ಕೆನಿಚಿ, ಫುಕುಯಿ (1918-1998) 1981
Kenichi , Fukui
ಜಪಾನ್-ರಸಾಯನಶಾಸ್ತ್ರ-ಸಂಯುಕ್ತಗಳ ಮಧ್ಯದ ಆವಿಷ್ಟ ವರ್ಗಾವಣೆಯ ಬಲಗಳಿಗೆ (Charge Transfer Forces)
ಸೈದ್ಧಾಂತಿಕ ವಿವರಣೆ ನೀಡಿದಾತ.
ಕೆನಿಚಿಯ ತಂದೆ ಜಪಾನ್ನ ನಾರಾ ಪಟ್ಟಣದಲ್ಲಿ ವ್ಯಾಪಾರಿಯಾಗಿದ್ದನು. ಇಲ್ಲಿಯೇ 4 ಅಕ್ಟೋಬರ್ 1918 ರಂದು ಕೆನಿಚಿಯ ಜನನವಾಯಿತು. ಕೆನಿಚಿಗೆ ರಸಾಯನಶಾಸ್ತ್ರದಲ್ಲಿ ಯಾವುದೇ ಆಸಕ್ತಿಯಿರಲಿಲ್ಲ. ಪ್ರೌಢಶಿಕ್ಷಣ ಮುಗಿಸಿದ ನಂತರ ವಿಜ್ಞಾನದ ಯಾವ ಶಾಖೆಯಲ್ಲಿ ಪದವಿ ಗಳಿಸಿದರೆ ಉತ್ತಮವೆಂದು ಕೆನಿಚಿಯ ತಂದೆ ಕ್ಯೋಟ್ಯೋ ವಿಶ್ವವಿದ್ಯಾ¯ಯದಲ್ಲಿ ಪ್ರಾಧ್ಯಾಪಕನಾಗಿದ್ದ ಜೆನ್.ಇಟ್ಸುವಿನ್ ಸಲಹೆ ಕೇಳಿದನು. ಇದರ ಮೇರೆಗೆ ಕೆನಿಚಿ ಕೈಗಾರಿಕಾ ರಸಾಯನಶಾಸ್ತ್ರ ವಿಭಾಗಕ್ಕೆ ಸೇರುವಂತಾಯಿತು. 1941ರಲ್ಲಿ ಪದವಿ ಗಳಿಸಿದ ಮೇಲೆ ಕೆನಿಚಿ ಜಪಾನ್ ಸೇನೆಯ ಇಂಧನ ಪ್ರಯೋಗಾಲಯ ಸೇರಿದನು. ಇಲ್ಲಿ ಸಂಶ್ಲೇಷಿತ ಇಂಧನವನ್ನು ಪಡೆಯುವ ಪ್ರಯತ್ನಗಳಲ್ಲಿ ಭಾಗಿಯಾದನು. 1943ರಲ್ಲಿ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ಇಂಧನ ರಸಾಯನಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕನಾಗಿ 1951ರಲ್ಲಿ ಪ್ರಾಧ್ಯಾಪಕನಾದನು. 1944ರಿಂದ 1972 ರವರೆಗೆ ಸೈದ್ಧಾಂತಿಕ ರಸಾಯನಶಾಸ್ತ್ರಜ್ಞರ ನೆರವಿನಿಂದ ನೂರಾರು ಪ್ರಯೋಗ ಸಂಶೋಧನೆಗಳನ್ನು ನಡೆಸಿದ ಕೆನಿಚಿ ಜಪಾನಿ ಭಾಷೆಯಲ್ಲಿ 137ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದನು. 1952ರಲ್ಲಿ ಸಂಯುಕ್ತಗಳ ರಾಸಾಯನಿಕ ಕ್ರಿಯಾಶೀಲತೆಗೂ ಮುಂಚೂಣಿಯಲ್ಲಿರುವ ಎಲೆಕ್ಟ್ರಾನ್ ಸಾಂದ್ರತೆಗೂ ಇರುವ ಸಂಬಂಧವನ್ನು ಕೆನಿಚಿ ಗುರುತಿಸಿದನು. ಇದನ್ನು ಕಿನಿಚಿಯ ಸೈದ್ಧಾಂತಿಕ ತಂಡ ರಾಸಾಯನಿಕ ಪ್ರತಿಕ್ರಿಯಾ ಸಿದ್ಧಾಂತ ಮಂಡಿಸಲು ನೆರವಾಯಿತು. ಇದೇ ವೇಳೆಗೆ ಮುಲ್ಲಿಕೆನ್ ಸಂಯುಕ್ತಗಳ ಮಧ್ಯದ ಆವಿಷ್ಟ ವರ್ಗಾವಣೆಯ ಬಲಗಳ ಬಗೆಗೆ ಬೆಳಕು ಚೆಲ್ಲಿದನು. ಕೆನಿಚಿ ಇದಕ್ಕೆ ಸೈದ್ಧಾಂತಿಕ ವಿವರಣೆ ನೀಡಿದನು. ಇದಕ್ಕಾಗಿ ಕೆನಿಚಿಗೆ 1981ರಲ್ಲಿ ನೊಬೆಲ್ ಪ್ರಶಸ್ತಿ ದಕ್ಕಿತು.
ರೋನಾಲ್ಡ್ ,ಹಾಫ್ಮನ್ (1937--) 1981
Ronald , Hoffman
ಪೋಲೆಂಡ್-ರಸಾಯನಶಾಸ್ತ್ರ- ರಾಸಾಯನಿಕ ಕ್ರಿಯೆಯ ಅಂತರಂಗವನ್ನು ಅರಿಯಲು ಯತ್ನಿಸಿದಾತ.
ಪೋಲೆಂಡ್ನ ಜ್ಲಾಕ್ಝೋ ಪಟ್ಟಣದಲ್ಲಿ 18 ಜುಲೈ 1937ರಂದು ಹಾಫ್ಮನ್ನ ಜನನವಾಯಿತು. ಈ ಪ್ರಾಂತ ಮುಂದೆ ರಷ್ಯಾಕ್ಕೆ ಸೇರ್ಪಡೆಗೊಂಡಿತು. ರೋನಾಲ್ಡ್ ತಂದೆ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದನು. 1939ರಲ್ಲಿ ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗಿ, ಪೋಲೆಂಡ್ 1939ರಿಂದ 1941ರವರೆಗೆ ರಷ್ಯಾದ ಅಧೀನದಲ್ಲಿದ್ದಿತು. ರಷ್ಯಾ ಸೇನೆ ಪೋಲೆಂಡ್ನಿಂದ ಹೊರ ಹೊರಟ ನಂತರ ಜನಾಂಗೀಯ ವೈಷಮ ಎದ್ದು ಯಹೂದಿಗಳು ದೇಶಾಂತರ ಹೋಗತೊಡಗಿದರು. ಈ ಸಂದರ್ಭದಲ್ಲಿ ಹಾಫ್ಮನ್ ಕುಟುಂಬ ಕೈದಿಗಳ ಶಿಬಿರ ಸೇರುವಂತಾಯಿತು. 1943ರಲ್ಲಿ ಹಾಫ್ಮನ್ ಹಾಗೂ ತಾಯಿಯನ್ನು ಕಳ್ಳತನದಿಂದ ಕೈದಿ ಶಿಬಿರದಿಂದ ಬಿಡುಗಡೆಗೊಳಿಸುವಲ್ಲಿ ಆತನ ತಂದೆ ಯಶಸ್ವಿಯಾದರೂ, ತಾನು ಹೊರ ಬರುವುದು ಸಾಧ್ಯವಾಗದೇ ಸೆರೆಯಲ್ಲಿದ್ದನು. ಎರಡನೇ ಜಾಗತಿಕ ಯುದ್ದ ಮುಗಿಯುವವರೆಗೆ ಈ ಕುಟುಂಬ ಉಕ್ರೇನ್ನ ಹಳ್ಳಿಯೊಂದರ ಶಾಲೆಯಲ್ಲಿ ಅಜ್ಞಾತ ವಾಸದಲ್ಲಿದ್ದಿತು. ಹೇಗಾದರೂ ಕೈದಿ ಶಿಬಿರದಿಂದ ಪಾರಾಗಬೇಕೆಂಬ ಯತ್ನದಲ್ಲಿದ್ದ ಗುಂಪಿನೊಂದಿಗೆ ಸೇರಿದ್ದ ಹಾಫ್ಮನ್ ತಂದೆ ಪರಾರಿಯಾಗುವ ಯತ್ನದಲ್ಲಿ ನಾಝಿಗಳ ಗುಂಡಿಗೆ ಬಲಿಯಾದನು. ಹಾಫ್ಮನ್ ಹಾಗೂ ಸಂಬಂಧಿಕರು ನಾಝಿಗಳ ಆಡಳಿತದಲ್ಲಿ ಜೀವನ್ಮರಣದ ಮಧ್ಯೆ ತೂಗುಯ್ಯಾಲೆಯಾಡಿದರು. 1944ರ ಜೂನ್ನಲ್ಲಿ ರಷ್ಯಾದ ಕೆಂಪು ಸೇನೆಯ ನೆರವಿನಿಂದ ಇವರ ಅಜ್ಞಾತವಾಸ ಅಂತ್ಯಗೊಂಡಿತು. ಇದಾದ ನಂತರಫೆ ಝೆಮೈಸಿಲ್ ಮತ್ತು ಕ್ರಕೌ ಹಳ್ಳಿಗಳಲ್ಲಿ ಹಾಫ್ಮನ್ನ ಶಿಕ್ಷಣ ಪ್ರಾರಂಭವಾಯಿತು. 1946ರಲ್ಲಿ ಝೆಕೆಸ್ಲೋವಿಯಾಕ್ಕೆ ಹೋದ ಹಾಫ್ಮನ್ ಕುಟುಂಬ ಅಲ್ಲಿಂದ ಆಸ್ಟ್ರಿಯಾದ ಲಿಂಜ್ ಬಳಿಯ ಬಿಂಡೆರ್ಮಿಖ್ಲ್ ಎಂಬ ನಿಯಂತ್ರಣದ ಶಿಬಿರ ಸೇರಿತು. ಮುಂದಿನ ವರ್ಷ ಜರ್ಮನಿಯ ಮ್ಯೂನಿಕ್ನಲ್ಲಿ ಮತ್ತೊಂದು ನಿರಾಶ್ರಿತರ ಶಿಬಿರಕ್ಕೆ ಇವರು ಹೋಗಿ ನೆಲೆಸಿದರು. 1949ರಲ್ಲಿ ಅಂತಿಮವಾಗಿ ಅಸಂಸಂಗಳಿಗೆ ವಲಸೆ ಹೋಗುವಲ್ಲಿ ಹಾಫ್ಮನ್ ಕುಟುಂಬ ಯಶಸ್ವಿಯಾಯಿತು. ಅಸಂಸಂದಲ್ಲಿ ಇಂಗ್ಲೀಷ್ ಕಲಿತ ರೋನಾಲ್ಡ್, 1962ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದನು. ರೋನಾಲ್ಡ್ ಸ್ಥಿರ ಹಾಗೂ ಅಸ್ಥಿರ ಅಣುಗಳ ವೈದ್ಯುತೀಯ ಸಂರಚನೆ, ರಾಸಾಯನಿಕ ಕ್ರಿಯೆಗಳಲ್ಲಿನ ಸ್ಥಿತ್ಯಂತರಗಳ ಬಗೆಗೆ ಗಮನಾರ್ಹ ಕೆಲಸ ಮಾಡಿದ್ದಾನೆ. ಹಕೆಲ್ ವಿಧಾನವನ್ನು ವಿಸ್ತರಿಸಿ, ಅಭಿವೃದ್ಧಿಗೊಳಿಸಿ ಮಾರ್ಪಡಿಸಿ ಅಣುಗಳ ಪೈ ಮತ್ತು ಸಿಗ್ಮ ಎಲೆಕ್ಟ್ರಾನ್ಗಳ ರಾಚನಿಕ ಸ್ವರೂಪವನ್ನು ನಿರ್ಧರಿಸಲು ನೆರವಾಗುವಂತೆ ಮಾಡಿದನು. ಸಾವಯವ ಕ್ರಿಯೆಗಳಲ್ಲಿ ಸ್ಥಿತ್ಯಂತರ ಹಾಗೂ ಮಧ್ಯಂತರ ಹಂತದ ಎಲೆಕ್ಟ್ರಾನಿಕ್ ಸಂರಚನೆಯನ್ನು ವಿವರಿಸಿದನು. ಪ್ರಯೋಗಗಳಿಂದ ಬೆಂಬಲಿತವಾದ ವಿಶಿಷ್ಟ ಬಗೆಯ ಲೆಕ್ಕಾಚಾರಗಳನ್ನು ಬಳಸಿ ರಾಸಾಯನಿಕ ಕ್ರಿಯೆಯ ಅಂತರಂಗವನ್ನು ಅರಿಯಲು ರೋನಾಲ್ಡ್ ನೀಡಿದ ಕೊಡುಗೆಗಾಗಿ 1981ರಲ್ಲಿ ನೊಬೆಲ್ ಪ್ರಶಸ್ತಿ ದಕ್ಕಿತು. ರಷ್ಯನ್ ಹಾಗೂ ಜರ್ಮನ್ ಸಾಹಿತ್ಯದಲ್ಲಿ ಅಪಾರ ಆಸಕ್ತಿಯಿರುವ ರೋನಾಲ್ಡ್ 1987ರಲ್ಲಿ ತನ್ನ ಮೊದಲ್ ಕವನ ಸಂಕಲನ ಪ್ರಕಟಿಸಿದನು. ಇದು ಯುರೋಪಿನ ಹಲವಾರು ಭಾಷೆಗಳಿಗೆ ಅನುವಾದಗೊಂಡಿದೆ. ಈಗಲೂ ರೋನಾಲ್ಡ್ ವಿಜ್ಞಾನದಂತೆ, ಸಾಹಿತ್ಯ ಕ್ಷೇತ್ರದಲ್ಲೂ ಕ್ರಿಯಾಶೀಲನಾಗಿದ್ದಾನೆ.
ಆ್ಯರನ್, ಕ್ಲಗ್ –(1926--) -1982
Aaron , Klug
ಲಿಥುವೇನಿಯಾ-ದಕ್ಷಿಣಾ ಆಫ್ರಿಕಾ-ಭೌತಶಾಸ್ತ್ರ-ಜೈವಿಕ ಅಣುಗಳ ರಾಚನಿಕ ಸ್ವರೂಪ ನಿರ್ಧಾರಕ್ಕೆ ಸ್ಫಟಿಕದರ್ಶಕ ವಿಧಾನಗಳನ್ನು ಬಳಸಿದಾತ.
ಆ್ಯರನ್ ಲಿಥುವೇನಿಯಾದ ಝೆಲ್ವಾಸ್ ಪಟ್ಟಣದಲ್ಲಿ 1926ರಲ್ಲಿ ಜನಿಸಿದನು. ಎರಡು ವರ್ಷದ ಬಾಲಕ ನಾಗಿರುವಾಗ ಈತನ ತಂದೆ ದಕ್ಷಿಣಾ ಆಫ್ರಿಕಾದ ಡರ್ಬಾನ್ನಲ್ಲಿ ನೆಲೆಸಿದನು. ಔಪಚಾರಿಕ ಶಿಕ್ಷಣ ಹೊಂದಿರದ ಆ್ಯರನ್ನ ತಂದೆ ದನ ಸಾಕಾಣಿಕೆಯಿಂದ ಜೀವನ ಸಾಗಿಸುತ್ತಿದ್ದನು. ಬಾಲ್ಯದಲ್ಲಿ ವೈವಿಧ್ಯಮಯ ಪುಸ್ತಕಗಳನ್ನು ಆ್ಯರನ್ ಓದುತ್ತಿದ್ದನಾದರೂ , ಯಾವುದೇ ಒಂದು ನಿರ್ದಿಷ್ಟ ವಿಷಯದಲ್ಲೂ ಅಂತಹ ಆಸಕ್ತಿಯಿರಲಿಲ್ಲ. ಪ್ರೌಢಶಾಲೆಯಲ್ಲಿರುವಾಗ ಪಾಲ್ ಡೆ ಕ್ರುಯಿ¥sóïನ ಮೈಕ್ರೋಬ್ ಹಂಟರ್ಸ್ ಪುಸ್ತಕ ಓದಿದ ನಂತರ ತಾನೂ ಒಬ್ಬ ಸೂಕ್ಷ್ಮಜೀವಿಶಾಸ್ತ್ರಜ್ಞನಾಗಬೇಕೆಂದು ಬಯಸಿದನು. ಇದರ ಪರಿಣಾಮವಾಗಿ ಜೋಹಾನ್ಸ್ಬರ್ಗ್ನ ವಿಟ್ವಾಟರ್ಸ್ರಾಂಡ್ ವಿಶ್ವವಿದ್ಯಾಲಯದಲ್ಲಿ ಜೀವರಸಾಯನಶಾಸ್ತ್ರವನ್ನು ಆರಿಸಿಕೊಂಡನು. ಆದರೆ ಅಲ್ಪಕಾಲದಲ್ಲೇ ರಸಾಯನ, ಭೌತಶಾಸ್ತ್ರಕ್ಕೆ ಬದಲಾಯಿಸಿಕೊಂಡನು. ಸ್ನಾತಕೋತ್ತರ ಪದವಿಗಾಗಿ ಕೇಪ್ಟೌನ್ ವಿಶ್ವ ವಿದ್ಯಾಲಂiÀi ಸೇರಿ ದೃಕ್ಶಾಸ್ತ್ರ ಸಂಬಂಧಿತ ಪ್ರಯೋಗಗಳಲ್ಲಿ ಪರಿಣಿತಿ ಗಳಿಸಿದನು. ಇದರ ಫಲಿತಾಂಶಗಳ ವಿಶ್ಲೇಷಣೆ ನಡೆಸುತ್ತಾ ದ್ರವ್ಯದ ಮೂಲ, ಅದರ ರಚನೆಯ ಬಗೆಗೆ ಕುತೂಹಲ ತಾಳಿದನು. ನಂತರ ಆ್ಯರನ್ ಕೇಂಬ್ರಿಜ್ನ ಟ್ರಿನಿಟಿ ಕಾಲೇಜಿನ ಕ್ಯಾವೆಂಡಿಷ್ ಪ್ರಯೋಗಾಲಯ ಸೇರಿ, ಉಕ್ಕು ತಂಪಾಗುವಾಗ ಘಟಿಸುವ ಸ್ಥಿತ್ಯಂತರಗಳ ಅಧ್ಯಯನ ನಡೆಸಿದನು. ಡಾಕ್ಟರೇಟ್ ಗಳಿಸಿದ ನಂತರ ಎ¥sóï.ಜಿ.ರ¥sóïಟನ್ನೊಂದಿಗೆ ಕೆಂಪು ರಕ್ತ ಕಣಗಳೊಳಗೆ ಆಮ್ಲಜನಕ ಅಥವಾ ಇಂಗಾಲದ ಡೈ ಆಕ್ಸೈಡ್, ಮೊನಾಕ್ಸೈಡ್ಗಳು ರಾಸಾಯನಿಕ ಕ್ರಿಯೆಗೊಳಗಾಗುತ್ತಾ, ವಿಸರಣೆಗೊಳ್ಳುವ (Diffusion) ವಿದ್ಯಾಮಾನದ ಅಧ್ಯಯನ ನಡೆಸಿದನು. ಇದಾದ ನಂತರ ಜೈವಿಕ ಅಣುಗಳತ್ತ ಆ್ಯರನ್ ಗಮನ ಹರಿಯಿತು. 1953ರಲ್ಲಿ ಲಂಡನ್ನ ಬಿರ್ಕ್ಬೆಕ್ ಕಾಲೇಜನ್ನು ಸೇರಿ, ರೊಸಾಲಿಂಡಾ ಫ್ರಾಂಕ್’ಲಿನ್ ಸಹಯೋಗದಲ್ಲಿ ತಂಬಾಕಿನ, ಮೊಸಾಯಿಕ್ ವೈರಸ್ನ್ನು ಕುರಿತಾಗಿ ನಡೆಸಿದ ಸಂಶೋಧನೆಗಳಿಂದ ಅದರ ಒಟ್ಟಾರೆ ರಾಚನಿಕ ಸ್ವರೂಪ ಅನಾವರಣಗೊಂಡಿತು. ಜೈವಿಕ ಅಣುಗಳು ನ್ಯೂಕ್ಲಿಯಿಕ್ ಆಮ್ಲ, ಪ್ರೊಟೀನ್ಗಳ ರಾಚನಿಕ ಸ್ವರೂಪ ನಿರ್ಧರಿಸಲು ಸ್ಪಟಿಕದರ್ಶಕ (Spectroscopy) ವಿಧಾನಗಳು ಆ್ಯರನ್ನಿಂದ ರೂಪಿಸಲ್ಪಟ್ಟವು. ಇದಕ್ಕಾಗಿ 1982ರಲ್ಲಿ ಆ್ಯರನ್ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದನು.
ಹೆನ್ರಿ, ಟೌಬೆ (1915--)
Henry , Taube (CHE.) 1983
ಕೆನಡಾ-ರಸಾಯನಶಾಸ್ತ್ರ- ಓಸ್ಮಿಯಂ, ರುಥೇನಿಯಂ ಧಾತುಗಳನ್ನು ಕುರಿತಾಗಿ ವಿಸ್ತೃತ ಅಧ್ಯಯನ ನಡೆಸಿದಾತ.
ಹೆನ್ರಿ ಕೆನಡಾದ ಸಾಸ್ಕಾಷೆವೆನ್ ಪ್ರಾಂತ್ಯದ ನ್ಯೂಡ್¥sóರ್ïನಲ್ಲಿ 1915ರಂದು ಜನಿಸಿದನು. 1935ರಲ್ಲಿ ಸಾಸ್ಕಾಷೆವೆನ್ ವಿಶ್ವವಿದ್ಯಾಲಯದಿಂದ ಪದವಿ 1937ರಲ್ಲಿ ಸ್ನಾತಕೋತ್ತರ ಪದವಿ, 1940ರಲ್ಲಿ ಅಸಂಸಂಗಳ ಬಕ್ರ್ಲೆಯಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದನು. 1942ರಲ್ಲಿ ಅಸಂಸಂಗಳ ಪ್ರಜೆಯಾದನು. ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಂiÀiದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ 1941ರಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ ಹೆನ್ರಿ 1956ರಲ್ಲಿ ಚಿಕಾಗೋ ಹಾಗೂ 1972ರಲ್ಲಿ ಸ್ಟ್ಯಾನ್¥sóÉÇೀರ್ಡ್ ವಿಶ್ವವಿದ್ಯಾಲಯಗಳ ರಸಾಯನಶಾಸ್ತ್ರ ವಿಭಾಗದ ಕಾರ್ಯದರ್ಶಿಯಾಗಿದ್ದನು. ಲಿಗ್ಯಾಂಡ್ಗಳ ಪ್ರತಿ ಕ್ರಿಯಾಶೀಲತೆ ಹಾಗೂ ಅವುಗಳ ಗುಣಗಳ ಮೇಲೆ ಪ್ರಭಾವ ಬೀರುವ ಆವಿಷ್ಟ ವರ್ಗಾವಣೆಗಳ ಬಗೆಗೆ ಹೆನ್ರಿ ಗಮನಾರ್ಹ ಸಂಶೋಧನೆ ನಡೆಸಿದ್ದಾನೆ. ಓಸ್ಮಿಯಂ, ರುಥೇನಿಯಂ ಧಾತುಗಳ ಮೂಲ ರಾಸಾಯನಿಕ ಸ್ವಭಾವಗಳ ಬಗೆಗೆ ಅಧ್ಯಯನ ನಡೆಸಿದ್ದಾನೆ. ಹೆನ್ರಿ 1983ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಬ್ರೂಸ್, ಮೆರಿಫೀಲ್ಡ್ (ರಾಬರ್ಟ್) –(1911--) -1984
Bruce , Merrifield (Robert)
ಅಸಂಸಂ-ರಸಾಯನಶಾಸ್ತ್ರ-ಪೆಪ್ಟೈಡ್ ಸಂಶ್ಲೇಷಣೆ, ಘನ ಪ್ರಾವಸ್ಥೆಯ ಸಂಶ್ಲೇಷನೆಯಲ್ಲಿ ಪರಿಶ್ರಮಿಸಿದಾತ.
ಬ್ರೂಸ್ 15 ಜುಲೈ 1921ರಂದು ಟೆಕ್ಸಾಸ್ನ ಪೋರ್ಟ್ವರ್ಥ್ ಪಟ್ಟಣದಲ್ಲಿ ಜನಿಸಿದನು. 1923ರಲ್ಲಿ ಈತನ ತಂದೆ ಕ್ಯಾಲಿಫೊರ್ನಿಯಾದಲ್ಲಿ ನೆಲೆಸಲು ನಿರ್ಧರಿಸಿದನು. ಕ್ಯಾಲಿಫೊರ್ನಿಯಾಗೆ ಹೋಗಿ ನೆಲೆಸುವ ಮುಂಚೆ ಹಲವಾರು ಊರುಗಳಲ್ಲಿ ನೆಲೆಸಿದ್ದನು. ಹೀಗಾಗಿ ಬ್ರೂಸ್, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಒಂಬತ್ತು, ಹಾಗೂ ಪ್ರೌಢಶಿಕ್ಷಣವನ್ನು ಎರಡು ಶಾಲೆಗಳಲ್ಲಿ ಪೂರ್ಣಗೊಳಿಸಿದನು. ಪ್ರೌಢಶಾಲೆಯಲ್ಲಿರುವಾಗ ರಸಾಯನಶಾಸ್ತ್ರದಲ್ಲಿ ಖಗೋಳಶಾಸ್ತ್ರಗಳಲ್ಲಿ ಕುತೂಹಲ ಹೊಂದಿದನು. ತಾನೇ ಚಿಕ್ಕದಾದ ದೂರದರ್ಶಕವನ್ನು ತಯಾರಿಸಿಕೊಂಡಿದ್ದನು.ಕ್ಯಾಲಿಫೊರ್ನಿಯಾ“ವಿಶ್ವವಿದ್ಯಾಲಯದಿಂದ ಪದವಿ ಪಡೆದು ಫಿûಲಿ¥sóï ಆರ್.ಪಾರ್ಕ್ ಸಂಶೋಧನಾ ಪ್ರತಿಷ್ಟಾನದಲ್ಲಿ ಕೆಲಸಕ್ಕೆ ಸೇರಿದನು. ಇಲ್ಲಿ ಸಂಶ್ಲೇಷಿತ ಅಮೈನೋ ಆಮ್ಲಗಳು ಪ್ರಾಣಿಗಳ ಬೆಳವಣಿಗೆಯ ಮೇಲೆ ಬೀರುವ ಪರಿಣಾಮಗಳನ್ನು ಅಭ್ಯಸಿಸಿದನು. ಈ ಕೆಲಸ ತೊರೆದು ಮತ್ತೊಮ್ಮೆ ಕಾಲೇಜಿನ ಮೆಟ್ಟಿಲು ಹತ್ತಿರ ಬ್ರೂಸ್ ಪಿರಮಿಡಿನ್ಗಳ ಪರಿಮಾಣ ವಿಶ್ಲೇಷಿಸಿ 1949ರಲ್ಲಿ ಹೆಚ್ಚುವರಿ ಪದವಿ ಪಡೆದನು. ನಂತರ ರಾಕ್ಪ್ರಫೆಲರ್ ವಿಶ್ವವಿದ್ಯಾಲಯದಲ್ಲಿ ಡಿ.ಡಬ್ಲ್ಯೂ ವೂಲಿಯ ಸಹಾಯಕನಾಗಿ ಕೆಲಸ ಮಾಡಿದನು. ಇದರಿಂದ ಪೆಪ್ಟೈಡ್ ಸಂಶ್ಲೇಷಣೆ, ಘನ ಪ್ರಾವಸ್ಥೆಯ ಸಂಶ್ಲೇಷನೆ 1959ರಲ್ಲಿ ಸಾಧ್ಯವಾಯಿತು. ಘನ ಮೃತ್ತಿಕೆಯ ರಾಸಾಯನಿಕ ಸಂಶ್ಲೇಷನೆ ನಡೆಸುವ ವಿಧಾನದ ಅಭಿವೃದ್ಧಿಗಾಗಿ ಬ್ರೂಸ್ 1984ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಹರ್ಬರ್ಟ್ , ಆ್ಯರನ್ ಹಾಪ್ಟ್ಮನ್ (1917--)
Herbert , Aaron Hauptman (CHE.) 1985
ಅಸಂಸಂ-ಭೌತಶಾಸ್ತ್ರ-ಜೈವಿಕ ಅಣುಗಳ ರಾಚನಿಕ ಸ್ವರೂಪ ನಿರ್ಧರಿಸುವ ವಿಧಾನ ರೂಪಿಸಿದಾತ.
ಹಾಫ್ಟ್ಮನ್, 1937ರಲ್ಲಿ ನ್ಯೂಯಾರ್ಕ್ ಸಿಟಿ ಕಾಲೇಜ್ನಿಂದ ಸ್ನಾತಕೋತ್ತರ ಪದವಿ ಗಳಿಸಿದನು. ಇದಾದ ನಂತರ ಕೊಲಂಬಿಯಾ ವಿಶ್ವವಿದ್ಯಾಲಯ ಸೇರಿ ಗಣಿತದಲ್ಲಿ ಉನ್ನತ ಶಿಕ್ಷಣ ಪಡೆದನು. ಇದನ್ನು ಮುಗಿಸಿ ವಾಷಿಂಗ್ಟನ್ ಡಿ.ಸಿ ಯಲ್ಲಿರುವ ,ನೌಕಾದಳದ ಸಂಶೋಧನಾಲಯ ಸೇರಿ ಅಲ್ಲಿ ಸ್ಪಟಿಕಗಳ ರಾಚನಿಕ ಸ್ವರೂಪದ ಬಗೆಗೆ ಹಲವಾರು ಪ್ರಯೋಗಗಳನ್ನು ನಡೆಸಿದನು. 1970ರಲ್ಲಿ ಬಫೆಲೋದ ಸ್ಟೇಟ್ ಯೂನಿವರ್ಸಿಟಿ ಆಫ್ನ್ಯೂಯಾರ್ಕ್ನಲ್ಲಿ ಜೀವ ಭೌತಶಾಸ್ತ್ರದ ವಿಭಾಗದಲ್ಲಿ ಪ್ರಾಧ್ಯಾಪಕನಾದನು.ಕ್ಷ ಕಿರಣಗಳ ಪಥವನ್ನು ಸ್ಪಟಿಕಗಳು ವಿಮುಖಗೊಳಿಸುತ್ತವೆ, ಇಂತಹ ವಿಮುಖತೆಯನ್ನು ನಿರ್ಧರಿಸಲು ನೆರವಾಗುವ ಸೂತ್ರಗಳನ್ನು ಹಾಫ್ಟ್ಮನ್, ಕಾರ್ಲೆಯೊಂದಿಗೆ ನೀಡಿದನು. ಇದು ಸ್ಪಟಿಕಗಳ ಅಣುವಿನಲ್ಲಿರುವ ಪರಮಾಣುಗಳ ಸ್ಥಾನವನ್ನು ನಿರ್ಧರಿಸಲು ನೆರವಾಯಿತು. ಇದಕÁಗಿ ಹಾಫ್ಟ್ಟಮನ್ ಪ್ರಯೋಗದ ಮಾರ್ಗಗಳನ್ನು ಸಹ ಸೂಚಿಸಿದನು. ಇದು 1947 ರಲ್ಲಿ ಪ್ರಕಟವಾಗಿ ಹಾಫ್ಟ್ಮನ್ ವಿಧಾನವೆಂದು ಹೆಸರಾಯಿತು. ಇದನ್ನು ಬಳಸಿ ಪ್ರೋಟಿನ್, ಚೋದನಿಕೆ (Hormone) , ಪ್ರತಿಜೈವಿಕಗಳಂತಹ (Antibiotics) ನೂರಾರು ಸಾವಯವ ಜೈವಿಕ ಮೂಲದ ಸಂಕೀರ್ಣ ಅಣುಗಳ ರಚನೆಯನ್ನು ಮೂರು ಆಯಾಮಗಳಲ್ಲಿ ತಿಳಿಯುವುದು ಸುಲಭವಾಯಿತು. ಇದಕ್ಕಿಂತ ಮೊದಲು ಬಹು ಸರಳವಾದ ಜೈವಿಕ ಅಣುವಿನ ರಚನೆಯನ್ನು ನಿಷ್ಕರ್ಷಿಸಲು ಸಹ ಎರಡು ಮೂರು ವರ್ಷಗಳಷ್ಟು ದೀರ್ಘಾವಧಿ ಬೇಕಾಗಿದ್ದಿತು. ಗಣಕಗಳು, ಸುಕ್ಲಿಷ್ಟ ಉಪಕರಣಗಳು ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಉಪಜ್ಞೆಗೊಂಡು, ಅಣುಗಳ ರಚನೆಯ ನಿರ್ಧಾರದ ವಿಧಾನದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾದವು. ಅಲ್ಲಿಯ ತನಕ ಹಾಫ್ಟ್ಮನ್-ಕಾರ್ಲೆ ವಿಧಾನವೊಂದೇ ಲಭ್ಯವಿದ್ದಿತು. ಅಣುಗಳ ರಚನೆ ನಿರ್ಧಾರಕ್ಕೆ ಗಣಿತದ ಸೂತ್ರಗಳನ್ನು ನೀಡಿದ ಸಾಧನೆಗಾಗಿ ಹಾ¥sóï್ಟಮನ್, 1985ರಲ್ಲಿ ಕಾರ್ಲೆಯೊಂದಿಗೆ ನೊಬೆಲ್ ಪ್ರಶಸ್ತಿ ಪಾತ್ರನಾದನು.
ಜೆರೋಮ್ , ಕಾರ್ಲೆ-(1918---) 1985
Jerome , Karle 1985
ಅಸಂಸಂ-ರಸಾಯನಶಾಸ್ತ್ರ-ಸ್ಪಟಿಕಗಳ ರಾಚನಿಕ ಸ್ವರೂಪದ (Crystalline Structural Form) ವಿಶ್ಲೇಷಣೆಗೆ ಪ್ರಯೋಗ ಮತ್ತು ಗಣಿತದ ಮಾರ್ಗಗಳನ್ನು ರೂಪಿಸಿದಾತ.
ಹೆಸರಾಂತ ಕಲಾವಿದರ ಕುಟುಂಬದಲ್ಲಿ ಜೆರೋಮ್ ಜನನವಾಯಿತು. ನ್ಯೂಯಾರ್ಕ್ನ ಸಿಟಿ ಕಾಲೇಜಿನಿಂದ ರಸಾಯನ ಹಾಗೂ ಜೀವಶಾಸ್ತ್ರದಲ್ಲಿ ಪದವಿ ಗಳಿಸಿದ ಜೆರೋಮ್, ಜೀವಶಾಸ್ತ್ರದಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದನು. ಕೆಲಕಾಲದ ನಂತರ ಆಲ್ಬನಿಯಲ್ಲಿ ನ್ಯೂಯಾರ್ಕ್ ರಾಜ್ಯದ ಅರೋಗ್ಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದನು. ಇಲ್ಲಿ ಅಂತರ್ಜಲದಲ್ಲಿರುವ ಫ್ಲೋರಿನ್ ಪ್ರಮಾಣ ನಿರ್ಧರಿಸುವ ವಿಧಾನವನ್ನು ಜೆರೋಮ್ ರೂಪಿಸಿದನು. ಇದು ಜಗತ್ತಿನಾದ್ಯಂತ ಈಗ ಬಳಕೆಯಲ್ಲಿದೆ. 1940ರಲ್ಲಿ ಮಿಷಿಗನ್ ವಿಶ್ವವಿದ್ಯಾಲಯ ಸೇರಿ 1944ರಲ್ಲಿ ಡಾಕ್ಟರೇಟ್ ಗಳಿಸಿದನು. ನಂತರ ನೇವಲ್ ರಿಸರ್ಚ್ ಲ್ಯಾಬೋರೇಟರಿಯಲ್ಲಿ ಕೆಲಸಕ್ಕೆ ಸೇರಿದನು. ಇಲ್ಲಿ ಲೋಹದ ಮೇಲ್ಮೈ ಮೇಲೆ ಸ್ನೇಹಕಗಳಂತೆ (Lubricants) ವರ್ತಿಸುವ ಸುದೀರ್ಘ ಸರಪಳಿ ರೂಪದ ಹೈಡ್ರೋಕಾರ್ಬನ್ ಪದರಗಳ ಬಗೆಗೆ ಸಂಶೋಧನೆ ನಡೆಸಿದನು. ಹರ್ಬರ್ಟ್ ಹಾ¥sóïಮನ್ ಸಹಯೋಗದಲ್ಲಿ ಸ್ಪಟಿಕಗಳ ರಾಚನಿಕ ಸ್ವರೂಪದ ವಿಶ್ಲೇಷಣೆಗೆ ನೇರ ಪ್ರಾಯೋಗಿಕ ವಿಧಾನಗಳನ್ನು ರೂಪಿಸಿ, ಅವುಗಳನ್ನು ಗಣಿತದಿಂದ ವಿವರಿಸಿದನು. ಇದಕ್ಕಾಗಿ ಜೆರೋಮ್ಗೆ 1985ರಲ್ಲಿ ನೊಬೆಲ್ ಪ್ರಶಸ್ತಿ ದಕ್ಕಿತು. ಕಾರ್ಲೆಯ ಸಂಶೋಧನಾ ಜೀವನದುದ್ದಕ್ಕೂ ಸ್ವಯಂ ವಿಜ್ಞಾನಿಯಾಗಿದ್ದ ಪತ್ನಿ ಇಸಾಬೆಲ್ಲಾಳ ಅವಿರತ ನೆರವು, ಒತ್ತಾಸೆ ದಕ್ಕಿದವು.
ಡುಡ್ಲೆ ,ರಾಬರ್ಟ್ ಹೆಷಬ್ಯಾಖ್ –(1932--) -1986
Dudley , R. Herschbach
ಅಸಂಸಂ-ರಸಾಯನಶಾಸ್ತ್ರ- ರಾಸಾಯನಿಕ ಕ್ರಿಯಾಗತಿ ವಿನ್ಯಾಸದ ಅಧ್ಯಯನ ನಡೆಸಿದಾತ.
ಡುಡ್ಲೆಯ ತಂದೆ ಕಟ್ಟಡಗಳ ನಿರ್ಮಾಣದ ಗುತ್ತಿಗೆದಾರನಾಗಿದ್ದನು. 18 ಜೂನ್ 1932ರಂದು ಕ್ಯಾಲಿಫೊರ್ನಿಯಾದ ಸ್ಯಾನ್ಜೋಸ್ನಲ್ಲಿ ಡುಡ್ಲೆಯ ಜನನವಾಯಿತು. ಹಸುಗಳ ಹಟ್ಟಿಯಲ್ಲಿ ಕೆಲಸ ಮಾಡುತ್ತಾ, ಹಾಲು ಹಿಂಡುತ್ತಾ, ಸಾಕು ಹಂದಿಗಳ ಆರೈಕೆಗೊಳಿಸುತ್ತಾ ಡುಡ್ಲೆ ಬಾಲ್ಯ ವಿಕಸಿಸಿತು. 1950ರಲ್ಲಿ ಸ್ಟ್ಯಾನ್ಫೊರ್ಡ್ ವಿಶ್ವವಿದ್ಯಾಲಯ ಸೇರಿದ ಡುಡ್ಲೆ 1954ರಲ್ಲಿ ಗಣಿತ, 1955ರಲ್ಲಿ ರಸಾಯನಶಾಸ್ತ್ರದ ಪದವಿಗಳನ್ನು ಪಡೆದನು,. ಹಾರ್ವರ್ಡ್ನಿಂದ 1958ರಲ್ಲಿ ಭೌತರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು. 1959ರಲ್ಲಿ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾದನು. ಇಲ್ಲಿ ಆಲ್ಕಲಿ ಅಣುಗಳು ಆಲ್ಕೈಲ್ ಅಯೋಡೈಡ್ ಅಣುಗಳೊಂದಿಗೆ ಪ್ರತಿಕ್ರಿಯೆಗೊಳ್ಳುವುದನ್ನು ಅಭ್ಯಸಿಸತೊಡಗಿದನು. ನಲವತ್ತು ವರ್ಷಗಳ ಮೊದಲು ಮೈಖೇಲ್ ಪೆÇಲ್ಯಾನಿ ಇಂತಹುದೆ ಪ್ರಯೋಗಗಳನ್ನು ಕೈಗೊಂಡಿದ್ದನು. ಡುಡ್ಲೆ ರಾಸಾಯನಿಕ ಕ್ರಿಯಾಗತಿಶಾಸ್ತ್ರದಲ್ಲಿ ಪ್ರಾರಂಭಿಸಿದ ಈ ಅಧ್ಯಯನಗಳು ಅಲ್ಪಕಾಲದಲ್ಲೇ ಬೇರೆಯವರಿಂದ ಪೂರ್ಣ ಸೈದ್ಧಾಂತಿಕ ರೂಪ ಪಡೆಯತೊಡಗಿದವು. ಮುಂದೆ ಇವು ರಾಸಾಯನಿಕ ಕ್ರಿಯಾಗತಿಗಳನ್ನು ಎಲೆಕ್ಟ್ರಾನಿಕ್ ರಚನೆಯ ದೃಷ್ಟಿಯಲ್ಲಿ ಅರಿಯಲು ನೆರವಾದವು. ಇದಕ್ಕಾಗಿ ಡುಡ್ಲೆ 1986ರಲ್ಲಿ ನೊಬೆಲ್ ಪ್ರಶಸ್ತಿ ಪಡೆದವು.
ಜಾನ್ , ಚಾಲ್ರ್ಸ್ ಪೊಲಯಾನಿ (1929--) 1986
John , Charles Polayani
ಜರ್ಮನಿ-ರಸಾಯನಶಾಸ್ತ್ರ- ರಾಸಾಯನಿಕ ಕ್ರಿಯೆಗಳ ಗತಿಶೀಲ ಅಧ್ಯಯನದ ಮುಂದಾಳು
ಜಾನ್ ಪೊಲಯಾನಿ ಪೂರ್ವಿಕರು ಜರ್ಮನಿ, ಹಂಗರಿ ಮೂಲದವರಾಗಿದ್ದು ಬರ್ಲಿನ್ನಲ್ಲಿ ನೆಲೆಸಿದ್ದರು. ಜಾನ್ನ ಕುಟುಂಬ 1933ರಲ್ಲಿ ಇಂಗ್ಲೆಂಡ್ಗೆ ಹೋಗಿ ನೆಲೆಸಿತು. ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಿಂದ 1949ರಲ್ಲಿ ಪದವಿ ಹಾಗೂ 1952ರಲ್ಲಿ ಡಾಕ್ಟರೇಟ್ ಗಳಿಸಿದನು. 1952ರಿಂದ 1954 ರವರೆಗೆ ಕೆನಡಾದ ಒಟ್ಟೋವಾದ ನ್ಯಾಷನಲ್ ರಿಸರ್ಚ್ ಕೌನ್ಸಿಲ್ ಲ್ಯಾಬೋರೇಟರಿಯಲ್ಲಿ ಫೆಲೋ ಆಗಿದ್ದನು. 1956ರಲ್ಲಿ ಟೊರೆಂಟೋ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾದನು. ನಂತರ ಇಲ್ಲಿಯೇ ಸಹಾಯಕ ಪ್ರಾಧ್ಯಾಪಕ, ಪ್ರಾಧ್ಯಾಪಕನಾದನು. ಪೊಲಯಾನಿಯದು ವೈವಿಧ್ಯಮಯ ವ್ಯಕ್ತಿತ್ವ. ಹಲವಾರು ಸಂಘ, ಸಂಸ್ಥೆ, ವಿಶ್ವವಿದ್ಯಾಲಯಗಳ ಗೌರವ ಸದಸ್ಯತ್ವ ಹೊಂದಿರುವ ಜಾನ್ ಪೊಲಯಾನಿ ಮುಕ್ತ ಪಾಂಡಿತ್ಯವನ್ನು ಪ್ರಸರಿಸುವ ದಿ ರಾಯಲ್ ಸೊಸೈಟಿ ಆಫ್ಕೆನಡಾ ಕಮಿಟಿ ಆನ್ ಸ್ಕಾಲರಿ ಫ್ರೀಡಂ ಸಂಸ್ಥಾಪನ ಸದಸ್ಯನಾಗಿದ್ದಾನೆ. ಶಸ್ತ್ರ ನಿಯಂತ್ರಣ ಹಾಗೂ ನಿಶ್ಯಸ್ತ್ರೀಕರಣ ಆಂತರಿಕ ಭದ್ರತೆ ಸೇರಿದಂತೆ ಹಲವಾರು ರಾಷ್ಟ್ರೀಯ ವಿಚಾರಗಳಲ್ಲಿ ಕೆನಡಾ ಸರ್ಕಾರದ ಸಮಿತಿಗಳ ಸಕ್ರಿಯ ಸದಸ್ಯನಾಗಿದ್ದಾನೆ. ಪೊಲಯಾನಿ ವಿಜ್ಞಾನರಂಗದಲ್ಲಿ ನೂರಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, ಅದಕ್ಕೆ ಸರಿಸಮ ಸಂಖ್ಯೆಯಲ್ಲಿ ವಿಜ್ಞಾನ, ಆಡಳಿತ ನೀತಿ, ವಿಜ್ಞಾನದಿಂದ ಸಮಾಜದ ಮೇಲಾಗುವ ಪರಿಣಾಮ, ನಿಶ್ಯಸ್ತ್ರೀಕರಣಗಳ ಬಗೆಗೂ ನೂರಾರು ಲೇಖನ ಬರೆದಿದ್ದಾನೆ. ರಾಸಾಯನಿಕ ಕ್ರಿಯೆಗಳ ಗತಿಶೀಲ ಅಧ್ಯಯನ ಕುರಿತಾದಂತಹ ಸಂಶೋಧನೆಗಳಿಗಾಗಿ 1986ರಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದ್ದಾನೆ.
ಯು, ಆನ್ ಸೇ 1986
Yuan , TsehLee
ಯು, 19 ನವೆಂಬರ್ 1936ರಂದು ತೈವಾನ್ನ ಶಿಂಚು ಪಟ್ಟಣದಲ್ಲಿ ಜನಿಸಿದನು. ಈತನ ತಂದೆ ಖ್ಯಾತ ಕಲಾವಿದನಾಗಿದ್ದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ತೈವಾನ್ ಜಪಾನ್ ವಶದಲ್ಲಿದ್ದಿತು. ಹೀಗಾಗಿ ಆನ್ ಸೇ ವಿದ್ಯಾಭ್ಯಾಸ ಕುಂಟುತ್ತಾ ಸಾಗಿತು. ಕ್ರೀಡೆಗಳಲ್ಲಿ ಆನ್ ಸೇ ಅತ್ಯಾಸಕ್ತಿಯಿದ್ದಿತು. 1959ರಲ್ಲಿ ಅತ್ಯುತ್ತಮ ಅಂಕ ಗಳಿಸಿ ಆನ್ ಸೇ ತೈವಾನ್ ರಾಷ್ಟ್ರೀಯ ವಿಶ್ವವಿದ್ಯಾಲಯ ಸೇರಿದನು. 1962ರಲ್ಲಿ ಬರ್ಕ್ಲೆಯ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲ0iÀi ಸೇರಿದನು. ಇಲ್ಲಿ ವೈದ್ಯುತ್ ಉದ್ರಿಕ್ತ ಅಯಾನ್-ಅಣುಗಳ ಅಚಿತಕ್ರಿಯೆಯ ಅಧ್ಯಯನ ನದೆಸಿದನು. ಈ ಅವಧಿಯಲ್ಲಿ ಅತ್ಯುತ್ತಮ ಚದುರಿಕೆ ಉಪಕರಣಗಳನ್ನು (Scattering Instruments) ನಿರ್ಮಿಸಿದನು. ರಾಸಾಯನಿಕ ಗತಿಶೀಲತೆ , ಪ್ರತಿಕ್ರಿಯಾತ್ಮಕ ಚದುgಕೆಗಳನ್ನು ಕುರಿತಾಕಿ ನಡೆಸಿದ ಸಂಶೋಧನೆ ಮತ್ತು ಅವುಗಳ ಅಳತೆಗಾಗಿ ನಿರ್ಮಿಸಿದ ಸಾಧನಗಳಿಗಾಗಿ ಯುಆನ್ಲೀ 1986ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಚಾರ್ಲ್ಸ್, ಜೆ ಪೆಡೆರ್ಸೆನ್ (1904-1989) -1987
Charles , Pederson
ಕೊರಿಯಾ-ರಸಾಯನಶಾಸ್ತ್ರ- ಕ್ರೌನ್ ಈಥರ್’ಗಳ ಅಧ್ಯಯನಕ್ಕೆ ನಾಂದಿ ಹಾಡಿದಾತ.
ಚಾರ್ಲ್ಸ್ ತಂದೆ ನಾರ್ವೆ ಮೂಲದವನಾಗಿದ್ದು, ಯುವಕನಾಗಿರುವಾಗ ಸಮುದ್ರಯಾನ ಕೈಗೊಂಡಿದ್ದ ಹಡುಗಿನ ಇಂಜಿನಿಯರ್ನ ಸಹಾಯಕನಾಗಿ ಕೊರಿಯಾ ತಲುಪಿದನು. ಈತ ಇಲ್ಲಿಯೇ ನೆಲೆಸಿ ಕೊರಿಯಾದಲ್ಲಿದ್ದ ಬ್ರಿಟಿಷ್ ಆಡಳಿತದಲಿ ಅಧಿಕಾರಿಯಾದನು. ನಂತರ ಈಗಿನ ಉತ್ತರ ಕೊರಿಯಾದ ಉನ್ಸಾನ್ ಗಣಿಗಳಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದನು. ಚಾರ್ಲ್ಸ್ ಕೊರಿಯಾದ ಪುಸಾನ್ ಪಟ್ಟಣದಲ್ಲಿ 3 ಅಕ್ಟೋಬರ್ 1904 ರಂದು ಜನಿಸಿದನು. ಚಾರ್ಲ್ಸ್ ತಾಯಿ ಜಪಾನ್ ಮೂಲದ ವ್ಯಾಪಾರಿಯ ಮಗಳು. ಉನ್ಸಾನ್ ಸುತ್ತ ಮುತ್ತಲಿನ ಗಣಿಗಳು ಅಸಂಸಂದ ವಶದಲ್ಲಿದ್ದವು. ಇದರಿಂದಾಗಿ ಚಾರ್ಲ್ಸ್, ಅಮೆರಿಕನ್ನರನ್ನು ಅನುಸರಿಸಿ, ಇಂಗ್ಲೀಷ್ ಕಲಿಯಲು ಯತ್ನಿಸಿದನು. ಉನ್ಸಾನ್ ಸನಿಹದಲ್ಲಿ ಇಂಗ್ಲಿಷ್ ಶಾಲೆಗಳು ಇರದಿದ್ದುದರಿಂದ ಎಂಟನೇ ವರ್ಷದಲ್ಲಿ ಜಪಾನ್ನ ನಾಗಸಾಕಿಯ ಕಾನ್ವೆಂಟಿಗೆ ಸೇರಿದನು. ನಂತರ ಯೊಕಹಾಮದಲ್ಲಿದ್ದ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಶಿಕ್ಷಣ ಪಡೆದನು. ಅಸಂಸಂಗಳ ಓಹಿಯೋ ರಾಜ್ಯದ ಡೇಟನ್ ವಿಶ್ವವಿದ್ಯಾಲಯ ಸೇರಿದ ಚಾರ್ಲ್ಸ್ ಇಲ್ಲಿ ರಾಸಾಯನಿಕ ಇಂಜಿನಿಯರಿಂಗ್ನಲ್ಲಿ ಪದವಿ ಗಳಿಸಿದನು. ಎಂಐಟಿಯಿಂದ ಸಾವಯವ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು. 1927ರಲ್ಲಿ ಡೆಲಾವೆರ್ನ ವಿಲ್ಮಿಂಗ್ಟನ್ನಲ್ಲಿರುವ ಡುಪಾಂಟ್ ಕಂಪನಿಗೆ ಉದ್ಯೋಗಕ್ಕೆ ಸೇರಿದನು. ಇಲ್ಲಿ ಪೆಟ್ರೋಲಿಯಂ ಉತ್ಪನ್ನ ರಬ್ಬರ್ ಹಾಗೂ ತಾಮ್ರದ ವೇಗ ವರ್ಧಕಗಳನ್ನು ಕುರಿತಾಗಿ ಕೆಲಸ ಮಾಡಿದನು. 1940ರ ವೇಳೆಗೆ ದ್ಯುತಿರಸಾಯನಶಾಸ್ತ್ರದಲ್ಲಿ (Photochemistry) ಆಸಕ್ತಿ ಹೊಂದಿ, ಕ್ವಿನೋನೈಮೇನ್ ಡೈಯಾಕ್ಸೈಡ್ಗಳನ್ನು ಕುರಿತಾಗಿ ಸಂಶೋಧಿಸಿದನು. 1960ರಲ್ಲಿ ವೆನಡೈಲ್ ಗುಂಪಿನ ರಾಸಾಯನಿಕ ವೇಗವರ್ಧಕಗಳ (Catalyst) ಮೇಲೆ ಫಿûನಾಲಿಕ್ ಲೈ ಗ್ಯಾಂಡ್ಸ್ಗಳು ಬೀರುವ ಪರಿಣಾಮವನ್ನು ಕುರಿತಾದ ಅಧ್ಯಯನ ಕೈಗೆತ್ತಿಕೊಂಡನು. ಇವುಗಳ ಪ್ರಯೋಗಗಳಲ್ಲಿ ಉಪಉತ್ಪನ್ನವಾಗಿ ಅತ್ಯಲ್ಪ ಪ್ರಮಾಣದ , ಆವರೆಗೆ ಗೊತ್ತಿರದ ಹರಳು ದಕ್ಕಿತು. ಇದನ್ನು ಚಾಲ್ರ್ಸ್ ಡೈ ಬೆಂಜೋ 18-ಕ್ರೌನ್-6 ಎಂದು ಗುರುತಿಸಿದನು. ಇದು ಕ್ರೌನ್ ಈಥರ್ಗಳ ಅಧ್ಯಯನಕ್ಕೆ ನಾಂದಿ ಹಾಡಿತು. ಇದಕ್ಕಾಗಿ ಚಾಲ್ರ್ಸ್ಗೆ 1987ರ ನೊಬೆಲ್ ಪ್ರಶಸ್ತಿ ದಕ್ಕಿತು. ಮೀನು ಹಿಡಿಯುವುದು, ತೋಟಗಾರಿಕೆ , ಹಕ್ಕಿ ವೀಕ್ಷಣೆ, ಕಾವ್ಯವಾಚನ ಚಾಲ್ರ್ಸ್ನ ನೆಚ್ಚಿನ ಹವ್ಯಾಸಗಳಾಗಿದ್ದವು. ಚಾಲ್ರ್ಸ್ 26 ಅಕ್ಟೋಬರ್ 1989ರಂದು ಮೃತನಾದನು.
ಡೊನಾಲ್ಡ್, ಜೆ ಕ್ರ್ಯಾಮ್ (1919-2001) 1987
Donald , Cram
ಕೆನಡಾ-ರಸಾಯನಶಾಸ್ತ್ರ-ಸಾವಯವ ಹಾಗೂ ಕಾರ್ಬನಿಯನ್ ರಸಾಯನಶಾಸ್ತ್ರದಲ್ಲಿ ಕ್ರಾಂತಿಕಾರಕ ಸಂಶೋಧನೆಗಳನ್ನು ನಡೆಸಿದನು.
ಡೊನಾಲ್ಡ್ನ ತಂದೆ ಸ್ಕಾಟ್ಲೆಂಡ್ ಮೂಲದ ತಾಯಿ ಜರ್ಮನ್ ಹಿನ್ನೆಲೆಯ ಕೆನಡಾದಲ್ಲಿ ನೆಲೆಸಿದ ವಲಸಿಗರಾಗಿದ್ದರು. ಇವರು ತಮ್ಮ ಮೂವರು ಮಕ್ಕಳೊಂದಿಗೆ ಕೆನಡಾದ ಒಂಟೋರಿಯಾದಿಂದ ಅಸಂಸಂಗಳ ವೆರ್ಮಾಂಟ್ಗೆ ವಲಸೆ ಹೋದರು. ಡೊನಾಲ್ಡ್ ಜನನ ಇಲ್ಲಿಯೇ ಆಯಿತು. ನಾಲ್ಕೂವರೆ ವರ್ಷದವನಿರುವಾಗಲೇ ಡೊನಾಲ್ಡ್ ಮಕ್ಕಳ ಪುಸ್ತಕಗಳನ್ನು ಓದುತ್ತಿದ್ದನು. ಭಾರಿ ತುಂಟನಾಗಿದ್ದ ಡೊನಾಲ್ಡ್ಗೆ ವ್ಯಕ್ತಿತ್ವ ಹಾಗೂ ನಡವಳಿಕೆಗಳಲ್ಲಿ ಯಾವಾಗಲೂ ಸಿ ದರ್ಜೆಯೇ ದಕ್ಕುತ್ತಿತ್ತು. ಡೊನಾಲ್ಡ್ ಶಾಲೆಗಿಂತಲೂ ಹೊರಗಡೆ ಷೆಲ್ಲಿ, ಕೀಟ್ಸ್, ಷೇಕ್ಸಪಿಯರ್ ಪುಸ್ತಕಗಳ ಸಂಗದಲ್ಲಿ ಕಲಿತದ್ದೇ ಹೆಚ್ಚು, ಶಾಲಾ ಬಾಲಕನಾಗಿದ್ದಾಗ ತರಕಾರಿ, ಹಣ್ಣು , ಹಂಪಲು , ಗೃಹ ಸಾಮಾಗ್ರಿಗಳನ್ನು ಮಾರಿ ಅಲ್ಪ ಸ್ವಲ್ಪ ಹಣ ಸಂಪಾದಿಸುತ್ತಿದ್ದನು. ಹದಿನಾರು ವರ್ಷದ ವೇಳೆಗೆ ಡೊನಾಲ್ಡ್ 6 ಅಡಿ ಬೆಳೆದು 85 ಕೆ.ಜಿ. ತೂಗುತ್ತಿದ್ದನು. ಬಣ್ಣ ಬಳಿಯುವ , ಸರಕು ಸಾಗಿಸುವ , ಹೊಲದಲ್ಲಿ ದುಡಿಯುವ ಕೆಲಸಗಳೊಂದಿಗೆ ಡೊನಾಲ್ಡ್ನ ಪ್ರೌಢಶಿಕ್ಷಣ ಮುಂದುವರಿಯಿತು. ನ್ಯಾಷನಲ್ ರೋಲಿನ್ಸ್ ಕಾಲೇಜಿನ ವಿದ್ಯಾರ್ಥಿ ವೇತನ ಗಳಿಸಿದ ಡೊನಾಲ್ಡ್ ರಸಾಯನಶಾಸ್ತ್ರ ಹಾಗೂ ತತ್ವಶಾಸ್ತ್ರವನ್ನು ಆಯ್ಕೆ ಮಾಡಿಕೊಂಡನು. ರೋಲಿನ್ಸ್ ಕಾಲೇಜಿನಲ್ಲಿರುವಾಗ ಹಾರಾಟದ ತರಬೇತಿ ಗಳಿಸಿ, ರೇಡಿಯೋ ಉದ್ಫೋಷಕನಾಗಿ, ನಾಟಕಗಳಲ್ಲಿ ಪಾತ್ರವಹಿಸುತ್ತಾ, ಸಂಗೀತ ತಂಡದ ಸದಸ್ಯನಾಗಿ ಶ್ರಮಿಸಿದನು. 1938ರಿಂದ 1941 ರಲ್ಲಿ ರಜಾ ಕಾಲದಲ್ಲಿ ನ್ಯೂಯಾರ್ಕ್ ಸಿಟಿಯಲ್ಲಿರುವ ನ್ಯಾಶನಲ್ ಬಿಸ್ಕೆಟ್ ಕಂಪನಿಯಲ್ಲಿ ಮಾರಾಟ ಪ್ರತಿನಿಧಿಯಾದನು. ಈ ಕಾಲದಲ್ಲೇ ಕೊಳೆಗೇರಿಗಳಿಗೆ ಭೇಟಿ ನೀಡುತ್ತಾ, ಸಾಮಾಜಿಕ ಅಸಮಾನತೆ, ಅನಿಷ್ಟ, ದರ್ಪ, ದೌರ್ಜನ್ಯ, ವೇಶ್ಯಾವಾಟಿಕೆ, ಮಾದಕದ್ರವ್ಯ, ಶ್ರೀಮಂತರ ಅಟ್ಟಹಾಸ ಬಾಲಾಪರಾಧಿಗಳ ಜಗತ್ತನ್ನು ಕಂಡನು. ನೆಬ್ರಾಸ್ಕ ವಿಶ್ವವಿದ್ಯಾಲಯ ಸೇರಿ, ನಾರ್ಮನ್.ಓ ಕ್ರಾಮ್ವೆಲ್ನ ಮಾರ್ಗದರ್ಶನದಲ್ಲಿ 1942ರಲ್ಲಿ ಸ್ನಾತಕೋತ್ತರ ಪದವಿ ಪಡೆದನು. ಎರಡನೇ ಜಾಗತಿಕ ಯುದ್ದ ಪ್ರಾರಂಭವಾದಾಗ, ಮಾರ್ಕ್ ಮತ್ತು ಕಂಪನಿ ಸೇರಿದ ಡೋನಾಲ್ಡ್ ಪೆನ್ಸಿಲಿನ್ ಉತ್ಪಾದನೆಯ ಯೋಜನೆಯಲ್ಲಿ ನಿಯೋಜಿಸಲ್ಪಟ್ಟನು. ಇಲ್ಲಿ ಮ್ಯಾಕ್ಸ್ ಧಿಪ್ಲಾರ್ನ ಬೆಂಬಲ ದೊರೆಯಿತು. 1945ರಲ್ಲಿ ಯುದ್ದ ಕೈಗೊಂಡಾಗ ಮ್ಯಾಕ್ಸ್ನ ನೆರವಿನಿಂದ ಹಾರ್ವರ್ಡ್ ವಿಶ್ವವಿದ್ಯಾಲಯ ಸೇರಿ, ಫಿûೀಸರ್ನ ಮಾರ್ಗ ದರ್ಶನದಲ್ಲಿ ಡಾಕ್ಟರೇಟ್ ಗಳಿಸಿದನು. ಡೊನಾಲ್ಡ್ ಸಾವಯವ ಹಾಗೂ ಕಾರ್ಬನಿಯನ್ ರಸಾಯನಶಾಸ್ತ್ರದಲ್ಲಿ ಹಲವಾರು ಕ್ರಾಂತಿಕಾರಕ ಸಂಶೋಧನೆಗಳನ್ನು ನಡೆಸಿದನು. ಇದಕ್ಕಾಗಿ 1987ರ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಜೀನ್ ಮಾರಿ ಲೆಹ್ನ್–(1939--) 1987
Jean-Marie Lehn
ಫ್ರಾನ್ಸ್ -–ರಸಾಯನಶಾಸ್ತ್ರ- ಜೀವಿಗಳಲ್ಲಿ ರಾಸಾಯನಿಕಗಳು ಜೋಡಣೆಗೊಳ್ಳುವ, ಹತೋಟಿ ಸಾಧಿಸುವ ಅಧ್ಯಯನ ನಡೆಸಿದಾತ.
ಜೀನ್, ಫ್ರಾನ್ಸ್’ನ ಅಲಾಸೇಸ್ ಎಂಬ ಪಟ್ಟಣದಲ್ಲಿ 30 ಸೆಪ್ಟೆಂಬರ್ 1939ರಂದು ಜನಿಸಿದನು. ಎರಡನೇ ಜಾಗತಿಕ ಯುದ್ದ ಕೊನೆಗೊಂಡ ಮೇಲೆ ಹನ್ನೊಂದನೇ ವಯಸ್ಸಿನಲ್ಲಿ ಶಾಲೆಗೆ ಸೇರಿದನು. 1950ರಿಂದ 1957ರವರೆಗೆ ಜೀನ್ ಅಭಿಜಾತಶಾಸ್ತ್ರ, ಲ್ಯಾಟಿನ್, ಗ್ರೀಕ್, ಜರ್ಮನ್ ಭಾಷೆ,ಫೆ್ರಂಚ್ ಸಾಹಿತ್ಯ, ತತ್ತ್ವಶಾಸ್ತ್ರಗಳ ಅಧ್ಯಯನ ಮಾಡಿದನು. ಇದೇ ಕಾಲಕ್ಕೆ ಜೀನ್ ರಸಾಯನಶಾಸ್ತ್ರದಲ್ಲಿ ಆಸಕ್ತಿ ತಳೆದನು. 1957ರಲ್ಲಿ ಪ್ರಾಯೋಗಿಕ ವಿಜ್ಞಾನ ಹಾಗೂ ತತ್ತ್ವಶಾಸ್ತ್ರದಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದನು. ಸ್ಟ್ರಾಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಸಾವಯವ ರಸಾಯನಶಾಸ್ತ್ರದಲ್ಲಿ ಪದವಿಗೆ ಸೇರಿದನು. ಪದವಿ ಗಳಿಸಿದ ನಂತರ 1960ರಲ್ಲಿ ರಾಷ್ಟ್ರೀಯ ವೈಜ್ಞಾನಿಕ ಕೇಂದ್ರಕ್ಕೆ ಸೇರಿದನು. ಬೈಜಿಕ ಕಾಂತೀಯ ಅನುರಣನ (NMR-Nuclear Magnetic Resonance) ರೋಹಿತದರ್ಶಕ (Spectrometer) ಬಳಸಿ ಟ್ರೈಟರ್ಪೀನ್ಗಳ ಭೌತ ರಾಸಾಯನಿಕ ಗುಣಗಳ ಅಧ್ಯಯನ ವiುಗಿಸಿ, 1963ರಲ್ಲಿರಾಷ್ಟ್ರೀಯ ವೈಜ್ಞಾನಿಕ ಕೇಂದ್ರದಲ್ಲಿಸೇರಿದನು. ನಂತರ ಅಸಂಸಂದ ಹಾರ್ವರ್ಡ್ ವಿಶ್ವವಿದ್ಯಾಲಯದ ರಾಬರ್ಟ್ ಬನ್ರ್ಸ್ ವುಡವರ್ಡ್ ಪ್ರಯೋಗಾಲಯ ಸೇರಿ ಅಲ್ಲಿ ವಿಟಮಿನ್ ಬಿ-12ರ ಸಂಪೂರ್ಣ ಸಂಶ್ಲೇಷಣಾ ಕಾರ್ಯಕ್ರಮದಲ್ಲಿ ಭಾಗಿಯಾದನು. ಇಲ್ಲಿಂದ ಸ್ಟ್ರಾಸ್ಬರ್ಗ್ಗೆ ಮರಳಿದ ಜೀನ್ ಸಾವಯವ ರಸಾಯನಶಾಸ್ತ್ರ , ಕ್ವಾಂಟಂ ಸಿದ್ಧಾಂತ ಹಾಗೂ ಪ್ರಯೋಗ ಬೆಂಬಲಿತ ಭೌತಿಕ ವಿಧಾನಗಳನ್ನು ಒಗ್ಗೂಡಿಸಿ ಹೊಸ ಸಂಶೋಧನೆಗಳತ್ತ ದೃಷ್ಟಿಹರಿಸಿದನು. ರಾಸಾಯನಿಕ ಸಂಯುಕ್ತಗಳ ಸಂರಚನೆ ಹಾಗೂ ಅವುಗಳ ಭೌತ ರಾಸಾಯನಿಕ ಗುಣಗಳ ಮಧ್ಯದ ಸಂಬಂಧದ ಹುಡುಕಾಟದಲ್ಲಿ ಜೀನ್ ಯಶಸ್ಸನ್ನು ಕಂಡನು. ಜೀನ್ಗೆ ಕಾಲಕ್ರಮೇಣ ನರವ್ಯೂಹ, ರಾಸಾಯನಿಕ ದೃಷ್ಟಿಯಲ್ಲಿ ಅದರ ಕ್ರಿಯಾಶೀಲತೆಯ ಬಗೆಗೆ ಕುತೂಹಲ, ಮೂಡಿತು. ನರಕೋಶಗಳಲ್ಲಿನ ವೈದ್ಯುತ್ ಚಟುವಟಿಕೆಗಳು ಅದರಲ್ಲಿನ ಪೆÇರೆಗಳಲ್ಲಿ ಸೋಡಿಯಂ ಹಾಗೂ ಪೆÇಟ್ಯಾಷಿಯಂ ಅಯಾನ್ಗಳ ವಿತರಣೆಯ ಮೇಲೆ ಅವಲಂಬಿತವಾಗಿರುತ್ತದೆ. ಇಂತಹ ಸ್ಥಿತಿಗೆ ಅನುಗುಣವಾಗಿರುವ ರಾಸಾಯನಿಕ ವಸ್ತುಗಳ ಹುಡುಕಾಟವನ್ನು ಜೀನ ಪ್ರಾರಂಭಿಸಿದನು. ಮುಂದೆ ಇದು ಮಹಾಅಣ್ವಕ (Supramolecular) ರಸಾಯನಶಾಸ್ತ್ರದ ಶಾಖೆಗೆ ಕಾರಣವಾಯಿತು. 1976ರಲ್ಲಿ ದ್ಯುತಿ ಸಂಶ್ಲೇಷಣಾ ಕ್ರಿಯೆಯನ್ನು ಕೃತಕವಾಗಿ ಸಾಧಿಸಲು ಜೀನ್ ನೇತೃತ್ವದ ತಂಡ ಪ್ರಯತ್ನಿಸಿತು. ಇದರಿಂದ ಅಪಾರ ಪ್ರಮಾಣದಲ್ಲಿ ದಕ್ಕುವ ಸೌರ ಚೈತನ್ಯವನ್ನು ಸಂಗ್ರಹಿಸುವ, ಮಾರ್ಪಡಿಸುವ ರಾಸಾಯನಿಕ ಸಾಧ್ಯತೆಗಳತ್ತ ವಿಜ್ಞಾನಿಗಳ ಗಮನ ಹರಿಯಿತು. ಜೀನ್ನಿಂದ ಪ್ರಾರಂಭಿಸಲ್ಪಟ್ಟ ಮಹಾ ಅಣ್ವಯಿಕ ರಸಾಯನಶಾಸ್ತ್ರ ಬೃಹದಾಕಾರವಾಗಿ ಬೆಳೆದು, ಜೀವಶಾಸ್ತ್ರ, ರಸಾಯನಶಾಸ್ತ್ರಗಳ ಮಧ್ಯದ ಗಡಿಯನ್ನು ನಿರ್ಧರಿತು. ಜೀವಿಗಳಲ್ಲಿ ರಾಸಾಯನಿಕಗಳು ಸ್ವಯಂ ಜೋಡಣೆಗೊಳ್ಳುವ ಹತೋಟಿ ಸಾಧಿಸುವ, ಕಾರ್ಯ ನಿಯೋಜಿತವಾಗುವ ರಹಸ್ಯಗಳನ್ನು ಅರಿಯುವತ್ತ ಹೆಜ್ಜೆ ಇಟ್ಟಂತಾಯಿತು. ಇದು ಅಣ್ವಯಿಕ ಸಾಫ್ಟ್’ವೇರ್ ತಯಾರಿಸಿದಂತಹ ಸಾಧನೆಗೆ ಸಮನಾದುದು. ಇದಕ್ಕಾಗಿ ಜೀನ್ 1987ರ ನೊಬೆಲ್ ಪ್ರಶಸ್ತಿ ಪಡೆದನು.
ಹಾರ್ಟ್ಮಟ್, ಮೈಖೆಲ್ (1948--)
Hartmut , Michael (CHE.) 1988
ಜರ್ಮನಿ-ಜೀವರಸಾಯನಶಾಸ್ತ್ರ-ಕೋಶಪೆÇರೆಯ ಪ್ರೋಟಿನ್ ಪ್ರತ್ಯೇಕಿಸಿದಾತ.
ಮೈಖೇಲ್ 18 ಜುಲೈ 1948ರಂದು ಲುಡ್ವಿಗ್ಸ್ಬರ್ಗ್ನಲ್ಲಿ ಜನಿಸಿದನು. ಇವರದು ರೈತ ಕುಟುಂಬ. ಪರಂಪರೆಯಿಂದ ಬಂದಿದ್ದ ಹೊಲ ಗದ್ದೆಗಳು ಆಸ್ತಿ ಹಂಚಿಕೆಯಿಂದಾಗಿ ಕುಗ್ಗಿ ಮೈಖೇಲ್ ತಂದೆಗೆ ಅಂಗೈ ಅಗಲದ ಕೃಷಿ ಜಾಗ ದಕ್ಕಿದ್ದಿತು. ಆದ್ದರಿಂದ ಮೈಖೆಲ್ ತಂದೆ ಬಡಗಿಯಾಗಿ, ತಾಯಿ ಬಟ್ಟೆ ಹೊಲಿದು ಜೀವನ ಸಾಗಿಸುತ್ತಿದ್ದರು. ಮೈಖೇಲ್ ಬಾಲಕನಾಗಿದ್ದಾಗ ಸಂಗಡಿಗರೊಂದಿಗೆ ಹಣ್ಣು , ತರಕಾರಿ ಕದಿಯಲು ನೆರೆ ಹೊರೆಯ ತೋಟಗಳಿಗೆ ನುಗ್ಗಿ ದಂಡನೆಗೊಳಗಾಗುತ್ತಿದ್ದನು. ಸ್ಥಳೀಯ ಗ್ರಂಥಾಲಯದ ಸದಸ್ಯನಾದ ಮೈಖೇಲ್ ರಜಾದ ಅಧಿಕ ಸಮಯವನ್ನು ನಾನಾ ಬಗೆಯ ವೈವಿಧ್ಯಮಯ ಕೃತಿಗಳನ್ನು ಓದುತ್ತಾ ಕಳೆಯುತ್ತಿದ್ದನು. ಕಡ್ಡಾಯವಾಗಿದ್ದ ಮಿಲಿಟರಿ ತರಬೇತಿ ಪೂರ್ಣಗೊಳಿಸಿ 1969ರಲ್ಲಿ ಟುಬಿಂಜೆನ್ ವಿಶ್ವವಿದ್ಯಾಲಯದಲ್ಲಿ ಜೀವರಸಾಯನಶಾಸ್ತ್ರದ ಪದವಿ ತರಗತಿಗೆ ಸೇರಿದನು. ಡೈಟೆರ್ ಓಯಿಸ್ಟರ್ಹೆಲ್ಟ್ ವಾಲ್ಟರ್ ಸ್ಟಾಕೆನಿಯಸ್ ಸಹಕಾರದೊಂದಿಗೆ ಹಾಲೋ ಬ್ಯಾಕ್ಟೀರಿಯಾಗಳಲ್ಲಿರುವ ಬ್ಯಾಕ್ಟಿರಿಯೇರೋಡೋಪ್ಸಿನ್ ಅನಾವರಣಗೊಳಿಸಿದ್ದರು. ಇದು ದ್ಯುತಿ ಚಾಲಿತ ಪಂಪ್ನಂತೆ ಕೆಲಸ ಮಾಡುವುದೆಂದು ತಿಳಿಸಿದ ಪೀಟರ್ ಮಿಷೆಲ್ ರಸಕಾಯ ಸಿದ್ಧಾಂತದಿಂದ ವಿವರಿಸಿದ್ದನು. 1975ರಲ್ಲಿ ಡೈಟೆರ್ ಓಯಿಸ್ಟರ್ಹೆಲ್ಟ್ನೊಂದಿಗೆ ವುರ್ಜ್ಬರ್ಗ್ಗೆ ಹೋದ ಮೈಖೇಲ್, ಹ್ಯಾಲೋ ಬ್ಯಾಕ್ಟೀರಿಯಾಗಳ ಕೋಶಾಂತರದಲ್ಲಿನ ಅಡೆನೋಸೈನ್, ಡೈ ಟ್ರೈ ಫಾಸ್ಫೇಟ್ಗಳ ಮಟ್ಟಗಳನ್ನು ವೈದ್ಯುತ್ ರಾಸಾಯನಿಕ ಪ್ರೋಟೀನ್ ಸಾಂದ್ರತೆಯೊಂದಿಗೆ ಸಮೀಕರಿಸಿದನು. 1977ರಲ್ಲಿ ಡಾಕ್ಟರೇಟ್ ಗಳಿಸಿದ ಮೈಖೇಲ್ ಬ್ಯಾಕ್ಟೀರಿಯಾ ರೋಡೋಫಿûನ್ನಂತೆಯೇ ಕೋಶ ಪೆÇರೆಯ ಪೆÇ್ರೀಟೀನ್ಗಳನ್ನು ಹರಳು ರೂಪದಲ್ಲಿ ಪಡೆಯಬಹುದೆಂದು ತೋರಿಸಿದನು. ಆವರೆಗೆ ಇದು ಆಸಾಧ್ಯವೆಂದೇ ವಿಜ್ಞಾನಿಗಳು ಭಾವಿಸಿದ್ದರು. ಆದರೆ ಮೊದಲಿಗೆ ಇದನ್ನು ಹರಳು ರೂಪದಲ್ಲಿ ಬೇರ್ಪಡಿಸುವುದು ಸಾಧ್ಯವಾಗಲಿಲ್ಲ. 1981ರಲ್ಲಿ ಜೊಹಾನ್ ಡೈಸೆನ್ಹೋ¥sóÀರ್ ಜೊತೆಗೂಡಿ ಬೇರೆ ಬಗೆಯ ಕೋಶಪೆÇರೆಯ ಪ್ರೋಟೀನ್ಗಳನ್ನು ಹರಳು ರೂಪದಲ್ಲಿ ಪ್ರತ್ಯೇಕಿಸಲು ಯತ್ನಿಸಿದನು. ಇದಕ್ಕಾಗಿ ರೋಡೋಸೊಡೋಮೊನಾಸ್ ವಿರಿಡಿಸ್ ಎಂಬ ಬ್ಯಾಕ್ಟೀರಿಯಾವನ್ನು ಇವರು ಆಯ್ದುಕೊಂಡರು. ಇದು ದ್ಯುತಿ ಸಂಶ್ಲೇಷಣೆಯ ಕೇಂದ್ರವೆಂದು ದಾಖಲಾಗಿದೆ. 1983ರಲ್ಲಿ ಹಾರ್ಟ್ಮಟ್, ಡೈಯಟರ್ ಓಯಿಸ್ಟರ್ ಹೆಲ್ಟ್ ಹಾಗೂ ಮೈಖೇಲ್ ಇದರ ಹರಳುಗಳನ್ನು ಪಡೆದರು. ಇದಕ್ಕಾಗಿ ಇವರಿಗೆ 1988ರ ನೊಬೆಲ್ ಪ್ರಶಸ್ತಿ ದಕ್ಕಿತು.
ಜೊಹಾನ್ನ್, ಡೈಸೆನ್ಹೊಫರ್ (1943--) 1988
John , Deisenhofer
ಜರ್ಮನಿ-ಜೀವರಸಾಯನಶಾಸ್ತ್ರ- ದ್ಯುತಿ ಸಂಶ್ಲೇಷಣೆ ಕೇಂದ್ರದ (Photosynthesis Centre) ಮೂರು ಆಯಾಮದ ಸಂರಚನೆಯನ್ನು (Three Dimensional Structure) ನಿರ್ಧರಿಸಿದಾತ.
ಜೊಹಾನ್ 30 ಸೆಪ್ಟೆಂಬರ್ 1943ರಂದು ಜರ್ಮನಿಯ ಬವೇರಿಯಾ ಪ್ರಾಂತದ ಜುಸ್ಮಲ್ಥೀಮ್ ಪಟ್ಟಣದಲ್ಲಿ ಜನಿಸಿದನು. ಜೊಹಾನ್ ವಿದ್ಯಾಭ್ಯಾಸ 15 ವರ್ಷದ ವರೆಗೆ ಸಾಗಿತು. ಆಗಿನ ಬವೇರಿಯನ್ ಪ್ರಾಂತದಲ್ಲಿ ಮನೆಯ ಹಿರಿಮಗ ಕುಲ ಕಸುಬನ್ನು ಮುಂದುವರೆಸಬೇಕೆಂಬ ಸಂಪ್ರದಾಯ ಚಾಲ್ತಿಯಲ್ಲಿದ್ದಿತು. ಆದರೆ ಜೊಹಾನ್ಗೆ ಕೃಷಿ ಕಾರ್ಯದಲ್ಲಿ ಕಿಂಚಿತ್ತೂ ಆಸಕ್ತಿ ಇರದಿರುವುದನ್ನು ಗಮನಿಸಿದ ಅವನ ತಂದೆ ತಾಯಿ, ಸಂಪ್ರದಾಯ ಮುರಿದು ಮಗನನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಳಿಸಿದರು. 1965ರಲ್ಲಿ ಜರ್ಮನಿಯ ಮಿಲಿಟರಿ ಸೇರಿದ ಜೊಹಾನ್ ಹದಿನೆಂಟು ತಿಂಗಳುಗಳ ನಂತರ ಭೌತಶಾಸ್ತ್ರದ ಅಧ್ಯಯನಕ್ಕೆ ಮ್ಯೂನಿಕ್ ವಿಶ್ವವಿದ್ಯಾಲಯ ಸೇರಿದನು. ಫ್ರೆಡ್ ಹಾಯ್ಲ್ನಿಂದ ಬರೆಯಲ್ಪಟ್ಟ ಕೃತಿ ಓದಿ ಪ್ರಭಾವಿತನಾದ ಜೊಹಾನ್ಗೆ ಭೌತ ಹಾಗೂ ಖಗೋಳಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಮೂಡಿದ್ದಿತು. ಆದರೆ ಕೆಲಕಾಲದಲ್ಲೇ ಭೌತಶಾಸ್ತ್ರ ತಾನು ಭಾವಿಸಿದುದಕ್ಕಿಂತ ಭಿನ್ನವಾಗಿರುವುದೆಂದು ಜೊಹಾನ್ಗೆ ಮನದಟ್ಟಾಯಿತು. ಹೀಗಾಗಿ ಘನಸ್ಥಿತಿ ಭೌತಶಾಸ್ತ್ರದಲ್ಲಿ ಕ್ಲೌಸ್ ಡ್ರಾನ್’ಫೆಲ್ಡ್ ಪ್ರಯೋಗಾಲಯದಲ್ಲಿ ಸಂಶೋಧನೆ ಪ್ರಾರಂಭಿಸಿದನು. 1972ರಲ್ಲಿ ಮಾಕ್ಸ್ ಪ್ಲಾಂಕ್ ಸಂಸ್ಥೆ ಸೇರಿ, ಅಲ್ಲಿ ವೂಲ್ಫ್ಗ್ಯಾಂಗ್ ಸ್ವೀಜ್ಮನ್ ಜೊತೆಗೂಡಿ ಸ್ಪಟಿಕಾಲೇಖ (Crystallography) ವಿಧಾನದಲ್ಲಿ ಬೈಜಿಕ ರಾಸಾಯನಿಕಗಳ ರಾಚನಿಕ ಸ್ವರೂಪ ನಿರ್ಧರಿಸಿ, 1974ರಲ್ಲಿ ಡಾಕ್ಟರೇಟ್ ಗಳಿಸಿದನು. 1974ರಲ್ಲಿ ಹ್ಯೂಬರ್ ಪ್ರಯೋಗಾಲಯದಲ್ಲಿ ಸಂಶೋಧಕನಾಗಿ ಸೇರಿದ ಜೊಹಾನ್, ವಾಲ್ಟರ್ ಪಾಮ್ನೊಂದಿಗೆ ಮಾನವನ ಮೈಲೋಮಾ ಪ್ರೊಟೀನ್ ಬಗ್ಗೆ ಅಧ್ಯಯನ ನಡೆಸಿದರು. ಮುಂದೆ ಜೊಹಾನ್ ಸಿಟ್ರೇಸ್ ಸಿಂಥೇಸ್ ಆಲ್ಫಾ- 1 ಪ್ರೋಟೀನೆಸ್ ನಿರ್ಬಂಧಕಗಳ (Inhibitor) ಮೇಲೂ ಸಂಶೋಧನೆಗಳು ಜರುಗಿದವು. 1982ರಲ್ಲಿ ಜೊಹಾನ್ ಹಾರ್ಟ್ಮಟ್ ಮೈಖೇಲ್ ಹಾಗೂ ಡೈಯೆಟರ್ ಓಯಿಸ್ಟರ್ ಹೆಲ್ಟ್ರನ್ನು ತಾನು ಕೆಲಸ ಮಾಡುತ್ತಿದ್ದ ಮಾಕ್ಸ್ ಪ್ಲಾಂಕ್ ಸಂಸ್ಥೆಯಲ್ಲಿ ಭೇಟಿಯಾಗಿ ಚರ್ಚಿಸುವ ಅವಕಾಶ ಪಡೆದನು. ಇವರು ರೋಡೋಸೂಡೋಮೊನಾಸ್ ವಿರಿಡಿಸ್ ಬ್ಯಾಕ್ಟೀರಿಯಾದ (Rhodopsudomonos Viridis) ದ್ಯುತಿ ಸಂಶ್ಲೇಷಣೆಯ ಕೇಂದ್ರವನ್ನು ಹರಳು ರೂಪದಲ್ಲಿ ಪಡೆದಿರುವುದನ್ನು ತಿಳಿಸಿದರು. ಇವರೊಂದಿಗೆ ಸೇರಿದ ಜೊಹಾನ್ ಈ ರಾಸಾಯನಿಕದ ಮೂರು ಆಯಾಮದ ರಚನೆಯ ಸ್ವರೂಪ ಅರಿಯಲು ನಾನಾ ಪ್ರಯೋಗಗಳನ್ನು ಕೈಗೊಂಡನು. 1983ರಲ್ಲಿ ಜೊಹಾನ್ ತಂಡ ಈ ಯತ್ನದಲ್ಲಿ ಯಶಸ್ಸನ್ನು ಕಂಡಿತು. ಇದಕ್ಕಾಗಿ ಸುಕ್ಲಿಷ್ಟವಾದ ಗಣಕ ಕ್ರಮವಿಧಿಗಳನ್ನು ಬರೆಯಲಾಯಿತು. ಈ ಸಾಧನೆ ಅಲ್ಪ ಕಾಲದಲ್ಲೇ ಜಗತ್ತಿನಾದ್ಯಂತ ವಿಜ್ಞಾನಿಗಳ ಗಮನ ಸೆಳೆಯಿತು. ಇದನ್ನು ಗಮನಿಸಿದ ಅಸಂಸಂದ ಡಲ್ಲಾಸ್ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದ ಸೌಥಾವೆಸ್ಟರ್ನ್ ಮೆಡಿಕಲ್ ಸೆಂಟರ್ ಈ ದಿಶೆಯಲ್ಲಿ ಹೆಚ್ಚಿನ ಸಂಶೋಧನೆ ಕೈಗೊಳ್ಳಲು ಹೊಸ ತಂಡವನ್ನು ಕಟ್ಟುವಂತೆ ಜೊಹಾನ್ನನ್ನು ಆಹ್ವಾನಿಸಿತು. ಇದರ ಫಲವಾಗಿ 1988ರಲ್ಲಿ ಜೊಹಾನ್ ಜೀವ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥನಾದನು. ದ್ಯುತಿ ಸಂಶ್ಲೇಷಣೆ ಕೇಂದ್ರದ ಮೂರು ಆಯಾಮದ ಸಂರಚನೆಯನ್ನು ನಿರ್ಧರಿಸಿದುದರ ಸಾಧನೆಗಾಗಿ ಜೊಹಾನ್ 1988ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ರಾಬರ್ಟ್, ಹ್ಯುಬೆರ್ (1937--) 1988
Robert , Huber
ಜರ್ಮನಿ-ಜೀವರಸಾಯನಶಾಸ್ತ್ರ-ಪ್ರೊಟೀನ್ ಹಾಗೂ ನಿರ್ಬಂಧಕಗಳನ್ನು ಕುರಿತಾಗಿ ಸಂಶೋಧಿಸಿದಾತ.
ರಾಬರ್ಟ್ 20ಫೆಬ್ರವರಿ 1937 ರಂದು ಮುಂಕೆನ್ ಪಟ್ಟಣದಲ್ಲಿ ಜನಿಸಿದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಇವರ ಕುಟುಂಬ ಕಡು ಕಷ್ಟದಲ್ಲಿ ಜೀವಿಸಿತು. ಲ್ಯಾಟಿನ್, ಗ್ರೀಕ್ ಹಾಗೂ ರಸಾಯನಶಾಸ್ತ್ರದಲ್ಲಿ ಶಿಕ್ಷಣ ಪಡೆದ ರಾಬರ್ಟ್, 1956ರಲ್ಲಿ ಮುಂಕೆನ್ನಲ್ಲಿರುವ ತಾಂತ್ರಿಕ ವಿದ್ಯಾಲಯದಲ್ಲಿ ರಸಾಯನಶಾಸ್ತ್ರ ವಿಭಾಗ ಸೇರಿದನು. ಶಿಕ್ಷಣದ ಅವಧಿಯಲ್ಲಿ ಖ್ಯಾತ ರಸಾಯನಶಾಸ್ತ್ರಜ್ಞರ ಉಪನ್ಯಾಸಗಳಿಂದ ಪ್ರಭಾವಿತನಾದನು. ಡಬ್ಲ್ಯು.ಹೊಪ್ ಪ್ರಯೋಗಾಲಯ ಸೇರಿ ನಂತರ ಕೀಟಗಳಲ್ಲಿ ರೂಪಾಂತರಕ್ಕೆ ಕಾರಣವಾಗಿರುವ ಎಕ್ಡೈಸೋನ್ ಚೋದನಿಕೆಯ (Hormone) ಮೇಲೆ ಸ್ಪಟಿಕಾಲೇಖದ (Crystallography) ಅಧ್ಯಯನ ನಡೆಸಲು ಡಬ್ಲ್ಯು.ಹೊಪ್ ಪ್ರಯೋಗಾಲಯವನ್ನು ಸೇರಿದನು. ಹೊಪ್ ಜೊತೆಗೆ ಹಲವಾರು ಸಾವಯವ, ಜೈವಿಕ ರಾಸಾಯನಿಕ ಸ್ಪಟಿಕಗಳ ರಾಚನಿಕ ಸ್ವರೂಪವನ್ನು ರಾಬರ್ಟ್ ನಿರ್ಧರಿಸಿದನು. 1967ರಲ್ಲಿ ಹೊಪ್ಪ್, ಬ್ರೌನಿಟ್ಟಾರ್ ಬೆಂಬಲದೊಂದಿಗೆ, ಕೀಟಗಳ ಎಂಥ್ರೋಕ್ಯುರೋನಿನ್ ಪ್ರೊಟೀನ್ ಕುರಿತಾಗಿ ಅಧ್ಯಯನ ಪ್ರಾರಂಭಿಸಿದನು. ಇದರ ಫಲಿತಾಂಶವಾಗಿ, ಈ ಪ್ರೊಟೀನ್ ಸಸ್ತನಿಗಳಲಿರುವ ಗ್ಲೋಬಿನ್ಗಳನ್ನು ಹೋಲುವುದೆಂದು ತಿಳಿದು ಬಂದಿತು. ಪೆರುಟ್ಜ್, ಹಾಗೂ ಕೆಂಡ್ರ್ಯೂ ಈ ಮೊದಲೇ ಪ್ರಾಣಿ ಪ್ರಪಂಚದಲ್ಲಿ ಸಾರೂಪ್ಯದ ಪ್ರೋಟಿನ್ಗಳ ಸಾಧ್ಯತೆಯನ್ನು ವಿವರಿಸಿದ್ದರು. ರಾಬರ್ಟ್ನ ಈ ಹೊಸ ಸಂಶೋಧನೆಗಳು ಇದಕ್ಕೆ ಬೆಂಬಲ ನೀಡಿದವು. 1970ರಲ್ಲಿ ರಾಬರ್ಟ್ ಪ್ಯಾಂಕ್ರಿಯಾಟಿಕ್ ಟ್ರಿಪ್ಪಿನ್ ನಿರ್ಬಂಧಕ (Inhibitor) ಕುರಿತಾದ ಮೂಲ ಸಂಶೋಧನೆ ಕೈಗೊಂಡನು. ಇದು ಮುಂದೆ ಇವರದು ನೂರಾರು ಇತರ ನಿರ್ಬಂಧಕಗಳನ್ನು ಗುರುತಿಸಿ ಹೊಸ ಕ್ಷೇತ್ರದ ಉಗಮಕ್ಕೆ ಕಾರಣವಾಗುವಂತೆ ಮಾಡಿತು. ಇಂದು ಈ ಅಧ್ಯಯನ ಔಷಧಿ, ಮದ್ದು ತಯಾರಿಕೆ ಹಾಗೂ ಪ್ರೊಟೀನ್ ವಿನ್ಯಾಸಗಳಲ್ಲಿ ವಿಸೃತವಾಗಿ ಬಳಕೆಯಾಗುತ್ತದೆ. ಇದಕ್ಕಾಗಿ 1988ರಲ್ಲಿ ರಾಬರ್ಟ್ ಹ್ಯೂಬೆರ್ ನೊಬೆಲ್ ಪ್ರಶಸ್ತಿ ಪಡೆದನು.
ಸಿಡ್ನಿ, ಹಾಲ್ಟ್’ಮನ್ (1939--) 1989
Sidney , Haltman
ಕೆನಡಾ-ಜೀವರಸಾಯನಶಾಸ್ತ್ರ-ಆರ್ಎನ್ಎ ಯ ಪೂರ್ವಗಾಮಿ ಅಣುವನ್ನು (Precurssor Molecule ) ಅನಾವರಣಗೊಳಿಸಿದಾತ.
ಸಿಡ್ನಿಯ ತಂದೆ ತಾಯಿ ಬಹು ಬಡವರಾಗಿದ್ದರು. ಆತನ ತಂದೆ ದಿನಸಿ ಅಂಗಡಿಯಲ್ಲಿ ,ತಾಯಿ ಬಟ್ಟೆ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಇವರು ಉತ್ತಮ ಜೀವನ ಅರಸಿ ಕೆನಡಾದ ಮಾಂಟ್ರಿಲ್ಗೆ ವಲಸೆ ಬಂದಿದ್ದರು. ಆರು ವರ್ಷದ ಬಾಲಕನಿರುವಾಗ ಸಿಡ್ನಿ ಹಿರೋಷಿಮಾ ನಾಗಸಾಕಿಗಳ ಮೇಲೆ ಪ್ರಯೊಗಿಸಿದ ಬೈಜಿಕಾಸ್ತ್ರದ ಬಗೆಗಿನ ಸುದ್ದಿಗಳನ್ನು ಕೇಳಿ ಅಸ್ಪಷ್ಟವಾದ ಬೆರಗು ಪೂರಿತ ಸೋಜಿಗ ಹೊಂದಿದ್ದನು. ಮೂರನೇ ತರಗತಿಯಲ್ಲಿರುವಾಗ ಧಾತುಗಳ ಬಗೆಗೆ ಪುಸ್ತಕ ಓದಿ ವಿಜ್ಞಾನದಲ್ಲಿ ಆಸಕ್ತಿ ಹೊಂದಿದ್ದನು. ಎಂಐಟಿಗೆ ಪದವಿಗೆ ಸೇರಿದ ಸಿಡ್ನಿಗೆ ನ್ಯೂಕ್ಲಿಯಿಕ್ ಆಮ್ಲ ಹಾಗೂ ಅಣ್ವಯಿಕ ತಳಿಶಾಸ್ತ್ರದಲ್ಲಿ ಒಲವು ಮೂಡಿತು. ಹದಿನೆಂಟು ತಿಂಗಳುಗಳ ಕಾಲ ಕೊಲಂಬೋ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪದವಿ ವಿದ್ಯಾರ್ಥಿಯಾಗಿದ್ದನು. ಆದರೆ ಇದನ್ನು ಅರ್ಧದಲ್ಲೇ ಮೊಟಕುಗೊಳಿಸಿ, ಕೊಲರಡೋದಲ್ಲಿ ಜೀವ ಭೌತಶಾಸ್ತ್ರದ ವಿದ್ಯಾರ್ಥಿಯಾಗಿ ಸೇರಿಕೊಂಡನು. ಇಲ್ಲಿ ಖ್ಯಾತ ಭೌತಶಾಸ್ತ್ರಜ್ಞ ಜಾರ್ಜ್ ಗ್ಯಾಮೊ, ಸಿಡ್ನಿಯನ್ನು ಯೂನಿವರ್ಸಿಟಿ ಆಫ್ ಕೊಲರಡೋ ಮೆಡಿಕಲ್ ಸೆಂಟರ್’ನಲ್ಲಿ ಡಿಎನ್ಎ ಅಧ್ಯಯನಕ್ಕಾಗಿ ಕಳಿಸಿದನು. ಇಲ್ಲಿ ಥಿಯೋಡೋರ್ ಟಿ ಪುಕ್, ಲೆರ್ಮಾನ್ ರಂತಹ ಸಮರ್ಥರ ಮಾರ್ಗದರ್ಶನ ದಕ್ಕಿತು. ಇಲ್ಲಿ ಟಿ4-ಡಿಎನ್ಎ ಬ್ಯಾಕ್ಟಿರಿಯೋ ಫೇಜ್ ನಕಲಿನ ಮೇಲೆ ಅಕ್ಸ್’ಡೈನ್ಸ್ ಬೀರುವ ಪ್ರಭಾವ ಕುರಿತು ಅಧ್ಯಯನ ನಡೆಸಿದನು. ನಂತರ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿನ ಮ್ಯಾಥ್ಯೂ ಮೆಸೆಲ್ಸನ್ ಸಂಶೋಧಕ ತಂಡ ಸೇರಿ ಮೊದಲಿನ ಸಂಶೋಧನೆ ಮುಂದುವರಿಸಿದನು. ಎರಡು ವರ್ಷಗಳ ನಂತರ ಕೇಂಬ್ರಿಜ್ನಲ್ಲಿರುವ ಮೆಡಿಕಲ್ ರಿಸರ್ಚ್ ಕೌನ್ಸಿಲ್ ಲ್ಯಾಬೋರೇಟರಿ ಆಫ್ ಮಾಲೆಕ್ಯುಲಾರ್ ಬಯಾಲಜಿ ಸೇರಿ ಸಿಡ್ನಿ ಬ್ರೆನ್ನರ್ ಮತ್ತು ಕ್ರಿಕ್ಸ್ ಮುಂದಾಳತ್ವದಲ್ಲಿನ ಜೀವ ಭೌತಶಾಸ್ತ್ರದ ಅಧ್ಯಯನ ಸಾಗಿಸಿದನು. ಇಲ್ಲಿ ಮೊದಲ ವಿಕಿರಣ ರಾಸಾಯನಿಕ ಶುದ್ಧ ಆರ್ಎನ್ಎಯ ಪೂರ್ವಗಾಮಿ (Radiochemically pure precursor to RNA) ಅಣುವನ್ನು ಅನಾವರಣಗೊಳಿಸಿದನು. ಇದಕ್ಕಾಗಿ ಈತನಿಗೆ 1989ರ ನೊಬೆಲ್ ಪ್ರಶಸ್ತಿ ದಕ್ಕಿತು.
ಥಾಮಸ್, ಅರ್. ಸೆಕ್ (1947--) 1989
Thomas , Cech
ಅಸಂಸಂ-ಜೀವರಸಾಯನಶಾಸ್ತ್ರ-ಕಿಣ್ವಗಳ ರಾಸಾಯನಿಕ ಲಕ್ಷಣಗಳ ಅಧ್ಯಯನದ ಮುಂದಾಳು.
ಥಾಮಸ್ನ ತಾತ ಬೊಹೆಮಿಯಾದಲ್ಲಿ ಮೋಚಿಯಾಗಿದ್ದು ಉತ್ತಮ ಜೀವನ ಅರಸಿ 1913ರಲ್ಲಿ ಅಸಂಸಂಗಳಿಗೆ ವಲಸೆ ಬಂದಿದ್ದನು. ಥಾಮಸ್ ತಂದೆ ಪರಿಶ್ರಮದಿಂದ ವೈದ್ಯನಾಗಿದ್ದನು. 8 ಡಿಸೆಂಬರ್ 1947 ರಂದು ಥಾಮಸ್ ಚಿಕಾಗೋದಲ್ಲಿ ಜನಿಸಿದನು. ತಂದೆಯಿಂದ ವಿಜ್ಞಾನದಲ್ಲಿ ಆಸಕ್ತಿ, ಕುತೂಹಲ ಬೆಳೆಸಿಕೊಂಡ ಥಾಮಸ್ ನಾನಾ ಬಗೆಯ ಶಿಲೆಗಳನ್ನು ಸಂಗ್ರಹಿಸಿ ಅವುಗಳ ಮೂಲ ಹಾಗೂ ಉಗಮಗಳನ್ನು ಅರಿಯಲು ಯತ್ನಿಸಿದನು. ಥಾಮಸ್ಗೆ ಸಾಹಿತ್ಯ, ವಿಜ್ಞಾನ ಎರಡೂ ವಿಷಯಗಳು ಸರಿ ಸಮಾನವಾಗಿ ಪ್ರಿಯವಾಗತೊಡಗಿದವು. 1970ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದ ಪದವಿ ವಿದ್ಯಾರ್ಥಿಯಾದನು. ಇಲ್ಲಿ ಜಾನ್ ಹಿಯರ್ಸ್ಟು ಮಾರ್ಗದರ್ಶನದಲ್ಲಿ ವರ್ಣಕಾಯಗಳ (Chromosomes) ರಚನೆಯ ಬಗೆಗೆ ಅಪಾರ ಆಸಕ್ತಿ ತಳೆದನು. ಇದರ ಫಲಿತಾಂಶವಾಗಿ ಸಿಯೆರಾ ನೆವಾಡಾದ ಅಲ್ಪೈನ್ ಕಾಡುಗಳಿಗೆ ಆಗಾಗ್ಗೆ ಭೇಟಿಯಿತ್ತನು. 1975ರಲ್ಲಿ ಡಾಕ್ಟರೇಟ್ ಗಳಿಸಿದ ಥಾಮಸ್ ಎಂಐಟಿ ಸೇರಿ ಮೇರಿ ಲೌ ಪಡ್ರ್ಯೂ ಪ್ರಯೋಗಾಲಯದಲ್ಲಿ ಜೀವಶಾಸ್ತ್ರದ ಮೂಲ ತತ್ತ್ವಗಳನ್ನು ಅರಿತನು. ಇಲ್ಲಿ ಕಿಣ್ವ (Enzyme) ರಾಸಾಯನಿಕಶಾಸ್ತ್ರದಲ್ಲಿ ಥಾಮಸ್ನಿಂದ ಮಹತ್ತರವಾದ ಸಂಶೋಧನೆಗಳು ಹೊರ ಬಂದವು. ಇದಕ್ಕಾಗಿ 1989ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಎಲಿಯಾಸ್, ಜೆ. ಕೊರಿ –(1928--) 1990
Elias , James Corey
ಅಸಂಸಂ-ಜೀವರಸಾಯನಶಾಸ್ತ್ರ-ಜೀವರಾಸಾಯನಿಕಗಳ ಮೇಲೆ ವವಿಧ್ಯಮಯ, ವಿಸ್ತೃತ ಅಧ್ಯಯನ ನಡೆಸಿದಾತ.
ಎಲಿಯಾಸ್ ಮೆಸಾಚುಸೆಟ್ಸ್ನ ಮೆಥುಯಿನ್ ಹಳ್ಳಿಯಲ್ಲಿ ಜನಿಸಿದನು. ಈತ ಹುಟ್ಟಿದ ಹದಿನೆಂಟು ತಿಂಗಳುಗಳಲ್ಲಿ ಆತನ ತಂದೆ ತೀರಿಕೊಂಡನು. ಕ್ರಿಶ್ಚಿಯನ್ ಆಗಿ ಮತಾಂತರ ಹೊಂದಿದ್ದ ತಾಯಿ ಮೂಲತ: ಲೆಬನಾನ್ನಿಂದ ಬಂದಿದ್ದ ಕುಟುಂಬದವಳು. ಸಾಂಪ್ರದಾಯಿಕ ಹಿನ್ನೆಲೆಯನ್ನು ಹೊಂದಿದ್ದ ತಾಯಿ ನಾಮಬಲದಲ್ಲಿ ಭಾರಿ ನಂಬಿಕೆ ಹೊಂದಿದ್ದಳು. ಮಗ ಹುಟ್ಟಿದ ಅಲ್ಪ ಕಾಲದಲ್ಲೇ ತಂದೆ ತೀರಿಹೊದುದರಿಂದ ವಿಲಿಯಂ ಎನ್ನುವ ಹೆಸರನ್ನು ಎಲಿಯಾಸ್ ಎಂದು ಬದಲಾಯಿಸಿದಳು. ಜಾಗತಿಕ ಯುದ್ದದ ಸಮಯದಲ್ಲಿ ಅಸಂಸಂಗಳನ್ನು ಆವರಿಸಿದ್ದ ಮಹಾ ಆರ್ಥಿಕ ಖಿನ್ನತೆಯಲ್ಲೂ ಈಕೆ ತನ್ನ ಇಬ್ಬರು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳನ್ನು ಸಲಹಿದಳು. ತಾಯಿಯ ತಂಗಿ ಹಾಗೂ ಅಕೆಯ ಗಂಡನ ನೆರವು ಎಲಿಯಾಸ್ ಕುಟುಂಬಕ್ಕೆ ವರ ರೂಪದಲ್ಲಿ ಬಂದೊದಗಿತು. ಪ್ರೌಢಾಶಾಲಾ ಶಿಕ್ಷಣ ಮುಗಿಸಿ 1945ರಲ್ಲಿ ಎಂಐಟಿ ಸೇರಿದ ಎಲಿಯಾಸ್ ಎಲೆಕ್ಟ್ರಾನಿಕ್ಸ ಇಂಜಿನಿಯರ್ ಆಗಬೇಕೆಂದಿದ್ದನು. ಆದರೆ ಇಂಜಿನಿಯರಿಂಗ್ನ ಮೊದಲ ವರ್ಷದಲ್ಲಿದ್ದ ಭೌತಶಾಸ್ತ್ರ ರಸಾಯನಶಾಸ್ತ್ರದ ಶಿಕ್ಷಣದಿಂದ, ಪ್ರಭಾವಿತನಾಗಿ ಇಂಜಿನಿಯರಿಂಗ್ ಬದಲು ರಸಾಯನಶಾಸ್ತ್ರದ ಪದವಿ ವಿದ್ಯಾರ್ಥಿಯಾಗಿ ಬದಲಾಯಿಸಿಕೊಂಡನು. 1950ರಲ್ಲಿ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟ್ನೊಂದಿಗೆ ಹೊರಬಂದ ಎಲಿಯಾಸ್ ಅರ್ಬಾನಾ ಕ್ಯಾಂಪೇನ್ನಲ್ಲಿರುವ ಇಲಿನಾಯ್ ವಿಶ್ವವಿದ್ಯಾಲಯದಲ್ಲಿಸಹಾಯಕ ಉಪನ್ಯಾಸಕನಾದನು. ಎಲಿಯಾಸ್ ಆರಂಭಿಕ ಅಧ್ಯಯನಗಳು ಭೌತ ಸಾವಯವ ರಸಾಯನಶಾಸ್ತ್ರದಲ್ಲಿ ಕೇಂದ್ರಿಕೃತವಾಗಿದ್ದವು. ಅಣ್ವಯಿಕ ಕಕ್ಷಾ ಸಿದ್ಧಾಂತ ಬಳಸಿ, ರಾಸಾಯನಿಕ ಕ್ರಿಯೆಗಳನ್ನು ಮೂರು ಆಯಾಮಗಳ ದೃಷ್ಟಿಯಲ್ಲಿ ಅಣುಗಳ ಸಂರಚನೆಯ ಮಟ್ಟದಲ್ಲಿ ಅರಿಯಲು ಯತ್ನಿಸಿದನು. ಇವು ಮುಂದೆ ಇತರಎಂದ ಯಾಂತ್ರಿಕ ಕಿಣ್ವ ಶಾಸ್ತ್ರದ ಉಗಮಕ್ಕೆ ಕಾರಣವಾಯಿತು. 1957ರಲ್ಲಿ ಗುಗೆನ್ ಹೀಮ್ ಫೆಲೋಷಿಪ್ ಗಳಿಸಿ ಯುರೋಪ್ನ ಹಲವಾರು ದೇಶಗಳಿಗೆ ಇಲಿಯಾಸ್ ಭೇಟಿ ನೀಡಿದನು. 1960ರಲ್ಲಿ ಎಲಿಯಾಸ್ ಹಾಗೂ ಸಂಗಡಿಗರು ಪ್ರೊಸ್ಟೋಗ್ಲಾಂಡಿನ್ಗಳನ್ನು ರಾಸಾಯನಿಕವಾಗಿ ಸಂಶ್ಲೇಷಿಸಿದರು. 1959ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಜೈವ ರಾಸಾಯನಿಕಗಳ ಸಂಶ್ಲೇಷಣೆಗೆ ಹೊಸ ವಿಧಾನಗಳನ್ನು ಅರಸತೊಡಗಿದನು. ಬಹು ಸಂಕೀರ್ಣವಾದ ಜೀವ ಕ್ರಿಯಾಶೀಲ ಅಣುಗಳು, ಸಾವಯವ ಲೌಹಿಕ ರಸಾಯನಶಾಸ್ತ್ರ, ಜೈವಿಕ ಸಾವಯವ ಹಾಗೂ ಕಿಣ್ವ ರಸಾಯನಶಾಸ್ತ್ರ, ಸಾವಯವ ರಸಾಯನಶಾಸ್ತ್ರದ ಸಮಸ್ಯೆಗಳ ಪರಿಹಾರಕ್ಕೆ ಗಣಕಗಳ ಬಳಕೆ ಕುರಿತಾದಂತೆ ಎಲಿಯಾಸ್ ಸಂಶೋಧನೆಗಳು ವೈವಿಧ್ಯಮಯವಾಗಿದ್ದವು. ಇದಕ್ಕಾಗಿ ಎಲಿಯಾಸ್ 1990ರಲ್ಲಿನೊಬೆಲ್ ಪ್ರಶಸ್ತಿ ಪಡೆದನು.