ಆಲ್ವರ್ಟ್, ಕ್ಲೌಡ್ –(1899--) 1974
Albert, Claude
ಬೆಲ್ಜಿಯಂ-ವೈದ್ಯಕೀಯ-ಕ್ಯಾನ್ಸರ್ ಕುರಿತಾಗಿ ಆಳ ಸಂಶೋಧನೆ ನಡೆಸಿದಾತ.
ಆಲ್ಪ್ಸ್ ಪರ್ವತ ಶ್ರೇಣಿಯ ತಪ್ಪಲಿನ ಲಾಂಗಲಿಯರ್ ಹಳ್ಳಿಯಲ್ಲಿ ಆಲ್ಬರ್ಟ್ನ ಜನನವಾಯಿತು. ಇದು ¥sóÁ್ರನ್ಸ್ ಮತ್ತು ಕೆರೋಲೇಜಿಮನ್ ದೊರೆಗಳ ಅಳ್ವಿಕೆಗೆ ಒಳಪಟ್ಟು ಕೋಟೆಯಿಂದ ಸುತ್ತುವರಿದಿತ್ತು. ಈ ಪಟ್ಟಣ ಬಹು ವಿರಳ ಜನವಸತಿ ಹೊಂದಿದ್ದಿತು. ಒಟ್ಟು 40 ಜನ ವಿದ್ಯಾರ್ಥಿಗಳಿದ್ದ ಒಂಟಿ ಕೊಠಡಿಯ ಶಾಲೆಯಲ್ಲಿ ಪ್ರಾಥಮಿಕ ಕ್ಲೌಡ್ನ ಶಿಕ್ಷಣ ಜರುಗಿತು. ಇಲ್ಲಿ ಎಲ್ಲಾ ವಿಷಯಗಳಿಗೂ , ಎಲ್ಲಾ ತರಗತಿಗಳಿಗೂ ಒಂದಿಬ್ಬರು ಶಿಕ್ಷಕರಿದ್ದರು. ಈ ಹಳ್ಳಿಯಲ್ಲಿ ರಸ್ತೆ, ನೀರು, ವಿದ್ಯುತ್ನಂತಹ ಯಾವ ಆಧುನಿಕ ನಾಗರಿಕ ಸೌಲಭ್ಯಗಳೂ ಲಭ್ಯವಿರಲಿಲ್ಲ. ಮೊದಲ ಜಾಗತಿಕ ಯುದ್ದದ ಸಮಯದಲ್ಲಿ ತೀರಾ ಕಗ್ಗತ್ತಲಿನ ರಾತ್ರಿಗಳಲ್ಲಿ ಆಗಾಧವಾದ ಅಮವಾಸ್ಯೆಯ ಆಕಾಶವನ್ನು ದಿಟ್ಟಿಸುತ್ತಾ ಆಲ್ಬರ್ಟ್ನ ಹರಯ ಪ್ರಾರಂಭವಾಯಿತು. ಆಲ್ಬರ್ಟ್ ಜನಿಸಿದಾಗ ಆತನ ತಂದೆಗೆ 43 ವರ್ಷ, ತಾಯಿ 45 ವರ್ಷದವರಾಗಿದ್ದರು. ಆಲ್ಬರ್ಟ್ ಏಳು ವರ್ಷದವನಿರುವಾಗ ತಾಯಿಯನ್ನು ಕಳೆದುಕೊಂಡನು. ಈತನ ಹಿರಿಯ ಸಹೋದರರು ಆಗ ಪ್ರಾಢಾಶಾಲಾ ಮಟ್ಟದಲ್ಲಿದ್ದರು. ಇವರು ಪಕ್ಕದ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದು ಆಲ್ಬರ್ಡ್ ಸಣ್ಣವನೆಂದು ಹಳ್ಳಿಯಲ್ಲೇ ಇರುತ್ತಿದ್ದನು. ಆರ್ಥಿಕ ಸಂಕಷ್ಟದಿಂದ ಪಾರಾಗಲು ಆಲ್ಬರ್ಟ್ ಕುಟುಂಬ ¥sóÁ್ರನ್ಸ್ನ ಗಡಿಯಲ್ಲಿದ್ದ ಉಕ್ಕಿನ ಕಾರ್ಖಾನೆ ಹೊಂದಿದ ಅಥಸ್ಗೆ ವಲಸೆ ಹೋಯಿತು. ಇಲ್ಲಿ ಅಣ್ಣಂದಿರು ಓದುತ್ತಿದ್ದ ವಿಜ್ಞಾನದ ಪುಸ್ತಕದಲ್ಲಿನ ಸರಳ ಚಿತ್ರಗಳನ್ನು ನೋಡಿ, ಅವುಗಳನ್ನು ಕುರಿತಾಗಿ ಆಲ್ಬರ್ಟ್ ತನ್ನದೇ ಆದ ಭಾವ ಪ್ರಪಂಚವನ್ನು ವಿಜ್ಞಾನದ ಬಗೆಗೆ ಸೃಜಿಸಿಕೊಂಡನು. ಆಲ್ಬರ್ಟ್ ಹದಿಮೂರನೇ ವಯಸ್ಸಿನಲ್ಲಿ ಮಿದುಳಿನಲ್ಲಿ ಹುಣ್ಣಾಗಿ ಪಾಶ್ರ್ವವಾಯುವಿಗೆ ತುತ್ತಾಗಿದ್ದ ಚಿಕ್ಕಪ್ಪನ ಸಹಾಯಕ್ಕಾಗಿ ಲಾಂಗ್ಲಿಯರ್ಗೆ ಮರಳಿದನು. ಈತನಿಗೆ ಚಿಕಿತ್ಸೆ ನೀಡಲು ಬರುತ್ತಿದ್ದ ವೈದ್ಯನೊಂದಿಗೆ ಆಗಾಗ್ಗೆ ನಡೆಸುತ್ತಿದ್ದ ಸಂವಾದಗಳಿಂದ ಜೀವಶಾಸ್ತ್ರದ ಬಗೆಗೆ ಕುತೂಹಲ ಮೂಡಿತು. ಮುಂದೆ ಯೂನಿವರ್ಸಿಟಿ ಡೆ ಲೀಗ್ ನಿಂದ 1928ರಲ್ಲಿ ಆಲ್ಬರ್ಟ್ ವೈದ್ಯಕೀಯ ಪದವಿ ಗಳಿಸಿದನು. 1928-29ರಲ್ಲಿ ಬರ್ಲಿನ್ನ ಕ್ರೆಬ್ಸ್ಪೆÇೀರ್ಷಿಂಗ್ ಸಂಸ್ಥೆ ಹಾಗೂ ರಹ್ಲೆಮ್ನ ಕೈಸೆರ್ ವಿಲ್ ಹೆಲ್ಮ್ ಸಂಸ್ಥೆಯಲ್ಲಿ ಆಲ್ಬರ್ಟ್ ಫಿûಷರ್ ಕೆಳಗೆ ಅಂಗಾಂಶ ಕಸಿ ಕಲಿತನು . 1929ರಲ್ಲಿ ರಾಕ್ ಫೆಲರ್ ಸಂಸ್ಥೆ ಸೇರಿದನು ಇದು ಈಗ ರಾಕ್ಫೆಲರ್ ವಿಶ್ವವಿದ್ಯಾಲಯವೆಂದು ಹೆಸರಾಗಿದೆ. ಇಲ್ಲಿ ಕ್ಲೌಡ್ ಕ್ಯಾನ್ಸರ್ ಹಾಗೂ ಜೀವಕೋಶ ಮಟ್ಟದ ಸಂಶೋಧನೆಗಳನ್ನು ನಡೆಸಿದನು. ಕ್ಲೌಡ್ ಬೆಲ್ಜಿಯಂನ ಜೂಲ್ಸ್ ಬಾರ್ಡೆಟ್ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ನಿರ್ದೇಶಕನಾಗಿ ಸೇವೆ ಸಲ್ಲಿಸಿದನು. ಬೆಲ್ಜಿಯಂನ ಲೌವೇನ್-ಲಾ-ನ್ಯುವೆಯ ಕ್ಯಾಥೊಲಿಕ್ ಡೆ ಲೌವೇನ್ ವಿಶ್ವವಿದ್ಯಾಲಯದ ‘ಲ್ಯಾಬೋರೇಟರಿ ಡೆ ಬಯೋಲಜಿ ಸೆಲ್ಲ್ಯುಲೇರ್ ಎಟ್ ಕ್ಯಾನ್ಸರೋಲಜಿ’ ಸಂಸ್ಥೆಯಲ್ಲಿ ನಡೆಸಿದ ಸಂಶೋಧನೆಗಳಿಗಾಗಿ ಕ್ಲೌಡ್ 1975ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಕ್ಲೌಡ್ 22 ಮೇ 1983ರಲ್ಲಿ ಮೃತನಾದನು.
ಬಾಲ್ಟಿಮೋರ್, ಡೇವಿಡ್ (1938--) 1975
Baltiore , David
ಅಸಂಸಂ-ಅಣ್ವಯಿಕ ಜೀವಶಾಸ್ತ್ರ ( Molecular Biology)
ಮನಶಾಸ್ತ್ರಜ್ಞೆಯಾಗಿದ್ದ ತಾಯಿಯಿಂದ ಬಾಲಕನಾಗಿದ್ದಾಗಲೇ ಪ್ರೇರಿತನಾದ ಡೇವಿಡ್ ಅಂಗರಚನಾಶಾಸ್ತ್ರದಲ್ಲಿ ಅನನ್ಯ ಆಸಕ್ತಿ ತಳೆದಿದ್ದನು. ಆದರೂ ಡೇವಿಡ್ ಮೊದಲಿಗೆ ಸ್ಮಾರ್ತ್ಮೋರ್ನಲ್ಲೂ, ನಂತರ ಎಂಐಟಿ ಹಾಗೂ ಅಂತಿಮವಾಗಿ ರಾಕ್ಫೆಲರ್ ವಿಶ್ವವಿದ್ಯಾಲಯದಲ್ಲಿ ರಸಾಯನ ಶಾಸ್ತ್ರವನ್ನು ಅಭ್ಯಸಿಸಿದನು. ನಂತರ ಡೇವಿಡ್ ವೈರಸ್ ಕುರಿತಾದ ಅಧ್ಯಯನದತ್ತ ಮುಖಮಾಡಿದನು. 1972ರಲ್ಲಿ ಎಮ್ಐಟಿಯಲ್ಲಿ ಪ್ರಾಧ್ಯಾಪಕನಾಗಿ ಆನಂತರ ಕೇಂಬ್ರಿಜ್ ವೈಟ್ ಹೆಡ್ ಸಂಸ್ಥೆಯ ನಿರ್ದೇಶಕನಾಗಿ ಸೇವೆ ಸಲ್ಲಿಸಿದನು. 1968ರಲ್ಲಿ ಡೇವಿಡ್ ಪೊಲಿಯೋ ವೈರಸ್ ಹೇಗೆ ಮರುಪ್ರತಿಗೊಳ್ಳುವುದೆಂದು ತೋರಿಸಿದನಲ್ಲದೆ, ಈ ವೈರಸ್ನ ಅರ್ಎನ್ಎ. ಹಾಗೂ ಪ್ರೋಟೀನ್ ಕವಚ ರೂಪಗೊಂಡಿರುವ ಬಗೆಯನ್ನು ಅಂಶಿಕವಾಗಿ ವಿವರಿಸಿದನು. ಡೇವಿಡ್ 1970ರಲ್ಲಿ ಅಣ್ವಯಿಕ ಜೀವ ಶಾಸ್ತ್ರಕ್ಕೆ ‘ಕೇಂದ್ರತತ್ತ್ವ’ ವಾಗುವಂತಹ ಸಂಶೋಧನೆಯನ್ನು ಹೊರಗೆಡಹಿದನು. ಡೇವಿಡ್ ಈ ಸಂಶೋಧನೆಯ ತಿರಳಿನಂತೆ ಅರ್.ಎನ್.ಎ.-ಡಿಎನ್ಎ ಆಗಿ ಪ್ರತಿರೂಪೀಕರಣವಾಗುತ್ತದೆ (Transcription).. ಕಿಣ್ವಗಳಲ್ಲಿ ಇದು ಜರುಗುತ್ತದೆ. ಈ ಸಂಶೋಧೆನೆಗೆ ಮೊದಲು ಅರ್ಎನ್ಎ ಡಿಎನ್ಎ ಆಗಿ ಪರಿವರ್ತನೆಯಾಗುವ ಸಾಧ್ಯೆತೆ0iÉುೀ ಇಲ್ಲವೆಂದು ಭಾವಿಸಲಾಗಿದ್ದಿತು. ಡೇವಿಡ್ನ ಈ ಸಂಶೋಧನೆಯ ಮೇಲೆ ಕ್ರಿಕ್ ನಡೆಸಿದ ವಿಸ್ತೃತ ಪ್ರಯೋಗಗಳಿಂದ ಡಿಎನ್ಎ. ಅರ್ಎನ್ಎ ,ಪೆÇ್ರೀಟಿನ್ ಎನ್ನುವ ಹೂಟ (Scheme) ಸ್ಪಷ್ಟವಾಯಿತು. ಡಿಎನ್ಎ, ಅರ್ಎನ್ಎ ಆಗಿ ಪರಿವರ್ತನೆ ಆದರೆ, ಡಿಎನ್ಎ ಪ್ರೊಟೀನ್ ಆಗುವುದಾಗಿ ಖಚಿತಗೊಂಡಿತು. ಎಚ್.ಎಂ.ಟೆಮಿನ್ ಇದೇ ಕಿಣ್ವದ ಈ ಪರಿವರ್ತನೆಯನ್ನು ಸ್ವತಂತ್ರವಾಗಿ ಸಂಶೋಧಿಸಿದ್ದನು. ಆದ್ದರಿಂದ 1975ರಲ್ಲಿ ಡೇವಿಡ್ ಹಾಗೂ ಟೆಮಿನ್ಗೆ ಹಂಚಿದಂತೆ ನೊಬೆಲ್ ಪುರಸ್ಕಾರ ದಕ್ಕಿತು. 1990ರಲ್ಲಿ ಡೇವಿಡ್ ರಾಕ್ಫೆಲರ್ ವಿಶ್ವವಿದ್ಯಾಲಯದ ಅಧ್ಯಕ್ಷವಾಗಿ, ಸಂಶೋಧನೆ , ಅನುದಾನ ಅರ್ಜನೆಗಳಲ್ಲಿ ತೊಡಗಿಸಿಕೊಂಡನು. ಡೇವಿಡ್ ಸಹ ಸಂಶೋಧಕನೊಬ್ಬನು 1986ರಲ್ಲಿ ಲೇಖನವೊಂದನ್ನು ಬರೆದು ‘ಸೆಲ್’ ಪತ್ರಿಕೆಯಲ್ಲಿ ಪ್ರಕಟಿಸಿದ್ದನು. ‘ನ್ಯಾಷನಲ್ ಇನ್ಸ್ಟಿಟೂಟ್ ಆಫ್ ಹೆಲ್ತ್’ನವರು 1990ರಲ್ಲಿ ಹೊರಡಿಸಿದ ವರದಿಯೊಂದರಲ್ಲಿ ಡೇವಿಡ್ನ ಸಹಸಂಶೋಧಕ ‘ಸೆಲ್’ನಲ್ಲಿ ಪ್ರಕಟಿಸಿದ ಲೇಖನಗಳಲ್ಲಿ ‘ಹುಸಿ ಹಾಗೂ ಹೆಣೆದ ದತ್ತಾಂಶಗಳನ್ನು ಬಳಸಿದ್ದನೆಂದು ಆಪಾದಿಸಲಾಗಿದ್ದಿತು. ಆಗ ಡೇವಿಡ್ ತನ್ನ ಸºಸಂಶೋಧಕನ ರಕ್ಷಣೆಗೆ ನಿಂತನು. ಆದರೆ ಕೆಲದಿನಗಳಲ್ಲೇ ತಾನು ಆರೋಪಿಯ ಪರ ಸೇರಿರುವ ಅಂಶ ಮನದಟ್ಟಾಗಿ ಡೇವಿಡ್ ಕ್ಷಮೆ ಯಾಚಿಸಬೇಕಾಯಿತಲ್ಲದೆ’ ಸಂಶೋಧನೆಯಲ್ಲಿ ವಿಜ್ಞಾನಿಯ, ನೈತಿಕತೆಯ ಪಾತ್ರ’ ಏನಿರಬೇಕೆಂಬ ಮಹತ್ತಾದ ಪ್ರಶ್ನೆಗೆ ಉತ್ತರವೀಯಬೇಕಾಯಿತು. ಇವೆಲ್ಲ ಒತ್ತಡಗಳ ಹಿನ್ನೆಲೆಯಲ್ಲಿ ಡೇವಿಡ್ 1991ರಲ್ಲಿ ಅಧ್ಯಕ್ಷ ಪದವಿಗೆ ರಾಜಿನಾಮೆ ನೀಡಿದನಾದರೂ ತನ್ನ ಸಂಶೋಧನೆಯನ್ನು ಮುಂದುವರೆಸಿದನು. ಅಸಂಸಂದ ಗುಪ್ತಚಾರ ದಳ ಹುಸಿ ಹಾಗೂ ಹೆಣೆದ ದತ್ತಾಂಶಗಳನ್ನೊಳಗೊಂಡ ಲೇಖನ, ವಿಜ್ಞಾನಿ ತಂಡ, ಸಂಸ್ಥಾನಗಳ ಮೇಲೆ ತನಿಖೆ ನಡೆಸಿತಾದರೂ, ವಿಷಯ ವೈಜ್ಞಾನಿಕವೂ, ಜಟಿಲವೂ, ಆದುದಎಂದ ತಪ್ಪಿಸ್ಥರು ಇವರೇ ತಪ್ಪು ಮಾಡಿದ್ದು ಹೀಗೆ ಮಾಡಿದ್ದು ಎಂದು ಪುರಾವೆ ಒದಗಿಸುವಲ್ಲಿ ವಿಫಲವಾಯಿತು.
ಬರೂಖ್ ,ಎಸ್ ಬ್ಲಂಬರ್ಗ್ (1925--) 1976
Baruch , Samuel Blumberg
ಅಸಂಸಂ-ವೈದ್ಯಕೀಯ-ಹೆಪಟೈಟಿಸ್-ಬಿ ಪ್ರತಿಜನಕವನ್ನು ಅನಾವರಣಗೊಳಿಸಿದಾತ.
ಯುರೋಪಿನ ಯಹೂದಿ ಮೂಲದ ಹತ್ತೊಂಬತ್ತನೇ ಶತಮಾನದಲ್ಲಿ ಅಸಂಸಂಗಳಿಗೆ ವಲಸೆ ¨ಂದಿದ್ದ ಕುಟುಂಬದಲ್ಲಿ ಬ್ಲಂಬರ್ಗ್ ಜನಿಸಿದನು. ಪ್ರಾಥಮಿಕ ಶಾಲೆಯಲ್ಲಿರುವಾಗಲೇ ತನ್ನ ಮಾತೃ ಭಾಷೆಯಾದ ಹೀಬ್ರೂವಿನಲ್ಲೇ ಹೊಸ ಒಡಂಬಡಿಕೆಯನ್ನು ಮೂಲದಲ್ಲಿಯೇ ಓದಿದನು. 1943ರಲ್ಲಿ ಅಸಂಸಂ ನೌಕಾಪಡೆ ಸೇರಿದನು. 1947ರಲ್ಲಿ ಕೊಲಂಬಿಯ ವಿಶ್ವವಿದ್ಯಾಲಯದ ಕಾಲೇಜ್ ಆ¥sóï ಫಿಜಿಷಿಯನ್ ಅಂಡ್ ಸರ್ಜನ್ಸ್ ಸೇರಿ ವೈದ್ಯಕೀಯ ಶಿಕ್ಷಣ ಪಡೆದನು. ಪದವಿಯ ಮೂರು ಹಾಗೂ ಅಂತಿಮ ನಾಲ್ಕನೇ ವರ್ಷದಲ್ಲಿ, ಪರೋಪಜೀವಿಶಾಸ್ತ್ರಜ್ಞನಾಗಿದ್ದ ಹೆರಾಲ್ಡ್ ಬ್ರಾನ್, ಬ್ಲಂಬರ್ಗ್ ಹಾಗೂ ಇತರ ವೈದ್ಯಕೀಯ ವಿದ್ಯಾರ್ಥಿಗಳನ್ನು ಕ್ಷೇತ್ರಾಧ್ಯಯನಕ್ಕಾಗಿ ಸುರಿನಾಂಗೆ ನಿಯೋಜಿಸಿದನು. ಸುರಿನಾಂನಲ್ಲಿ ನದಿಯ ಮೂಲಕ ಮಾತ್ರ ಪ್ರವೇಶವಿರುವ ಗಣಿಗಾರಿಕೆಯಿಂದ ಕ್ರಿಯಾಶೀಲವಾಗಿದ್ದ ಮೊಯಂಗೋ ಪಟ್ಟಣಕ್ಕೆ ಬ್ಲಂಬರ್ಗ್ ಹಾಗೂ ಸ್ನೇಹಿತರನ್ನು ನಿಯೋಜಿಸಲಾಯಿತು,. ಇಲ್ಲಿ ಗಣಿಗಳಲ್ಲಿ ಕೆಲಸ ಮಾಡಲು ಜಗತ್ತಿನ ನಾನಾ ಭಾಗಗಳಿಂದ ಕೂಲಿ ಕಾರ್ಮಿಕರನ್ನು ತರಲಾಗಿದ್ದಿತು. ಭಾರತ, ಬ್ರೆಜಿಲ್, ಚೀನ, ಆಫ್ರಿಕಾ ಜಪಾನ್, ಯಹೂದಿ, ಯುರೋಪ್ ಮೂಲದ ಕೂಲಿ ಕಾರ್ಮಿಕರಿಂದ ಈ ಪಟ್ಟಣ ಗಿಜಿಗುಡುತ್ತಿದ್ದಿತು. ಈ ವೈವಿಧ್ಯಮಯ ದೇಶ, ಜನಾಂಗಗಳ ಕಾರ್ಮಿಕರು ರೋಗಗಳಿಗೆ ತುತ್ತಾಗುತ್ತಿದ್ದ, ಪ್ರತಿಕ್ರಿಯಿಸುತ್ತಿದ್ದ ರೀತಿ ವೈಶಿಷ್ಟ್ಯಮಯವಾಗಿದ್ದವು. ಆನೆ ಕಾಲು ರೋಗಕ್ಕೆ ಈ ಜನರಲ್ಲಿನ ವೈವಿಧ್ಯಮಯ ರೋಗರೋಧತ್ವವನ್ನು (Immunity) ಕುರಿತು ಬ್ಲಂಬರ್ಗ್ ಲೇಖನ ಪ್ರಕಟಿಸಿದನು. ಮುಂದೆ ರೋಗನಿರೋಧತ್ವದಲ್ಲಿ ಅನುವಂಶಿಕತೆಯನ್ನು ಕುರಿತಾದ ಅಧ್ಯಯನಕ್ಕೆ ಇದು ಪ್ರೇರಣೆ ನೀಡಿತು. 1951ರಿಂದ 1953ರವರೆಗೆ ಲೋವರ್ ನ್ಯೂಯಾರ್ಕ್ನ ಬೆಲ್ಲೆವ್ಯೂ ಆಸ್ಪತ್ರೆಯಲ್ಲಿ ಬ್ಲಂಬರ್ಗ್ ಕೆಲಸ ಮಾಡಿದನು. ಇಲ್ಲಿ ಬೇರೂರಿದ (Chronicle) ರೋಗಗಳಿಗೆ ತುತ್ತಾದ, ದುರ್ಬಲ ವರ್ಗದವರ ಬದುಕು ಬವಣೆ ಕಂಡು ವೈದ್ಯಕೀಯ ಸಂಶೋಧನೆ ಮತ್ತು ಸೇವೆಯ ಮಹತ್ವ ಅರಿತನು. 1957ರಲ್ಲಿ ಆಫ್ರಿಕಾ ಖಂಡದ ನೈಜೀರಿಯಾಕ್ಕೆ ಸಂಶೋಧನಾಕಾಂಕ್ಷಿಯಾಗಿ ಬ್ಲಂಬರ್ಗ್ ಹೋದನು. ಆಕ್ಸ್¥sóÀರ್ಡ್ ವಿಶ್ವವಿದ್ಯಾಲಯದಿಂದ ಬಂದಿದ್ದ ಆಂಥೋನಿ.ಸಿ.ಆಲಿಸನ್ ಬಹುರೂಪಾಂತರತೆ (Polymorphism) ತತ್ತ್ವವನ್ನು ವಿವರಿಸಿದನು. ಇದನ್ನು ಸಂಪೂರ್ಣವಾಗಿ ಅರಿಯಲು ಬ್ಲಂಬರ್ಗ್ ನೈಜೀರಿಯಾದಲ್ಲಿ ಹಲವಾರು ಬುಡಕಟ್ಟುಗಳ, ಸಾಕು ಪ್ರಾಣಿಗಳ ರಕ್ತದ ರಸಿಕೆ (Serum) ಸಂಗ್ರಹಿಸಿದನು. ರಕ್ತದ ಹಿಮೋಗ್ಲೋಬಿನ್ ಮತ್ತು ಹಾಲಿನ ರಸಿಕ ಪೆÇ್ರೀಟೀನ್ಗಳ ಬಹುರೂಪಾಂತರತೆ ಬಗೆಗೆ ಅಧ್ಯಯನ ನಡೆಸಿದನು. ಇದರ ಫಲವಾಗಿ ಹಲವಾರು ಹೊಸ ಬಹುರೂಪಾಂತರತೆಯ ಸಾಧ್ಯತೆಗಳೂ, ಹೆಪಟೈಟಿಸ್-ಬಿ ವೈರಸ್ ಅಸ್ತಿತ್ವವು ತಿಳಿದು ಬಂದವು. ಮುಂದೆ ಥಾಮಸ್ ಲಂಡನ್ ಸಹಯೋಗದಲ್ಲಿ ಬ್ಲಂಬರ್ಗ್ ಹೆಪಟೈಟಿಸ್-ಬಿಗೆ ಪ್ರತಿಜನಕವನ್ನು (Antigen) ಕಂಡು ಹಿಡಿದನು. ಈ ಸಾಧನೆಗಳಿಗಾಗಿ ಬ್ಲಂಬರ್ಗ್ 1976ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಅ್ಯಂಡ್ರೂ ,ವಿ. ಷ್ಕಾಲಿ (1926--) 1977
Andrew , Victor Schally
ಪೋಲೆಂಡ್-ವೈದ್ಯಕೀಯ-ಮೆದುಳಿನಲ್ಲಿ ಪೆಪ್ಟೈಡ್ ಚೋದನಿಕೆಯ ಉತ್ಪನ್ನವನ್ನು ಅನಾವರಣಗೊಳಿಸಿದಾತ
ಆ್ಯಂಡ್ರೂನ ತಂದೆ ಸೈನಿಕನಾಗಿದ್ದು ಹಲವಾರು ಯುದ್ದಗಳಲ್ಲಿ ಭಾಗವಹಿಸಿದ್ದನು 30 ನವೆಂಬರ್ 1926ರಲ್ಲಿ ಆ್ಯಂಡ್ರೂನ ಜನನವಾಯಿತು. ಎರಡನೇ ಜಾಗತಿಕ ಯುದ್ದದಲ್ಲಿ ಪೆÇೀಲೆಂಡ್ ಹಿಟ್ಲರ್ನ ವಶವಾದಾಗ, ಬಾಲಕನಾಗಿದ್ದ ಅ್ಯಂಡ್ರೂ ಯಹೂದಿಗಳ ಭಾರಿ ಮಾರಣ ಹೋಮವನ್ನು ಕೇಳಿ, ಕಂಡು ನಡುಗಿದನು. ಯುದ್ದದ ನಂತರ ಇಟಲಿ, ಫ್ರಾನ್ಸ್ ಇಂಗ್ಲೆಂಡ್ ಮೂಲಕ ಸ್ಕಾಟ್ಲ್ಯಾಂಡ್ಗೆ ಹೋಗಿ ನೆಲೆಸಿದನು. 1949ರಲ್ಲಿ ಲಂಡನ್ನಲ್ಲಿರುವ ರಾಷ್ಟ್ರೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಸೇರಿದನು. ಇಲ್ಲಿ ಹಲವಾರು ಜನ ಖ್ಯಾತ ಹಾಗೂ ನೊಬೆಲ್ ಪ್ರಶಸ್ತಿ ವಿಜೇತರ ಕೆಳಗೆ ಕೆಲಸ ಮಾಡುವ ಅವಕಾಶ ದಕ್ಕಿತು. 1952ರಲ್ಲಿ ಕೆನಡಾದ ಮಾಂಟ್ರಿಯೆಲ್ನ ಮೆಕ್ಗಿಲ್ ವಿಶ್ವವಿದ್ಯಾಲಯದಲ್ಲಿ ಆಡ್ರೆನಲ್ ಜೋದನಿಕೆಯ ಪರಿಣಾಮಗಳ ಅಧ್ಯಯನ ಸಾಗಿಸಿದನು. ಈ ಮೂಲಕವಾಗಿ ಮೆದುಳಿನ ಕ್ರಿಯಾಶೀಲತೆ ಹಾಗೂ ಅಂತಸ್ರಾವಿ ಚೋದನಿಕೆಗಳ ಬಗೆಗೆ ಆಸಕ್ತಿ ಮೂಡಿತು. ಈ.ಡಬ್ಲ್ಯೂ.ಹ್ಯಾರಿಸ್ ಪಿಟ್ಯುಟರಿ ಗ್ರಂಥಿಯ ಕ್ರಿಯೆಯನ್ನು ನಿಯಂತ್ರಿಸುವ ಹೈಪೆರ್ಧ್ಯಲಾಮಿಕ್ ಚೋದನಿಕೆಗಳನ್ನು (Hormone) ಕುರಿತಾಗಿ ಮುನ್ನುಡಿದಿದ್ದನು. 1955ರಲ್ಲಿ ಆ್ಯಂಡ್ರ್ಯೂ ಎಂ.ಸಫಾನ್ ಸಹಯೋಗದಲ್ಲಿ ಪ್ರಯೋಗಗಳಿಂದ ಇದು ನಿಜವೆಂದು ತೋರಿಸಿದನು. 1962ರಲ್ಲಿ ಅಸಂಸಂಗಳಿಗೆ ಹೋಗಿ ಅಲ್ಲಿಯ ನಾಗರಿಕನಾದನು. ಇದೇ ವರ್ಷ ನ್ಯೂ ಆರ್ಲಿಯನ್ಸ್ ವಿ ಎ ಆಸ್ಪತ್ರೆಯ ಎಂಡೋಕ್ರೈನ್ ಹಾಗೂ ಪಾಲಿ ಪೆಪ್ಪೈಡ್ ಪ್ರಯೋಗಾಲಯದ ಮುಖ್ಯಸ್ಥನಾದನು. ಇಲ್ಲಿರುವಾಗ ಮಾನವನ ಪರಿಪೂರ್ಣ ವಿಕಸನಕ್ಕೆ ಜನಸಂಖ್ಯಾ ನಿಯಂತ್ರಣ ಅತ್ಯಗತ್ಯವೆಂದು ಅದಕ್ಕಾಗಿ ಜೀವ ವಿಜ್ಞಾನಿಯಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂದು ಅ್ಯಂಡ್ರ್ಯೂಗೆ ಭಾಸವಾಯಿತು. ಆದ್ದರಿಂದ ಈ ನಿಟ್ಟಿನಲ್ಲಿನ ಪ್ರಯತ್ನವಾಗಿ ಪ್ರಜನನ ಅಂತಸ್ರಾವಿಶಾಸ್ತ್ರ ಹಾಗೂ ಪ್ರಜನನಕ್ಕೆ ಸಂಬಂಧಿಸಿದಂತೆ ಮೆದುಳಿನ ಕ್ರಿಯಾಶೀಲತೆಯನ್ನು ಅರ್ಥೈಸಿಕೊಳ್ಳಲು ಯತ್ನಿಸಿದನು. ಜನನ ನಿಯಂತ್ರಣದಲ್ಲಿ ಸ್ಟೆರಾಯಿಡ್ ಹಾಗೂ ಕ್ಲೊಮಿಫಿûನ್ಗಳ ಪಾತ್ರವನ್ನು ಪರಿಶೀಲಿಸಿ ಸಂತಾನ ನಿಯಂತ್ರಣಕ್ಕೆ ಇದಕ್ಕಾಗಿ ಹೊಸ ವಿಧಾನಗಳ ಸಾಧ್ಯತೆಯನ್ನು ತೋರಿಸಿದನು. ಮೆದುಳಿನಲ್ಲಿ ಪೆಪ್ಟೈಡ್ ಚೋದನಿಕೆಯ ಉತ್ಪನ್ನವನ್ನು ಅನಾವರಣಗೊಳಿಸಿದ್ದಕ್ಕಾಗಿ ಆ್ಯಂಡ್ರ್ಯೂ 1977ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದನು.
ಮಿಷೆಲ್, ಪೀಟರ್ (ಡೆನ್ನಿಸ್) (1920-1992) 1978
Mitchell , Peter ( Dennis )
ಬ್ರಿಟನ್-ಜೀವ ರಸಾಯನಶಾಸ್ತ್ರ- ಕೋಶಗಳಲ್ಲಿ ಚೈತನ್ಯ ರವಾನೆಯಾಗುವ ಸಿದ್ಧಾಂತ ನೀಡಿದಾತ.
ಸ್ವಂತ ಪ್ರಯೋಗಾಲಯ ಕಟ್ಟಿ, ಸಾಧನಗಳನ್ನು ನಿರ್ಮಿಸುವುದು ಕನಸಿನ ಮಾತಾಗಿರುವಂತೆ , ಸಿದ್ಧಾಂತವೊಂದು ಮೊದಲು ತೀವ್ರ ವಿರೋಧಕ್ಕೆ ತುತ್ತಾಗಿ ಕ್ರಮೇಣ ಮನ್ನಣೆ ಗಳಿಸುವುದೂ ಸಹ ಇಪ್ಪತ್ತನೇ ಶತಮಾನದ ವೈಜ್ಞಾನಿಕ ರಂಗದಲ್ಲಿ ಅನೂಹ್ಯ ಸಂಗತಿ .ಇವೆರಡೂ ಅನನ್ಯಗಳ ಆಕರವೇ ಮಿಷೆಲ್, ಕೇಂಬ್ರಿಜ್ನಲ್ಲಿ ಶಿಕ್ಷಣ ಪಡೆದು, ಎಡಿನ್ ಬರೋದಲ್ಲಿ ಜೀವರಾಸಾಯನಿಕ ಶಾಸ್ತ್ರದ ಬೋಧಕನಾಗಿ ನಂತರ, 1963ರಲ್ಲಿ ಬಾಡ್ಮಿನ್ನಲ್ಲಿರುವ ಪಾಳು ಗಾಜಿನ ಮನೆ ಖರೀದಿಸಿ ಪ್ರಯೋಗಾಲಯ ನಿರ್ಮಿಸಿದನು, ಇಲ್ಲಿ ಜೆನ್ನಿ¥sóÀರ್ ಮೊಯ್ಲಿಯ ನೆರವಿನಿಂದ ಪ್ರಾಣಿಗಳ ಮೈಥೋಕಾಂಡ್ರಿಯಾ ಹಾಗೂ ಸಸ್ಯಗಳ ಕೋಶದಲ್ಲಿರುವ ಕ್ಲೋರೋಪ್ಲಾಸ್ಟ್’ಗಳಲಿ ಚೈತನ್ಯ ಉತ್ಪನ್ನವಾಗಿ, ಹಂಚಿಕೆಯಾಗುವುದನ್ನು ವಿವರಿಸಿದನು. ಇದು ಬಹು ಟೀಕೆಗೆ ತುತ್ತಾಯಿತು. ಇದಾದ ಒಂದು ದಶಕದ ನಂತರ ಇದು ಸಾರ್ವತ್ರಿಕ ಮನ್ನಣೆ ಗಳಿಸಿತು. ಇದಕ್ಕಾಗಿ ಮಿಷೆಲ್ 1978ರ ನೊಬೆಲ್ ಪ್ರಶಸ್ತಿ ಪಡೆದನು.
ಕೊಮ್ರ್ಯಾಕ್, ಅಲ್ಯನ್ ಮೆಕ್ಲಿಯಾಡ್ (1924--) 1979
Cormack , Allan Macleod
ದಕ್ಷಿಣ ಆಫ್ರಿಕಾ-ಅಸಂಸಂ- ಭೌತಶಾಸ್ತ್ರ - ಕ್ಷ-ಕಿರಣ ಟೊಮೊಗ್ರಫಿಯ ಅಗ್ರಣಿ.
ಕೇಪಟನ್ ವಿಶ್ವವಿದ್ಯಾಲಯದಲ್ಲಿ ಓದಿದ ಕೊಮ್ರ್ಯಾಕ್, ಜೊಹಾನ್ಸ್ಬರ್ಗ್ನಲ್ಲಿ, ರೇಡಿಯೋ ಸಮಸ್ಥಾನಿಗಳನ್ನು (Radio Isotopes) ವೈದ್ಯಕೀಯದಲ್ಲಿ ಅಳವಡಿಸಿಕೊಳ್ಳುವ ಸಾಧ್ಯತೆಗಳನ್ನು ಅರಿಯುವತ್ತ ಆಸಕ್ತನಾದನು. ನಂತರ 1956ರಲ್ಲಿ ಅಸಂಸಂಗಳಿಗೆ ಹೋಗಿ ನೆಲೆಸಿದನು. 1963ರಲ್ಲಿ ಕೊಮ್ರ್ಯಾಕ್ ಕ್ಷ-ಕಿರಣಗಳ ನೆರವಿನಿಂದ ಮೆದು ಅಂಗಾಂಶಗಳ ಬಿಂಬಗಳನ್ನು ಪಡೆಯುವ ವಿಧಾನಗಳನ್ನು ರೂಪಿಸಿದನು. ಇದೇ ಪ್ರಯತ್ನವನ್ನು ಹೌನ್ಸ್’ಫೀಲ್ಡ್ ಸ್ವತಂತ್ರವಾಗಿ ನಡೆಸಿ, ಯಶಸ್ವಿಯಾದನು. ಕೊರ್ಮ್ಯಾಕ್ ಹಾಗೂ ಹೌಸಫೀಲ್ಡ್ರ ಈ ಯತ್ನ ಯಶಸ್ವಿಯಾಗುವವರೆಗೆ, ಮೂಳೆಯಂತಹ ಗಟ್ಟಿ ಹಾಗೂ ದೃಢ ಅಂಗಗಳ ಬಿಂಬಿಕೆ (Imaging) ಮಾತ್ರ ಸಾಧ್ಯವಾಗುತ್ತಿತ್ತು. ಇವರು ಕ್ಷ –ಕಿರಣಗಳಿಂದ ಅಂಗಾಂಶದ ಹಲವಾರು ಛೇದನಗಳನ್ನು (Sections) ಹಲವಾರು ಕೋನ ಹಾಗೂ ದಿಶೆಗಳಿಗಿಂತ ತೆಗೆದು , ಅಂಗಾಂಶದ ಪೂರ್ಣ ಸ್ಥಿತಿಯನ್ನು ಮೂರು ಆಯಾಮಗಳಲ್ಲಿ ಅರಿಯಲು ಸಾಧ್ಯವಾಗುವಂತೆ ಮಾಡಿದರು. ಈ ತಂತ್ರ ಗಣಕ ಸಹಾಯಿತ ಟೊಮೊಗ್ರಫಿ (Computer Aided Tomography ) ಅಥವಾ ಗಣಕ ಟೊಮೊಗ್ರಾಫಿ ಎಂದು ಖ್ಯಾತವಾಯಿತು. ಈ ತಂತ್ರವೇ ಆಧುನಿಕ ದೇಹ Sಛಿಚಿಟಿಟಿeಡಿ ತಳಹದಿ. ಕೊರ್ಮ್ಯಾಕ್ ಹಾಗೂ ಹೌಸಫೀಲ್ಡ್ ಅಭಿವೃದ್ದಿಪಡಿಸಿದ ತಂತ್ರವನ್ನು ಪುರಸ್ಕರಿಸಿ, 1979ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು.
ಬರೂಜ್, ಬೆನಸೆರಾಫ್ –(1920--) 1980
Baruj , Benceraff
ವೆನೆಜುಯೆಲಾ-ವೈದ್ಯಕೀಯ- ರೋಗರೋಧತ್ವದ (Immunology) ಅಧ್ಯಯನದ ಮುಂದಾಳು.
ಬರೂಜ್ನ ಪೂರ್ವಿಕರು ಸ್ಪೇನ್ನ ಯಹೂದಿಗಳಾಗಿದ್ದು, ವೆನೆಜುಯೆಲಾದ ಕ್ಯಾರಕಾಸ್ನಲ್ಲಿ ನೆಲೆಸಿದ್ದರು. ಬರೂಜ್ ಐದು ವರ್ಷದವನಿರುವಾಗ ಬಟ್ಟೆ ವ್ಯಾಪಾರಿಯಾಗಿದ್ದ ಬರೂಜ್ನ ತಂದೆ ಉತ್ತಮ ವ್ಯಾಪಾರದ ಹುಡುಕಾಟದಲ್ಲಿ ಪ್ಯಾರಿಸ್ಗೆ ಬಂದು ನೆಲೆಸಿದನು. ಇಲ್ಲಿ ಆತನ ವ್ಯಾಪಾರ ಚೆನ್ನಾಗಿ ಅಭಿವೃದ್ಧಿ ಹೊಂದಿತು. ಬರೂಜ್ನ ವಿದ್ಯಾಭ್ಯಾಸ ಫ್ರೆಂಚ್ನಲ್ಲಿ ಜರುಗಿತು. ತಮ್ಮ ಮಗ ಅಸಂಸಂದಲ್ಲಿ ವಿದ್ಯಾಭ್ಯಾಸ ಹೊಂದ ಬೇಕೆಂಬ ಮಹತ್ವಾಕಾಂಕ್ಷೆ ಬರೂಜ್ ತಂದೆಗಿದ್ದಿತು. ಇದಕ್ಕಾಗಿ 1940ರಲ್ಲಿ ಈ ಕುಟುಂಬ ಅಸಂಸಂಗಳಿಗೆ ವಲಸೆ ಹೋಯಿತು. ಬರೂಜ್ 1942ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ವಿಜ್ಞಾನದ ಪದವಿ ಗಳಿಸಿದನು. ಇದಾದ ನಂತರ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಯತ್ನಿಸಿದನು. 1942ರ ಕಾಲದಲ್ಲಿ ಅತ್ಯುತ್ತಮ ಶೈಕ್ಷಣಿಕ ಹಿನ್ನಲೆಯಿದ್ದರೂ, ಯಹೂದಿ ಜನಾಂಗದ ವಲಸೆ ಬಂದ ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶ ಗಿಟ್ಟಿಸುವುದು ಬಹು ಕಠಿಣವಾಗಿದ್ದಿತು. ಹಲವಾರು ಪ್ರಯತ್ನಗಳ ನಂತರ ತನ್ನ ತಂದೆಯ ಸ್ನೇಹಿತನೂ, ರಿಜ್ ಮಾಂಡ್ನಲ್ಲಿರುವ ವರ್ಜೀನಿಯಾ ವೈದ್ಯಕೀಯ ಕಾಲೇಜಿನ ಅಧ್ಯಕ್ಷನ ಸಹಾಯಕನೂ ಆಗಿದ್ದ ಜಾಜ್ ಡಬ್ಲ್ಯೂ ಬೇಕ್ಮನ್ ನೆರವಿನಿಂದ 1942ರಲ್ಲಿ ಬರೂಜ್ಗೆ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ದಕ್ಕಿತು. ವಿದ್ಯಾರ್ಥಿಯಾಗಿರುವಾಗಲೇ ಬರೂಜ್ ಅಸಂಸಂದ ಸೇನೆಗೆ ನಿಯೋಜಿತನಾದನು. 1945ರಲ್ಲಿ ನ್ಯೂಯಾರ್ಕ್ ನಗರದ ಕ್ವೀನ್ಸ್ ಜನರಲ್ ಆಸ್ಪತ್ರೆಯಲ್ಲಿ ತರಬೇತಿ ಹೊಂದಿ, 1946ರಲ್ಲಿ ಅಸಂಸಂದ ಸೇನೆಯ ವೈದ್ಯ ವಿಭಾಗದ ¥sóÀಸ್ಟ್ ಲೆಫಿû್ಟನೆಂಟ್ ಆದನು. ಇಲ್ಲಿಂದ ಜರ್ಮನಿಗೆ ವರ್ಗಾವಣೆಯಾದ ಬರೂಜ್ 1947ರಲ್ಲಿ ಸೇನೆಯಿಂದ ಸೇವಾ ಬಿಡುಗಡೆ ಹೊಂದಿ ಕೊಲಂಬಿಯಾ ಯೂನಿರ್ವಸಿಟಿ ಸ್ಕೂಲ್ ಆಫ್ ಫಿಸಿಷಿಯನ್ಸ್ ಅಂಡ್ ಸರ್ಜನ್ಸ್ನಲ್ಲಿ ಎಲ್ವಿನ್ ಕಬರ್ಟ್ ಆಧೀನದಲ್ಲಿ ಸಂಶೋಧನಾ ಜೀವನ ಪ್ರಾರಂಭಿಸಿದನು. ಇಲ್ಲಿ ರೋಗರೋಧ ರಸಾಯನಶಾಸ್ತ್ರದಲ್ಲಿ ಪರಿಶ್ರಮ ಹೊಂದಿದನು. 1949ರಲ್ಲಿ ಪ್ಯಾರಿಸ್ನ ಬರ್ನಾರ್ಡ್ ಹಾಲ್ವೆನ್ರ್ಸ್ ಪ್ರಯೋಗಾಲಯಕ್ಕೆ ಬರೂಜ್ ಸೇರಿದನು. ಇಲ್ಲಿ ತನ್ನದೇ ಆದ ಸ್ವಂತ ಪ್ರಯೋಗಾಲಯ ಹೊಂದಬೇಕೆಂದಿದ್ದ ಬರೂಜ್ನ ಆಸೆ ಕೈಗೂಡಲಿಲ್ಲ. ಆದ್ದರಿಂದ ನ್ಯೂಯಾರ್ಕ್ ವಿಶ್ವವಿದ್ಯಾಲಯದ ವೈದ್ಯಕೀಯ ಶಾಲೆಯಲ್ಲಿ ರೋಗಕಾರಣಶಾಸ್ತ್ರ ವಿಭಾಗದ ಪ್ರಾಧ್ಯಾಪಕನಾದನು. ಇಲ್ಲಿ ಬರೂಜ್ ನಾನಾ ಬಗೆಯ ರೋಗ ರೋಧತ್ವ, ಒಗ್ಗದಿಕೆಗಳ (ಂಟಟeಡಿgಥಿ) ಬಗೆಗೆ ತೀವ್ರ ಸಂಶೋಧನೆ ಕೈಗೊಂಡನು. ಇಲ್ಲಿರುವಾಗ ಪ್ರಾಣಿಗಳಲ್ಲಿನ ರೋಗರೋಧತ್ವದ ಉಗಮದ ಅಧ್ಯಯನಕ್ಕೆ ಅಡಿಗಟ್ಟನ್ನು ನಿರ್ಮಿಸಿದನು. ಇದಕ್ಕಾಗಿ 1980ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದನು.