ಕ್ಯಾಲ್ವಿನ್ ,ಮೆಲ್ವಿನ್ (1911--) - 1961
Calvin , Melvin (CHE.)
ಅಸಂಸಂ–ಜೀವ ರಸಾಯನಶಾಸ್ತ್ರ - ದ್ಯುತಿ ಸಂಶ್ಲೇಷಣಾ ಕ್ರಿಯೆಗಳಲ್ಲಿನ ಜೈವಿಕ ಸಂಶ್ಲೇಷಣೆಗಳನ್ನು ಸ್ಪುಟಗೊಳಿಸಿದಾತ.
ಮಿಷಿಗನ್,ಮಿನ್ನೆಸೊಟಾ ಹಾಗೂ ಮ್ಯಾಂಚೆಸ್ಟರ್ಗಳಲ್ಲಿ ವಿದ್ಯಾಭ್ಯಾಸ ಮಾಡಿದ ಕ್ಯಾಲ್ವಿನ್ 1937ರಲ್ಲಿ ಬರ್ಕ್ಲೆಯ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದಲ್ಲಿ ಬೋಧಕನಾಗಿ ವೃತ್ತಿ ಜೀವನ ಪ್ರಾರಂಭಿಸಿದನು.1946ರ ವೇಳೆಗೆ ರೇಡಿಯೋ ಸಮಸ್ಥಾನಿ (Isotope) ಪಟ್ಟೀಕರಣ ಹಾಗೂ ವರ್ಣಾಲೇಖದಂತಹ (Chromatography) ಸೂಕ್ಷ್ಮಮಾಪನದ ವಿಧಾನಗಳು ಬಳಕೆಗೆ ಬಂದಿದ್ದವು. ಲಭ್ಯವಿದ್ದ ಈ ಹೊಸ ವಿಧಾನಗಳಿಂದ ದ್ಯುತಿಸಂಶ್ಲೇಷಣೆಯಂತಹ (Photosynthesis) ಸಂಕೀರ್ಣ ಕ್ರಿಯೆಯನ್ನು ಅರಿಯಲು ಕ್ಯಾಲ್ವಿನ್ ಪ್ರಯತ್ನಿಸಿದನು. ದ್ಯುತಿ ಸಂಶ್ಲೇಷಣಾ ಪ್ರಕ್ರಿಯೆಯಲ್ಲಿ ಸಸ್ಯಗಳು ಗಾಳಿಯಿಂದ ಇಂಗಾಲದ ಡೈ ಆಕ್ಸೈಡನ್ನು ಪಡೆದು, ಹಲವಾರು ಜಟಿಲ ಹಂತಗಳಲ್ಲಿ ಅದನ್ನು ಪಿಷ್ಟ ಹಾಗೂ ಆಮ್ಲಜನಕಗಳಿಗೆ ಮಾರ್ಪಡಿಸುತ್ತವೆ. ಹೀಗಾಗಿ ಸಸ್ಯಗಳಿಂದ ಪ್ರತಿ ವರ್ಷ ನೂರು ಕೋಟಿ ಟನಗಳಿಗೂ ಅಧಿಕ ಪ್ರಮಾಣದ ಆಮ್ಲಜನಕ ವಾತಾವರಣಕ್ಕೆ ಬಳುವಳುಯಾಗಿ ದೊರೆಯುತ್ತದೆ. ದ್ಯುತಿ ಸಂಶ್ಲೇಷಣಾ ಕ್ರಿಯೆ ಈ ಭೂಮಿಯಲ್ಲೇ ಪ್ರಥಮ ಹಾಗೂ ಜೀವನಾಧಾರದ ಮೂಲಕ್ರಿಯೆ. ಏಕೆಂದರೆ ಇಡೀ ಪ್ರಾಣಿವರ್ಗ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಸ್ಯಗಳ ಮೇಲೂ, ಹಾಗೂ ನೇರವಾಗಿ ಆಮ್ಲಜನಕ ಸಂಪನ್ನವಾದ ವಾತಾವರಣದ ಮೇಲೂ ತಮ್ಮ ಅಸ್ತಿತ್ವವನ್ನು ರೂಪಿಸಿಕೊಂಡಿವೆ. ಭೂಮಿಯ ಬಹು ದೀರ್ಘಾವಧಿಯ ಚರಿತ್ರೆಯಲ್ಲಿ ಅಮ್ಲಜನಕ ಲಭ್ಯತೆಯೇಅದಕ್ಕೊಂದು ವಿಶಿಷ್ಟ ಸ್ಥಾನವನ್ನು ತಂದಿತ್ತಿದೆ. ಕ್ಯಾಲ್ವಿನ್ ಕ್ಲೊರೆಲ್ಲಾ ಎನ್ನುವ ಏಕಕೋಶದ ಹಸಿರು ಪಾಚಿ ವಿಕಿರಣಯುಕ್ತ ಇಂಗಾಲದ ಡೈ ಆಕ್ಸೈಡನ್ನು ಕೆಲಕಾಲ ಹೀರುವಂತೆ ಮಾಡಿ, ಅದು ಹೀರಿದ ತಕ್ಷಣದ ಕೆಲ ಸೆಕೆಂಡುಗಳಲ್ಲಿ ಅದು ಒಳಗಾಗುವ ರಾಸಾಯನಿಕ ಕ್ರಿಯೆಗಳನ್ನು ಹಾಗೂ ಅದರ ಉತ್ಪನ್ನಗಳನ್ನು ಗುರುತಿಸಿದನು. ಇವು ಕ್ಯಾಲ್ಬಿನ್ ಚಕ್ರೀಯ ಕ್ರಿಯೆಗಳೆಂದೇ ಖ್ಯಾತ. ಕ್ಯಾಲ್ಬಿನ್ ತನ್ನ ಈ ಸಂಶೋಧನೆಗಳಿಂದ 1961ರ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಕ್ಯಾಲ್ಬಿನ್ನ ಇತ್ತೀಚಿನ ಸಂಶೋಧನೆಗಳು , ಸಸ್ಯಗಳಲ್ಲಿ ಜರುಗುವ ದ್ಯುತಿ ಸಂಶ್ಲೇಷಣಾ ಕ್ರಿಯೆಯನ್ನು ಕೃತಕವಾಗಿ ಸಾಧಿಸುವತ್ತ ಸಾಗುತ್ತಿವೆ.
ಜಾನ್ , ಕೌಡೆರಿ ಕೆಂಡ್ರ್ಯೂ (1917-1997) 1962
John , Cowdery Kendrew 1962
ಇಂಗ್ಲೆಂಡ್-ರಸಾಯನಶಾಸ್ತ್ರ-ಮಯೋಗ್ಲೋಬಿನ್ನ ರಾಚನಿಕ ಸ್ವರೂಪ (Structural Form) ನಿರ್ಧರಿಸಿದಾತ.
24 ಮಾರ್ಚ್ 1917ರಂದು ಆಕ್ಸ್ಫರ್ಡ್’ನಲ್ಲಿ ಕೆಂಡ್ರ್ಯೂ ಜನನವಾಯಿತು. ಈತನ ತಂದೆ ಆಕ್ಸ್’ಫರ್ಡ್ ವಿಶ್ವವಿದ್ಯಾಲಯದ, ಪವನಶಾಸ್ತ್ರ ವಿಭಾಗದಲ್ಲಿ ಪ್ರವಾಚಕನಾಗಿದ್ದನು. ಆಕ್ಸ್ಫರ್ಡ್ ಡ್ರ್ಯಾಗನ್ ಸ್ಕೂಲ್, ಬ್ರಿಸ್ಟಲ್ನ ಕ್ಲಿಫ್ಟನ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ ಕೆಂಡ್ರ್ಯೂ 1939ರಲ್ಲಿ ಕೇಂಬ್ರಿಜ್ನಿಂದ ರಸಾಯನಶಾಸ್ತ್ರದಲ್ಲಿ ಪದವಿ ಗಳಿಸಿದನು. ಇದಾದ ನಂತರ ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಕೇಂಬ್ರಿಜ್ನ ಭೌತ ರಸಾಯನಶಾಸ್ತ್ರ ವಿಭಾಗದಲ್ಲಿ ಕೆಲಕಾಲ ಸೇವೆ ಸಲ್ಲಿಸಿದನು. ವಾಯು ಸಚಿವಾಲಯದ ಸಂಶೋಧನಾ ಪ್ರತಿಷ್ಠಾನ ಸೇರಿದ ಕೆಂಡ್ರ್ಯೂ ರಡಾರ್ಗಳ ಅಭಿವೃದ್ದಿಯಲ್ಲೂ ಕೆಲಕಾಲವಿದ್ದನು. 1940ರಲ್ಲಿ ವಾಯು ಸಚಿವಾಲಯಕ್ಕೆ ಸಲಹಾ ಕೇಂದ್ರವಾಗಿದ್ದ ಸರ್ ರಾಬರ್ಟ್ ವ್ಯಾಟ್ಸನ್ ವ್ಯಾಟ್ ಸಂಸ್ಥೆಯ ಸಿಬ್ಬಂದಿಯಾದನು. ಯುದ್ದದ ಸಮಯದಲ್ಲಿ ವೈಜ್ಞಾನಿಕ ಸಲಹೆಗಾರನಾಗಿ ಸೇವೆ ಸಲ್ಲಿಸಿದನು. ವಿಂಗ್ ಕಮಾಂಡರ್ ಗೌರವ ಹುದ್ದೆಯನ್ನು ಸಹ ಕೆಂಡ್ರ್ಯೂ ಅಲಂಕರಿಸಿದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಜೆ.ಡಿ.ಬರ್ನೆಲ್ ಹಾಗೂ ಎಲ್.ಪೌಲಿಂಗ್ ಪ್ರಭಾವಕ್ಕೊಳಗಾಗಿ, ಜೀವರಸಾಯನಶಾಸ್ತ್ರದತ್ತ ಆಕರ್ಷಿತನಾಗಿ ಪ್ರೋಟಿನ್ಗಳ ಅಧ್ಯಯನ ಕೈಗೊಂಡನು. 1946ರಲ್ಲಿ ಕೇಂಬ್ರಿಜ್ನ ಕ್ಯಾವೆಂಡಿಷ್ ಪ್ರಯೋಗಾಲಯಕ್ಕೆ ಹಿಂದಿರುಗಿ ಮಾಕ್ಸ್ಪೆರುಟ್ಜ್ ಸಹಯೋಗದಲ್ಲಿ ಸರ್ ಲಾರೆನ್ಸ್ ಬ್ರಾಗ್ನ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದನು. ಕೆಂಡ್ರ್ಯೂ ಸಂಶೋಧನೆಗಳು ಪ್ರೋಟಿನ್'ಗಳ ರಾಚನಿಕ ಸ್ವರೂಪ, ಮಯೋಗ್ಲೋಬಿನ್ನ ಕ್ಷ-ಕಿರಣ ವಿಶ್ಲೇಷಣೆಗಳಲ್ಲಿ ಕೇಂದ್ರಿಕೃತವಾಗಿದ್ದವು. ಇದರ ¥sóÀಲವಾಗಿ 1957ರಲ್ಲಿ ಮಯೋಗ್ಲೋಬಿನ್ನ ಮೂರು ಆಯಾಮದ ಮಾದರಿ 60A ( (ಆ್ಯಂಗ್ಸ್ಟ್ರಾಮ್) ವಿಯೋಜನೆಯಲ್ಲಿ (Resolution) ಲಭ್ಯವಾಯಿತು. ಇದಕ್ಕಾಗಿ 1962ರ ರಾಸಾಯನಿಕ ಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಕೆಂಡ್ಯೂಗೆ ನೀಡಲಾಯಿತು. ಅವಿವಾಹಿತನಾಗಿ ಉಳಿದ ಕೆಂಡ್ರ್ಯೂ ಸಂಗೀತ, ಕಲಾ ಚರಿತ್ರೆಯಲ್ಲಿ ಅಧ್ಯಯನ ಪ್ರವಾಸಗಳಲ್ಲಿ ಅಭಿರುಚಿ ಹೊಂದಿದ್ದಾನೆ. ಕೆಂಡ್ರ್ಯೂ 1947ರಲ್ಲಿ, ಪೀಟರ್ ಹಾಸ್ನಫೆಲೋ 1954ರಲ್ಲಿ, ಲಂಡನ್ನ ಡೇವಿ ಫ್ಯಾರಡೆ ರಾಯಲ್ ಇನ್ಸ್ಟಿಟ್ಯೂಟ್ನ ಪ್ರವಾಚಕ, 1960ರಲ್ಲಿ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಗೊಂಡನು. ಜರ್ನಲ್ ಆಫ್ ಮಾಲೆಕ್ಯುಲಾರ್ ಬಯೋಲಾಜಿ ಪತ್ರಿಕೆಯ ಸಂಸ್ಥಾಪಕ ಹಾಗೂ ಸಂಪಾದಕನಾಗಿಯೂ, ಕೆಂಡ್ರ್ಯೂ ಸೇವೆ ಸಲ್ಲಿಸಿದ್ದಾನೆ.
ಪೆರುಟ್ಜ್, ಮ್ಯಾಕ್ಸ್ (ಫರ್ಡಿನ್ಯಾಂಡ್) (1914--) 1962
Perutz , Max (Ferdinand)
ಆಸ್ಟ್ರಿಯಾ-ಬ್ರಿಟನ್-ಅಣ್ವಕ ಜೀವಶಾಸ್ತ್ರ- ಹಿಮೋಗ್ಲೋಬಿನ್ನ ರಚನೆ ನಿರ್ಧರಿಸಿದಾತ.
ಪೆರುಟ್ಜ್ನ ತಂದೆ, ತಾಯಿಗಳಿಬ್ಬರೂ ಜವಳಿ ಮಾರುವ ಕುಟುಂಬದ ಹಿನ್ನೆಲೆಯವರು. ವಿಯೆನ್ನಾದಲ್ಲಿ ರಸಾಯನಶಾಸ್ತ್ರ ಓದಿದ ಪೆರುಟ್ಜ್ 1936ರಲ್ಲಿ ಜೆ.ಡಿ. ಬರ್ನಲ್ ಮಾರ್ಗದರ್ಶನದಲ್ಲಿ ಸ್ಪಟಿಕಶಾಸ್ತ್ರದಲ್ಲಿ (Crystallography) ಸಂಶೋಧನೆ ಕೈಗೊಂಡು ಡಾಕ್ಟರೇಟ್ ಗಳಿಸಲು ಕೇಂಬ್ರಿಜ್ಗೆ ಹೋದನು. ಬ್ರಾಗ್ಸ್, ನಿರವಯವ ಸ್ಪಟಿಕಗಳ ಅಣುರಚನೆ ನಿರ್ಧರಿಸಲು ಕ್ಷ- ಕಿರಣ ವಕ್ರೀಭವನದ (Refraction) ವಿಧಾನಗಳನ್ನು ಬಳಸಿದ್ದನು. 1934ರಲ್ಲಿ ಪೆರುಟ್ಜ್, ಡೊರೊಥಿ ಕ್ರಾನ್’ಫ್ರಟ್ಸನ್’ನೊಂದಿಗೆ ಸಾವಯವ ಸ್ಪಟಿಕವಾದ ಪೆಪ್ಸಿನ್ ಒದ್ದೆಯಾದಾಗ ಕ್ಷ ಕಿರಣಗಳನ್ನು ವಕ್ರೀಭವನಗೊಳಿಸುವುದೆಂದು ತಿಳಿಸಿದನು. ಇದರಿಂದ ಬ್ರಾಗ್ಸ್ನ ಮಾರ್ಗದಲ್ಲೇ ಸಾವಯವ ಸ್ಪಟಿಕಗಳ ಅಣು ರಚನೆ ನಿರ್ಧರಿಸಬೇಕೆಂದು ಪೆರುಟ್ಜ್ ಉತ್ಸುಕನಾಗಿದ್ದನು. ಆದರೆ ಬರ್ನಲ್, ಪೆರುಟ್ಜ್’ಗೆ ಕೆಲವು ಖನಿಜಗಳ ಬಗೆಗೆ ಅಧ್ಯಯನ ಮಾಡಲು ಸೂಚಿಸಿದನು. 1937ರಲ್ಲಿ ಪೆರುಟ್ಜ್ ಹಿಮೋಗ್ಲೋಬಿನ್ ಸ್ಪಟಿಕಗಳನ್ನು ಪಡೆದು. ಇವುಗಳಿಂದ ಅತ್ಯುತ್ತಮ ಕ್ಷ-ಕಿರಣ ವಕ್ರೀಭವನದ ಮಾದರಿಗಳನ್ನು ಪಡೆದನು. ಹಿಮೋಗ್ಲೋಬಿನ್ಗಳು ಅಂಗಾಂಶಗಳಿಗೆ ಆಮ್ಲಜನಕವನ್ನು , ಶ್ವಾಸಕೋಶಗಳಿಗೆ ಇಂಗಾಲದ ಡೈ ಆಕ್ಸಡ್ನ್ನು ಹೊತ್ತೊಯ್ಯುವ ರಕ್ತದ ಪ್ರೋಟಿನ್ಗಳು. 1938ರಲ್ಲಿ ಪ್ರಾರಂಭವಾದ ಎರಡನೇ ಜಾಗತಿಕ ಯುದ್ದದಿಂದಾಗಿ ಪೆರುಟ್ಜ್ನ ಸಂಶೋಧನೆಗಳಿಗೆ ಅಡಚಣೆಗಳುಂಟಾದವು. 1947ರಲ್ಲಿ ಪೆರುಟ್ಜ್, ಕೇಂಬ್ರೀಜ್ನಲ್ಲಿದ್ದ ಮೆಡಿಕಲ್ ರಿಸರ್ಚ್ ಕೌನ್ಸಿಲ್ ಘಟಕದ ನಿರ್ದೇಶಕನಾದನು. ಇಲ್ಲಿ ಪೆರುಟ್ಜ್ ಹಾಗೂ ಆತನ ಸಹಾಯಕನಾದ ಜೆ.ಸಿ.ಕೆಂಡ್ರ್ಯೂ ಮಾತ್ರ ಇದ್ದರು. 1953ರಲ್ಲಿ ಪೆರುಟ್ಜ್ ಹಲವು ಕ್ಷ-ಕಿರಣ ವಕ್ರೀಭವನದ ಪಟಲಗಳನ್ನು ವಿಶ್ಲೇಷಿಸಿ, ಹಿಮೋಗ್ಲೋಬಿನ್ನ ರಾಚನಿಕ ಸ್ವರೂಪ ನಿರ್ಧರಿಸಿದನು. ಪೆರುಟ್ಜ್ ತನ್ನ ಸಂಗಡಿಗರೊಂದಿಗೆ ಮೃದ್ವಂಗಿಯ, ವೀರ್ಯಾಣುಗಳಾದ ಮೈಯೋಗ್ಲೋಬಿನ್ಗಳ ರಚನೆ ನಿರ್ಧರಿಸಿದನು. ಇವರ ಸಂಶೋಧನೆ ವೈರಸ್, ಪ್ರೊಟೀನ್, ಕಿಣ್ವಗಳ ಅಧ್ಯಯನಕ್ಕೂ ವಿಸ್ತರಿಸಿದರು. ಪೆರುಟ್ಜ್ನ ಮೆಡಿಕಲ್ ರಿಸರ್ಚ್ ಕೌನ್ಸಿಲ್ ವಿಶ್ವವಿಖ್ಯಾತವಾಗಿ ಈ ಕ್ಷೇತ್ರದ ಖ್ಯಾತರಾದ ಬ್ರೆನ್ನರ್, ಕ್ರಿಕ್, ಎಚ್.ಇ.ಹಕ್ಸಲಿ, ಮಿಲ್ಸ್ಟೀನ್, ಸ್ಯಾಂಜೆರ್ನಂತಹ ಖ್ಯಾತರನ್ನು ಆಕರ್ಷಿಸಿತು. 1962ರಲ್ಲಿ ಪೆರುಟ್ಜ್ ಕೆಂಡ್ರೂ ಜೊತೆಗೆ ನೊಬೆಲ್ ಪ್ರಶಸ್ತಿ ಪಡೆದನು. ಆಮ್ಲಜನಕ ಹೀರಿದಾಗ ಹಿಮೋಗ್ಲೋಬಿನ್ನಲ್ಲಿ ರಾಚನಿಕ ಸ್ವರೂಪ, ಅರ್ಜಿತ ರೋಗಗಳ ವಿಶ್ಲೇಷಣೆ, ಹಿಮಬಂಡೆಗಳ ಚಲನೆಯ ಅಧ್ಯಯನದಲ್ಲಿ ಕೆಲಕಾಲ ಪೆರುಟ್ಜ್ ಕ್ರಿಯಾಶೀಲನಾಗಿದ್ದನು. ಬ್ರಿಟನ್ನಲ್ಲಿ ಗರಿಷ್ಟ 24 ಜನರನ್ನು ಮಾತ್ರ ಹೊಂದಿರಬಹುದಾದ, ಅತಿ ಗೌರವಾನ್ವಿತ ಆರ್ಡರ್ ಆಫ್ ಮೆರಿಟ್ ನಲ್ಲಿ 1988ರಲ್ಲಿ ಪೆರುಟ್ಜ್ ಸೇರ್ಪಡೆಗೊಂಡನು.
ನಟ್ಟ, ಜೂಲ್ಯೊ (1903-1979) 1963
Natta , Giulio
ಇಟಲಿ-ಪಾಲಿಮರ್ ರಸಾಯನಶಾಸ್ತ್ರ- ಸ್ಟೀರಿಯೋ ನಿರ್ದಿಷ್ಟ ಪಾಲೀಮರೀಕರಣ ಸಿದ್ಧಾಂತ ಅಭಿವೃದ್ದಿಗೊಳಿಸಿದಾತ.
ಮಿಲಾನ್ ಪಾಲಿಟೆಕ್ನಿಕ್ನಿಂದ ರಸಾಯನ ಇಂಜಿನಿಯರಿಂಗ್ನಲ್ಲಿ ಹಾಗೂ ಉಳಿದ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಡಿಪೆÇ್ಲಮೋ ಗಳಿಸಿದನು. 1938ರಲ್ಲಿ ಕೈಗಾರಿಕಾ ರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. ಅಧಿಕ ಒತ್ತಡಗಳಲ್ಲಿ ಜರುಗುವ ಸಾವಯವರಾಸಾಯನಿಕ ಕ್ರಿಯೆಗಳ ಔಷ್ಣೀಯ ಗತಿಶೀಲತೆಯಲ್ಲಿ (Thermodynamics) ನಟ್ಟನಿಗೆ ವಿಶೇಷ ಆಸಕ್ತಿಯಿದ್ದಿತು. ಕೈಗಾರಿಕೆ ಮಟ್ಟದಲ್ಲಿ ಮೆಥೆನಾಲ್ ತಯಾರಿಕೆ, ಮೆಥನಾಲ್ನಿಂದ ಫಾರ್ಮಾಲ್ ಡೀ ಹೈಡ್ ಪ್ರೊಪಿಲೀನ್ ಹಾಗೂ ಇಂಗಾಲದ ಮಾನಾಕ್ಸೈಡ್ನಿಂದ ಅಸಿಟಿಲೀನ್ ತಯಾರಿಕೆಯಲ್ಲಿ ನಟ್ಟನ ಸಂಶೋಧನೆಗಳೇ ಜೀವಾಳ .ಇಲ್ಲಿಂದ ಸಂಶ್ಲೇಷಿತ ರಬ್ಬರ್ಗಳ ತಯಾರಿಕೆಯ ಕಡೆ ಗಮನ ಹರಿಸಿದನು. ಕೆ. ಝೀಗ್ಲರ್ ವಿವರಿಸಿದಂತೆ ಆಲ್ಕೀನ್ಗಳ ಬಹ್ವಂಗೀಕರಣ (Polymerisation) ನಿರತನಾದನು. ಈ ಬಹ್ವಂಗೀಗಳು ಮೂರು ಆಯಾಮಗಳಲ್ಲಿ ಪುನರಾವೃತ್ತಿತ ರಾಚನಿಕ ಸ್ವರೂಪ ಹೊಂದಿರುವುದನ್ನು ತೋರಿಸಿದನು. ಈ ಬಹ್ವಂಗಿಗಳು ಕರಗುವ ಬಿಂದು ಅಧಿಕವಾಗಿದ್ದು, ಹೆಚ್ಚು ಸತ್ತ್ವಶೀಲವಾಗಿರುವುದರಿಂದ ವ್ಯಾವಹಾರಿಕ ಬಳಕೆಗೆ ಸಹಾಯಕವಾಗುತ್ತವೆ. ಅಚ್ಚುಗಳಿಂದ ಎರಕ ಹೊಯ್ಯಬಹುದಾದ ದೃಡ ಬಹ್ವಂಗಿಗಳನ್ನು ನಟ್ಟ ಸಂಶ್ಲೇಷಿಸಿದನು. ಈ ರಂಗದಲ್ಲಿ ನಟ್ಟ ಹಾಗೂ ಝೀಗ್ಲರ್ ರೂಪಿಸಿದ ವಿಧಾನಗಳು ಇಂದು ಇವುಗಳ ತಯಾರಿಕೆಯಲ್ಲಿ ಬಳಕೆಯಲ್ಲಿವೆ. 1963ರಲ್ಲಿ ನಟ್ಟ. ಝೀಗ್ಲರ್ನೊಂದಿಗೆ ನೊಬೆಲ್ ಪ್ರಶಸ್ತಿ ಫಡೆದನು.
ಝೀಗ್ಲರ್, ಕಾರ್ಲ್ (1898-1974) 1963
Ziegler, Karl
ಜರ್ಮನಿ-ರಸಾಯನಶಾಸ್ತ-ಪಾಲಿಥಿನ್ ಹೆಸರಿನ ಪ್ಲಾಸ್ಟಿಕ್ ಉಪಜ್ಞೆಕಾರ.
ಚರ್ಚ್ನ ಪಾದ್ರಿಯ ಮಗನಾಗಿ ಝೀಗ್ಲರ್ 1898 ನವೆಂಬರ್ 26 ರಂದು ಹೆಲ್ಸ್ ನಗರದಲ್ಲಿ ಜನಿಸಿದನು. ಮಾರ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಪದವಿ ಗಳಿಸಿ, 1920ರಲ್ಲಿ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು. ಮಾರ್ಬರ್ಗ್ನಲ್ಲಿ ಅಧ್ಯಾಪಕನಾಗಿ ವೃತ್ತಿಜೀವನ ಆರಂಭಿಸಿದ ಝೀಗ್ಲರ್, ಫ್ರಾಂಕ್’ಫರ್ಟ್ , ಹೈಡೆಲ್ಬರ್ಗ್ಗಳಲ್ಲಿ ಅಧ್ಯಾಪಕ ಹುದ್ದೆಯಲ್ಲಿದ್ದನು. 1943ರಲ್ಲಿ ಹಾಲ್ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಸಂಸ್ಥೆಯ ನಿರ್ದೇಶಕನಾದನು. ನಂತರ ಈಗ ಮಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ಎಂದು ಹೆಸರಾಗಿರುವ ಆಗಿನ ರೂರ್ ಪ್ರಾಂತದ ಮುಲ್ಹೀಮ್ನ ಕೈಸರ್ ವಿಲ್ಹೆಲ್ಮ್ ಸಂಸ್ಥೆಯ ನಿರ್ದೇಶಕನಾದನು. 1947ರಿಂದ ಅಬೆನ್ ನಗರದ ಟೆಕ್ನಿಕಲ್ ಹೈಸ್ಕೂಲ್ನಲ್ಲಿ ಗೌರವ ಪ್ರ್ರಾಧ್ಯಾಪಕನಾಗಿದ್ದನು. ಫ್ರಾನ್ಸ್’ನಲ್ಲಿದ್ದ ರಸಾಯನಶಾಸ್ತ್ರಜ್ಞ ವಿಕ್ಟರ್ ಗ್ರೀನ್ಯಾರ್ಡ್ ಮೆಗ್ನೇಷಿಯಂ ಆಲ್ಕೈನ್ ಸಂಯುಕ್ತಗಳನ್ನು ಪರಿಶೀಲಿಸಿದ್ದನು. ಇದು ಝೀಗ್ಲರ್ ಗಮನ ಸೆಳೆಯಿತು. ಈ ನಿಟ್ಟಿನಲ್ಲಿ ಮುಂದುವರೆಸಿದ ಸಂಶೋಧನೆಗಳಿಂದ, ಅಲ್ಯೂಮಿನಿಯಂ ಬೈ ಆಲ್ಕೈಲ್ಗಳಿಗೆ, ಎಥಿಲೀನ್ ಸೇರಿಸಿ, ಅಧಿಕ ಅಣುತೂಕದ ಅಲ್ಯೂಮಿನಿಯಂ ಆಲ್ಕೈಟ್ ಪಡೆಯುವಲ್ಲಿ ಝೀಗ್ಲರ್ ಯಶಸ್ವಿಯಾದನು. ಇದೇ ನಿಟ್ಟಿನಲ್ಲಿ ತನ್ನ ವಿದ್ಯಾರ್ಥಿಯಾಗಿದ್ದ ಹಾಲ್ಸ್ ಕ್ಯಾಂಪ್ ಬೆಲ್ನೊಂದಿಗೆ ಹಲವಾರು ಪ್ರಯೋಗ ನಡೆಸಿದನು. ಇಂತಹ ಎರಡು ಪ್ರಯೋಗಗಳ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಲ್ಯೂಮಿನಿಯಂ ಟ್ರೈ ಆಲ್ಕೈನ್ಗೆ ಎಥಿಲೀನ್ ಸೇರುವ ಬದಲು, ಎರಡು ಎಥಿಲೀನ್ ಅಣುಗಳು ಸೇರಿ ಬ್ಯೂಟೀನ್ ಉತ್ಪನ್ನವಾಯಿತು. ಇದಕ್ಕೆ ಪ್ರಯೋಗ ಪಾತ್ರೆಯಲ್ಲಿದ್ದ ಕಲಿಲ ರೂಪಿ ನಿಕೆಲ್ ಕಾರಣವೆಂದು ತಿಳಿದು ಬಂದಿತು. ಕಲಿಲರೂಪಿ (Colloidal) ನಿಕೆಲ್, ಎಥಿಲೀನ್ ಅಣುಗಳು ಸೇರುವುದಕ್ಕೆ ಕ್ರಿಯಾ ವರ್ಧಕದಂತೆ ವರ್ತಿಸಿರುವುದನ್ನು ಝೀಗ್ಲರ್ ಗುರುತಿಸಿದನು. ಇದೇ ನಿಟ್ಟಿನಲ್ಲಿ ತೀವ್ರ ಸಂಶೋಧನೆಗಳು ಮುಂದುವರೆದವು. ಅಲ್ಯೂಮಿನಿಯಂ ಟ್ರೈ ಈಥೈಲ್ ಹಾಗೂ ಟೈಟೇನಿಯಂ ಕ್ಲೋರೈಡ್ ಮಿಶ್ರಣ, ಅತ್ಯುತ್ತಮ ವೇಗ ವರ್ಧಕದಂತೆ ವರ್ತಿಸಿ, ನೂರಾರು ಎಥಿಲೀನ್ ಅಣುಗಳನ್ನು ಬೆಸೆಯುವಲ್ಲಿ ಕೊನೆಗೊಂಡಿತು. ಇಂತಹ ಹೊಸ ರಾಸಾಯನಿಕ ಪಾಲಿ ಎಥಿಲೀನ್ ಎಂದು ಹೆಸರಾಯಿತು. ಈ ಕ್ರಿಯೆಗಾಗಿ ಹೆಚ್ಚಿನ ಒತ್ತಡ, ತಾಪಮಾನಗಳ ಅಗತ್ಯವಿಲ್ಲ ಹಾಗೂ ನಿಯಂತ್ರಣಕ್ಕೊಳಗಾಗುವಂತಹ ರಾಸಾಯನಿಕ ಕ್ರಿಯೆಗಳು ಜರುಗುತ್ತವೆ. ಹೀಗೆ ದೊರೆತ ಪಾಲಿಥೀನ್ಗೆ ಅತ್ಯುತ್ತಮ ಭೌತಿಕ ಹಾಗೂ ರಾಸಾಯನಿಕ ಗುಣಗಳಿರುತ್ತವೆ. ಇವು ಝೀಗ್ಲರ್ ಕ್ರಿಯಾವರ್ಧಕಗಳೆಂದು (Catalyst) ಖ್ಯಾತಿ ಹೊಂದಿದವು. ಝೀಗ್ಲರ್ ಲಿಥಿಯಂ ಅಲ್ಕೈನ್ಗಳನ್ನು ಸಹ ಪರಿಶೀಲಿಸಿದನು. ಅಧಿಕ ಸಂಖ್ಯೆಯ ಅಣುಗಳನ್ನು ಚಕ್ರೀಯ ಬಂಧದಲ್ಲಿ ಹೊಂದಿರುವ ಪರಿಮಳ ಬೀರುವ ರಾಸಾಯನಿಕಗಳನ್ನು ಸಹ ಝೀಗ್ಲರ್ ತಯಾರಿಸಿದನು. 1963ರಲ್ಲಿ ಇಟಲಿಯ ಗಿಯುಲಿಯೋ ಜೊತೆಗೆ ಝೀಗ್ಲರ್ ನೊಬೆಲ್ ಪ್ರಶಸ್ತಿ ಪಡೆದನು.
ಹಾಡ್ಗ್ಕಿನ್, ಡೊರೊಥಿ –(1910-1994) 1964
Hodgkin,Dorothy
ಬ್ರಿಟನ್-ಕ್ಷ-ಕಿರಣ ಸ್ಪಟಿಕಾಲೇಖ (X-Ray Crystallography)ವಿಶ್ಲೇಷಣೆಯನ್ನು ಜೀವ ರಾಸಾಯನಿಕ ರಂಗಕ್ಕೆ ಅಳವಡಿಸಿದಾಕೆ.
ಡೊರೊಥಿ ತಂದೆ ಸೇವೆಯಲ್ಲಿ ಈಜಿಪ್ತ್ನಲ್ಲಿದ್ದಾಗ ಅವಳು ಕೈರೋದಲ್ಲಿ ಜನಿಸಿದಳು. ಡೊರೊತಿ ಬಾಲಕಿಯಾಗಿದ್ದಾಗಲೇ ಅವಳ ತಂದೆ ಸೂಡಾನ್ಗೆ ವರ್ಗನಾದನು. ಇಲ್ಲಿ ಪ್ರಾಕ್ತನಶಾಸ್ತ್ರ, ಸ್ಪಟಿಕ ಮತ್ತು ಖನಿಜಗಳ ಬಗೆಗೆ ಡೊರೊಥಿ ಆಕರ್ಷಿತಳಾದಳು. ಶಾಲಾ ವಿದ್ಯಾಭ್ಯಾಸ ಮುಗಿಸಿದ ಡೊರೊಥಿ ಆಕ್ಸ್ಫರ್ಡ್ಗೆ ಸೇರಿ ಉನ್ನತ ಶಿಕ್ಷಣ ಪಡೆದಳು. ಇಲ್ಲಿ ಕ್ಷ-ಕಿರಣ ಸ್ಪಟಿಕಾಲೇಖದಲ್ಲಿ (Crystallography) ನೈಪುಣ್ಯ ಪಡೆದು ನಂತರ ಕೇಂಬ್ರಿಜ್ ಸೇರಿ, ಜೆ.ಡಿ.ಬರ್ನೆಲ್ನೊಂದಿಗೆ ಸಂಶೋಧನೆ ಪ್ರಾರಂಭಿಸಿದಳು. ಎರಡು ವರ್ಷದ ನಂತರ ಡೊರೊಥಿ ಆಕ್ಸ್¥sóÀರ್ಡ್ಗೆ ಹಿಂದಿರುಗಿದಳು, ಆಗಲೇ ಖ್ಯಾತ ಇತಿಹಾಸಕಾರ ಥಾಮಸ್ ಹಾಡ್ಗ್ಕಿನ್ನನ್ನು ವಿವಾಹವಾದಳು. ಬ್ರಾಗ್ಸ್ ಪರಮಾಣುಗಳ ರಚನೆಯನ್ನು ತಿಳಿಯಲು ಕ್ಷ ಕಿರಣ ವಿವರ್ತನ (Diffrection) ವಿಧಾನವನ್ನು ರೂಪಿಸಿದ್ದನು. ಡೊರೊಥಿ ಇದನ್ನು ಸಂಕೀರ್ಣ ಅಣುಗಳ ಅಧ್ಯಯನಕ್ಕೆ ಬಳಸಿದಳು. ಬಿ-12ರಲ್ಲಿ 90 ಅಣುಗಳಿದ್ದು ಅದರ ರಚನೆಯ ತೀರ್ಮಾನಕ್ಕೆ ಡೊರೊಥಿ 8 ವರ್ಷಗಳ ಕಾಲ ಶ್ರಮಿಸಿದಳು. ಬಿ-12 ವಿಟಮಿನ್ ಕೊರತೆಯಿಂದ ರಕ್ತಹೀನತೆ ಬರುತ್ತದೆ . 1956ರಲ್ಲಿ ಡೊರೊಥಿ ಪೆನ್ಸಿಲಿನ್ನ ಮತ್ತು ಬಿ-12 ವಿಟಮಿನ್ನ ರಾಸಾಯನಿಕ ರಚನೆಯನ್ನು ನಿರ್ಧರಿಸಿದಳು. ಮುಂದೆ ಬೇರೆ ರಾಸಾಯನಿಕ ವಿಧಾನಗಳಿಂದ ಇದು ಸರಿ0iÉುಂದು ಖಚಿತವಾಯಿತು.. ಗಣಕಗಳು ವೈದ್ಯಕೀಯ ರಂಗಕ್ಕೆ ಲಭ್ಯವಾದ ಮೇಲೆ ಡೊರೊಥಿ ಅವುಗಳ ನೆರವಿನಿಂದ 800 ಅಣುಗಳನ್ನು ಹೊಂದಿರುವ ಇನ್ಸುಲಿನ್ನ ರಚನೆ ಅನಾವರಣಗೊಳಿಸಲು ಯತ್ನಿಸಿದಳು. 1930ರ ಪ್ರಾರಂಭವಾದ ಈ ಪ್ರಯತ್ನಕ್ಕೆ 1972ರಲ್ಲಿ ಡೊರೊಥಿ ಯಶಸ್ಸನ್ನು ಕಂಡಳು. ಇದಕ್ಕಾಗಿ ಡೊರೊಥಿಗೆ 1964ರ ನೊಬೆಲ್ ಪ್ರಶಸ್ತಿ ದಕ್ಕಿದೆ.
ವುಡ್ವರ್ಡ್, ರಾಬರ್ಟ್ ಬನ್ರ್ಸ್ (1917-1979) 1965
Woodward , Robert Burns
ಅಸಂಸಂ-ಸಾವಯವ ರಸಾಯನಶಾಸ್ತ್ರ- ಸಾವಯವ ಸಂಶ್ಲೇಷಣೆಯ ಮಹಾನ್ ಸಾಧಕ.
ವುಡ್ವರ್ಡ್ ತನ್ನ ವೃತ್ತಿ ಜೀವನವಿಡೀ ಯಶಸ್ಸಿನಲೆಯ ಮೇಲೆ ತೇಲಿದನು. ಹದಿನಾರನೇ ವಯಸ್ಸಿಗೆ ಎಂಐಟಿಗೆ ಸೇರಿದನು. ಔಪಚಾರಿಕ ಶಿಕ್ಷಣದ ಕೊರತೆ ನೀಗಿಸಿಕೊಳ್ಳಲೆಂದು ಕೆಳಗಿನ ತರಗತಿಗಳಿಗೆ ವುಡ್ವರ್ಡ್ ಕಳಿಸಲ್ಪಟ್ಟನು. ಆದರೆ ಇಪ್ಪತ್ತನೇ ವಯಸ್ಸಿಗೇ ಡಾಕ್ಟರೇಟ್ ಗಳಿಸಿದನು. ನಂತರ ಹಾರ್ವರ್ಡ್ಗೆ ಹೋಗಿ ನೆಲೆಸಿದನು. ಸಾವಯವ ರಸಾಯನಶಾಸ್ತ್ರದಲ್ಲಿ ವೈವಿಧ್ಯಮಯವಾದ ವಿಷಯಗಳಲ್ಲಿ ವ್ಯಾಪಕ ಕಾರ್ಯ ಚಟುವಟಿಕೆ ಸಾಗಿಸಿದನು. ಸಂಕೀರ್ಣ ನೈಸರ್ಗಿಕ ರಾಸಾಯನಿಕಗಳ ಸಂಶ್ಲೇಷಣೆಯಲ್ಲಿ ವುಡ್ವರ್ಡ್ ಅದ್ವಿತೀಯನಾಗಿದ್ದನು. 1944ರಲ್ಲಿ ಕ್ವಿನೈನ್, 1951ರಲ್ಲಿಕೊಲೆಸ್ಟರಾಲ್ ಹಾಗೂ ಕಾರ್ಟಿಸೊನ್ ,1954ರಲ್ಲಿ ಲೈಸೆರ್ಜಿಕ್ ಆಮ್ಲ, ಸ್ಟೈರಾನೈನ್. 1956ರಲ್ಲಿ ರೆಸ್ಪೆರೈನ್, 1960ರಲ್ಲಿ ಕ್ಲೋರೋಫಿûಟ್, 1962ರಲ್ಲಿ ಟೆಟ್ರಾಸೈಕ್ಲಿನ್ ಪ್ರತಿಜೈವಿಕಗಳನ್ನು ಸಂಶ್ಲೇಷಿಸಿದನು. ಇವುಗಳಲ್ಲಿ ಲೈಸೆರ್ಜಿಕ್ ಆಮ್ಲ, ಮತಿ ವಿಭ್ರಮಕಾರಿ ಎಲ್ಎಸ್ಡಿಯ ಮೂಲ ಆಕರವಾದರೆ, ಸ್ಟೈಕ್ನೈನ್ ನಿಶ್ಚಲಕಾರಿ ರಾಸಾಯನಿಕಗಳಾಗಿ ಹೆಸರುವಾಸಿಯಾದವು. ಹತ್ತು ವರ್ಷಗಳ ಕಾಲ, ಸ್ವಿಸ್ ರಾಸಾಯನಿಕ ತಜ್ಞರ ತಂಡದೊಂದಿಗೆ ನಡೆಸಿದ, ಎಡೆಬಿಡದೆ ಪರಿಶ್ರಮದಿಂದ ವುಡ್ವರ್ಡ್ 1971ರಲ್ಲಿ ಸೈಯನೋ ಕೋಬಲಾಯಿನ್, ಎಂದರೆ ವಿಟಮಿನ್ 12ನ್ನು ಸಂಶ್ಲೇಷಿಸಿ ಸಾಧನೆಯ ಉತ್ತುಂಗಕ್ಕೇರಿದನು. ಪ್ರತಿಯೊಂದು ಸಂಶ್ಲೇಷಣೆಯೂ ವುಡ್ವರ್ಡ್ನ ಜಾಣ್ಮೆ , ಮುನ್ನೋಟ ಸಾಧನೆಗಳಿಗೆ ಸಾಕ್ಷಿಯಾಗಿದ್ದವು. ಸರಳ ಮೂಲ ವಸ್ತುಗಳಿಂದ ಹಂತ ಹಂತವಾದ ರಾಸಾಯನಿಕ ಕ್ರಿಯೆಗಳ ಸಂಶ್ಲೇಷಣೆ ಸಾಧಿಸುವುದು ವುಡ್ವರ್ಡ್ನ ವೈಶಿಷ್ಟ್ಯವಾಗಿದ್ದಿತು. 1965ರಲ್ಲಿ ವುಡ್ವರ್ಡ್ ಹಾ¥sóïಮನ್ ನಿಯಮಗಳನ್ನು ರೂಪಿಸಿ, ದೀರ್ಘ ಪ್ರತಿಕ್ರಿಯೆಗಳನ್ನು ಅರಿಯಲು ನೆರವಾದರು. ವುಡ್ವರ್ಡ್ ಅಪಾರ ಜ್ಞಾಪಕ ಶಕ್ತಿ , ರಾಸಾಯನಿಕಗಳ ಸಂಪೂರ್ಣ ತಿಳುವಳಿಕೆ ಹಾಗೂ ತಿಳಿ ಹಾಸ್ಯದ ಗಣಿಯಾಗಿದ್ದನು. ಸಭೆ, ಸಮಾರಂಭಗಳಿಗೆ ಯಾವಾಗಲೂ ನೀಲಿ ಬಣ್ಣದ ಕಸೂತಿ ಹಾಕಿದ ಸೂಟಿನಲ್ಲಿ, ಸ್ಟೈಕ್ನೈನ್ ರಾಸಯನಿಕ ಸೂತ್ರ ಹಾಕಿದ ಟೈ ಧರಿಸಿ ಹಾಜರಾಗುತ್ತಿದ್ದನು. ಸ್ಟೈಕ್ನೈನ್ ಸಂಶ್ಲೇಷಣೆಗಾಗಿ ವುಡ್ವರ್ಡ್ ತನ್ನ ಜೀವಿತದ 50 ವರ್ಷಗಳನ್ನು ಮೀಸಲಿಟ್ಟಿದ್ದನು. 1965ರಲ್ಲಿ ವುಡ್ವರ್ಡ್ಗೆ ನೊಬೆಲ್ ಪ್ರಶಸ್ತಿ ದಕ್ಕಿತು.
ಮುಲ್ಲಿಕೆನ್, ರಾಬರ್ಟ್ (ಸ್ಯಾಂಡರ್ಸನ್) –(1896-1986) 1966
Mulliken , Robert ( Sanderson )
ಅಸಂಸಂ-ರಸಾಯನಭೌತಶಾಸ್ತ್ರ- ಅಣ್ವಕ ಕಕ್ಷಾ ಸಿದ್ಧಾಂತ ಹಾಗೂ ರೋಹಿತಶಾಸ್ತ್ರ ನೀಡಿದಾತ.
ಮುಲ್ಲಿಕನ್, ತಂದೆ ಸಾವಯವ ರಸಾಯನಶಾಸ್ತ್ರಜ್ಞನಾಗಿದ್ದನು. ಮುಲ್ಲಿಕನ್ 1917ರಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಅ¥sóï ಟೆಕ್ನಾಲಜಿಯಿಂದ ರಸಾಯನಶಾಸ್ತ್ರದಲ್ಲಿ ಪದವಿ ಗಳಿಸಿದನು. 1919ರಿಂದ ಚಿಕಾಗೋದಲ್ಲಿ ಸಮಸ್ಥಾನಿಗಳನ್ನು (Isotopes) ಬೇರ್ಪಡಿಸುವ ಸಮಸ್ಯೆಯ ಪರಿಹಾರಕ್ಕೆ ತೊಡಗಿದನು. 1932ರಲ್ಲಿ ಬೊಹ್ರ್, ಎಫ್..ಹುಂಡ್ ಮತ್ತಿತರರು ಪರಮಾಣುಗಳ ಚೈತನ್ಯದ ಮಟ್ಟಗಳಿಗೆ ವಿವರಣೆ ನೀಡಿ, ಅವುಗಳ ರೋಹಿತಗಳೊಂದಿಗೆ ಹೇಗೆ ಅರಿಯಬಹುದೆಂದು ತಿಳಿಸಿದ್ದರು. ಮುಲ್ಲಿಕನ್ ಇದನ್ನು ಅಣುಗಳಿಗೆ ಅನ್ವಯಿಸಿದರು. ಅಣುವಿನಲ್ಲಿ ಒಂದಕ್ಕಿಂತ ಹೆಚ್ಚು ಪರಮಾಣುಗಳು ಬಂಧಗೊಂಡು ಎಲೆಕ್ಟ್ರಾನ್ಗಳು ಆ ಸಂಯೋಜಿತ ಕಕ್ಷೆಯಲ್ಲಿರುತ್ತವೆ. ರೋಹಿತಗಳ ಮೂಲಕ ಇವುಗಳ ಚೈತನ್ಯದ ಮಟ್ಟ ಹೇಗೆ ನಿರ್ಧರಿಸಬಹುದೆಂದು ಮುಲ್ಲಿಕನ್ ತೋರಿಸಿದನು. ಇದರ ಮುಂದುವರೆದ ಭಾಗವಾಗಿ ಮುಲ್ಲಿಕನ್, ಕಾಲ್ಸನ್ ಹಾಗೂ ಹಕೆಲ್ರಿಂದ ಅಣ್ವಕ ಕಕ್ಷಾ ಸಿದ್ಧಾಂತ ರೂಪುಗೊಂಡಿತು. ಮುಲ್ಲಿಕನ್ 1966ರ ನೊಬೆಲ್ ಪ್ರಶಸ್ತಿ ಗಳಿಸಿದನು.
ಮ್ಯಾನ್ಫ್ರೆಡ್, ಐಗೆನ್ (1927--) 1967
Manfred , Eigen
ಜರ್ಮನಿ-ರಸಾಯನಶಾಸ್ತ್ರ-ಶೀಘ್ರ ರಾಸಾಯನಿಕ ಕ್ರಿಯೆಗಳ ಮಾಪನದ ವಿಧಾನಗಳ ಅಭಿವೃದ್ದಿಗೆ ಶ್ರಮಿಸಿದಾತ.
ಐಗೆನ್, 9 ಮೇ 1927 ರಂದು ಬೊಸಮ್ ಪಟ್ಟಣದಲ್ಲಿ ಜನಿಸಿದನು. ಈತನ ತಂದೆ ಸಂಗೀತಗಾರನಾಗಿದ್ದನು. ಬೊರಮ್ನಲ್ಲಿ ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದನು. 1945ರಲ್ಲಿ ಗಟ್ಟಿಂಜೆನ್ ವಿಶ್ವವಿದ್ಯಾಲಯದಲ್ಲಿ ಭೌತ ಹಾಗೂ ರಸಾಯನಶಾಸ್ತ್ರದ ಪದವಿಗಾಗಿ ಸೇರಿದನು. ಅರ್ನಾಲ್ಡ್ ಯುಕೆನ್ನ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದನು. ಭಾರಜಲದ ನಿರ್ದಿಷ್ಟ ಶಾಖ, ದ್ರಾವಣಗಳ ಮೇಲೆ ಸಂಪ್ರಬಂಧ ಮಂಡಿಸಿ, 1951ರಲ್ಲಿ ಡಾಕ್ಟರೇಟ್ ಗಳಿಸಿದನು. ಇದಾದ ನಂತರ ಮುಂದೆರಡು ವರ್ಷ ಭೌತರಸಾಯನಶಾಸ್ತ್ರದ ಸಹಉಪನ್ಯಾಸಕನಾಗಿದ್ದನು. ಇಲ್ಲಿಂದ ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಗೆ ವರ್ಗಾವಣೆಗೊಂಡು, ಗಟ್ಟಿಂಜೆನ್ಗೆ ಹೋದನು. ಇಲ್ಲಿ ಇದರ ನಿರ್ದೇಶಕನಾಗಿದ್ದ ಕಾರ್ಲ್ ಫ್ರೆಡರಿಕ್ ಬಾನ್ ಹೋಫರ್, ಐಗೆನ್ಗೆ ಅತ್ಯುತ್ತಮ ಸಂಶೋಧನಾ ವಾತಾವರಣವನ್ನು ಕಲ್ಪಿಸಿಕೊಟ್ಟನು. ಇದು ಐಗೆನ್ ಜೀವ ಭೌತ ರಸಾಯನಶಾಸ್ತ್ರದಲ್ಲಿ ಪರಿಣಿತಿ ಗಳಿಸುವಂತಾಯಿತು. 1950ರಿಂದ 1953 ರವರೆಗೆ ಐಗೆನ್ ದ್ರಾವಣಗಳಲ್ಲಿ ಅಯಾನಿಕ ಪ್ರತಿಕ್ರಿಯೆಗಳ ಸಮಸ್ಯೆಯನ್ನು ಕುರಿತಾಗಿ ಅಧ್ಯಯನ ಪ್ರಾರಂಭಿಸಿದನು.ಇದಕ್ಕೆ ಸಹೋದ್ಯೋಗಿಗಳಾದ ಕೊನಾರ್ಡ್ ಟಾಮ್ ಹಾಗೂ ವಾಲ್ಟರ್ ಕುಟ್ರ್ಸ್ರ ಒತ್ತಾಸೆ ದಕ್ಕಿತು. ಬಹು ಶೀಘ್ರವಾಗಿ ಜರುಗುವ ರಾಸಾಯನಿಕ ಪ್ರತಿಕ್ರಿಯೆಗಳು ಅಧ್ಯಯನಕ್ಕೆ ದಕ್ಕುತ್ತಿರಲಿಲ್ಲ. ಐಗೆನ್ ಅಭಿವೃದ್ಧಿಗೊಳಿಸಿದ ತಂತ್ರಗಳು ಈ ಆಡಚಣೆಯನ್ನು ದೂರಗೊಳಿಸಿದವು. ಕ್ರಿಯೆಗಳ ಮಾಪನವನ್ನು ಅಳೆಯುವಲ್ಲಿ ತಂತ್ರಗಳ ಅಭಿವೃದ್ದಿಯಲ್ಲಿ ಐಗೆನ್ ನಿರತನಾಗಿ, ಅದ್ಭುತ ಯಶಸ್ಸನ್ನು ಕಂಡನು. ಈ ಯತ್ನದಲ್ಲಿ ಲಿಯೋ ಡೆ ಮೆಯರ್ನ ನೆರವು ದಕ್ಕಿತು. 1967ರಲ್ಲಿ ಐಗೆನ್, ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಯ ನಿರ್ದೇಶಕನಾದನು. ಹಿಮ ಸ್ಪಟಿಕಗಳಲ್ಲಿರುವ ಪೆÇ್ರೀಟಾನ್ಗಳ ಹಾಗೂ ವಾಹಕತ್ವದಲ್ಲಿನ ವೈರುಧ್ಯಗಳನ್ನು ವಿಜ್ಞಾನಿಗಳು ಗುರುತಿಸಿದ್ದರು. ಐಗೆನ್, ಡೆ ಮೆಯರ್ ಜೊತೆಗೂಡಿ ಇದಕ್ಕೆ ಕಾರಣವನ್ನು ವಿವರಿಸಿದನು. ಐಗೆನ್ ದೀರ್ಘ ರಾಸಾಯನಿಕ ಕ್ರಿಯೆಗಳಲ್ಲಿರುವ ಹಂತ, ಹಂತದ ಬದಲಾವಣೆಗಳನ್ನು ವಿವರಿಸುವಲ್ಲಿ ಯಶಸ್ವಿಯಾದನು. ಮುಂದೆ ಐಗೆನ್ನ ಆಸಕ್ತಿಗಳು ಜೀವಭೌತರಸಾಯನಶಾಸ್ತ್ರದತ್ತ ಹರಿದವು. ಕಿಣ್ವ ಹಾಗೂ ಲಿಪಿಡ್ ಪೆÇರೆಗಳ ಅಧ್ಯಯನ, ಕೇಂದ್ರ ನರವ್ಯೂಹದಲ್ಲಿ ಮಾಹಿತಿ ಸಂಗ್ರಹ ಹಾಗೂ ಸಂಸ್ಕರಣೆಗಳನ್ನು ಅರಿಯಲು ಐಗೆನ್ ಮುಂದಿನ ದಿನಗಳಲ್ಲಿ ಯತ್ನಿಸಿದನು. ಶೀಘ್ರ ರಾಸಾಯನಿಕ ಕ್ರಿಯೆಗಳ ಮಾಪನದ ವಿಧಾನಗಳ ಅಭಿವೃದ್ದಿಗಾಗಿ, ಐಗೆನ್ 1967ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ರೊನಾಲ್ಡ್, ಜಾರ್ಜ್ ರೆಫೋರ್ಡ್ ನೊರಿಷ್ (1897--) 1967
Ronald , George Wreyford Norish
ಇಂಗ್ಲೆಂಡ್-ರಸಾಯನಶಾಸ್ತ್ರ- ಅತಿವೇಗದ ರಾಸಾಯನಿಕ ಕ್ರಿಯೆಗಳನ್ನು ಕುರಿತಾಗಿ ನಡೆಸಿದ ಸಂಶೋಧನೆಗನ್ನು ನಡೆಸಿದಾತ.
ರೊನಾಲ್ಡ್, 9 ನವೆಂಬರ್ 1897ರಂದು ಕೇಂಬ್ರಿಜ್ನಲ್ಲಿ ಜನಿಸಿದನು. 1915ರಲ್ಲಿ ಕೇಂಬ್ರಿಜ್ನ ಎಮ್ಯಾನುಯೆಲ್ ಕಾಲ್ಭೆಜಿಗೆ ನೈಸರ್ಗಿಕ ವಿಜ್ಞಾನಗಳಲ್ಲಿ ಪದವಿ ಗಳಿಸಲು ಸೇರಿದನು. ಆದರೆ 1916ರಲ್ಲಿ ಅರ್ಧಕ್ಕೆ ಶಿಕ್ಷಣ ನಿಲ್ಲಿಸಿ, ತೋಪಿನ ದಳ ಸೇರಿ ಫ್ರಾನ್ಸ್’ಗೆ ವರ್ಗಾವಣೆಗೊಂಡನು. 1918ರಲ್ಲಿ ಯುದ್ದ ಖೈದಿಯಾಗಿ, ಜರ್ಮನಿ, ಪೆÇೀಲೆಂಡ್ನಲ್ಲಿ ಸೆರೆವಾಸದಲ್ಲಿದ್ದನು. 1919ರಲ್ಲಿ ಎಮ್ಯಾನುಯೆಲ್ ಕಾಲೇಜಿಗೆ ಮರಳಿದನು. ದ್ಯುತಿ ರಸಾಯನಶಾಸ್ತ್ರ, ಪ್ರತಿಕ್ರಿಯಾಗತಿಶಾಸ್ತ್ರ, ದಹನಶೀಲತೆ ಹಾಗೂ ಬಹ್ವಂಗೀಕರಣದಲ್ಲಿ (Polymerisation) ಸಂಶೋಧನೆ ನಡೆಸಿದನು. ಎರಡನೇ ಜಾಗತಿಕ ಯುದ್ದದ ಕಾಲದಲ್ಲಿ ರೊನಾಲ್ಡ್ನ ಸಂಶೋಧನೆಗೆ ಅಡಚಣೆಗಳುಂಟಾದವು. ಅಲ್ಪ ಮಿಡಿತದ ಚೈತನ್ಯ ಬಳಸಿ ರಾಸಾಯನಿಕ ಸಮತೋಲನ ತಪ್ಪಿಸಿದಾಗ ನಡೆಯುವ ಅತಿವೇಗದ ರಾಸಾಯನಿಕ ಕ್ರಿಯೆಗಳನ್ನು ಕುರಿತಾಗಿ ನಡೆಸಿದ ಸಂಶೋಧನೆಗಳಿಗಾಗಿ 1967ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಲಾರ್ಸ್, ಆನ್ಸೇಜರ್ 1968
Lars , Onsager
ನಾರ್ವೆ-ರಸಾಯನಶಾಸ್ತ್ರ
ಲಾರ್ಸ್ 27 ನವೆಂಬರ್ 1903 ರಂದು ಓಸ್ಲೋದಲ್ಲಿ ಜನಿಸಿದನು. ಈತನ ತಂದೆ ನಾರ್ವೆಯ ಉಚ್ಛನ್ಯಾಯಾಲಯದಲ್ಲಿ ವಕೀಲನಾಗಿದ್ದನು. ಇಪ್ಪತ್ತನೆ ವಯಸ್ಸಿನಲ್ಲಿ ನಾರ್ವೆಯ ಖ್ಯಾತ ಕಾಗದ ತಯಾರಿಕೋದ್ಯಮಿಯ ಮಗಳನ್ನು ಮದುವೆಯಾದನು. ಲಾರ್ಸ್ನ ಪ್ರಾಥಮಿಕ ಶಿಕ್ಷಣ ತಾಯಿ ಹಾಗೂ ಮನೆಪಾಠದ ಗುರುಗಳಿಂದಾಯಿತು. ಫ್ರೌಢಶಾಲಾ ಶಿಕ್ಷಣ ಮುಗಿಸುತ್ತಿದ್ದಂತೆಯೇ ಕಾಲೇಜಿಗೆ ಸೇರಿ 1925 ರಲ್ಲಿ ವಯಸ್ಸಿನಲ್ಲಿ ರಾಸಾಯನಿಕ ಇಂಜಿನಿಯರಿಂಗ್ ಪದವಿ ಗಳಿಸಿದನು. ಇದಾದ ನಂತರ ಝೂರಿಕ್ ಹಾಗೂ ಡೆನ್ಮಾರ್ಕ್ಗಳಿಗೆ ಭೇಟಿ ಇತ್ತನು. ಆ ಸಂದರ್ಭದಲ್ಲಿ ಡೆಬೈ ಹಾಗೂ ಹಕೆಲ್ರ ಪರಿಚಯವಾಯಿತು. 1928ರಲ್ಲಿ ಅಸಂಸಂಗಳ ಬಾಲ್ಟಿಮೋರ್ನ ಜಾನ್ಸ್ ಹಾ¥sóïಕಿನ್ಸ್ ವಿಶ್ವವಿದ್ಯಾಲಯಕ್ಕೆ ಹೋದನು. 1933ರಲ್ಲಿ ಯೇಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ವೇತನ ಪಡೆದು 1935ರಲ್ಲಿ ಡಾಕ್ಟರೇಟ್ ಗಳಿಸಿದನು. ಲಾರ್ಸ್ ಸಂಶೋಧನೆಗಳು ಲೋಹಗಳಲ್ಲಿ, ಮಹಾಪ್ರವಾಹಿಗಲಲ್ಲಿನ್ಸ್ ಕ್ರಮ-ಕ್ರಮಭಂಗದ ಸ್ಥಿತ್ಯಂತರ,ವೈದ್ಯುತ್ ವಾಹಕತೆ ಕುರಿತಾಗಿ ಸಾಗಿದವು. ಈ ನಿಟ್ಟಿನಲ್ಲಿ ಲಾರ್ಸ್ ನೀಡಿದ ಗಮನಾರ್ಹ ಕೊಡುಗೆಗಳಿಗಾಗಿ 1968ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಬಾರ್ಟನ್, ಸರ್ ಡೆರೆಕ್ ರಿಚರ್ಡ್ (1918--) 1969
Barton , Sir Derek (Herald Richard)
ಬ್ರಿಟನ್ -ಸಾವಯವ ರಸಾಯನ ಶಾಸ್ತ್ರ-ಸ್ಟೀರಿಯೋ ರಸಾಯನಶಾಸ್ತ್ರ ಹಾಗೂ ಸಾವಯವ ನೈಸರ್ಗಿಕ ಉತ್ಪನ್ನಗಳ ರಂಗದಲ್ಲಿ ಗಣನೀಯ ಸಾಧನೆ ಮಾಡಿದಾತ.
ಲಂಡನ್ನ ಇಂಪೀರಿಯಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದ ಬಾರ್ಟನ್ 20 ವರ್ಷಗಳ ಕಾಲ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದನು. 1985ರಲಿ ಟೆಕ್ಸಾಸ್ನ ಎಎಂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. 1950ರಲ್ಲಿ ಬಾರ್ಟನ್ ಕೆಲವು ಸಾವಯವ ಅಣುಗಳ ಗುಣಗಳ ಅವುಗಳ ರಾಚನಿಕತೆಯ ಮೇಲೆ ಅವಲಂಬಿಯೆಂದು ನಿರೂಪಿಸಿದನು. ಅಣುವೊಂದು ನಿರ್ದಿಷ್ಟ ಆಕಾರ ತಳೆಯಲು, ಅದು ಒಂದು ಇಂಗಾಲ-ಇಂಗಾಲ ಬಂಧದ ಮೇಲೆ ತಿರುಗುವುದು ಕಾರಣವೆಂದು ಸೂಚಿಸಿದನು. ಇಂತಹ ಅಧ್ಯಯನ ಈಗ ಅನುರೂಪತೆಯ ರಾಚನಿಕ ರಸಾಯನಶಾಸ್ತ್ರವಾಗಿದೆ. ಬಾರ್ಟನ್, ಫಿûನಾಲ್, ಸ್ಟೆರಾಯಿಡ್, ಪ್ರತಿ ಜೈವಿಕದಂತº ಹಲವಾರು ನೈಸರ್ಗಿಕ ರಾಸಾಯನಿಕಗಳ ಮೇರೆ ಕೆಲಸ ಮಾಡಿದನು. ಇದಕ್ಕಾಗಿ 1969ರಲ್ಲಿ ಓ.ಹೆಸೆಲ್ನೊಂದಿಗೆ ನೊಬೆಲ್ ಪ್ರಶಸ್ತಿ ಪಡೆದನು.
ಓಡ್, ಹ್ಯಾಸೆಲ್ (1897--) 1969
Odd , Hassel
ನಾರ್ವೆ-ರಸಾಯನಶಾಸ್ತ್ರ-ಅಣುಗಳ ಸಂರಚನೆ ನಿರ್ಧಾರದ ವಿಧಾನಗಳನ್ನು ರೂಪಿಸಿದಾತ.
ಓಡ್ನ ತಂದೆ ಓಸ್ಲೋ ಪಟ್ಟಣದಲ್ಲಿ ಸ್ತ್ರೀರೋಗ ತಜ್ಞನಾಗಿದ್ದನು. 17 ಮೇ 1897ರಂದು ಓಡ್ನ ಜನನವಾಯಿತು. 1920ರಲ್ಲಿ ಓಸ್ಲೋ ವಿಶ್ವವಿದ್ಯಾಲಯದಿಂದ ವಿಜ್ಞಾನದ ಪದª ಪಡೆದನು. 1922ರಲ್ಲಿ ಮ್ಯುನಿಕ್ನಲ್ಲಿ ¥sóÀüûಜನ್ಸ್ನ ಪ್ರಯೋಗಾಲಯದಲ್ಲಿ ಕೆಲಸ ಮಾಡಿದನು. ಇಲ್ಲಿರುವಾಗ ಸಾವಯವ ಬೆಳ್ಳಿ ಹ್ಯಾಲೈಡ್ಗಳ ಸಂವೇದೀಕರಣ ಕ್ರಿಯೆಯನ್ನು ಅಭ್ಯಸಿಸಿದನು. 1924ರಲ್ಲಿ ಬರ್ಲಿನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದನು. 1934ರಲ್ಲಿ ಓಸ್ಲೋದಲ್ಲಿ ಮೊದಲ ಬಾರಿಗೆ ಪ್ರಾರಂಭವಾದ ಭೌತರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥನಾದನು. ಓಡ್ನ ಆಸಕ್ತಿಗಳು ಸೈಕ್ಲೋ ಹೆಕ್ಸೇನ್ ಹಾಗೂ ಅದರ ಸಂಬಂಧಿಗಳ ಅದು ಸದಸ್ಯ ಉಂಗುರ ರಚನೆ ಅರಿಯುವಲ್ಲಿ ಕೇಂದ್ರೀಕೃತಗೊಂಡಿದ್ದವು. ಎರಡನೇ ಜಾಗತಿಕ ಯುದ್ದ ಪ್ರಾರಂಭವಾದಾಗ ನಾಝಿಗಳು ಓಡ್ನನ್ನು ಬಂಧಿಸಿದರು. 1944ರಲ್ಲಿ ಓಡ್ ಬಿಡುಗಡೆಗೊಂಡಾಗ, ಆತನ ಸಂಸ್ಥೆ ವಿನಾಶದ ಅಂಚಿನಲ್ಲಿದ್ದಿತು. 1950ರ ನಂತರ ಅಣುಗಳ ರಚನೆಯನ್ನು ಅರಿಯಲು ಹೊಸ ವಿಧಾನಗಳನ್ನು ರೂಪಿಸಿದನು. ಇದಕ್ಕಾಗಿ ಓಡ್ 1969ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಲೂಯಿ,ಫ್ರೆಡರಿಕ್ ಲೆಲಾಯಿರ್ (1906-1987) 1970
Luis , Federico Leloir
ಫ್ರಾನ್ಸ್-ರಸಾಯನಶಾಸ್ತ್ರ-ಚಯಾಪಚಯ (Metabolism) ಕುರಿತಾಗಿ ಸಂಶೋಧಿಸಿದಾತ.
ಲೂಯಿಯ ತಂದೆ, ತಾಯಿ ಅರ್ಜೈಂಟೈನಾ ಮೂಲದವರಾಗಿದ್ದು ಪ್ಯಾರಿಸ್ನಲ್ಲಿ ನೆಲೆಸಿದ್ದರು. ಇಲ್ಲಿಯೇ 6 ಸೆಪ್ಟೆಂಬರ್ 1906ರಂದು ಲೂಯಿಯ ಜನನವಾಯಿತು. ಇವರು ಲೂಯಿ 2 ವರ್ಷದವನಿರುವಾಗ , ಅರ್ಜೈಂಟೈನಾದ ಬ್ಯೂನಸ್ಏರಿಸ್ಗೆ ಬಂದು ನೆಲೆಸಿದರು. 1932ರಲ್ಲಿ ಬ್ಯೂನಸ್ಏರಿಸ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಗಳಿಸಿದ ಲೂಯಿ, ಬರ್ನಾಡೋ ಎ ಹೌಸೆಯ ಕೆಳಗೆ ವೃತ್ತಿ ಜೀವನ ಪ್ರಾರಂಭಿಸಿದನು. ಇಲ್ಲಿ ಅಡ್ರೆಲಿನ್ ಕಾರ್ಬೋಹೈಡ್ರೇಟ್ಗಳ ಚಯಾಪಚಯ (Metabolism) ಕುರಿತಾಗಿ ಅಧ್ಯಯನ ಪ್ರಾರಂಭಿಸಿದನು. 1936ರಲ್ಲಿ ಇಂಗ್ಲೆಂಡ್ಗೆ ತೆರಳಿ ಕೇಂಬ್ರಿಜ್ನ ಜೀವ ರಸಾಯನಶಾಸ್ತ್ರ ಪ್ರಯೋಗಾಲಯದಲ್ಲಿ ಕೆಲಸ ಮಾಡಿದನು. ಒಂದು ವರ್ಷದ ನಂತರ ಅರ್ಜೈಂಟೈನಾಕ್ಕೆ ಮರಳಿದ ಲೂಯಿ, ಜೆ.ಎಂ.ಮುನೋ ಜೊತೆಗೆ ಯಕೃತ್ತಿನಲ್ಲಿ ಸ್ನಿಗ್ಥ ಆಮ್ಲಗಳು ಉತ್ಕರ್ಷಗೊಳ್ಳುವುದನ್ನು (Oxidisation) ಅರಿಯುವತ್ತ ಗಮನ ಹರಿಸಿದನು. 1944ರಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಅಂಗಕ್ರಿಯಾಶಾಸ್ತ್ರಜ್ಞನಾಗಿದ್ದ ಕಾರ್ಲ್ ಎph .ಕೊರಿಯೊಂದಿಗೆ ಕೆಲಸ ಮಾಡಲು ಅಸಂಸಂದ ಸೇಂಟ್ ಲೂಯಿಗೆ ಹೋದನು. ಇಲ್ಲಿ ಹಾಗೂ ನ್ಯೂಯಾರ್ಕ್ನಲ್ಲಿ ವೈದ್ಯ ಹಾಗೂ ಶಸ್ತ್ರಚಿಕಿತ್ಸಕರೊಂದಿಗೆ ಕೆಲಸ ಮಾಡಿದನು. ಲೂಯಿ ಹಾಗೂ ಸಂಗಡಿಗರು ಇಲ್ಲಿ ಗ್ಯಾಲಕ್ಟೋಸ್ನ ಚಯಾಪಚಯದ ಮೇಲೆ ನಡೆಸಿದ ಅಧ್ಯಯನದ ಫಲವಾಗಿ ಗ್ಲುಕೋಸ್-1 , 6-ಡೈಫಾಸ್ಫೇಟ್, ಯುರಿಡಿನ್ ಡಯಾ ಫಾಸ್ಪೆಟ್ ಗ್ಲುಕೋಸ್ಗಳನ್ನು ಬೇರ್ಪಡಿಸುವುದು ಸಾಧ್ಯವಾಯಿತು. ಮುಂದೆ, ಲೂಯಿ ಹಾಗೂ ಎನ್ರಿಕೋ fyaaಬಿಬ್ 1953ರಲ್ಲಿ ಯುರಿಡಿನ್ ಡಯಾ ಫಾಸ್ಫೇಟ್, ಟ್ರೆಹಲೋರ್ಸ್ ಹಾಗೂ ಸುಕ್ರೋಸ್ ಸಂಶ್ಲೇಷಣೆಯಲ್ಲಿ ಗ್ಲುಕೋಸ್ನ ದಾನಿಯಂತೆ ವರ್ತಿಸುವುದನ್ನು ತೋರಿಸಿದರು. ಲೂಯಿ ಹಾಗೂ ಸಂಗಡಿಗರಿಂದ ಹಲವಾರು ಗ್ಲುಕೋಸ್ಗಳ ಬೇರ್ಪಡಿಕೆ, ಸಂಶ್ಲೇಷಣೆ ಸಾಧ್ಯವಾಯಿತು. ಲೂಯಿ ಮತ್ತು ನಿಕೊಲಾಸ್ ಬೆಹ್ರನ್ಸ್ನಿಂದ, ಪ್ರಾಣಿಗಳ ಅಂಗಾಂಶದಲ್ಲಿ ಗ್ಲುಕೋಸ್ ವರ್ಗಾವಣೆಯ ಕ್ರಿಯೆ ವಿವರಿಸಲ್ಪಟ್ಟಿತು. ಜೀವ ರಸಾಯನಶಾಸ್ತ್ರದಲ್ಲಿ ಲೂಯಿ ನೀಡಿದ ಕೊಡುಗೆಗಳಿಗಾಗಿ 1970ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು.