರಡನೇ ಜಾಗತಿಕ ಯುದ್ದಕ್ಕಿಳಿಯಿತು. ಆಗ ಲೆಬೆಡೆವ್ ಭೌತಶಾಸ್ತ್ರ ಸಂಸ್ಥೆಯನ್ನು ಕಝನ್ಗೆ ಸ್ಥಳಾಂತರಿಸಲಾಯಿತು. ಯುದ್ದ ಕಾಲದಲ್ಲಿ ಎಲ್ಲಾ ಬಗೆಯ ದೈಹಿಕ ಕಾರ್ಯಗಳನ್ನು ಮಾಡುವ ಅನಿವಾರ್ಯತೆ ಇಲ್ಲಿಯ ಸಿಬ್ಬಂದಿಗೆ ಬಂದೊದಗಿತು. ಇಲ್ಲಿ ಮರದ ದಿಮ್ಮಿಗಳನ್ನು ಹೆಗಲ ಮೇಲೆ ಹೊತ್ತು ಸಾಗಿಸುವ ಹೊಣೆ ವಿಟಾಲಿಗೆ ಬಂದೊದಗಿತು. ಈ ಕೆಲಸದಲ್ಲಿ ಕುತ್ತಿಗೆಯಲ್ಲಿನ ರಕ್ತ ನಾಳಗಳಲ್ಲಿ ಕೆಲವು ಹರಿದು ಆಸ್ಪತ್ರೆಗೆ ದಾಖಲಾದನು. 1945ರಲ್ಲಿ ಅಲೆಕ್ಸಾಂಡರ್ ಅಂಡ್ರೋನೀವ್ನಿಂದ ಗೋರ್ಕಿ ವಿಶ್ವವಿದ್ಯಾಲಯ ಸೇರಲು ವಿಟಾಲಿಗೆ ಅಹ್ವಾನ ಬಂದಿತು. ಇಲ್ಲಿ ವಿಕಿರಣ ಭೌತಶಾಸ್ತ್ರ ವಿಭಾಗದ ಸಂದರ್ಶಕ ಪ್ರಾಧ್ಯಾಪಕನಾದನು. 1942ರಲ್ಲಿ ವಿಟಾಲಿ ಕಮ್ಯುನಿಸ್ಟ್ ಪಕ್ಷದ ಸದಸ್ಯನಾದರೂ ಹಿಟ್ಲರ್ ಹಾಗೂ ಸ್ಟ್ಯಾಲಿನ್ ಬೇರೆ ಬೇರೆ ರೂಪದಲ್ಲಿರುವ ಒಂದೇ ಗುಣಗಳ ಸರ್ವಾಧಿಕಾರಿಗಳೆಂದೂ, ಆತನಿಗೆ ದಿನಗಳೆದಂತೆ ಭಾಸವಾಗತೊಡಗಿತು. ಕೆ.ಜಿ.ಟಿ. ಕ್ರಾಂತಿ ವಿರೋಧಿಯೆಂದು ಪರಿಗಣಿಸಿದ್ದ , ಒಮ್ಮೆ ಸೆರೆವಾಸ ಅನುಭವಿಸಿದ್ದ ನಿನಾ ಐವಾನೋನ್ನಳನ್ನು 1946ರಲ್ಲಿ ಮದುವೆಯಾದುದರಿಂದ ವಿಟಾಲಿಯ ಎಲ್ಲಾ ಚಟುವಟಿಕೆಗಳು ಬೇಹುಗಾರಿಕೆಯ ವಿಷಯವಾದವು. ಇದರೊಂದಿಗೆ ವಿಟಾಲಿಯ ಯಹೂದಿ ಮೂಲ ಕೂಡ ಶಂಕೆಗೊಳಗಾಯಿತು. 4 ಅಕ್ಟೋಬರ 1947ರಂದು ವಿಟಾಲಿ ಹಾಗೂ ಇನ್ನಿತರರನ್ನು ದೇಶ ದ್ರೋಹಿಗಳೆಂದು ದಿನಪತ್ರಿಕೆಯೊಂದು ಲೇಖನ ಪ್ರಕಟಿಸುವುದರೊಂದಿಗೆ, ವಿಟಾಲಿಗೆ ದಕ್ಕಬೇಕಾದ ಹುದ್ದೆ, ಗೌರವ, ಬಡ್ತಿಗಳು ನಿಂತುಹೋದವು. 1948 ರಿಂದ ವಿಟಾಲಿ ಹಾಗೂ ಐ.ಟ್ಯಾಮ್ರನ್ನು ಜಲಜನಕ ಪರಮಾಣು ಅಸ್ತ್ರ ತಯಾರಿಕೆಯ ಯೋಜನೆಗೆ ನಿಯೋಜಿಸಲಾಯಿತು. ಇದರಲ್ಲಿ ಕಮ್ಯುನಿಸ್ಟ್ ತತ್ತ್ವಗಳಿಗೆ ವಿರುದ್ದವಾಗಿದ್ದ ಸಖರೋವ್ ಸಹ ಭಾಗಿಯಾಗಿದ್ದನು. ವಿಟಾಲಿ ಹಾಗೂ ಸಖರೋವ್ನ ಖಚಿತ ವೈಜ್ಞಾನಿಕ ಪರಿಕಲ್ಪನೆ ಹಾಗೂ ನಿಲುವುಗಳಿಂದ 29 ಆಗಸ್ಟ್ 1949ರಂದು ಸೋವಿಯತ್ ರಷ್ಯಾ ಮೊದಲ ಪರಮಾಣು ಅಸ್ತ್ರದ ಪ್ರಯೋಗ ನಡೆಸಿತು. ಆಗ ಪ್ರಯೋಗ ನಡೆದ ಅರ್ಝಮಾಸ್-16 ನೆಲೆಗೆ ವಿಟಾಲಿಯ ಪ್ರವೇಶವನ್ನು ನಿರಾಕರಿಸಲಾಯಿತು. ಮುಂದೆ ಬೇರೆ ಬೇರೆ ದೇಶಗಳಿಂದ ಬಂದ ಹಲವಾರು ಆಹ್ವಾನಗಳಿಗೆ, ಸಮಾರಂಭಗಳಿಗೆ ಪತ್ನಿ ಸಮೇತ ಹಾಜರಾಗುವ ಅವಕಾಶವನ್ನು ವಿಟಾಲಿಗೆ ನಿರಾಕರಿಸಲಾಯಿತು. 1985ರಲ್ಲಿ ವಿಖಾಯಿಲ್ ಗೋರ್ಬಷೆವ್ನಿಂದ ಪೆರೆಸ್ಟ್ರೋಯಿಕ್ ಮೂಲಕ ಸುಧಾರಣೆಗಳು ಬಂದ ನಂತರ ವಿಟಾಲಿಯ ಪರಿಸ್ಥಿತಿ ಸುಧಾರಿಸತೊಡಗಿತು. ವಿಟಾಲಿ, ಸೋವಿಯತ್ ರಷ್ಯಾದ ಕಮ್ಯುನಿಸ್ಟ್ ಆಡಳಿತ ಕಾಲದ ಜನ ಜೀವನ, ಉಸಿರುಗಟ್ಟುವ ಪರಿಸ್ಥಿತಿ, ಸರ್ಕಾರದ ಧೋರಣೆಗಳನ್ನು ಕುರಿತಾಗಿ ಎರಡು ಕಂತುಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾನೆ. 2003ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ವಿಟಾಲಿ ನೊಬೆಲ್ ಸಮಿತಿಗೋಸ್ಕರ ಸಿದ್ದಪಡಿಸಿದ ತನ್ನ ಪರಿಚಯ ಲೇಖನದಲ್ಲಿ ವೈಜ್ಞಾನಿಕ ಸಾಧನೆಗಳಿಗಿಂತಲೂ ಜೀವನ ಚರಿತ್ರೆಯ ಮೇಲೆ ಹೆಚ್ಚು ಕೇಂದ್ರೀಕರಿಸಿದ್ದಾನೆ.
ಡೇವಿಡ್ ಜೆ.ಗ್ರಾಸ್ –(1941--) 2004
David , J.Gross (PHY.)
ಅಸಂಸಂ-ಭೌತಶಾಸ್ತ್ರ-ಮೂಲ ಬಲಗಳನ್ನು ಐಕ್ಯಗೊಳಿಸುವ ಸೂತ್ರ ಸಿದ್ಧಾಂತ ಮಂಡಿಸಿದಾತ.
ಡೇವಿಡ್ನ ಪೂರ್ವಜರು ಜೆಕೆಸ್ಲೋವಿಕಿಯಾ ಮತ್ತು ಹಂಗರಿ ಮೂಲದ ಯಹೂದಿಗಳಾಗಿದ್ದು ಅಸಂಸಂಗಳಿಗೆ ಬಂದು ನೆಲೆಸಿದ್ದರು. ಡೇವಿಡ್ 19 ಫೆಬ್ರವರಿ 1941ರಂದು ಫಿಲೆಡೆಲ್ಫಿಯಾದಲ್ಲಿ ಜನಿಸಿದನು. ಡೇವಿಡ್ ವಾಷಿಂಗ್ಟನ್ನ ಉಪನಗರ ಅರ್ಲಿಂಗ್ಟನ್ನಲ್ಲಿ ಬಾಲ್ಯವನ್ನು ಕಳೆದನು. 1953ರಲ್ಲಿ ಇಸ್ರೇಲಿಗೆ ನೆರವು ನೀಡಲು ಅಸಂಸಂದ ಅಧ್ಯಕ್ಷ ನಿಯೋಜಿಸಿದ ತಂಡದಲ್ಲಿ ಡೇವಿಡ್ನ ತಂದೆಯೂ ಸೇರಿದ್ದನು. ಈತ 1955ರಲ್ಲಿ ಜೆರುಸಲೇಂನ ಹೀಬ್ರೂ ವಿಶ್ವವಿದ್ಯಾಲಯ ಸೇರಿದನು. ಹೀಬ್ರೂನ ಬಗೆಗೆ ಒಂದಕ್ಷರವೂ ಗೊತ್ತಿರದಿದ್ದ ಡೇವಿಡ್ಗೆ ಅದನ್ನು ಕಲಿಯಲೇಬೇಕಾದ ಅನಿವಾರ್ಯತೆ ಬಂದೊದಗಿತು. ಹೀಬ್ರೂ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪದವಿ ಗಳಿಸಿದ ಡೇವಿಡ್ ಅಸಂಸಂದ ಕಾಲೇಜುಗಳಲ್ಲಿ ಹೆಚ್ಚಿನ ಶಿಕ್ಷಣ ಪಡೆಯಲು ಅರ್ಜಿ ಸಲ್ಲಿಸಿದನು. ಆ ಕಾಲದಲ್ಲಿ ಇಸ್ರೇಲ್ ದೇಶದ ಹೆಸರು ಹಾಗೂ ಅಲ್ಲಿನ ವಿದ್ಯಾರ್ಥಿಗಳು ಅಸಂಸಂದಲ್ಲಿ ಅಪರಿಚಿತರಾಗಿದ್ದರು. ಡೇವಿಡ್ ಬಕ್ರ್ಲೆಯಲ್ಲಿರುವ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯ ಸೇರಿ, ಅಲ್ಲಿ ಕಣ ಭೌತಶಾಸ್ತ್ರ ವಿಭಾಗಕ್ಕೆ ಸೇರ್ಪಡೆಯಾದನು. 1966ರಲ್ಲಿ ಪದವಿ ಗಳಿಸಿ, ಹಾರ್ವರ್ಡ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದನು. ಈ ಅವಧಿಯಲ್ಲಿ, ಸೈದ್ಧಾಂತಿಕ ಭೌತಶಾಸ್ತ್ರದ ಖ್ಯಾತರಾದ ಷ್ಟಿಂಜರ್, ಷೆಲ್ಲಿ ,ಗ್ಲಾಷೋ ಹಾಗೂ ಸಿಡ್ನಿ ಕೊಲಮನ್ ಕಾರ್ಯನಿರತರಾಗಿದ್ದರು. 1969ರಲ್ಲಿ ಪ್ರಿನ್ಸ್ಟನ್ನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಸೇರಿದ ಡೇವಿಡ್ ಅಲ್ಲಿ ಹಿರಿಯ ಸಹೋದ್ಯೋಗಿಗಳಾದ ಮುರ್ಫ್’ ಗೋಲ್ಡ್ ಬರ್ಜರ್ ಹಾಗೂ ಸ್ಯಾಮ್ ಟ್ರೀಮನ್ನೊಂದಿಗೆ ಮುಂದೆ 27 ವರ್ಷಗಳ ಕಾಲ ಸಂಶೋಧನೆ ನಡೆಸಿದನು. ನಿಸರ್ಗದ ಎಲ್ಲಾ ಮೂಲ ಬಲಗಳನ್ನು ಸೇರಿಸುವ ಐಕ್ಯತಾ ಸಿದ್ಧಾಂತವನ್ನು ರೂಪಿಸಲು 1980ರಿಂದ ಡೇವಿಸ್ ಯತ್ನಿಸಿದನು. ಇದರ ಫಲವಾಗಿ 1984ರಲ್ಲಿ ಡೇವಿಡ್ ಹಾಗೂ ಸಂಗಡಿಗರು ಸೂತ್ರ ಸಿದ್ಧಾಂತ (String Theory ) ರೂಪಿಸಿದರು. ಇದಕ್ಕಾಗಿ ಡೇವಿಡ್ 2004ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಡೇವಿಡ್ , ಪೊಲಿಟ್ಝರ್ (1949--) 2004
David , Politzer (PHY.) 2004
ಅಸಂಸಂ-ಭೌತಶಾಸ್ತ್ರ -ಕ್ವಾಂಟಂ ವರ್ಣಗತಿಶಾಸ್ತ್ರ (Chromodynamics) ಪ್ರಾರಂಭಿಸಿದಾತ.
ಡೇವಿಡ್ 31 ಆಗಸ್ಟ್ 1949ರಂದು ಅಸಂಸಂದ ನ್ಯೂಯಾರ್ಕ್ನಲ್ಲಿ ಜನಿಸಿದನು. 1966ರಲ್ಲಿ ಮಿಷಿಗನ್ ವಿಶ್ವ ವಿದ್ಯಾಲಯದಿಂದ ಭೌತಶಾಸ್ತ್ರದ ಪದವಿ ಗಳಿಸಿ 1974ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದನು. ಇಲ್ಲಿ ಡೇವಿಡ್ ಸಿಡ್ನಿ ಕೊಲ್ಮನ್ನ ಮಾರ್ಗದರ್ಶನ ಸಿಕ್ಕಿತು. 1973ರಲ್ಲಿ ಡೇವಿಡ್ ಪ್ರಕಟಿಸಿದ ಮೊದಲ ಲೇಖನದಲ್ಲಿ ಮುಕ್ತತೆಯ ವಿದ್ಯಾಮಾನ ವಿವರಿಸಲ್ಪಟ್ಟಿತು. ಈ ವಿದ್ಯಾಮಾನದಲ್ಲಿ ಕ್ವಾರ್ಕ್ಗಳು ಸನಿಹವಿದ್ದಷ್ಟು ಅವುಗಳ ಮಧ್ಯದ ಪ್ರಬಲ ಅಂತ:ಕ್ರಿಯೆ ಕುಗ್ಗುತ್ತದೆ. ಕ್ವಾರ್ಕ್ಗಳು ಒಂದರಿಂದ ಇನ್ನೊಂದು ಅತ್ಯಂತ ಸನಿಹವಿರುವಾಗ ಅವುಗಳ ಮಧ್ಯದ ಬೈಜಿಕ ಬಲಗಳು (Nuclear Forces) ಇಲ್ಲವೆನ್ನುವಷ್ಟು ದುರ್ಬಲವಾಗಿ ಈ ಕಣಗಳು ಮುಕ್ತವೇನೋ ಎನ್ನುವಂತೆ ವರ್ತಿಸುತ್ತವೆ. ಇದೇ ವಿದ್ಯಾಮಾನವನ್ನು ಇದೇ ಕಾಲದಲ್ಲಿ ಪ್ರಿನ್ಸ್ಟನ್ ವಿಶ್ವ ವಿದ್ಯಾಲಯದಲ್ಲಿದ್ದು ಡೇವಿಡ್ ಗ್ರಾಸ್ ಮತ್ತು ಫ್ರಾಂಕ್ ವಿಲ್ಕ್ಜೆಕ್ ಗುರುತಿಸಿದ್ದರು. ಇದು ಕ್ವಾಂಟಂ ವರ್ಣಗತಿಶಾಸ್ತ್ರ ತನ್ಮೂಲಕ ಪ್ರಬಲ ಬೈಜಿಕ ಬಲಗಳ ಸಿದ್ಧಾಂತ ರೂಪಿಸುವಲ್ಲಿ ಅಪಾರ ನೆರವಿತ್ತಿತ್ತು. ಡೇವಿಡ್, ಥಾಮಸ್ ಅಪೆಲ್ಕ್ವಿಸ್ಟ್ನೊಂದಿಗೆ ಚಾರ್ಮ್ ಕ್ವಾರ್ಕ್ ಹಾಗೂ ಅದರ ಪ್ರತಿಕಣದಿಂದಾದ ಜೆ/ಸೈ-ಕಣದ ಅಸ್ತಿತ್ವವನ್ನು ಮುನ್ನುಡಿದಿದ್ದಾನೆ. ಈಗ ಕ್ಯಾಲಿಫೋರ್ನೀಯ ಇನ್ಸ್ಟಿಟ್ಯೂಟ್ ಆದ್ ಟೆಕ್ನಾಲಜಿಯಲ್ಲಿ ಡೇವಿಡ್ ಪ್ರಾಧ್ಯಾಪಕನಾಗಿದ್ದಾನೆ. 1989ರಲ್ಲಿ ಪೌಲ್ ನ್ಯೂಮನ್ ನಾಯಕತ್ವ ಹೊಂದಿರುವ ಫ್ಯಾಟ್ ಮ್ಯಾನ್ ಅಂಡ್ ಲಿಟಲ್ ಬಾಯ್ ಚಲನ ಚಿತ್ರದಲ್ಲಿ ಭೌತಶಾಸ್ತ್ರಜ್ಞನ ಸಣ್ಣ ಪಾತ್ರವೊಂದನ್ನು ಸಹ ಡೇವಿಡ್ ನಿರ್ವಹಿಸಿದ್ದಾನೆ. ಕ್ವಾಂಟಂ ವರ್ಣಗತಿ ಶಾಸ್ತ್ರದಲ್ಲಿನ ಕೊಡುಗೆಗಳಿಗಾಗಿ ಡೇವಿಡ್ 2004ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಫ್ರಾಂಕ್, ವಿಲ್ಕ್ಝೆಕ್ (1951--) 2004
Franck , Wilczek (PHY.)
ಅಸಂಸಂ-ಭೌತಶಾಸ್ತ್ರ-ಪ್ರಬಲ ಬೈಜಿಕ ಬಲಗಳನ್ನು ವಿವರಿಸುವ ಸಿದ್ಧಾಂತ ನೀಡಿದಾತ.
ಫ್ರಾಂಕ್ ತಂದೆಯ ಪೂರ್ವಜರು ಪೋಲೆಂಡ್ನವರಾಗಿದ್ದು, ತಾಯಿಯ ಕಡೆಯವರು ಇಟಲಿ ಮೂಲದವರಾಗಿದ್ದರು. ಈ ಕುಟುಂಬಗಳು ಮೊದಲನೆ ಜಾಗತಿಕ ಯುದ್ದದ ಸಮಯದಲ್ಲಿ ಅಸಂಸಂಗಳಿಗೆ ವಲಸೆ ಬಂದಿದ್ದವು. ಫ್ರಾಂಕ್ 1951ರಲ್ಲಿ ನ್ಯೂಯಾರ್ಕ್ ನಗರದ ಹೊರವಲಯದಲ್ಲಿ ಜನಿಸಿದನು. ಫಾ್ರಂಕ್ನ ತಂದೆ ಆರ್ಥಿಕ ಖಿನ್ನತೆಯ ಕಾಲದಲ್ಲಿ ಕಡುಕಷ್ಟ ಅನುಭವಿಸಿದ್ದನು. ತನ್ನ ಮಕ್ಕಳು ವೈದ್ಯಕೀಯ ಅಥವಾ ತಾಂತ್ರಿಕ ಪದವಿ ಗಳಿಸಿದರೆ, ಜಗತ್ತಿನಲ್ಲಿ ಎಲ್ಲಾದರೂ ಸುಖವಾಗಿ ಬಾಳಬಲ್ಲರೆಂದು ಯೋಚಿಸಿದ್ದನು. ಆದರೆ ಇದಕ್ಕೆ ಬದಲಾಗಿಫ್ರಾಂಕ್ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪದವಿ ಗಳಿಸಿದನು. ಪ್ರಬಲ ಬೈಜಿಕ ಬಲಗಳನ್ನು ವಿವರಿಸುವ ಕ್ಯು-ಸಿ-ಡಿ ಸಿದ್ಧಾಂತ ರೂಪಿಸುವಲ್ಲಿಫ್ರಾಂಕ್ ಭಾಗವಹಿಸಿದ್ದನು. ಅಂಶಿಕ ಕ್ವಾಂಟಂ ಸಂಖ್ಯೆಗಳು , ಪಾರವಿಕಲ್ಪಿತ (Transmutated) ಕ್ವಾಂಟಂ ಸ್ಥಿತಿಶಾಸ್ತ್ರ, ಅತಿಪ್ರವಾಹಿತೆಗಳ (Transmutated) ಸಿದ್ಧಾಂತದಲ್ಲಿ ಫ್ರಾಂಕ್ ಗಮನಾರ್ಹ ಕೊಡುಗೆ ನೀಡಿದ್ದಾನೆ. ಇದಕ್ಕಾಗಿ 2004ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು.
ಜಾನ್ , ಲೆವಿಸ್ ಹಾಲ್ ( 1934---) 2005
John , Lewis Hall
ಅಸಂಸಂ- ಭೌತಶಾಸ್ತ್ರ-ಲೇಸರ್ ಅನ್ವಯಿತ ಅಳತೆ ಹಾಗೂ ಮಾಪನೆಗಳ ಅಭಿವೃದ್ಧಿಗೆ ಶ್ರಮಿಸಿದಾತ.
ಹಾಲ್ 21 ಆಗಸ್ಟ್ 1934ರಂದು ಕೊಲರಡೋ ಪ್ರಾಂತದ ಡೆನ್ವರ್ನಲ್ಲಿ ಜನಿಸಿದನು. ಹಾಲ್ ತಂದೆ ವೈದ್ಯುತ್ ಇಂಜಿನಿಯರಾಗಿದ್ದು ಸರ್ಕಾರಿ ಸೇವೆಯಲ್ಲಿದ್ದನು. ಪ್ರೌಢಾಶಾಲಾ ಶಿಕ್ಷಣ ಮುಗಿಸಿದ ನಂತರ ವೆಸ್ಟಿಂಗ್ ಹೌಸ್ ವಿದ್ಯಾರ್ಥಿ ವೇತನ ಗಳಿಸಿ ಈಗ ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯವೆಂದು ಹೆಸರಾಗಿರುವ ಆಗಿನ ಕಾರ್ನೆಗೆ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದನು. 1961ರಲ್ಲಿ ಇಲ್ಲಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು. ಸಿಎಎಫ್ ಸ್ಪಟಿಕಗಳ, ಜಲಜನಕದ ಅಣುಗಳ ಅತಿಸೂಕ್ಷ್ಮ ರೋಹಿತ ಪಟ್ಟಿಗಳ ಅಧ್ಯಯನ ನಡೆಸಿದನು. ನಂತರ ರಾಷ್ಟ್ರೀಯ ಮಾನಕ ಸಂಸ್ಥೆ ಸೇರಿದನು. 1962 ರಿಂದ ಲೇಸರ್ ತಂತಜ್ಞಾ ನ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ನಿರತನಾದನು. ನೂರಾರು ಸಂಶೋಧನಾ ಲೇಖನ ಪ್ರಕಟಿಸಿರುವ ಹಾಲ್ ಹಲವಾರು ತಾಂತ್ರಿಕ ಸ್ವಾಮ್ಯಗಳನ್ನು ಸಹ ಹೊಂದಿದ್ದಾನೆ. 2004ರಲ್ಲಿ ನಿವೃತ್ತನಾದ ನಂತರ ಹಾಲ್ ಸ್ಟೇಬಲ್ ಲೇಸರ್ಸ್ ಎನ್ನುವ ಸಮಾಲೋಚನಾ ಸಂಸ್ಥೆ ಸ್ಥಾಪಿಸಿ ಕ್ರಿಯಾಶೀಲನಾಗಿದ್ದಾನೆ. ಲೇಸರ್ ಅನ್ವಯಿತ ಅಳತೆ ಹಾಗೂ ಮಾಪನೆಗಳಲ್ಲಿನ ಪರಿಶ್ರಮಕ್ಕಾಗಿ ಹಾಲ್ 2005ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ರಾಯ್ , ಜೆ ಗ್ಲೌಬೆರ್ –(1926--) 2005
Roy , J.Glauber
ಅಸಂಸಂ-ರಸಾಯನಶಾಸ್ತ್ರ- ಕ್ಷೀಣ ಬೈಜಿಕ ಬಲಗಳನ್ನು ಕುರಿತಾದ ಸಿದ್ಧಾಂತ ನೀಡಿದಾತ.
ಗ್ಲೌಬೆರ್ ತಂದೆ ಮಾರಾಟ ಪ್ರತಿನಿಧಿಯಾಗಿದ್ದನು. ಗ್ಲೌಬೆರ್ ಬಾಲಕನಾಗಿರುವಾಗ ಅಸಂಸಂ ಆರ್ಥಿಕ ಖಿನ್ನತೆಗೊಳಗಾಗಿ ನೂರಾರು ಜನ ತಮ್ಮ ಕೆಲಸಗಳನ್ನು ಕಳೆದುಕೊಂಡು ಜೀವನೋಪಾಯಕ್ಕಾಗಿ ಪರದಾಡುವಂತಾಯಿತು. ಇದೇ ಸ್ಥಿತಿ ಎದುರಿಸಿದ ಗ್ಲೌಬೆರ್ ತಂದೆ ನ್ಯೂಯಾರ್ಕ್ನಲ್ಲಿ ಮುಂದಿನ ಭವಿಷ್ಯ ಕಂಡುಕೊಳ್ಳಲು ನಿರ್ಧಿರಿಸಿದನು. ಜೂಲ್ಸ್ ವರ್ನ್ , ಅಲೆಕ್ಸಾಂಡರ್ ಡ್ಯೂಮಾ, ವಾಲ್ಟರ್ ಸ್ಕಾಟ್ರ ರಮ್ಯಾದ್ಬುತ ಕಥೆಗಳನ್ನು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಓದುತ್ತಾ ಗ್ಲೌಬೆರ್ ಭಾವ ಪ್ರಪಂಚ ಹಿಗ್ಗಿತು. ಉತ್ತಮ ಕಲಾವಿದ ಹಾಗೂ ಕುಶಲಕರ್ಮಿಯಾಗಬೇಕೆಂಬುದು ಗ್ಲೌಬೆರ್ ಹಂಬಲವಾಗಿದ್ದಿತು. ಪ್ರೌಢಶಾಲೆಯಲ್ಲಿರುವಾಗ ಹೆಡೆನ್ ತಾರಾಲಯಕ್ಕೆ ಭೇಟಿ ಕೊಟ್ಟ ನಂತರ ವಿಜ್ಞಾನ ಒಮ್ಮೆ ತನ್ನತ್ತ ಕೈಬೀಸಿ ಕರೆದಂತೆ ಗ್ಲೌಬೆರ್ಗೆ ಭಾಸವಾಯಿತು. ಇದಾದ ನಂತರ ದೂರದರ್ಶಕ , ತಾರೆ, ನಕ್ಷತ್ರ , ಮಸೂರಗಳ ಬಗೆಗೆ ಸಿಕ್ಕಿದ್ದನ್ನೆಲ್ಲಾ ಓದುವ ಗೀಳು ಗ್ಲೌಬೆರ್ಗೆ ಅಂಟಿಕೊಂಡಿತು. ಹವ್ಯಾಸಿಗಳಿಗಾಗಿ ಬರೆದ ಪ್ರತಿಫಲನ ದೂರದರ್ಶಕ ನಿರ್ಮಿಸುವ ಪುಸ್ತಕವನ್ನು ಕೊಂಡು,. ಗ್ಲೌಬೆರ್ ತನ್ನದೇ ಆದ ಉಪಕರಣವನ್ನು ನಿರ್ಮಿಸಿಕೊಂಡನು. ಗ್ಲೌಬೆರ್ ಇದೇ ವೇಳೆಗೆ ವಿದ್ಯಾರ್ಥಿ ವೈಜ್ಞಾನಿಕ ಸಂಘಕ್ಕೆ ಸೇರಿ ಹಲವಾರು ಭಾಷಣಗಳನ್ನು ಸಹ ನೀಡಿದನು. ಇದರ ಫಲವಾಗಿ 1914ರಲ್ಲಿ ಹಾರ್ವರ್ಡ್ ಕಾಲೇಜಿಗೆ ಪ್ರವೇಶ ದೊರೆಯಿತು. ಇದೇ ವರ್ಷ ಡಿಸೆಂಬರ್ 7 ರಂದು ಜಪಾನ್ ಪರ್ಲ್ ಹಾರ್ಬರ್ಗೆ ದಾಳಿಯೆಸಗಿರುವುದರಿಂದ ಅಸಂಸಂ ಎರಡನೇ ಜಾಗತಿಕ ಯುದ್ದಕ್ಕೆ ಧುಮಿಕಿತು. ಕಾಲೇಜಿನ ಸಿಬ್ಬಂದಿಯನ್ನು ಯುದ್ದ ಸೇನೆಗಳಿಗೆ ನಿಯೋಜಿಸಲಾಯಿತು. ಸೇನೆಗೆ ಸೇರಲು ಬೇಕಾಗಿದ್ದ ಕನಿಷ್ಟ ವಯೋಮಿತಿಯನ್ನು 21ರಿಂದ 18ಕ್ಕೆ ಇಳಿಸಲಾಯಿತು. ಇದರಿಂದ ಕಾಲೇಜಿನ ಬಹು ಸಂಖ್ಯಾತ ವಿದ್ಯಾರ್ಥಿಗಳು ಸಹ ಮಿಲಿಟg ಸೇವೆಗೆ ಹೋಗಬೇಕಾಯಿತು. ಇದರಿಂದ ಮಿಲಿಟರಿಯ ಗಾತ್ರ ಅಗತ್ಯಕ್ಕಿಂತ ಹೆಚ್ಚಾಯಿತು. ಇದಕ್ಕೆ ಪರ್ಯಾಯವಾಗಿ ಮಿಲಿಟರಿ ಕೆಲಸವನ್ನು ತರಬೇತು ನೀಡಿ ಕಾಲೇಜಿನಲ್ಲೇ ಉಳಿಸಿತು. ಅಂತಹವರ ಗುಂಪಿನಲ್ಲಿ ಗ್ಲೌಬೆರ್ ಸಹ ಸೇರಿದ್ದನು. 1943ರ ಅಕ್ಟೋಬರ್ನಲ್ಲಿ ರಹಸ್ಯ ಕಾರ್ಯಾಚರಣೆಗಾಗಿ ನ್ಯೂ ಮೆಕ್ಸಿಕೊದ ಮ್ಯಾನ್ಹಟನ್ಗೆ ತೆರಳುವ ಅಹ್ವಾನ ಬಂದಿತು. ಈ ವೇಳೆಗೆ ಬೈಜಿಕ ಸರಣಿ ಕ್ರಿಯೆ (Nuclear Chain Reaction)ಕುರಿತಾಗಿ ಹಲವಾರು ಲೇಖನಗಳು ಪ್ರಕಟಗೊಂಡಿದ್ದವಾದರೂ ಯುದ್ದ ಕಾಲದಲ್ಲಿ ಅವುಗಳು ಬೆಳಕಿಗೆ ಬಂದಿರಲಿಲ್ಲ. ಗ್ಲೌಬೆರ್ಗೆ ಇಂತಹುದೇ ಒಂದು ಯೋಜನೆ ಇದಾಗಿರಬಹುದೆಂಬ ಗುಮಾನಿ ಮೂಡಿತು. ಮ್ಯಾನ್ಹಟನ್ ಯೋಜನೆಯ ಕೇಂದ್ರವಾದ ಲಾಸ್ ಆಲ್ಮೋಸ್ ತಲುಪಿದ ನಂತರವೇ ನಿಯಂತ್ರಿತ ಬೈಜಿಕ ಕ್ರಿಯಾ ಸರಣಿಯನ್ನು ಅಸಂಸಂ ಸಾಧಿಸುವ ರಹಸ್ಯ ಗ್ಲೌಬೆರ್ಗೆ ತಿಳಿದು ಬಂದಿತು. ಇಲ್ಲಿ ಜರ್ಮನಿಗಿಂತಲೂ ಮೊದಲೇ ತಾವು ಬೈಜಿಕಾಸ್ತ್ರ ನಿರ್ಮಿಸಬೇಕೆಂಬ ತವಕ, ಕಾತರ ಪ್ರತಿಯೊಬ್ಬರಲ್ಲೂ ತುಂಬಿ ತುಳುಕುತ್ತಿದ್ದಿತು. ಇಲ್ಲಿ ಹ್ಯಾನ್ಸ್ , ಫೆಯ್ನ್’ಮನ್ನಂತಹ ಘಟಾನುಘಟಿಗಳಿಂದ ನೀಲ್ಸ್ ಬೊಹ್ರ್ ಹಾಗೂ ಅಗೆ ಬೊಹ್ರ್ ಆಗಾಗ್ಗೆ ಭೇಟಿ ಕೊಡುತ್ತಿದ್ದ ಖ್ಯಾತರಾಗಿದ್ದರು. ಇವರ ಮಾರ್ಗದರ್ಶನದಲ್ಲಿ ಗ್ಲೌಬೆರ್ ಜೀವನ ಸಾಗಿತು. ಯುದ್ದ ಮುಗಿದ ನಂತರ 1946ರಲ್ಲಿ ಅಪೂರ್ಣಗೊಂಡಿದ್ದ ಪದವಿ ವ್ಯಾಸಂಗ ಪೂರ್ಣಗೊಳಿಸಲು ಮತ್ತೊಮ್ಮೆ ಗ್ಲೌಬೆರ್ ಕಾಲೇಜಿಗೆ ಮರಳಿ ಗ್ಲೌಬೆರ್ ಸ್ನಾತಕೋತ್ತರ ಪದವಿ ಗಳಿಸಲು ಪ್ರಿನ್ಸ್’ಟನ್ ಇನ್ಸ್ಟಿಟ್ಯೂಟ್ ಆಫ್ ಆಡ್ವಾನ್ಸ್ಡ್ ಸ್ಟಡಿಗೆ ಹೋದನು. 1950ರಲ್ಲಿ ವುಲ್ಫ್ಗ್ಯಾಂಗ್ ಪೌಲಿ ಈ ಸಂಸ್ಥೆಗೆ ಭೇಟಿಯಿತ್ತನು. ಇದೇ ವರ್ಷ ಗ್ಲೌಬೆರ್ ಜೂರಿಕ್ಗೆ ಹೋಗಿ ಪೌಲಿಯ ಕೆಳಗೆ ಒಂದು ವರ್ಷದ ಕಾಲ ಸಂಶೋಧಿಸಿದನು. ಇಲ್ಲಿಂದ ಹಿಂದಿರುಗಿದ ನಂತರ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿ ಲಿನಸ್ ಪೌಲಿಂಗ್ನೊಂದಿಗೆ ಬೈಜಿಕ ಚದುರಿಕೆ ಸಿದ್ಧಾಂತ ರೂಪಿಸುವಲ್ಲಿ ಶ್ರಮಿಸಿದನು. ಭಾರತೀಯ ಸಂಜಾತನಾದ ಸುದರ್ಶನ್ ಕ್ಷೀಣ ಬೈಜಿಕ ಬಲಗಳನ್ನು ಕುರಿತಾದ ಸಿದ್ಧಾಂತ ಮಂಡಿಸಿದ್ದನು. ಈ ಸಿದ್ಧಾಂತವನ್ನು ಬಳಸಿಕೊಂಡು ಗ್ಲೌಬೆರ್ , ಗ್ಲೌಬೆರ್-ಸುದರ್ಶನ್ ಸಮೀಕರಣ ರೂಪಿಸಿದನು. ಸುದರ್ಶನ್ನ ಮೂಲ ಸಿದ್ಧಾಂತವನ್ನು ಬಳಸಿಕೊಂಡು ಸ್ಟೀವೆನ್ ವೀನ್ಬರ್ಗ್, ಷೆಲ್ಡನ್ ಗ್ಲಾಷೋ ಹಾಗೂ ಅಬ್ಬಾಸ್ ಸಲಾಂ ಮುಂದುವರೆಸಿದ ಸಿದ್ಧಾಂತಗಳಿಗಾಗಿ 1979ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ಜಿನೇವಾದ ಸಿಇಆರ್ಎನ್ನ ಅಧಿಕ ಚೈತನ್ಯದ ಸಂಘಟ್ಟಕಗಳಲ್ಲಿ ನಡೆಸಿದ ಪ್ರಯೋಗಗಳು ಗ್ಲೌಬೆರ್ ಸಿದ್ದಾಂತಕ್ಕೆ ಬೆಂಬಲ ಒದಗಿಸಿದವು. ಇದಕ್ಕಾಗಿ 2005ರಲ್ಲಿ ಗ್ಲೌಬೆರ್ ನೊಬೆಲ್ ಪ್ರಶಸ್ತಿ ಪಡೆದನು. ಆದರೆ ಮೂಲ ಸಿದ್ಧಾಂತ ರೂಪಿಸಿದ ಸುದರ್ಶನ್ನ್ನು ನೊಬೆಲ್ ಪ್ರಶಸ್ತಿಗೆ ಪರಿಗಣಿಸಲಾರದ ನೊಬೆಲ್ ಸಮಿತಿಯ ತೀರ್ಮಾನವನ್ನು ಹಲವಾರು ಖ್ಯಾತ ವಿಜ್ಞಾನಿಗಳು ವಿರೋಧಿಸಿದರು.
ಥಿಯೋಡೋರ್ ಡಬ್ಲ್ಯೂ ಹಾನ್ಷ್ (1941--) 2005
Theodore W Hansch
ಜರ್ಮನಿ -ಭೌತಶಾಸ್ತ್ರ -ನಿಷ್ಕೃಷ್ಟ ಮಾಪನೆಯ ತಂತ್ರಜ್ಞಾನದಲ್ಲಿ ಮಹಾನ್ ಕ್ರಾಂತಿ ತಂದಾತ.
30 ಅಕ್ಟೋಬರ್ 1941ರಂದು ಹೈಡೆಲ್ಬರ್ಗ್ನಲ್ಲಿ ಥಿಯೋಡೋರ್ ಜನಿಸಿದನು. ಈತನ ತಂದೆ ಕೃಷಿ ಉಪಕರಣಗಳನ್ನು ತಯಾರಿಸಿ ಮಾರುತ್ತಿದ್ದನು. ಇವರ ಕುಟುಂಬ ಬೆಸ್ಲೌಗೆ ಬಂದು ನೆಲೆಸಿತು. ಎರಡನೇ ಜಾಗತಿಕ ಯುದ್ದದ ನಂತರ ತಮ್ಮ ನೆಲೆ ಕಳೆದುಕೊಂಡ ಥಿಯೋಡೋರ್ ಕುಟುಂಬ ಹೈಡೆಲ್ಬರ್ಗ್ಗೆ ಬಂದು ನೆಲೆಸಿತು. ಈ ಹಿಂದೆ ಖ್ಯಾತ ವಿಜ್ಞಾನಿ ರಾಬರ್ಟ್ ಬುನ್ಸೆನ್ ಇದ್ದ ಅಪಾರ್ಟಮೆಂಟ್ನಲ್ಲಿ ಇವರು ನೆಲೆಸಿದರು. ಇದೇ ಮನೆಯಲ್ಲಿ ಥಿಯೋಡೋರ್ ಬುನ್ಸೆನ್ ದೀಪ ಬಳಸಿ ಅಡಿಗೆ ಉಪ್ಪು ಉರಿಸಿ ಅದರಿಂದ ಹೊಮ್ಮುವ ಹಳದಿ ಜ್ವಾಲೆಯನ್ನು ಕಂಡು ಪುಳಕಿತನಾದನು. ಥಿಯೋಡೋರ್ ತಂದೆ ಪ್ರತಿ ಧಾತುವೂ ತನ್ನದೇ ಆದ ಬಣ್ಣದೊಂದಿಗೆ ಉರಿಯುವುದೆಂದು ವಿವರಿಸಿದನು. ಇದೇ ಕಾಲದಲ್ಲಿ ಥಿಯೋಡೋರ್ ಮನ್ಹೀಮ್ನಲ್ಲಿರುವ ಹೀನ್ರಿಖ್ ಲಾಂಝ್ ಎ ಜಿ ಕಂಪನಿಯ ಲೌಹಿಕ ಪ್ರಯೋಗಾಲಯಕ್ಕೆ ಭೇಟಿ ಇದ್ದನು. ಇಲ್ಲಿರುವ ಸಂಶೋಧಕರನ್ನು ಕಂಡು ತಾನು ಅವರಂತಾಗಬೇಕೆಂದು ಆಶಿಸಿದನು. ಹದಿನಾರು ವರ್ಷದವನಿರುವಾಗ ಥಿಯೋಡೋರ್ ಹಳೆ ಸರಕನ್ನು ಖರೀದಿಸಿ ತನ್ನದೇ ಆದ ಕ್ಯಾಥೋಡ್ ಕೊಳವೆ, ಗೀಗರ್ ಗಣಕ ತಯಾರಿಸಿಕೊಂಡಿದ್ದನು. 1961ರಲ್ಲಿ ಭೌತಶಾಸ್ತ್ರದ ಪದವಿ ಅಧ್ಯಯನಕ್ಕೆ ಹೈಡೆಲ್ಬರ್ಗ್ ವಿಶ್ವ ವಿದ್ಯಾಲಯ ಸೇರಿದನು. ಇಲ್ಲಿ ಬಾಹ್ಯ ಜಗತ್ತಿನ ವಿವರಣೆಯಲ್ಲಿ ಗಣಿತ ವಹಿಸುವ ಪಾತ್ರ, ಸಾಮಥ್ರ್ಯ ಕುರಿತು ವಿಸ್ಮಯಗೊಂಡನು. ಅಲ್ಪ ಕಾಲದಲ್ಲೇ ಗಣಿತ ಹೇಗೆ ತನ್ನದೇ ಪ್ರಭಾವ ಬೀರಿ ವಾಸ್ತವಿಕ ಜಗತ್ತಿನಿಂದ ದೂರ ಸಹ ಒಯ್ಯಬಲ್ಲದೆಂದು ಅರಿತನು. ಇದರ ಫಲವಾಗಿ ಗಣಿತ ಹೇಳಿದ್ದೆಲ್ಲವನ್ನು ಕಾಣಲೇಬೇಕೆಂಬ ಹಂಬಲ ಥಿಯೋಡೋರ್ನಲ್ಲಿ ಮೂಡಿತು. ಆಲ್ಬರ್ಟ್ ಉಬೆರಲ್ಸ್ಟ್ರಾಸ್ನಲ್ಲಿ ಕ್ರಿಸ್ಟೋಫರ್ ಷೆಮೆಲ್ಜರ್ ನೇತೃತ್ವದ ಅಣ್ವಯಿಕ ಭೌತಶಾಸ್ತ್ರ ವಿಭಾಗಕ್ಕೆ ಥಿಯೋಡೋರ್ನಲ್ಲಿ ಭೇಟಿ ಇತ್ತನು. ಇಲ್ಲಿ ಲೇಸರ್ ಕುರಿತಾದ ಪ್ರಯೋಗಗಳನ್ನು ಕಂಡು ತನ್ನ ಭವಿಷ್ಯ ಇಲ್ಲೇ ಇರುವುದೆಂದು ನಿರ್ಧರಿಸಿದನು. ಇಲ್ಲಿ ಲೇಸರ್ನ ಕ್ವಾಂಟಂ ಮಟ್ಟದ ಅಂತಕ್ರಿಯೆಯ ಬಗೆಗೆ ಪ್ರಯೋಗಗಳನ್ನು ನಡೆಸಿ 1969ರಲ್ಲಿ ಡಾಕ್ಟರೇಟ್ ಗಳಿಸಿದನು. 1970ರಲ್ಲಿ ಆಸಂಸಂಕ್ಕೆ ತೆರಳಿ ಸ್ಟ್ಯಾನ್’ಫೋರ್ಡ್’ ವಿಶ್ವವಿದ್ಯಾಲಯದಲ್ಲಿ, ಲೇಸರ್ ಸಹ ಉಪಜ್ಞೆಕಾರನಾಗಿದ್ದ ಆರ್ಥರ್ ಎಲ್ ಷಾಲೋ ಮಾರ್ಗದರ್ಶನದಲ್ಲಿ ಸಂಶೋಧನೆ ಮುಂದುವರಿಸಿದನು. ಫೆಲಿಕ್ಸ್ ಬ್ಲಾಖ್, ರಾಬರ್ಟ್ ಹಾಫ್ಸ್ಟ್ಯಾಡಾಟರ್ನಂತಹ ವಿಖ್ಯಾತದ ನಡುವೆ ಕೆಲಸ ಮಾಡುವ ರೋಮಾಂಚನವನ್ನು ಥಿಯೋಡೋರ್ ಅನುಭವಿಸಿದನು. ಈ ಅವಧಿಯಲ್ಲಿ ಥಿಯೋಡೋರ್ ದೃಗ್ ರೋಹಿತದರ್ಶಕಶಾಸ್ತ್ರದಲ್ಲಿ ಅತಿಸೂಕ್ಷ್ಮ ಮಟ್ಟದವರೆಗೆ ಅಳತೆಗಳನ್ನು ಮಾಡುವ ಹಲವಾರು ತಂತ್ರಗಳನ್ನು ಪರಿಚಯಿಸಿ, ಅದಕ್ಕಾಗಿ ಉಪಕರಣಗಳನ್ನು ನಿರ್ಮಿಸಿದನು. ಇವು ಮುಂದೆ ನಿಷ್ಕೃಷ್ಟ ಮಾಪನೆಯ ತಂತ್ರಜ್ಞಾನದಲ್ಲಿ ಮಹಾನ್ ಕ್ರಾಂತಿಯನ್ನೇ ತಂದವು. ಇದಕ್ಕಾಗಿ ಥಿಯೋಡೋರ್ 2005 ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಹನ್ನೊಂದು ವರ್ಷಗಳ ಕಾಲ ಸ್ಟ್ಯಾನ್’ಫೋರ್ಡ್ನಲ್ಲಿದ್ದ ಥಿಯೋಡೋರ್ 1986ರಲ್ಲಿ ತಾಯ್ನಾಡಿಗೆ ಹಿಂದಿರುಗಿದನು.
ಜಾರ್ಜ್ , ಎಫ್ ಸ್ಮೂಟ್ ( ) 2007
George , F. Smoot
ಅಸಂಸಂ-ಖಭೌತಶಾಸ್ತ್ರ-ವಿಶ್ವದ ಉಗಮ ಕುರಿತಾದ ಸಾಕ್ಷ್ಯಾಧಾರಗಳ ಸಂಗ್ರಹಣೆಯ ಯೋಜನೆ ರೂಪಿಸಿದಾತ.
ಸ್ಮೂಟ್, ಫ್ಲೋರಿಡಾದ ಯುಕಾನ್ ಪಟ್ಟಣದಲ್ಲಿ ಜನಿಸಿದನು. ಈತನ ತಂದೆ ಅಸಂಸಂ ಜಿಯಾಲಜಿಕಲ್ ಸರ್ವೆ ವಿಭಾಗದಲ್ಲಿ ಜಲಶಾಸ್ತ್ರಜ್ಞನಾಗಿದ್ದರೆ, ತಾಯಿ ಶಾಲಾ ಉಪಾಧ್ಯಾಯಿನಿಯಾಗಿದ್ದಳು. 1970ರಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸ್ಮೂಟ್ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು. ವಿಶ್ವಶಾಸ್ತ್ರ (Cosmology) ಜಗತ್ತಿನ ಎಲ್ಲಾ ರಹಸ್ಯಗಳನ್ನು ಬಿಚ್ಚಿಡುವ ಏಕೈಕ ಮಾರ್ಗವೆಂದು ಭಾವಿಸಿದ್ದ ಸ್ಮೂಟ್ ವಿಶ್ವದ ಉಗಮ ಕುರಿತಾದಂತಹ ಸಂಶೋಧನೆಗಳಿಗೆ ತನ್ನ ಜೀವನವನ್ನು ಮುಡಿಪಾಗಿಟ್ಟನು. ಮಾಹಾಬಾಜಣೆ (Big Bang) ಸಿದ್ದಾಂತದ ಪರಿಶೀಲನೆಗಾಗಿ ಅಸಂಸಂಗಳ ಬಾಹ್ಯಾಕಾಶ ಸಂಸ್ಥೆ ನಾಸಾ (NASA) , ವಿಶ್ವದ ಹಿನ್ನೆಲೆಯ ವಿಕಿರಣ ಶೋಧಕ ಉಪಗ್ರಹವನ್ನು ಅಂತರಿಕ್ಷದಲ್ಲಿರಿಸಿತು. ಇದು COBE (Cosmic Back Ground Explorer) ಎಂದು ಖ್ಯಾತವಾಯಿತು. ಈ ಯೋಜನೆಯ ರೂವಾರಿಗಳಾಗಿ ಸ್ಮೂಟ್ ಹಾಗೂ ಜಾನ್ ಮ್ಯಾಥರ್ ಖ್ಯಾತರಾದರು. ಈ ವಿಶ್ವ ಪರಮಾದಿ ಪರಮಾಣು ಸಿಡಿದು ಹಿಗ್ಗಿ ಉಗಮವಾದುದೆಂದು ಮಹಾಬಾಜಣೆ ಸಿದ್ಧಾಂತ ವಿವರಿಸುತ್ತದೆ. ಇದು ನಿಜವೇ ಆಗಿದ್ದರೆ ಆ ಮಹಾಸ್ಪೋಟದ ಕುರುಹು ವಿಶ್ವಾದ್ಯಂತ ನಿರ್ದಿಷ್ಟ ತಾಪಮಾನ ಹಾಗೂ ತರಂಗಾಂತರದಲ್ಲಿರಬೇಕು (Wave Length) . ಇದರ ಶೋಧನೆಯೇ COBE ಯೋಜನೆಯ ಪ್ರಮುಖ ಗುರಿ. ಈ ಯೋಜನೆಯಿಂದಾಗಿ ವಿಶ್ವದ ಹಿನ್ನೆಲೆಯಲ್ಲಿರುವ ಮಹಾಬಾಜಣೆಗೆ ಸಾಕ್ಷಿಯೊದಗಿಸುವ ದತ್ತಾಂಶಗಳು ದಕ್ಕಿದವು. ಇದರಿಂದ ಆದಿಮ ವಿಶ್ವವನ್ನು (Proto Universe) ಕುರಿತಾಗಿ ವಿಜ್ಞಾನಿಗಳಿಗೆ ಹಲವಾರು ಮಹತ್ತರ ಅಂಶಗಳು ಮನದಟ್ಟಾಗತೊಡಗಿದವು. ಸ್ಮೂಟ್ ಹಾಗೂ ಸಂಗಡಿಗರಿಂದ ಸಿದ್ಧಾಂತಗಳಿಗೆ ಸೀಮಿತವಾಗಿದ್ದ ವಿಶ್ವದ ಉಗಮ ಕುರಿತಾದಂತಹ ಸಂಶೊಧನೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವತ್ತ ದಾಪುಗಾಲಿಟ್ಟಿತು. COBE ಯೋಜನೆಯಲ್ಲಿ ದಕ್ಕಿದ ಅಪಾರ ಮಾಹಿತಿಯನ್ನು ವಿಶ್ಲೇಷಿಸಿ, ಸಾವಿರಕ್ಕೂ ಅಧಿಕ ಜನರನ್ನು ಹೊಂದಿರುವ ಸ್ಮೂತ್ನ ನೇತೃತ್ವದ ತಂಡ ಆದಿಮ ವಿಶ್ವದಲ್ಲಿ ಭಾರಿ ಬಿಸಿಯ ಹಾಗೂ ತಂಪಿನ ಸ್ಥಾನಗಳನ್ನು ಗುರುತಿಸಿದೆ. 1994ರಲ್ಲಿ ಅಮೆರಿಕನ್ ಫಿಸಿಕ್ಸ್ ಸೊಸೈಟಿಗೆ ನೀಡಿದ ಭಾಷಣದಲ್ಲಿ ಸ್ಮೂಟ್ ಇದು 1400 ಕೋಟಿ ವರ್ಷಗಳ ಹಿಂದಿದ್ದ ಶೈಶವ ವಿಶ್ವ ಸ್ವರೂಪವನ್ನು ಖಚಿತಗೊಳಿಸಿದೆಯೆಂದು ತಿಳಿಸಿದನು. ವಿಶ್ವ ಕಿರಣ ಹಿನ್ನೆಲೆಯ ಅಧ್ಯಯನಕ್ಕಾಗಿ ಅದರಲ್ಲಿನ ವ್ಯತಸ್ತಗಳ ಶೋಧನೆಗಾಗಿ ವಿಲ್ಕಿನ್ಸನ್ ಸೂಕ್ಷ್ಮತರಂಗ ಅಸಮದೈಶಿಕ ಶೋಧಕ (Wilkinson Microwave Anisotropic Probe) ಯೋಜನೆ ರೂಪುಗೊಂಡಿತು. ವಿಶ್ವ ಉಗಮಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳ ಸಂಗ್ರಹದಲ್ಲಿನ ಸಾಧನೆಗಾಗಿ ಸ್ಮೂಟ್ 2007ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾಗಿದ್ದಾನೆ.
ಜಾನ್ , ಕ್ರಾಮ್ವೆಲ್ ಮ್ಯಾಥರ್ (1946--) 2007
John , C.Mather

ಜಾನ್, 7 ಆಗಸ್ಟ್ 1946ರಂದು ವರ್ಜೀನಿಯಾದ ರೋವನ್ಓಕ್ನಲ್ಲಿ ಜನಿಸಿದನು. ಬಕ್ರ್ಲೆಯ ಕ್ಯಾಲಿಫೋರ್ನೀಯಾ ವಿಶ್ವವಿದ್ಯಾಲಯ ವ್ಯಾಪ್ತಿಯ ಸ್ಟಾರ್ಥ್ಮೋರ್ ಕಾಲೇಜಿನಿಂದ ಭೌತಶಾಸ್ತ್ರದ ಪದವಿ ಹಾಗೂ ಡಾಕ್ಟರೇಟ್ ಗಳಿಸಿದನು. ಮ್ಯಾಥರ್ ಈಗ ಅಸಂಸಂಗಳ ಬಾಹ್ಯಾಕಾಶ ಸಂಸ್ಥೆಯಾದ ನಾಸಾದ ಮೇರಿಲ್ಯಾಂಡ್ನಲ್ಲಿರುವ ಗೊಡ್ಡಾರ್ಡ್ ಸ್ಪೇಸ್ ಫ್ಲೈಟ್ನಲ್ಲಿ ಪ್ರಾಧ್ಯಾಪಕನಾಗಿದ್ದಾನೆ,. ಈ ವಿಶ್ವದ ಉಗಮ ಮಹಾಬಾಜಣೆಯಿಂದಾಗಿದೆಂಬ ಸಿದ್ದಾಂತವಿದೆ. ಇದು ನಿಜವಾಗಿದ್ದಲ್ಲಿ ವಿಶ್ವದ ಹಿನ್ನೆಲೆಯಲ್ಲಿ ಅದರ ಉಳಿಕೆಯಾಗಿ ಸೂಕ್ಷ್ಮ ತರಂಗ ಹಿನ್ನೆಲೆಯ ಕಪ್ಪುಕಾಯದ ವಿಕಿರಣತೆ ವ್ಯಾಪಿಸಿರಬೇಕು. ಇಂತಹ ಹಿನ್ನೆಲೆ ವಿಕಿರಣತೆಯನ್ನು ಶೋಧಿಸಲು ವಿಶ್ವ ಹಿನ್ನೆಲೆ ಶೋಧಕ (COBE-Cosmic Back Ground Exploration) ಯೋಜನೆಯನ್ನು ಹಮ್ಮಿಕೊಳ್ಳಲಾಯಿತು. ಈ ಯೋಜನೆಯ ರೂವಾರಿಗಳು ಜಾರ್ಜ್ ಸ್ಮೂಲ್ ಮತ್ತು ಮ್ಯಾಥರ್ ಜಾರ್ಜ್. ಸ್ಮೂಲ್ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚು ಜನ ವಿಜ್ಞಾನಿಗಳು ಹಾಗೂ ಇಂಜಿನಿಯರ್ಗಳು ಈ ಯೋಜನೆಯಲ್ಲಿ ಭಾಗಿಗಳಾಗಿದ್ದಾರೆ. ಈ ಯೋಜನೆಯಲ್ಲಿ ದೊರೆತ ದತ್ತಾಂಶಗಳಿಂದ ವಿಶ್ವದ ಉಗಮ ಮಹಾ ಬಾಜಣೆಯಿಂದಾUದೆಯೆನ್ನುವುದಕ್ಕೆ ಪುರಾವೆಗಳು ಲಭ್ಯವಾಗಿವೆ. ವಿಶ್ವದ ಹಿನ್ನೆಲೆಯಲ್ಲಿರುವ ಸೂಕ್ಷ್ಮತರಂಗ ಎಲ್ಲಾ ಕಡೆಗೂ ಒಂದೇ ಬಗೆಯದಾಗಿರದೆ ಅಸಮದೈಶಿಕವಾಗಿದೆಯೆಂದು (Anisotropic) ಗೊತ್ತಾಗಿದೆ. ಮ್ಯಾಥರ್ ಹಾಗೂ ಜಾನ್ ಸ್ಮೂಲ್ರ ಪ್ರಯೋಗಗಳಿಂದ ವಿಶ್ವದ ಉಗಮ, ವಿಕಾಸದ ಬಗೆಗೆ ವೈಜ್ಞಾನಿಕ ವಿವರಣೆಗಳು ದಕ್ಕಿವೆ. ವಿಶ್ವಶಾಸ್ತ್ರ (Cosmology) ಇವರ ಕಾರ್ಯಗಳಿಂದ ಸಿದ್ಧಾಂತಗಳಿಂದ, ಪರಿಶೋಧನೆಗಳತ್ತ ಸಾಗಿತು. ಈ ನಿಟ್ಟಿನಲ್ಲಿನ ಪರಿಶ್ರಮಕ್ಕಾಗಿ ಮ್ಯಾಥರ್ 2007ರ ನೊಬೆಲ್ ಪ್ರಶಸ್ತಿ ಪುರಸ್ಕೃತನಾಗಿದ್ದಾನೆ.